Fact Check | ಬಾಂಗ್ಲದೇಶದಲ್ಲಿ ಹಿಂದೂ ಪ್ರಾಂಶುಪಾಲೆಯನ್ನು ಮರಕ್ಕೆ ಕಟ್ಟಿ ಹಾಕಲಾಗಿದೆ ಎಂಬುದು ಸುಳ್ಳು

“ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾದ ನಂತರ ಅಲ್ಲಿನ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಹಿಂದುಗಳು ಅಪಾಯದಲ್ಲಿ ಸಿಲುಕಿದ್ದಾರೆ. ಹಲವಾರು ಹಿಂದೂ ಅಲ್ಪಸಂಖ್ಯಾತರು ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ನೀಡುತ್ತಿದ್ದಾರೆ. ನೀಡದಿದ್ದರೆ ಅವರು ಹಲವು ಬೆದರಿಕೆಗಳನ್ನು ಮತ್ತು ಹಲ್ಲೆಯಂತಹ ಸಂಕಷ್ಟಗಳನ್ನು ಎದುರಿಸಬೇಕಾಗಿದೆ. ಇದೀಗ ಇಂತಹದ್ದೇ ಪರಿಸ್ಥಿತಿಯನ್ನು ಅಜೀಂಪುರ ಸರ್ಕಾರಿ ಪ್ರಾಂಶುಪಾಲೆಯಾದ ಗೀತಾಂಜಲಿ ಬರುವಾ ಅವರು ಎದುರಿಸಿದ್ದಾರೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದಿದ್ದಕ್ಕೆ ವಿದ್ಯಾರ್ಥಿನಿಯರು ಸುತ್ತುವರೆದು ಅವರನ್ನು ಮರಕ್ಕೆ ಕಟ್ಟಿಹಾಕಿದ್ದಾರೆ.” ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ Some…

Read More

Fact Check | ಚೆನ್ನೈನಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದರಿಯ ಅತ್ಯಾಚಾರಿಯ ಶಿರಚ್ಛೇದ ಮಾಡಿದ್ದಾನೆ ಎಂಬುದು ಸುಳ್ಳು

” ತಮಿಳುನಾಡಿನಲ್ಲಿ ತನ್ನ ಸಹೋದರಿಯನ್ನು ಅತ್ಯಾಚಾರ ಮಾಡಿದ ವ್ಯಕ್ತಿಯ ತಲೆ ಕಡಿದ ಅಣ್ಣ, ಆ ರುಂಡದೊಂದಿಗೆ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ. ಕಾನೂನು ಶಿಕ್ಷೆ ಕೊಡಲು ತಡ ಮಾಡಿದಾಗ ಅತ್ಯಾಚಾರಿಗಳನ್ನು ಹೀಗೆಯೇ ಶಿಕ್ಷಿಸಬೇಕಿದೆ.” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಕೂಡ ವ್ಯಕ್ತಿಯೊಬ್ಬ ರುಂಡವನ್ನು ಹಿಡಿದುಕೊಂಡು ಹೋಗುತ್ತಿರುವುದನ್ನು ನೋಡಬಹುದಾಗಿದೆ. ಹೀಗೆ ಈ ವಿಡಿಯೋ ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿದ ಹಲವು ಮಂದಿ ಇದು ನಜವಾಗಿಯೂ ನಡೆದ ಘಟನೆ ಎಂದು ತಮ್ಮ ಸಾಮಾಜಿಕ…

