Fact Check | ನಾಗ್ಪುರದ ಬಳಿ ಭಜನೆ ಮಾಡಿದ್ದಕ್ಕಾಗಿ ವಾರಕರಿಗಳ ಮೇಲೆ ಮುಸ್ಲಿಮರಿಂದ ದಾಳಿ ಎಂಬುದು ಸುಳ್ಳು

“ಜುಲೈ 4, ಮಧ್ಯಾಹ್ನ 2 ಗಂಟೆಯ ಘಟನೆ, ಪಂಢರಪುರದ ವಾರಿಗೆ ಹೋಗುತ್ತಿದ್ದ ವಾರಕರಿಗಳು, ನಾಗಪುರ ರಸ್ತೆ ಬದಿಯಲ್ಲಿ ಊಟ ಮಾಡುತ್ತಾ ವಿಠ್ಚಲನ ಅಭಂಗ್ ಹಾಡುತ್ತಿದ್ದಾಗ ಸ್ಥಳೀಯ ಮುಸ್ಲಿಮರು ಅಭಂಗ್ ಹಾಡಬಾರದು, ಸುಮ್ಮನಿರಿ ಎಂದು ಅಮಾಯಕ ವಾರಕರಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಪಾಪವನ್ನು ಹೇಗೆ ತೊಳೆಯುತ್ತಿರಿ ನಿಮ್ಮ ಪ್ರಾಣ ತೆಗೆಯಲು ಶುರು ಮಾಡಿದ್ದಾರೆ, ಚುನಾವಣೆಯಲ್ಲಿ  ಸಿಕ್ಕ ಒಂದು ಗೆಲುವು… ಈಗ ಅವರ ಕಾನೂನನ್ನು ಜಾರಿಗೆ ತರಲು ಹೊರಟಿದ್ದಾರೆ,” ಎಂಬ ಟಿಪ್ಪಣಿಯೊಂದಿಗೆ ವಿಡಿಯೋವೊಂದು ವೈರಲ್‌ ಆಗುತ್ತಿದೆ. आज दि….

Read More

Fact Check | ಮೀರತ್‌ನಲ್ಲಿ ಮುಸ್ಲಿಮರು ಸಾಧುಗಳ ವೇಷ ಧರಿಸಿ ಸಿಕ್ಕಿಬಿದ್ದಿದ್ದಾರೆ ಎಂಬುದು ಸುಳ್ಳು

” ಈ ವಿಡಿಯೋ ನೋಡಿ ಇಲ್ಲಿ ಸಿಕ್ಕಿ ಬಿದ್ದಿರುವವರು ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಇವರು ಸಾಧುಗಳ ವೇಷವನ್ನು ಧರಿಸಿ ಸಿಕ್ಕಿ ಬಿದ್ದಿದ್ದಾರೆ. ಕೇವಲ ಇಷ್ಟು ಮಾತ್ರವಾಗಿದ್ದರೆ ಈ ವಿಚಾರ ಬೆಳಕಿಗೆ ಬರುತ್ತಿರಲಿಲ್ಲ. ಇವರು ಸಾಧುಗಳ ವೇಷ ಧರಿಸಿ ಹಿಂದೂಗಳ ಮಕ್ಕಳನ್ನು ಅಪಹರಿಸುತ್ತಿದ್ದರು, ಈ ವೇಳೆ ಇವರು ಜನರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈಗ ಇವರನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. मेरठ में साधु बनकर घूम रहे 3 लोगो…

Read More

Fact Check | ವಿಶ್ವಕಪ್‌ ಗೆದ್ದ ನಂತರ ರೋಹಿತ್‌ ಶರ್ಮಾ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು 2023ರ ಫೋಟೋ ಹಂಚಿಕೆ

“ಈ ಫೋಟೋ ನೋಡಿ ಇದು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರು ವಿಶ್ವಕಪ್‌ ಗೆದ್ದ ನಂತರ ಮೊದಲ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋ. ಈ ವೇಳೆ ರೋಹಿತ್‌ ಶರ್ಮಾ ಅವರ ಕುಟುಂಬವು ಕೂಡ ಅವರೊಂದಿಗೆ ಇತ್ತು. ದೇವರ ದರ್ಶನ ಪಡೆದು ದೇವಸ್ಥಾನದ ಮುಂದೆ ಅವರು ಕಂಡು ಬಂದಿದ್ದಾರೆ” ಎಂದು ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಈ ಫೋಟೋ ನೋಡಿದ ಹಲವು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಸಾಕಷ್ಟು ಜನ ರೋಹಿತ್‌ ಶರ್ಮಾ…

