Fact Check | ತಮಿಳುನಾಡು ಕ್ರೈಸ್ತರು ದೇವಾಲಯವನ್ನು ಚರ್ಚ್‌ ಆಗಿ ಪರಿವರ್ತಿಸಿದ್ದಾರೆ ಎಂಬುದು ಸುಳ್ಳು

“ತಮಿಳುನಾಡಿನ ರಾಮನಾಥಪುರಂನಲ್ಲಿರುವ ಅಧಿಯಮಾನ್ ಎಂಬಲ್ಲಿನ ಹಳೆಯ ದೇವಾಲಯವನ್ನು ಕ್ರಿಶ್ಚಿಯನ್ನರು ಆಕ್ರಮಿಸಿಕೊಂಡರು ಮತ್ತು ಅದನ್ನು ಚರ್ಚ್ ಆಗಿ ಪರಿವರ್ತಿಸಿದ್ದಾರೆ. ಈಗಲೂ ಹಿಂದೂಗಳು ಎಚ್ಚೆತ್ತುಕೊಳ್ಳದೆ ಹೋದರೆ ಇನ್ನೂ ಹಲವು ದೇವಾಲಯಗಳು ಚರ್ಚ್‌ಗಳಾಗಿ ಬದಲಾಗುತ್ತವೆ. ಮುಂದೆ ಭಾರತದಲ್ಲಿ ದೇವಾಲಯಗಳು ಇದ್ದವು ಎಂದು ನಾವು ಪಠ್ಯ ಪುಸ್ತಕಗಳಲ್ಲಿ ಮಾತ್ರ ನೋಡಬೇಕಾಗುತ್ತದೆ.” ಎಂಬ ಬರಹದೊಂದಿಗೆ ಪೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Christians occupied old temple. Kalasam replaced by a Cross and converted into a Church at Adhiyaman,…

Read More

Fact Check | ಹೊಸ ಕ್ರಿಮಿನಲ್ ಕಾನೂನು ಅಡಿಯಲ್ಲಿ ಭ್ರಷ್ಟ ಪೋಲೀಸ್ ಅಧಿಕಾರಿ ಬಂಧನ ಎಂದು ಹಳೆಯ ವಿಡಿಯೋ ಹಂಚಿಕೆ

“ಭಾರತದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳು 1 ಜುಲೈ 2024 ರಿಂದ ಜಾರಿಗೆ ಬಂದಿವೆ. ಇದರ ಪರಿಣಾಮ ಹೇಗಿದೆ ಗೊತ್ತಾ? ಲಂಚ ಪಡೆಯುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ತಕ್ಷಣವೇ  ಬಂಧಿಸಲಾಗಿದೆ. ಇದು ಹೊಸದಾಗಿ ಜಾರಿಗೆ ತಂದ ಕ್ರಿಮಿನಲ್ ಕಾನೂನುಗಳಿಂದ ಮಾತ್ರ ಸಾಧ್ಯವಾಗಿದೆ. ಈ ಕಾನೂನುಗಳು ಬಾರದೆ ಹೋಗಿದ್ದರೆ, ಇವರುಗಳು ಆರಾಮವಾಗಿ ಹೊರಗಡೆ ತಿರುಗಾಡುತ್ತಿದ್ದರು” ಎಂದು ಹೇಳುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಹಲವರು ಇದು ನಿಜವಾದ ವಿಡಿಯೋ ಎಂದು ಭಾವಿಸಿದ್ದಾರೆ. ಹೀಗಾಗಿ ತಮ್ಮ ಸಾಮಾಜಿಕ…

Read More

Fact Check | 2041ರ ಹೊತ್ತಿಗೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಶೇ.84 ರಷ್ಟು ಏರಿಕೆಯಾಗಲಿದೆ ಎಂಬುದು ಸುಳ್ಳು

“2041 ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು 84% ರಷ್ಟು ಇರಲಿದ್ದಾರೆ ಎಂದು ‘ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಡೆಮಾಗ್ರಾಫಿಕ್ಸ್ ರಿಸರ್ಚ್’ ಸಮೀಕ್ಷೆಯು ಭವಿಷ್ಯ ನುಡಿದಿದೆ. ಈ ಬಗ್ಗೆ ಹಿಂದೂಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರತದಲ್ಲಿನ ಹಿಂದೂಗಳು ಅಲ್ಪಸಂಖ್ಯಾತರಾಗುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ.” ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ.  ಈ ಸಂದೇಶವನ್ನು ನೋಡಿದ ಹಲವರು ಇದು ನಿಜವಾದ ದತ್ತಾಂಶವಿರಬಹುದು ಎಂದು ಭಾವಿಸಿ ಈ ಸಂದೇಶವನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಸಂದೇಶದಲ್ಲಿನ ದತ್ತಾಂಶಗಳು ಕೂಡ ಅಂತರಾಷ್ಟ್ರೀಯ…