Read More

Fact Check| ಈ ಹಿಂದೂ ಮಹಿಳೆಗೆ 24 ಮಕ್ಕಳಿದ್ದಾರೆ ಎಂಬುದು ಸುಳ್ಳು

“ಈ ಹಿಂದೂ ಮಹಿಳೆ 16ಗಂಡು ಮಕ್ಕಳು ಮತ್ತು 8 ಹೆಣ್ಣು ಮಕ್ಕಳು ಸೇರಿದಂತೆ 24 ಮಕ್ಕಳಿಗೆ ಜನ್ಮ ನೀಡಿದ್ದಾಳೆ” ಎಂಬ ಶೀರ್ಷಿಕೆಯಲ್ಲಿ ಪತ್ರಕರ್ತನೊಬ್ಬ ನಡೆಸುವ ಸಂದರ್ಶನದ ಹಾಗೆ ಚಿತ್ರಿಸಲಾದ ವಿಡಿಯೋ ಕ್ಲಿಪ್‌ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ವೈರಲ್ ಆದ ಬಳಿಕ ಮಹಿಳೆಯೊಂದಿಗೆ ಹಲವು ಯೂಟ್ಯೂಬ್ ಚಾನೆಲ್‌ಗಳು ಸಂದರ್ಶನ ನಡೆಸಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಫ್ಯಾಕ್ಟ್‌ಚೆಕ್: ವಿಡಿಯೋದಲ್ಲಿ ತನಗೆ 24 ಮಕ್ಕಳಿದ್ದಾರೆ ಎಂದು ಹೇಳಿಕೊಳ್ಳುವ ಹಿಂದೂ ಮಹಿಳೆಯ ಹೆಸರು ಖುಷ್ಬು ಪಾಠಕ್. ಸಾಮಾಜಿಕ ಜಾಲತಾಣದಲ್ಲಿ…

Read More

Fact Check | ಮಗಳನ್ನು ಅತ್ಯಾಚಾರಗೈದ ಆರೋಪಿಯನ್ನು ತಾಯಿ ಕೊಲ್ಲುವ ವಿಡಿಯೋ ನಿಜವಲ್ಲ, ಸಿನಿಮಾ ದೃಶ್ಯವಾಗಿದೆ

“ಈ ವಿಡಿಯೋ ನೋಡಿ ಜರ್ಮನಿಯ ಮಹಿಳೆ ಮರಿಯಾನ್ನೆ ಬ್ಯಾಚ್ಮಿಯರ್ ತನ್ನ ಏಳು ವರ್ಷದ ಮಗಳನ್ನು ಲೈಂಗಿಕವಾಗಿ ದೌರ್ಜನ್ಯ ಎಸಗಿ ಕೊಂದ ವ್ಯಕ್ತಿಯನ್ನು ನ್ಯಾಯಾಲಯದಲ್ಲಿ ಶೂಟ್ ಮಾಡಿದ್ದಾರೆ.  ಅವರ ಆಕ್ರೋಶ ಮತ್ತು ತನ್ನ ಮಗಳ ಸಾವಿಗೆ ನ್ಯಾಯ ಕೊಡಸಲೇ ಬೇಕು ಎನ್ನುವ ಉದ್ದೇಶದಿಂದ ಅವರು ತೆಗೆದುಕೊಂಡ ಈ ನಿರ್ಧಾರದಿಂದ ಅಲ್ಲಿ ಮಹತ್ತರವಾದ ಬದಲಾವಣೆ ಮತ್ತು ಪ್ರಬಲವಾದ ಕಾನೂನು ಜಾರಿಗೆ ಬಂದಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Marianne Bachmeier, a West German woman, took…

Read More

Fact Check | ಸರ್ಕಾರಿ ಕೆಲಸ ತೊರೆಯುವಂತೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬುದು ಸುಳ್ಳು

“ಬಾಂಗ್ಲಾದೇಶದಲ್ಲಿ ಸದ್ಯದ ಮಟ್ಟಿಗೆ ಮಧ್ಯಂತರ ಸರ್ಕಾರ ರಚನೆಯಾದರೂ ಅಲ್ಲಿನ ಹಿಂದೂಗಳ ಪರಿಸ್ಥಿತಿ ಇಂದಿಗೂ ಶೋಚನೀಯವಾಗಿದೆ. ಅದರಲ್ಲೂ ಹಲವು ದುರುಳರು ಹಿಂದೂಗಳ ಮೇಲೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಿರುಕುಳವನ್ನು ನೀಡುತ್ತಿದ್ದಾರೆ. ಈಗ ಬಾಂಗ್ಲಾದೇಶದ ಸರ್ಕಾರಿ ಹುದ್ದೆಯಲ್ಲಿರುವ ಹಿಂದೂಗಳಿಗೆ ರಾಜೀನಾಮೆಯನ್ನು ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಯಾಕೆ ಯಾರು ಮಾತನಾಡುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಅನ್ನು ಹಂಚಿಕೊಳ್ಳಲಾಗುತ್ತಿದೆ. Jamaat people and BNP people are forcibly taking resignations from Hindu government…