Read More

Fact Check | ಜಸ್ಟಿನ್ ಬೈಬರ್ ಹಾರ್ಮೋನಿಯಂ ನುಡಿಸುತ್ತಿರುವ ಫೋಟೋ AI- ರಚಿತವಾಗಿದೆ

ಸಾಮಾಜಿಕ ಜಾಲತಾಣದಲ್ಲಿ “ಜಸ್ಟಿನ್‌ ಬೈಬ್‌ರ್‌ ಅವರು ಅನಂತ್‌ ಅಂಬಾನಿ ಮತ್ತು ರಾಧಿಕ ಮರ್ಚೆಂಟ್‌ ಅವರ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಇದರಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಭಾರತೀಯ ಉಡುಪು ಧರಿಸಿ ಹರ್ಮೋನಿಯಂ ಕೂಡ ನುಡಿಸಿದ್ದಾರೆ. ಜಸ್ಟಿನ್‌ ಬೈಬರ್‌ ಅವರ ಭಾರತೀಯ ಶೈಲಿಯ ಕಾರ್ಯಕ್ರಮದ ಈ ಫೋಟೋಗೆ ನಿಮ್ಮ ಮೆಚ್ಚುಗೆ ಇರಲಿ” ಎಂದು ಜಸ್ಟಿನ್‌ ಬೈಬರ್‌ ಅವರು ಹರ್ಮೋನಿಯಂ ನುಡಿಸುವ ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋವನ್ನು ನೋಡಿದಾಗ ಹಲವು ಅನುಮಾನಗಳು ಸಹಜವಾಗಿ ಮೂಡುತ್ತವೆ. ಆದರೂ ಕೆಲವರು…

Read More

Fact Check | ಬ್ರಿಟನ್ ಬ್ಯಾಂಕುಗಳ್ಳಲ್ಲಿ ಮೋದಿ ರಹಸ್ಯವಾಗಿ ಕಪ್ಪು ಹಣ ಇಟ್ಟಿದ್ದಾರೆ ಎಂದು ವಿಕಿಲೀಕ್ಸ್ ವರದಿ ಪ್ರಕಟಿಸಿಲ್ಲ

“ಬ್ರಿಟನ್‌ನಲ್ಲಿ ಅಧಿಕಾರ ಬದಲಾದ ತಕ್ಷಣ ಬಹಿರಂಗಗಳು ಹೊರಬರಲಾರಂಭಿಸಿವೆ, ರಿಷಿ ಸುನಕ್ ಸೋತ ನಂತರ ಮೋದಿ ಮತ್ತು ಅವರ ಮಂತ್ರಿಗಳ ಕಪ್ಪುಹಣದ ರಹಸ್ಯ ಬಯಲಾಗುತ್ತಿದೆ. 14 ವರ್ಷಗಳಲ್ಲಿ ಮೋದಿಯವರ ಮಂತ್ರಿಗಳ ಕಪ್ಪುಹಣ ನೂರು ಪಟ್ಟು ಹೆಚ್ಚಾಗಿದೆ. ಬ್ರಿಟನ್‌ನ ರಹಸ್ಯ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಹೊಂದಿರುವ ಭಾರತೀಯರ ಮೊದಲ ಪಟ್ಟಿಯನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಸಹಿತ 24 ಬಿಜೆಪಿ ನಾಯಕರ ಹೆಸರನ್ನು ಉಲ್ಲೇಖಿಸಿ ಈ ಸಂದೇಶವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇನ್ನೂ ಹಲವರು ಇದೇ ಸಂದೇಶವನ್ನು ಬಳಸಿಕೊಂಡು…

