ಮುಸ್ಲಿಮರ ಜನಸಂಖ್ಯೆ

Fact Check: ಯುಕೆಯಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ

ಇತ್ತೀಚೆಗೆ ಭಾರತ ಮಾತ್ರವಲ್ಲದೇ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಇಸ್ಲಾಮೋಫೋಬಿಯಾ ಹೆಚ್ಚಾಗುತ್ತಿದೆ. ಯರೋಪ್‌ ರಾಷ್ಟ್ರಗಳಲ್ಲಿ ವಲಸೆ ವಿರೋಧಿ ಹೋರಾಟಗಳ ಕೂಗು ಹೆಚ್ಚಾಗುತ್ತಿದ್ದಂತೆ ಈಗ, ಮುಸ್ಲಿಂ ಸಮುದಾಯ ಮತ್ತು ಅವರ ಧರ್ಮದ ಕುರಿತು ಕೆಲವು ಮತಾಂಧ(ಫ್ಯಾಸಿಸ್ಟ್)ರು ಸುಳ್ಳು ಸುದ್ದಿಗಳನ್ನು ನಿರಂತರವಾಗಿ ಹರಿಬಿಡುವ ಮೂಲಕ ಸಮಾಜದ ಎಲ್ಲಾ ಸಮಸ್ಯೆಗಳ ಕೇಂದ್ರ ಬಿಂದು ಮುಸ್ಲಿಮರು ಎಂದು ಬಿಂಬಿಸಿ ಅವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಭಹಿಷ್ಕರಿಸುವ ಹುನ್ನಾರ ನಡೆಯುತ್ತಿದೆ. ಇದರ ಭಾಗವಾಗಿ, ಯುಕೆ ಅಥವಾ ಇಂಗ್ಲೆಂಡಿನಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಹೇಳಿಕೆಗಳ ಸಂದೇಶವೊಂದು…

Read More
ವದಿಲಾಲ್

Fact Check: ವದಿಲಾಲ್ ಐಸ್ ಕ್ರೀಮ್ ಉತ್ಪನ್ನಗಳ ಕುರಿತು ಸುಳ್ಳು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ

ವದಿಲಾಲ್ ಐಸ್ ಕ್ರೀಂನ ಹಲಾಲ್-ಪ್ರಮಾಣೀಕೃತ ಗುರುತು ಹೊಂದಿರುವ ಫೋಟೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಐಸ್ ಕ್ರೀಮ್ ತಯಾರಕರು ಅದರ ಉತ್ಪನ್ನಗಳಿಗೆ ಬೀಫ್ ಪರಿಮಳ(ಫ್ಲೇವರ್)ವನ್ನು ಸೇರಿಸುತ್ತಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಒಬ್ಬ ಎಕ್ಸ್ ಬಳಕೆದಾರರು ಐಸ್ ಕ್ರೀಂನ ಪ್ಯಾಕೇಜಿಂಗ್‌ನ ಫೋಟೋವನ್ನು ಹಂಚಿಕೊಂಡು “ವದಿಲಾಲ್ ತನ್ನ ಉತ್ಪನ್ನಗಳಲ್ಲಿ ಹಸುವಿನ ಮಾಂಸವನ್ನು ಬಳಸುತ್ತಾರೆ ಅದಕ್ಕಾಗಿಯೇ ಅವರ ಉತ್ಪನ್ನಗಳನ್ನು ಹಲಾಲ್ ಪ್ರಮಾಣೀಕರಿಸಲಾಗಿದೆ. ಎಲ್ಲಾ ಹಿಂದೂಗಳು ಇನ್ನು ಮುಂದೆ ವದಿಲಾಲ್ ಐಸ್ ಕ್ರೀಮ್ ತಿನ್ನಬೇಡಿ ಮತ್ತು ಅವರ ಉತ್ಪನ್ನಗಳನ್ನು ಬಹಿಷ್ಕರಿಸಲು…

Read More

Fact Check | ಮುಸ್ಲಿಂ ವ್ಯಕ್ತಿಯೊಬ್ಬ ಕೆಟ್ಟ ಪಾನಿಪುರಿ ಮಾಡುತ್ತಿದ್ದಾನೆ ಎಂಬುದು ನಾಟಕೀಯ ವಿಡಿಯೋ

