Fact Check : ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ವಿನೇಶ್‌ ಪೋಗಟ್‌ ಸೋತಿಲ್ಲ

ಹರಿಯಾಣ ವಿಧಾನಸಭಾ ಚುನಾವಣೆಯ 2024ರ ಫಲಿತಾಂಶವು ಮಂಗಳವಾರದಂದು ಪ್ರಕಟವಾದ ನಂತರ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಜೂಲಾನಾ ವಿಧಾನಸಭಾ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಾಜಿ ಕುಸ್ತಿಪಟು ವಿನೇಶ್ ಫೋಗಟ್‌ರವರು ಚುನಾವಣೆಯಲ್ಲಿ ಸೋತಿದ್ದಾರೆ ಎಂದು ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಹರಿಯಾಣದ ಜನರು ದೇಶದ ಮಗಳನ್ನು ಸೋಲಿಸಿದ್ದೀರಿ, ನೀವು ಚಿನ್ನದ ಪದಕ ವಿಜೇತೆಯನ್ನು ತುಂಬಾ ಅವಮಾನಿಸಿದ್ದೀರಿ” ಎಂದು ಆಕೆಯ ಚಿತ್ರದೊಂದಿಗೆ ಬರೆದು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್ ಪೋಸ್ಟ್‌ನ್ನು ಪರಿಶೀಲಿಸಲು, ಭಾರತದ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ…

Read More
ಮಹಾತ್ಮ ಗಾಂಧಿ

Fact Check: ಮಹಾತ್ಮ ಗಾಂಧಿಯವರು ಮಹಿಳಾ ಶಿಕ್ಷಣ ಮತ್ತು ಮತದಾನದ ಹಕ್ಕನ್ನು ನಿರಾಕರಿಸಿದ್ದರು ಎಂಬುದು ಸುಳ್ಳು

ಇತ್ತೀಚೆಗೆ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಕಾಲೇಜು ಯುವಕನೊಬ್ಬ ಗಾಂಧೀಜಿಯವರ “ನನ್ನ ಸತ್ಯನ್ವೇಷಣೆ” ಆತ್ಮ ಚರಿತ್ರೆಯನ್ನು ಉಲ್ಲೇಖಿಸಿ, “1897ರಲ್ಲಿ ಜಾತಿ ವ್ಯವಸ್ಥೆಯನ್ನು ಒಪ್ಪಿಕೊಂಡು, ಈ ವ್ಯವಸ್ಥೆ ಇದ್ದ ಹಾಗೆಯೇ ಇರಬೇಕು ಎಂದು ಪ್ರತಿಪಾದಿಸಿದ್ದರು, ಅದಕ್ಕೆ ದಾಖಲೆಗಳು ಬಾಲಗಂಗಾಧರ್ ತಿಲಕ್ ಅವರ ಕೇಸರಿ ಪತ್ರಿಕೆಯಲ್ಲಿ ಸಿಗುತ್ತದೆ. ಗಾಂಧೀಜಿಯವರ ವಾದ ಯಥಾವತ್ತಾಗಿ ಜಾರಿಯಾಗಿದ್ದರೆ ಇಲ್ಲಿ ಯಾವ ಹೆಣ್ಣು ಮಕ್ಕಳು ಕೂರುವಂತಿರಲಿಲ್ಲ, ಶಿಕ್ಷಣ ಪಡೆಯುವಂತಿರಲಿಲ್ಲ. 1930, 31, 32ರಲ್ಲಿ ದುಂಡು ಮೇಜಿನ ಸಭೆಯಲ್ಲಿ ಗಾಂಧೀಜಿಯವರು ವಾದ ಮಾಡುತ್ತಾರೆ, ಮಹಿಳೆಯರಿಗೆ ಮತದಾನದ ಹಕ್ಕು ಬೇಡ…

Read More

Fact Check : ಮೀಸಲಾತಿ ರದ್ದತಿಗೆ ಬೆಂಬಲಿಸಿದ್ದಾರೆ ಎಂದು ಭೂಪೇಂದರ್ ಸಿಂಗ್ ಹೂಡಾರವರ ತಿರುಚಿದ ವಿಡಿಯೋ ಹಂಚಿಕೆ

