ಗುಜರಾತ್‌

Fact Check: 2022 ರಲ್ಲಿ ಗುಜರಾತ್‌ನ ಗರ್ಬಾ ಕಾರ್ಯಕ್ರಮದಲ್ಲಿ ಕಲ್ಲು ತೂರಾಟ ನಡೆಸಿದವರಿಗೆ ಪೊಲೀಸರು ಥಳಿಸುವ ಹಳೆಯ ವಿಡಿಯೊವನ್ನು ಇತ್ತೀಚಿನದು ಎಂದು ಹಂಚಿಕೆ

ನವರಾತ್ರಿ ಹಬ್ಬದ ನಂತರ ಭಾರತದ ಅನೇಕ ರಾಜ್ಯಗಳಲ್ಲಿ ದುರ್ಗಾ ಮಾತೆಗೆ ಅವಮಾನಿಸಲಾಗಿದೆ ಎಂದು ಹಳೆಯ ವಿಡಿಯೋಗಳನ್ನು ಬಳಸಿಕೊಂಡು ದ್ವೇಷ ಹರಡಲು ಪ್ರಯತ್ನಿಸಲಾಗುತ್ತಿದೆ. ಈಗ, ಇತ್ತೀಚೆಗೆ ಗುಜರಾತ್‌ನ ಖೇಡಾ ಪ್ರದೇಶದಲ್ಲಿ ಮಸೀದಿಯೊಂದರ ಬಳಿ ನಡೆದ ಗರ್ಬಾ ಕಾರ್ಯಕ್ರಮದಲ್ಲಿ ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಒಂದು ಹರಿದಾಡುತ್ತಿದ್ದು, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಪೊಲೀಸರು ಯುವಕರನ್ನು ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಥಳಿಸುವ ಮೂಲಕ ಅಪರಾಧಿಗಳನ್ನು ಶಿಕ್ಷಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸಲಾಗುತ್ತಿದೆ. ಆರ್ಕೈವ್…

Read More

Fact Check: ಪ್ರಾಣ ಪ್ರತಿಷ್ಟೆಯ ದಿನ ಹನುಮಾನ್ ವೇಷ ಹಾಕಿದ್ದಕ್ಕೆ ಬಾಲಕ ಮೇಲೆ ಅತ್ಯಾಚಾರ ಎಂಬುದು ಸುಳ್ಳು

ಭಾರತದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ಆರೋಪ ಹೊರಿಸುವುದು ಸರ್ವೇ ಸಾಮಾನ್ಯವಾಗುತ್ತಿದೆ. ಯಾವುದೇ ಅಪರಾಧ ನಡೆದರೂ ಅದನ್ನು ಮುಸ್ಲೀಮರ ತಲೆಗೆ ಕಟ್ಟುವುದರ ಜೊತೆಗೆ, ಬೇಕೆಂದೇ ಅಪರಾಧಗಳನ್ನು ಎಸಗಿ ಅದನ್ನು ಮುಸ್ಲೀಮರ ಮೇಲೆ ಆರೋಪಿಸುವುದು ನಡೆಯುತ್ತಿದೆ. ಈಗ, “ಗುಜರಾತ್‌ನಲ್ಲಿ ರಾಮಮಂದಿರದ ಪ್ರಾಣಪ್ರತಿಷ್ಠೆಯ ದಿನದಂದು ಹನುಮಾನ್ ವೇಷಭೂಷಣ ತೊಟ್ಟಿದ್ದಕ್ಕೆ ಹಿಂದೂ ಹುಡುಗನೊಬ್ಬನನ್ನು ಮುಸ್ಲಿಂ ಯುವಕರ ಗುಂಪೊಂದು ಅಪಹರಿಸಿ ಒಂದು ವಾರದವರೆಗೆ ಸಾಮೂಹಿಕ ಅತ್ಯಾಚಾರವೆಸಗಿದೆ.” ಎಂಬ ಸಂದೇಶದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಬಜರಂಗದಳ ಗುಜರಾತ್ ಹಂಚಿಕೊಂಡಿಂದೆ….

Read More