“ಈ ವಿಡಿಯೋ ನೋಡಿ ಇಲ್ಲೋಬ್ಬ ವ್ಯಕ್ತಿ ಹಲಾಲ್‌ ಪಾನಿಪುರಿಯನ್ನು ಮಾರಾಟ ಮಾಡುತ್ತಿದ್ದಾನೆ. ಈತ ಮೊದಲು ಪಾನಿಪುರಿಗೆ ತಯಾರಿಸಲಾದ ಮಾಸಾಲೆ ನೀರನ್ನು ಸ್ಪೂನ್‌ನಲ್ಲಿ ಕುಡಿಯುತ್ತಾನೆ. ಬಳಿಕ ಅದು ಸ್ವಾದ ಆತನಿಗೆ ಹಿಡಿಸುವುದಿಲ್ಲ ಮತ್ತೆ ಆತ ಕುಡಿದ ಚಮಚವನ್ನು ಮಸಾಲೆ ನೀರಿಗೆ ಹಾಕುತ್ತಾನೆ. ಬಳಿಕ ಕೈಯಲ್ಲಿಯೇ ಆ ಮಸಾಲೆ ನೀರನ್ನು ತಿರುಗಿಸಿ, ಸ್ವಲ್ಪ ಸಮಯದ ಬಳಿಕ ತನ್ನ ಬೆವರನ್ನೂ ಆ ನೀರಿಗೆ ಬೆರಸುತ್ತಾನೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ವಿಡಿಯೋವನ್ನು ನೋಡಿದ ಹಲವರು ಇದನ್ನು ತಮ್ಮ…

Read More
ಬೆಂಗಳೂರಿನಲ್ಲಿ

Fact Check: ಬೆಂಗಳೂರಿನಲ್ಲಿ ಮೂತ್ರ ಬೆರೆಸಿ ಪಾಪ್ ಕಾರ್ನ್ ತಯಾರಿಸಲಾಗುತ್ತಿತ್ತು ಎಂಬುದು ಸುಳ್ಳು

ಇತ್ತೀಚೆಗೆ ಅನ್ಯ ಕೋಮಿನವರು ಎಂಬ ಕಾರಣಕ್ಕೆ ಹಲ್ಲೆ ನಡೆಸುವುದು, ಅವರಿಗೆ ಆರ್ಥಿಕ ನಿರ್ಬಂಧನೆಗಳನ್ನು ಹೇರುವುದು, ಸುಳ್ಳು ಆರೋಪಗಳನ್ನು ಮಾಡುವುದು ದೇಶದಾದ್ಯಂತ ಕಂಡು ಬರುತ್ತಿದೆ. ರಾಜಕೀಯ ಪ್ರೇರಿತ ಧರ್ಮಾಂಧತೆಯು ದಿನೇ ದಿನೇ ಭಾರತವನ್ನು ಆವರಿಸಿಕೊಂಡು ಎರಡು ಕೋಮುಗಳ ನಡುವೆ ದ್ವೇಷ, ಅಸಹಿಷ್ಣುತೆ ಹೆಚ್ಚಾಗುವಂತೆ ಮಾಡಲಾಗುತ್ತಿದೆ. ಈಗ ಇಂತಹದ್ದೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು “ಬೆಂಗಳೂರಿನಲ್ಲಿ ಉಪ್ಪಿನ ಬದಲು ಮೂತ್ರ ಬೆರೆಸಿ ಪಾಪ್ ಕಾರ್ನ್ ತಯಾರಿಸುವಾಗ ಪಾಪ್ ಕಾರ್ನ್ ಸ್ಟಾಲ್ ನ ನಯಾಸ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ! ಮುಸ್ಲಿಮರನ್ನು ಸುಧಾರಿಸಲು…

Read More
Halal

Fact Check: ಉಗುಳದೆ ಹಲಾಲ್ ಅಪೂರ್ಣ ಎಂದು ಮುಸ್ಲಿಮರು ತಮಿಳುನಾಡಿನ ನ್ಯಾಯಾಲಯದಲ್ಲಿ ವಾದಿಸಿಲ್ಲ