Read More

Fact Check | ಪಪ್ಪಾಯಿ ಎಲೆಯ ರಸವು ಡೆಂಗ್ಯು ಖಾಯಿಲೆ ಗುಣ ಪಡಿಸುತ್ತದೆ ಎಂಬುದು ಸುಳ್ಳು

“ತುರ್ತು ಮಾಹಿತಿ.. ಪಪ್ಪಾಯಿ ಎಲೆಯ ರಸವು ಜೇನು ತುಪ್ಪದೊಂದಿಗೆ ಪವಾಡದಂತೆ ಕೆಲಸ ಮಾಡುತ್ತದೆ. ಪ್ಲೆಟ್ಲೆಟ್‌ ಎಣಿಕೆ 12 ಗಂಟೆಗಳಲ್ಲಿ 68,000 ದಿಂದ 200000 ದವರೆಗೆ ಏರುತ್ತದೆ. ಮಾನವೀಯತೆಯ ಸೇವೆ ಮಾಡಲು ಈ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳಿ.. ಭಾರತದಾದ್ಯಂತ ಡೆಂಗ್ಯ ಜ್ವರ ವಿಪರೀತವಾಗಿ ಹರಡುತ್ತಿದೆ. ದಯವಿಟ್ಟು ಈ ವಿಷಯವನ್ನು ಹಂಚಿಕೊಳ್ಳುವ ಮೂಲಕ, ಹಲವಾರು ಜೀವಗಳನ್ನು ಉಳಿಸಿದ ಪುಣ್ಯ ನಿಮಗೆ ಸಿಗುತ್ತದೆ ” ಎಂಬ ಪೋಸ್ಟರ್‌ನೊಂದಿಗೆ ಸುದ್ದಿಯೊಂದು ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟರ್‌…

Read More

Fact Check | ರಾಹುಲ್‌ ಗಾಂಧಿ ವಿರುದ್ಧ ಮತ್ತೊಮ್ಮೆ ಸುಳ್ಳು ಸುದ್ದಿ ಸೃಷ್ಟಿಸಿದ ಮಹೇಶ್‌ ವಿಕ್ರಮ್‌ ಹೆಗಡೆ

“ಮೋದಿಜಿ ಎಂದಿಗೂ ಮುಸ್ಲಿಂ ಸಮುದಾಯವನ್ನು ಮುಗಿಸುವುದಾಗಿ ಹೇಳಿಲ್ಲ. ಆದರೂ ಅವರು ಮೋದಿಗೆ ಮತ ಹಾಕಿಲ್ಲ. ಸನಾತನ ಧರ್ಮವನ್ನು ಅಂತ್ಯಗೊಳಿಸುವುದಾಗಿ ರಾಹುಲ್ ಗಾಂಧಿ ಪದೇ ಪದೇ ಬೆದರಿಕೆ ಹಾಕುತ್ತಿದ್ದಾರೆ. ಆದರೂ ಮೂರ್ಖ ಹಿಂದೂಗಳು ರಾಹುಲ್ ಗಾಂಧಿಗೆ ಮತ ಹಾಕಿದರು ಎಂತಹ ವಿಪರ್ಯಾಸ!” ಎಂದು ಟಿವಿ ವಿಕ್ರಮ ಹಾಗೂ ಪೋಸ್ಟ್‌ ಕಾರ್ಡ್‌ ಸಂಸ್ಥಾಪಕ ಮಹೇಶ್‌ ವಿಕ್ರಮ ಹೆಗಡೆ ತನ್ನ ಎಕ್ಸ್‌ ಖಾತೆಯಲ್ಲಿ ಸುಳ್ಳು ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಅನ್ನು ಹಲವರು ರಿಪೋಸ್ಟ್‌ ಕೂಡ ಮಾಡಿದ್ದಾರೆ. Modi ji…