Read More

Fact Check | ಪ್ರಾಂಶುಪಾಲೆಯರ ಜಗಳದ ವಿಡಿಯೋವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಸಾಮಾಜಿಕ ಜಾಲತಾಣದಲ್ಲಿ ” ಕರ್ನಾಟಕದ ಸರ್ಕಾರಿ ಶಾಲೆಯೊಂದಕ್ಕೆ ಪ್ರಾಂಶುಪಾಲರಾಗಿ ಹಿಂದೂ ಮಹಿಳೆಯೊಬ್ಬರು ನೇಮಕಗೊಂಡಿದ್ದಾರೆ, ಆದರೆ ಶಾಲೆಯ ಕ್ರಿಶ್ಚಿಯನ್ ಸಿಬ್ಬಂದಿ ಅವರನ್ನು ಪ್ರಾಂಶುಪಾಲರ ಕುರ್ಚಿಯಲ್ಲಿ ಕುಳಿತುಕೊಳ್ಳಲು ಬಿಡಲಿಲ್ಲ. ಬದಲಿಗೆ ಕ್ರೈಸ್ತ ಮಹಿಳೆಯನ್ನು ಆಕೆಯ ಜಾಗದಲ್ಲಿ ಕೂರಿಸಲಾಯಿತು. ವೀಡಿಯೋದಲ್ಲಿ, ಪಕ್ಕದಲ್ಲಿ ನಿಂತಿದ್ದ ಕೆಲವರು ಮಹಿಳೆಯನ್ನು ಬಲವಂತವಾಗಿ ಕುರ್ಚಿಯಿಂದ ಮೇಲಕ್ಕೆತ್ತುವುದನ್ನು ನಾವು ನೋಡಬಹುದು, ನಂತರ ಇನ್ನೊಬ್ಬ ಕ್ರಿಶ್ಚಿಯನ್‌ ಮಹಿಳೆಯನ್ನು ಪ್ರಾಂಶುಪಾಲೆಯ ಕುರ್ಚಿಯ ಮೇಲೆ ಕೂರಿಸಿ ಚಪ್ಪಾಳೆ ಹೊಡೆಯಲು ಇವರು ಪ್ರಾರಂಭಿಸಿದರು.” ಎಂಬ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌…

Read More

Fact Check | ಚಿಲಿಯಲ್ಲಿ ರೈಲು ಡಿಕ್ಕಿಯ ವೀಡಿಯೊವನ್ನು ಭಾರತದ ವಂದೇ ಭಾರತ್ ರೈಲು ಅಪಘಾತ ಎಂದು ಹಂಚಿಕೆ

” ಈ ವಿಡಿಯೋ ನೋಡಿ ಇದು ಭಾರತದ ವಂದೇ ಭಾರತ್‌ ರೈಲು ದುರಂತದ ವಿಡಿಯೋ, ಈ ರೈಲಿನ ದುರಂತದ ಬಗ್ಗೆ ಯಾರೂ ಹೆಚ್ಚಾಗಿ ಮಾತನಾಡುತ್ತಿಲ್ಲ. ಇದರ ವೇಗದ ಪರಿಣಾಮವಾಗಿ ಈಗ ಬೃಹತ್‌ ಅಪಘಾತ ಸಂಭವಿಸಿದೆ. ಇದಕ್ಕೆ ಯಾರು ಹೊಣೆ?, ಅಮಾಯಕರ ಸಾವಿನ ಬಗ್ಗೆ ಯಾಕೆ ಯಾರು ಮಾತನಾಡುತ್ತಿಲ್ಲ?” ಎಂಬ ಬರಹಗಳೊಂದಿಗೆ ರೈಲು ಅಪಘಾತದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದ ಹಲವರು ವಂದೇ ಭಾರತ್‌ ರೈಲಿನ ಬಣ್ಣಕ್ಕೂ ಅಪಘಾತಗೊಂಡ ರೈಲಿನ  ಬಣ್ಣ ಮತ್ತು…