Read More

Fact Check | ಧ್ವಜಸ್ತಂಭದಲ್ಲಿ ಸಿಲುಕಿದ್ದ ರಾಷ್ಟ್ರಧ್ವಜವನ್ನು ಹಕ್ಕಿಯೊಂದು ಬಿಡಿಸಿದೆ ಎಂಬುದು ಸುಳ್ಳು

ಇದೇ ಆಗಸ್ಟ್‌ 15ರ ಸ್ವಾತಂತ್ರ್ಯೋತ್ಸವದ ವೇಳೆ ಕೇರಳದ ಒಂದು ಪ್ರದೇಶದಲ್ಲಿ ನಡೆದ ತ್ರಿವರ್ಣ ಧ್ವಜಾರೋಹಣದ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಧ್ವಜವನ್ನು ಮೇಲೆ ಏರಿಸಿ ಹಾರಿಸುವಾಗ ಧ್ವಜಸ್ತಂಭದ ತುದಿ ಭಾಗದಲ್ಲಿ ಸಿಲುಕಿಕೊಂಡಿದೆ. ಕೆಳಗಿನಿಂದ ಎಷ್ಟೇ ಹಗ್ಗ ಜಗ್ಗಾಡಿದರೂ ಅದು ತೆರೆದುಕೊಂಡಿಲ್ಲ. ಆಗ ಒಂದು ಬದಿಯಿಂದ ಅಚಾನಕ್ಕಾಗಿ ಹಾರಿ ಬಂದ ಹಕ್ಕಿಯೊಂದು ರಾಷ್ಟ್ರಧ್ವಜದ ಕಗ್ಗಂಟನ್ನು ಬಿಡಿಸಿದೆ. ಆಗ ಧ್ವಜ ಹಾರಾಡಿದ್ದು, ಬಳಿಕ ಆ ಹಕ್ಕಿ ಹಾರಿ ಹೋಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. …

Read More

Fact Check | ಉದ್ಧವ್ ಠಾಕ್ರೆಯನ್ನು ನಕಲಿ ಸಂತಾನ ಎಂದು ಕೇಜ್ರಿವಾಲ್ ನಿಂದಿಸಿಲ್ಲ. ಅದು ಎಡಿಟೆಡ್‌ ವಿಡಿಯೋ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಂದರ್ಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, “ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶಿವಸೇನಾ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ನಕಲಿ ಉತ್ತರಾಧಿಕಾರಿ (ನಕ್ಲಿ ಸಂತನ್) ಎಂದು ಹೇಳಿದ್ದಾರೆ.” ಎಂಬ ಬರಹದೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಹಿಂದಿಯಲ್ಲಿ ಕೇಜ್ರಿವಾಲ್‌ ಅವರು  “ಉದ್ಧವ್ ಠಾಕ್ರೆ ಜೋ ಹೈ, ವೋ ಅಪ್ನೆ ಬಾಪ್ ಕಿ ‘ನಕ್ಲಿ ಸಂತಾನ್’ ಹೈ” ಎಂದು ಹೇಳುವುದನ್ನು ಕೇಳಬಹುದು. Udhav dhakre apne…

Read More

Fact Check | ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾಗಳ ಹತ್ಯೆಯನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳ ಕೊಲೆ ಎಂದು ಹಂಚಿಕೆ