ಭಾರತದಲ್ಲಿ ಮೀಸಲಾತಿಯನ್ನು ರದ್ದುಗೊಳಿಸುವುದಾಗಿ ಅಮೇರಿಕದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅಧಿಕಾರಕ್ಕೆ ಬಂದರೆ ಅವರ ಹೇಳಿಕೆಗಳನ್ನು ಬೆಂಬಲಿಸುತ್ತೇನೆ ಎಂಬ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ” ನಾನು ಅಧಿಕಾರಕ್ಕೆ ಬಂದರೆ ಜಾತಿ ಆಧಾರಿತ ಮೀಸಲಾತಿಯನ್ನು ರದ್ದುಗೊಳಿಸುವ ರಾಹುಲ್‌ ಗಾಂಧಿ ಹೇಳಿಕೆಗಳನ್ನು ಬೆಂಲಿಸುತ್ತೇನೆ” ಎಂದು ಭೂಪಿಂದರ್ ಸಿಂಗ್ ಹೂಡಾರ ವೀಡಿಯೊ ಕ್ಲಿಪ್‌ವೊಂದನ್ನು ಟೈಮ್ಸ್ ನೌ ನವಭಾರತ್ ನ್ಯೂಸ್ ಹಂಚಿಕೊಂಡಿದೆ. Congress will end…

Read More
ಡೊನಾಲ್ಡ್‌ ಟ್ರಂಪ್‌

Fact Check : ‘ನಾನು ಹಿಂದೂಗಳ ದೊಡ್ಡ ಅಭಿಮಾನಿ’ ಎಂಬ ಡೊನಾಲ್ಡ್ ಟ್ರಂಪ್ ಅವರ ಹಳೆಯ ವೀಡಿಯೊವನ್ನು 2024 ಯುಎಸ್ ಚುನಾವಣೆಗೆ ಮುಂಚಿತವಾಗಿ ಹಂಚಿಕೊಳ್ಳಲಾಗುತ್ತಿದೆ.

“ನಾನು ಹಿಂದೂಗಳ ದೊಡ್ಡ ಅಭಿಮಾನಿ ಮತ್ತು ಭಾರತ ದೇಶದ ದೊಡ್ಡ ಅಭಿಮಾನಿ” ಎಂದು ಅಮೇರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು 2024ರ ಯುಎಸ್ ಚುನಾವಣೆಗೆ ಮುಂಚಿತವಾಗಿ ರ್ಯಾಲಿಯಲ್ಲಿ ಹೇಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌ : ಈ ವೀಡೀಯೊದ ಕುರಿತು ನಾವು ಕೀಫ್ರೇಮ್‌ಗಳ ರಿವರ್ಸ್‌ ಇಮೇಜ್‌ನ ಹುಡುಕಾಟವನ್ನು ನಡೆಸಿದೆವು. ಈ ವೀಡೀಯೋವನ್ನು ಅಕ್ಟೋಬರ್‌ 16, 2016 ರಂದು  ಫೇಸ್‌ಬುಕ್‌ನಲ್ಲಿ  ANI ಪೋಸ್ಟ್‌ರ್‌ನಲ್ಲಿ  ಹಂಚಿಕೊಳ್ಳಲಾಗಿದೆ. ಯುಎಸ್‌ 2016ರ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ರವರು ರಿಪಬ್ಲಿಕನ್‌ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾಗ “ನಾನು ಹಿಂದೂಗಳ ಮತ್ತು ಭಾರತ…

Read More

Fact Check | ಶಾಹಿದ್ ಮಲಿಕ್ ಇಂಗ್ಲೆಂಡ್‌ನ ಹೊಸ ನ್ಯಾಯ ಮಂತ್ರಿ ಎಂಬುದು ಸುಳ್ಳು!

ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷವು ಪ್ರಚಂಡ ಜಯವನ್ನು ದಾಖಲಿಸುವುದರೊಂದಿಗೆ ಕೀರ್ ಸ್ಟಾರ್ಮರ್ ಹೊಸ ಯುಕೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಇದೀಗ, ಒಬ್ಬ ವ್ಯಕ್ತಿ ತನ್ನನ್ನು ತಾನು ‘ನ್ಯಾಯಾಂಗ ಮಂತ್ರಿ’ ಎಂದು ಗುರುತಿಸಿಕೊಳ್ಳುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇವರು ತಮ್ಮ ವಿಡಿಯೋದಲ್ಲಿ ” ನಾನು ಈಗ ನ್ಯಾಯಾಂಗ ಸಚಿವನಾಗಿದ್ದರೂ.. ಮೂರು ವಾರಗಳ ಹಿಂದೆ ನಾನು ಅಂತರಾಷ್ಟ್ರೀಯ ಅಭಿವೃದ್ಧಿ ಸಚಿವನಾಗಿದ್ದೆ.. ಅಂತರಾಷ್ಟ್ರೀಯ ಅಭಿವೃದ್ಧಿ ಸಚಿವನಾಗಿ ನನ್ನ ಕೆಲಸವು ಮುಂದಿನ ಮೂರು ವರ್ಷಗಳಲ್ಲಿ ಯುಕೆ, ಬಾಂಗ್ಲಾದೇಶಕ್ಕೆ…