Read More

Fact Check | ದನದ ತಲೆ ಹೊಂದಿರುವ ಡಾಲ್ಫಿನ್‌ ಪತ್ತೆಯಾಗಿದೆ ಎಂಬುದು AI ರಚಿತವಾದ ಫೋಟೋ

ಸಾಮಾಜಿಕ ಜಾಲತಾಣದಲ್ಲಿ “ಇತ್ತೀಚೆಗೆ, ಸೀಲ್/ಡಾಲ್ಫಿನ್ ಮತ್ತು ಹಸುವಿನ ತಲೆಯೊಂದಿಗೆ ಹೊಸ ಜೀವಿಯಂತೆ ಕಾಣುವ ಪ್ರಾಣಿಯೊಂದು ಪತ್ತೆಯಾಗಿದೆ. ಸಮುದ್ರ ಮತ್ತು ಭೂ ಪ್ರಾಣಿಗಳ ಮಿಶ್ರಣದಂತೆ ಕಾಣುವ ಈ ರೀತಿಯ ಹಲವು ಉಭಯಚರ ಜೀವಿಗಳು ಹೆಚ್ಚಾಗಿ ಕಂಡು ಬರುತ್ತಿದೆ. ಇವುಗಳು ಬಹಳ ಅಪರೂಪದ ಪ್ರಾಣಿಗಳಾಗಿವೆ ಹಾಗಾಗಿ ಈ ವಿಡಿಯೋವನ್ನು ಎಲ್ಲೆಡೆ ಶೇರ್‌ ಮಾಡಿ” ಎಂಬ ಬರಹದೊಂದಿಗೆ ಈ ವಿಚಿತ್ರ ಪ್ರಾಣಿ ಕಂಡು ಬಂದಿರುವ ವಿಡಿಯೋವನ್ನು ಎಲ್ಲೆಡೆಯಲ್ಲಿಯೂ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿರುವ ಪ್ರಾಣಿಗಳು ಕೆಲವೊಂದು ಹಸುವಿನ ತಲೆ ಮತ್ತು ಅದರ ಬಣ್ಣವನ್ನೇ…

Read More

Fact Check | ಡಿ ಮಾರ್ಟ್‌ನ 22ನೇ ವಾರ್ಷಿಕೋತ್ಸವಕ್ಕೆ 65,402.40 ರೂ ಗೆಲ್ಲಬಹುದು ಎಂಬುದು ಸುಳ್ಳು ಸುದ್ದಿ

“ಅಭಿನಂದನೆಗಳು.. ಡಿಮಾರ್ಟ್‌ 22ನೇ ವಾರ್ಷಿಕೋತ್ಸವದ ಉಡುಗೊರೆ. ಕೆಲವೊಂದು ಪ್ರಶ್ನೋತ್ತರಗಳ ಮೂಲಕ ನೀವು 65,402.40 ರೂ. ಪಡೆಯಬಹುದು. ಪ್ರಶ್ನೆ 1. ನಿಮಗೆ ಡಿ ಮಾರ್ಟ್‌ ಬಗ್ಗೆ ತಿಳಿದಿದೆಯೇ? A.ಹೌದು  B. ಇಲ್ಲ” ಎಂದು ವೆಬ್‌ಸೈಟ್‌ವೊಂದರ ಫೋಟೋವೊಂದನ್ನು ಹಂಚಿಕೊಂಡು ಸಾಕಷ್ಟು ಮಂದಿ ಡಿಮಾರ್ಟ್‌ನ ವಾರ್ಷಿಕೋತ್ಸವಕ್ಕೆ ಉಡುಗೊರೆಯನ್ನು ನೀಡಲಾಗುತ್ತಿದೆ. ನೀವು ಭಾಗವಹಿಸಿ ಎಂದು ಹಲವರು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಡಿಮಾರ್ಟ್‌ ವಾರ್ಷಿಕೋತ್ಸವದ ಲಿಂಕ್‌ ಎನ್ನಲಾದ ವೆಬ್‌ ಲಿಂಕ್‌ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪ್ರಶ್ನೆಗಳಿಗೆ ಉತ್ತರಿಸಿದವರು. ಈ ಲಿಂಕ್‌ ಅನ್ನು…

Read More

Fact Check | ನಿತೀಶ್ ಕುಮಾರ್‌ರವರಿಂದ ಬಿಹಾರಕ್ಕೆ ವಿಶೇಷ ಸ್ಥಾನಮಾನಕ್ಕೆ ಒತ್ತಾಯಿಸಿ ಪಾದಯಾತ್ರೆ ಎಂದು ಹಳೆಯ ವಿಡಿಯೋ ಹಂಚಿಕೆ

“ಈ ವಿಡಿಯೋ ನೋಡಿ ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ನಿತೀಶ್‌ ಕುಮಾರ್‌ ಅವರ ನೇತೃತ್ವದ ಜೆಡಿಯು ಎನ್‌ಡಿಎಗೆ ಬೆಂಬಲ ನೀಡಿತ್ತು. ಅದರ ಪರಿಣಾಮವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈಗ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿ ಬರುತ್ತದೆ ಎಂದು ಅವರು ಊಹಿಸಿರಲಿಲ್ಲ. ಲಾಲು ಯಾದವ್‌ ಅವರ ಮಾತು ಈಗ ನಿಜವಾಗುತ್ತಿದೆ. ” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಗಮನಿಸಿದ ಹಲವರು ಕೆಲವೇ ದಿನಗಳಲ್ಲಿ ಎನ್‌ಡಿಎ ಮೈತ್ರಿ…

Read More