“ಬಾಂಗ್ಲಾದೇಶದಲ್ಲಿ ಮೊಹಮ್ಮದ್ ಯುನಸ್ ಅವರ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾದರೂ ಅಲ್ಲಿ ಹಿಂದುಗಳ ಮೇಲಿನ ದಾಳಿ ಕಡಿಮೆಯಾಗಿಲ್ಲ. ಅಮಾಯಕ ಹಿಂದೂಗಳ ಮನೆಗಳ ಒಳಗೆ ನುಗ್ಗಿ ಉದ್ರಿಕ್ತ ಮುಸಲ್ಮಾನರ ಗುಂಪು ಹಿಂದೂಗಳ ನರಮೇಧವನ್ನು ಮಾಡುತ್ತಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಮಕ್ಕಳ ಸಾವಿನ ಚಿತ್ರಣವಿದ್ದು ಇದೇ ಕಾರಣದಿಂದ ಬಾಂಗ್ಲಾದೇಶದಲ್ಲಿ ಹಿಂದೂ ಮಕ್ಕಳನ್ನು ಭೀಕರವಾಗಿ ಹತ್ಯೆ ಮಾಡಲಾಗುತ್ತಿದೆ ಎಂದು ಕೂಡ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದ ಹಲವು ಮಂದಿ ಬಾಂಗ್ಲಾದೇಶದಲ್ಲಿ ಇನ್ನೂ ಕೂಡ…

Read More

Fact Check | ಪಾಕಿಸ್ತಾನದಲ್ಲಿ ಬೆಲ್ಜಿಯಂ ಮಹಿಳೆಯ ಮೇಲೆ ಅತ್ಯಾಚಾರ ಎಂದು ಮತ್ತೊಂದು ಪ್ರಕರಣದ‌ ಫೋಟೋ ಹಂಚಿಕೆ

“ಈ ಬೆಲ್ಜಿಯಂ ಮಹಿಳೆ ಪಾಕಿಸ್ತಾನಕ್ಕೆ ಪ್ರವಾಸಕ್ಕಾಗಿ ಬಂದಿದ್ದರು. ಪಾಕಿಸ್ತಾನಿ ಮುಸ್ಲಿಮರು ಅವರನ್ನು ಅಪಹರಿಸಿ 5 ದಿನಗಳ ಕಾಲ ಅತ್ಯಾಚಾರ ಮಾಡಿ, ನಂತರ ಅವರ ಕೈಗಳನ್ನು ಕಟ್ಟಿ ನಿರ್ಜನ ರಸ್ತೆಯಲ್ಲಿ ಬಿಟ್ಟು ಓಡಿಹೋದರು. ಇದನ್ನು ಕಂಡ ಅಪರಿಚಿತ ವ್ಯಕ್ತಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಆಕೆಯನ್ನು ರಕ್ಷಿಸಲಾಗಿದೆ. ದೇಶವನ್ನು ಲೆಕ್ಕಿಸದೆ, ರಾಕ್ಷಸರು ಒಂದೇ ಆಲೋಚನೆಯನ್ನು ಹೊಂದಿದ್ದಾರೆ. ಏಕೆಂದರೆ ಅವರೆಲ್ಲರೂ ಒಂದೇ ಸಿದ್ಧಾಂತವನ್ನು ನಂಬುತ್ತಾರೆ.” ಎಂದು ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ನೋಡಿದ ಹಲವರು ಇದು ನಿಜವಾದ ಘಟನೆ ಎಂದು…

Read More

Fact Check| ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿ ಟಿಎಂಸಿ ನಾಯಕನ ಮಗನಲ್ಲ

ಕೋಲ್ಕತ್ತಾ ಆರ್ ಜಿ ಕರ್ ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮಾಜಿ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಸೌಮೆನ್ ಮಹಾಪಾತ್ರ ಅವರ ಪುತ್ರ ಡಾ. ಸುಭ್‌ದೀಪ್ ಸಿಂಗ್ ಮಹಾಪಾತ್ರ‌ ಅವರ ಕೈವಾಡವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಪೋಸ್ಟ್‌ಗಳು ಹರಿದಾಡುತ್ತಿವೆ. “ಈತ ಟಿಎಂಸಿ ಶಾಸಕನ ಪುತ್ರ. ವೈದ್ಯಕೀಯ ವಿದ್ಯಾರ್ಥಿನಿಯ ಕೊಲೆ ಪ್ರಕರಣದಲ್ಲಿ ಈತನಿಗೆ ನಂಟಿದೆ. ಈಗ ಈತ ತಲೆ ಮರೆಸಿಕೊಂಡಿದ್ದಾನೆ‌. ಬಂಧನಕ್ಕೊಳಗಾದ ವ್ಯಕ್ತಿ…

Read More