ಇತ್ತೀಚೆಗೆ ಹಲಾಲ್‌ಗೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು, ಅಪಪ್ರಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಲಾಲ್ ಎಂದರೆ ಏನು ಎಂಬ ಕುರಿತು ತಿಳಿದುಕೊಳ್ಳದೆ ಹಲಾಲ್‌ಗೆ ಸಂಬಂಧಿಸಿದಂತೆ ತಪ್ಪಾಗಿ ಅರ್ಥಿಸಲಾಗುತ್ತಿದೆ. ಇನ್ನೂ ಉತ್ತರ ಪ್ರದೇಶದ ಸರ್ಕಾರವು ಹಲಾಲ್‌ಗೆ ಸಂಬಂಧಿಸಿದ ಯಾವುದೇ ಆಹಾರವನ್ನು, ಬಳಸುವುದು, ಶೇಕರಿಸುವುದು ಮತ್ತು ಮಾರಾಟ ಮಾಡುವುದನ್ನು ತನ್ನ ರಾಜ್ಯದ ವ್ಯಾಪ್ತಿಯೊಳಗೆ ನಿಷೇಧಿಸಿದೆ. ಈಗ, ಮುಸ್ಲಿಂ ಹೋಟೆಲ್‌ಗಳಲ್ಲಿ ಆಹಾರವನ್ನು ಹಲಾಲ್ ಮಾಡಲು ಉಗುಳುವುದನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ತಮಿಳುನಾಡಿನ ನ್ಯಾಯಾಲಯದ ಪ್ರಕರಣದಲ್ಲಿ, ಅಡುಗೆಯವರು ಉಗುಳದ ಹೊರತು ಹಲಾಲ್ ಪೂರ್ಣವಾಗುವುದಿಲ್ಲ ಎಂದು…

Read More

ಮುಸ್ಲಿಂ ಸಮುದಾಯದ ಕುರಿತು ಪ್ರೊಪಗಂಡದ ಸುಳ್ಳು ವಿಡಿಯೋ ಹಂಚಿಕೊಂಡ ಪೋಸ್ಟ್‌ಕಾರ್ಡ್

ಜಗತ್ತಿನ ಯಾವುದೇ ರಾಷ್ಟ್ರದಲ್ಲೇ ಆಗಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ, ಧರ್ಮಗಳ ಮೇಲೆ, ಅಲ್ಲಿನ ಬಹುಸಂಖ್ಯಾತರು ನಿರಂತರವಾಗಿ ಶೋಷಿಸುತ್ತಾರೆ. ಮತ್ತು ಅವರ ಸಂಸ್ಕೃತಿಯನ್ನು ತುಚ್ಚಿಕರಿಸಿ, ಅವರ ಕಥೆಗಳನ್ನು, ಕೊಡುಗೆಗಳನ್ನು ಮರೆವಿಗೆ ಸರಿಸಿ, ಸಾಧ್ಯವಾದಷ್ಟು ಅವರ ಮೇಲೇ ಸಲ್ಲದ ಆರೋಪಗಳನ್ನು ಹೊರಿಸಿ ನಂತರ ಅವರ ಮೇಲೆ ನೇರ ದಾಳಿ ನಡೆಸುತ್ತವೆ. ಬಹುಸಂಖ್ಯಾತ ಕ್ರಿಶ್ಚಿಯನ್ ಪ್ರಾಭಲ್ಯದ ದೇಶಗಳಲ್ಲಿ ಯಹೂದಿ ಮತ್ತು ಮುಸ್ಲಿಮರನ್ನು ನಡೆಸಿಕೊಂಡಂತೆ, ಮುಸ್ಲಿಂ ದೇಶಗಳಲ್ಲಿ ಕ್ರಿಶ್ಚಿಯನ್ ಮತ್ತು ಹಿಂದುಗಳನ್ನು ನಡೆಸಿಕೊಂಡಂತೆ, ಬಹುಸಂಖ್ಯಾತ ಹಿಂದು ಸಮಾಜದ ಭಾರತದಲ್ಲಿ ಮುಸ್ಲೀಮರನ್ನು, ಕ್ರಿಶ್ಚಿಯನ್ನರನ್ನೂ ಹೀಗೆಯೇ…

Read More