Read More
EVM

Fact Check: ಮತದಾನದ ವೇಳೆ ಇವಿಎಂ ಹೊಡೆದು ಹಾಕಿರುವುದು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದ್ದು

ನೆನ್ನೆಯಷ್ಟೇ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಗಿದೆ. ಚುನಾವಣೆಗೂ ಮುನ್ನ ಕಳೆದ ಒಂದು ತಿಂಗಳಿಂದ ಅತಿ ಹೆಚ್ಚು ಸುಳ್ಳು ಸುದ್ದಿಗಳನ್ನು ರಾಜಕೀಯ ಪಕ್ಷಗಳು ಮತ್ತು ಅವುಗಳ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅವುಗಳಲ್ಲಿ ಪ್ರಮುಖ ಸುಳ್ಳು ಸುದ್ದಿಗಳನ್ನು, ಸುಳ್ಳು ಆರೋಪಗಳನ್ನು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಕೈಗೊಂಡು ಸತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿತ್ತು. ನೀವಿಲ್ಲಿ, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ಮತ್ತು ಅದರ ಸತ್ಯವನ್ನು ತಿಳಿಯಬಹುದು. ಈಗ, “ಲೋಕಸಭಾ ಚುನಾವಣೆಯ…

Read More

Fact Check | ಮತದಾನಕ್ಕೆ ಸಂಬಂಧಿಸಿದಂತೆ ಹರಡುತ್ತಿದೆ ಸುಳ್ಳು ಸುದ್ದಿಗಳು

“ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲವೆಂದು ತಿಳಿದಾಗ ಮತದಾರರ ಗುರುತಿನ ಚೀಟಿ ತೋರಿಸಿ ಸೆಕ್ಷನ್‌ 49ಎ ಅಡಿಯಲ್ಲಿ ʼಚಾಲೆಂಜ್‌ ವೋಟ್‌ʼ ಮೂಲಕ ಮತದಾನಕ್ಕಾಗಿ ಕೇಳಬಹುದಾಗಿದೆ. ಬೇರೊಬ್ಬರು ನಿಮ್ಮ ಮತ ಚಲಾಯಿಸಿದ್ದರೆ ಮತ ಚಲಾಯಿಸಲು “ಟೆಂಡರ್‌ ವೋಟ್‌”ಗೆ ಕೇಳಬಹುದು, ಯಾವುದೇ ಬೂತಿನಲ್ಲಿ ಶೇ 14ಕ್ಕಿಂತ ಹೆಚ್ಚು ಟೆಂಡರ್‌ ಮತಗಳು ಚಲಾವಣೆಯಾಗಿದ್ದಲ್ಲಿ ಅಂತಹ ಬೂತ್‌ಗಳಲ್ಲಿ ಮರುಮತದಾನ ಮಾಡಬಹುದಾಗಿದೆ” ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಸುದ್ದಿಯನ್ನು ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದನ್ನೇ ನಿಜವೆಂದು ಹಲವರು…

Read More

Fact Check | ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಎನ್‌ಡಿಟಿವಿ ‘ಪೋಲ್ ಆಫ್ ಪೋಲ್ಸ್’ ಗ್ರಾಫಿಕ್ ನಕಲಿ

