ನಾಥೂರಾಂ ಗೋಡ್ಸೆ

Fact Check: ನಾಥೂರಾಂ ಗೋಡ್ಸೆಗೆ ಮರಣದಂಡನೆ ವಿಧಿಸುವಂತೆ ನ್ಯಾಯಮೂರ್ತಿ ಜಿ.ಡಿ ಖೋಸ್ಲಾ ಅವರಿಗೆ ಸರ್ಕಾರ ಒತ್ತಡ ಹೇರಿತ್ತು ಎಂಬುದು ಸುಳ್ಳು

ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ಸ್ವಾತಂತ್ರ್ಯ ಭಾರತದ ಮೊದಲ ಭಯೋತ್ಪಾಧಕ ಎಂದು ಕುಖ್ಯಾತಿ ಪಡೆದ ನಾಥೂರಾಂ ಗೋಡ್ಸೆಗೆ ಮರಣದಂಡನೆ ವಿಧಿಸಿದ ಪ್ರಕರಣದ ಅಧ್ಯಕ್ಷತೆ ವಹಿಸಿದ್ದ ಪಂಜಾಬ್ ಹೈಕೋರ್ಟ್‌ನ ಆಗಿನ ಮುಖ್ಯ ನ್ಯಾಯಮೂರ್ತಿ ಜಿಡಿ ಖೋಸ್ಲಾ ಅವರ ಕುರಿತಂತೆ ಸಂದೇಶವೊಂದನ್ನು ಹಲವಾರು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಸಂದೇಶದಲ್ಲಿ, “ನ್ಯಾಯಮೂರ್ತಿ ಜಿ.ಡಿ.ಖೋಸ್ಲಾ ಅವರು ನಾಥೂರಾಂ ಗೋಡ್ಸೆ ಪ್ರಕರಣದ ಅಧ್ಯಕ್ಷತೆ ವಹಿಸಿ ನಾಥೂರಾಂ ಗೋಡ್ಸೆಗೆ ಮರಣದಂಡನೆ ವಿಧಿಸಿದ ನ್ಯಾಯಾಧೀಶರಾಗಿದ್ದರು. ಗೋಡ್ಸೆಯನ್ನು ಗಲ್ಲಿಗೇರಿಸಿದ ನಂತರ, ನ್ಯಾಯಾಧೀಶರು ತಮ್ಮ ಪುಸ್ತಕದ “ದಿ…

Read More

Fact Check | ಇನ್‌ಸ್ಟಾಗ್ರಾಮ್‌ ಸರ್ಕಾರಕ್ಕೆ ಗ್ರೂಪ್‌ ಚಾಟ್‌ಗಳನ್ನು ನೋಡಲು ಅವಕಾಶ ಮಾಡಿಕೊಟ್ಟಿಲ್ಲ

“Instagram ತನ್ನ ಎಲ್ಲಾ ಬಳಕೆದಾರರ ಗ್ರೂಪ್‌ ಚಾಟ್‌ಗಳನ್ನು ನೋಡಲು ಸರ್ಕಾರಕ್ಕೆ ಅನುವು ಮಾಡಿಕೊಟ್ಟಿದೆ. ಆ ಮೂಲಕ ನೀವು ಯಾವುದಾದರು ಗುಂಪಿನಲ್ಲಿದ್ದರೆ ಸರ್ಕಾರ ನಿಮ್ಮ ಸಂದೇಶಗಳನ್ನು ನೋಡಲು ಸಾಧ್ಯವಾಗುತ್ತದೆ.” ಎಂಬ ಪೋಸ್ಟ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಇನ್‌ಸ್ಟಾಗ್ರಾಮ್‌ ಅನ್ನು ಡಿಲೀಟ್‌ ಮಾಡಿ ಎಂದು ಸಾಕಷ್ಟು ಮಂದಿ ಬರೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಸರ್ಕಾರದ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗ ಮಾಡುತ್ತಿದ್ದು, ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಲು ಆರಂಭಿಸಿದ್ದಾರೆ. ಈ ಸಂದೇಶದ ಕುರಿತು  ನಮ್ಮ ತಂಡ ಫ್ಯಾಕ್ಟ್‌ಚೆಕ್‌ ನಡೆಸಲು ಮುಂದಾದಗ…