Read More

Fact Check | ಅನುರಾಗ್ ಠಾಕೂರ್ ಪ್ರಶ್ನೆಗೆ ಉತ್ತರಿಸಲು ರಾಹುಲ್ ಗಾಂಧಿ ವಿಫಲ ಎಂಬುದು ಎಡಿಟೆಡ್‌ ವಿಡಿಯೋವಾಗಿದೆ

ಸಾಮಾಜಿ ಜಾಲತಾಣದಲ್ಲಿ ” ಈ ವಿಡಿಯೋ ನೋಡಿ ಅನುರಾಗ್‌ ಠಾಕೂರ್‌ ಅವರು ವಿಪಕ್ಷಗಳಿಗೆ ಅದರಲ್ಲೂ ಪ್ರಮುಖವಾಗಿ ರಾಹುಲ್‌ ಗಾಂಧಿ ಅವರಿಗೆ ಮೊನಚಾದ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಯಲ್ಲಿ ಅವರು ” ನಾನು ನಿಮಗೆ ಒಂದು ವಿಷಯ ಕೇಳಲು ಬಯಸುತ್ತೇನೆ, ಸಂವಿಧಾನದಲ್ಲಿ ಎಷ್ಟು ಪುಟಗಳಿವೆ? ಈ ಹಲವು, ಈ ಹಲವು ಎಂದು ಹೇಳಬೇಡಿ, ಎಷ್ಟು ಪುಟಗಳಿವೆ ಎಂದು ಹೇಳಿ? ನೀವು ಅದನ್ನು (ಸಂವಿಧಾನದ ಪ್ರತಿ) ಪ್ರತಿದಿನ ಒಯ್ಯುತ್ತೀರಿ, ನೀವು ಎಂದಾದರೂ ಅದನ್ನು ತೆರೆದು ಓದುತ್ತೀರಾ? ನೀವು ಅದನ್ನು ಓದುವುದಿಲ್ಲ,…

Read More

Fact Check | ಬುರ್ಖಾಧಾರಿ ಮಹಿಳೆಯರನ್ನು ಸರಪಳಿ ಹಾಕಿ ಕರೆದೊಯ್ಯಲಾಗುತ್ತಿದೆ ಎಂಬುದು ಎಡಿಟೆಡ್‌ ಫೋಟೋ

“ಈ ಫೋಟೋ ನೋಡಿ. ಇದು ಮುಸ್ಲಿಂ ಸಾಮಾಜದಲ್ಲಿ ಮಹಿಳೆಯರ ಶೋಚನಿಯ ಪರಿಸ್ಥಿತಿ. ಪತಿಯೊಬ್ಬ ತನ್ನ ಮೂವರು ಪತ್ನಿಯನ್ನು ಹೇಗೆ ಸರಪಳಿಯಲ್ಲಿ ಕರೆದುಕೊಂಡು ವಾಕಿಂಗ್‌ ಹೋಗುತ್ತಿದ್ದಾನೆ ನೋಡಿ. ಈ ರೀತಿಯ ಪರಿಸ್ಥಿತಿ ಭಾರತೀಯ ಮುಸ್ಲಿಂ ಮಹಿಳೆಯರಿಗೂ ಬರುವ ಸಾಧ್ಯತೆ ಇದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಲವ್‌ ಜಿಹಾದ್‌ಗೆ ಬಲಿಯಾಗುವ ಹಿಂದೂ ಹೆಣ್ಣು ಮಕ್ಕಳಿಗೂ ಇದೇ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದನ್ನು ಎಲ್ಲರಿಗೂ ತಲುಪುವವರೆಗೂ ಶೇರ್‌ ಮಾಡಿ” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. 😳 !$LAM!C LOVE…

Read More

Fact Check | ಲಿಕ್ಕರ್ ಹಗರಣಕ್ಕೆ ಮನೀಷ್‌ ಸಿಸೋಡಿಯ ಕಾರಣವೆಂದು ಅರವಿಂದ್‌ ಕೇಜ್ರಿವಾಲ್‌ ಹೇಳಿಲ್ಲ

“ಈ ವರದಿ ನೋಡಿ.. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿವಾದಾತ್ಮಕ ಮದ್ಯ ನೀತಿಯ ಹೊಣೆಯನ್ನು ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರ ಮೇಲೆ ಹೊರಿಸಿದ್ದಾರೆ. ಇದೀಗ ಆಮ್‌ ಆದ್ಮಿ ಪಕ್ಷದ ಅಸಲಿ ಮುಖ ಹೊರ ಬಂದಿದೆ. ಪಕ್ಷದ ಒಳಗಿರುವ ಒಡಕು ಹೊರ ಬಂದಿದ್ದು, ಆಪ್‌ ಪಕ್ಷದ ನಾಯಕ ಹಾಗು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ತಮ್ಮ ಪಕ್ಷದಿಂದಲೇ ತಪ್ಪಾಗಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.” ಎಂದು ಸುದ್ದಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. कोर्ट में CBI ने बहुत…