“ಎನ್‌ಡಿಟಿವಿ (NDTV) ಸುದ್ದಿ ಸಂಸ್ಥೆಯಿಂದ ʼಪೋಲ್‌ ಆಫ್‌ ಪೋಲ್ಸ್‌ʼ ( poll Of pols ) ಸಮಿಕ್ಷೆ ಹೊರ ಬಿದ್ದಿದೆ ಇದರಲ್ಲಿ ತೆಲಂಗಾಣದಲ್ಲಿ ( Telangana ) ಕಾಂಗ್ರೆಸ್‌ಗೆ ( Congress ) ಬಹುದೊಡ್ಡ ಗೆಲುವು ಸಿಗಲಿದ್ದು, ಅದರಲ್ಲಿ ಭಾರತ ರಾಷ್ಟ್ರ ಸಮಿತಿಗೆ ( BRS ) ಹೀನಾಯವಾದ ಸೋಲಾಗಲಿದೆ ” ಎಂಬ ವೈರಲ್‌ ಗ್ರಾಫಿಕ್‌ ಫೋಟೋ (Graphics Image ) ಸಾಮಾಜಿಕ ಜಾಲತಾಣದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದನ್ನು ಪರಿಶೀಲನೆ ಮಾಡದೆ ಸಾಕಷ್ಟು…

Read More

ನಟ ಅಶುತೋಷ್ ರಾಣ ಬಿಜೆಪಿಗೆ ಮತ ನೀಡುವಂತೆ ಜನರನ್ನು ಉತ್ತೇಜಿಸಿಲ್ಲ

ಪಂಚರಾಜ್ಯಗಳ ಚುನಾವಣೆಗೆ ಸಂಬಂಧಿಸಿದಂತೆ ಹೀಗಾಗಲೇ ಮತ ಚಲಾವಣೆ ಪ್ರಕ್ರಿಯೆಗಳು ಮುಗಿದಿವೆ. ಎಲ್ಲರೂ ಚುನಾವಣಾ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ಮಧ್ಯ ಪ್ರದೇಶದ ಚುನಾವಣೆಯಲ್ಲಿ ಹಂಚಿಕೊಳ್ಳಲಾದ ಸುಳ್ಳು ಸುದ್ದಿಗಳು ನಿಧಾನವಾಗಿ ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ಬಾಲಿವುಡ್ ನಟ ಅಶುತೋಷ್ ರಾಣ ಬಿಜೆಪಿಗೆ ಮತ ನೀಡುವಂತೆ ಜನರನ್ನು ಉತ್ತೇಜಿಸಿದ್ದಾರೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಅಶುತೋಷ್ ರಾಣ ಅವರು ಚುನಾವಣಾ ಮಹತ್ವ ಸಾರುವಂತಹ ಸಂದೇಶದೊಂದಿಗೆ ಜನರಿಗೆ ಮತದಾನ ಮಾಡುವಂತೆ ಮನವಿ ಮಾಡಲು ನಿರ್ಮಿಸಿದ ವಿಡಿಯೋ ಇದಾಗಿದೆ. ಆದರೆ ಅವರು…

Read More
ಹಿಂದುತ್ವ Hindutva

ಹಿಂದುತ್ವ ‘ಚುನಾವಣಾ ಆಟ ಆಡುವ ಕಾರ್ಡ್’ ಎಂದು ನರೇಂದ್ರ ಮೋದಿಯವರು ಹೇಳಿಲ್ಲ

‘ಹಿಂದುತ್ವ ಚುನಾವಣಾ ಆಟ ಆಡುವ ಕಾರ್ಡ್’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಇದು 24 ವರ್ಷಗಳ ಹಿಂದೆ ಜೀ ನ್ಯೂಸ್‌ನವರು ನಡೆಸಿದ ನರೇಂದ್ರ ಮೋದಿಯವರ ಸಂದರ್ಶನದ ಹಳೆಯ ವಿಡಿಯೋ ಆಗಿದೆ. ಮೂಲ ಸಂದರ್ಶನದಲ್ಲಿ ವೈರಲ್ ಆಗುತ್ತಿರುವ ಹೇಳಿಕೆಗೆ ವ್ಯತಿರಿಕ್ತವಾಗಿ “ಹಿಂದುತ್ವ ಕೇವಲ ಚುನಾವಣಾ ಆಟ ಆಡುವ ಕಾರ್ಡ್ ಅಲ್ಲ” ಎಂದು ಮೋದಿಯವರು ಹೇಳಿದ್ದಾರೆ. ಅವರ ಕೊನೆಯ ಪದ “ಅಲ್ಲ” ಎಂಬುದನ್ನು ತೆಗೆದುಹಾಕಿ, ಎಡಿಟ್…

Read More