Read More

Fact Check | ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ 3 ದಿನಗಳ ವಾರಾಂತ್ಯ ಘೋಷಣೆ ಮಾಡಲಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ಮುಂಬರುವ ಬೆಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಎಲ್ಲಾ ಕಂಪನಿಗಳಿಗೆ ಮೂರು ದಿನಗಳ ವಾರದ ರಜೆಯನ್ನು ಕಡ್ಡಾಯಗೊಳಿಸುವ ನೀತಿಯನ್ನು ಜಾರಿ ಮಾಡಲಿದ್ದಾರೆ.” ಎಂಬ ಪೋಸ್ಟ್‌ನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಪೋಸ್ಟ್‌ ಈಗ ವೈರಲ್‌ ಆಗಿದೆ. ಸಾಮಾಜಿಕ ಜಾಲತಾಣದ ಬಳಕೆದಾರರು ಇದನ್ನೇ ನಿಜವೆಂದು ನಂಬಿಕೊಂಡಿದ್ದು ಕೆಲವರು ಈ ಕುರಿತು ವಿಮರ್ಶೆಯನ್ನು ನಡೆಸಲು ಪ್ರಾರಂಭಿಸಿದ್ದಾರೆ. ಆದರೆ ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಇದೇ ರೀತಿಯ ಹಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಪತ್ತೆಯಾಗಿವೆ. ಅದರಲ್ಲೂ ಮೂರು ದಿನಗಳ ಕಾಲ…

Read More

Fact Check |’ದೆಹಲಿ ಏಮ್ಸ್’ನಲ್ಲಿ 7 ಚೀನಾದ ‘ನ್ಯೂಮೋನಿಯಾ’ ಕೇಸ್ ಪತ್ತೆ ವರದಿ ಸುಳ್ಳು

“ಕೋವಿಡ್ ಬಳಿಕ ಚೀನಾದಲ್ಲಿ ನ್ಯೂಮೋನಿಯಾ ರೀತಿಯ ಸೋಂಕು ತೀವ್ರಗತಿಯಲ್ಲಿ ಪಸರಿಸಿ ಆತಂಕ ಸೃಷ್ಟಿಸಿದೆ. ಮಕ್ಕಳಲ್ಲಿ ಕಾಣಿಸಿಕೊಂಡಿರುವ ಈ ಸೋಂಕಿನಿಂದ ಚೀನಾದ ಕೆಲ ಪ್ರಾಂತ್ಯದ ಆಸ್ಪತ್ರೆಗಳು ಭರ್ತಿಯಾಗಿದೆ. ಇದೇ ಸೋಂಕು ಅಮೆರಿಕದ ಮಕ್ಕಳಲ್ಲೂ ಕಾಣಿಸಿಕೊಂಡಿದೆ.” ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ ಇನ್ನು ಕೆಲ ಮಾಧ್ಯಮಗಳಲ್ಲಿ “ಚೀನಾದಲ್ಲಿ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಅಲರ್ಟ್ ಘೋಷಿಸಿದ ಭಾರತ ತೀವ್ರ ಮುನ್ನಚ್ಚರಿಕೆ ವಹಿಸಿತ್ತು. ಆದರೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇದೀಗ 7 ಪ್ರಕರಣ ಪತ್ತೆಯಾಗಿದೆ. ಈ ಪ್ರಕರಣ ಚೀನಾದಲ್ಲಿ ಕಾಣಿಸಿಕೊಂಡ ನ್ಯುಮೋನಿಯಾ…

Read More