Read More

Fact Check | ಮಾತ್ರೆಗಳಲ್ಲಿ ಮೊಳೆಗಳನ್ನು ತುಂಬಿ ಮುಸಲ್ಮಾನರು ಮೆಡಿಸನ್‌ ಜಿಹಾದ್‌ ಆರಂಭಿಸಿದ್ದಾರೆ ಎಂಬುದು ಸುಳ್ಳು

“ಎಚ್ಚರಿಕೆಯಿಂದಿರಿ, ಜಿಹಾದ್‌ನ ಹೊಸ ರೂಪ ಪ್ರಾರಂಭವಾಗಿದೆ. ಅದರ ಹೆಸರು ‘ಮೆಡಿಸಿನ್ ಜಿಹಾದ್’. ಮುಸಲ್ಮಾನರು ಮಾತ್ರೆಗಳ ಒಳಗೆ ಮೊಳೆಗಳನ್ನು ತುಂಬಿ, ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಪ್ಯಾಕಿಂಗ್‌ ಮಾಡಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಇದನ್ನು ಸೇವಿಸಿದ ಇತರೆ ಕೋಮಿನವರು ಸಾವನ್ನಪ್ಪುವ ಸಾಧ್ಯತೆ ಇದೆ. ಹೀಗಾಗಿ ಈ ಮಾತ್ರಗಳನ್ನು ಕೊಂಡು ಕೊಳ್ಳುವ ಮುನ್ನ ಪರಿಶೀಲನೆ ನಡೆಸಿ. ಇಲ್ಲದಿದ್ದರೆ ನಿಮ್ಮ ಜೀವಕ್ಕೂ ಆಪತ್ತು ತರಬಹುದು” ಎಂದು ವಿಡಿಯೋದೊಂದಿಗೆ ಸಣ್ಣ ಟಿಪ್ಪಣಿಗಳನ್ನು ಬರೆದು ಹಲವರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್‌ ಮಾಡುತ್ತಿದ್ದಾರೆ. ಇನ್ನು ಈ…

Read More

Fact Check | ನ್ಯೂಯಾರ್ಕ್ ನಗರದ ಟೈಮ್ಸ್‌ ಸ್ಕ್ವೇರ್‌ನಲ್ಲಿ ವಿರಾಟ್‌ ಕೊಹ್ಲಿ ಪ್ರತಿಮೆ ನಿರ್ಮಿಸಲಾಗಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ಕ್ರಿಕೆಟಿಗ ವಿರಾಟ್‌ ಕೊಹ್ಲಿ ಕ್ರೀಡಾ ಸಾಧನೆಗೆ ಪ್ರತಿಯಾಗಿ ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿರುವ ಟೈಮ್ಸ್‌ ಸ್ಕ್ವೇರ್‌ನಲ್ಲಿ ಪ್ರತಿಮೆಯೊಂದನ್ನು ನಿರ್ಮಾಣ ಮಾಡಲಾಗಿದೆ. ಯಾವ ಕ್ರಿಕೆಟಿಗನಿಗೂ ಸಿಗದ ಗೌರವ ವಿರಾಟ್‌ ಕೊಹ್ಲಿ ಅವರಿಗೆ ಸಿಕ್ಕಿದೆ. ಇದು ಭಾರತದ ಕ್ರೀಡಾ ಪಟುವಿಗೆ ಸಿಕ್ಕ ಅತಿದೊಡ್ಡ ಗೌರವ. ಹೀಗಾಗಿ ಈ ಪೋಸ್ಟ್‌ ಅನ್ನು ಎಲ್ಲರಿಗೂ ಶೇರ್‌ ಮಾಡಿ” ಎಂದು ವಿರಾಟ್‌ ಕೊಹ್ಲಿ ಅವರ ಪ್ರತಿಮೆ ಇರುವ ಫೋಟೋದೊಂದಿಗೆ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋ ನೋಡಲು ನಿಜವಾದ ಫೋಟೋದಂತೆ ಇರುವುದರಿಂದ ಸಾಕಷ್ಟು ಮಂದಿ…

Read More