Fact Check | ಲುಪೋ ಚಾಕೊಲೇಟ್ ಕೇಕ್‌ನಲ್ಲಿ ಡ್ರಗ್ಸ್‌ ಪತ್ತೆಯಾಗಿದೆ ಎಂಬುದು ಸುಳ್ಳು

ಲುಪೋ ಚಾಕಲೇಟ್ ಕೇಕ್‌ನಲ್ಲಿ ಡ್ರಗ್ಸ್ ಪತ್ತೆಯಾಗಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಈ ಕುರಿತು ಪೋಸ್ಟ್‌ ಮಾಡಿರುವ ಹಲವರು ”ಎಲ್ಲೆಡೆ ಡ್ರಗ್ಸ್‌ ಮಾಫಿಯಾಗಳು ಬಲಗೊಳ್ಳುತ್ತಿವೆ, ತಮ್ಮ ಹಿಡಿತವನ್ನು ಅವರು ಬಿಗಿಗೊಳಿಸುತ್ತಿದ್ದಾರೆ. ಮಕ್ಕಳು ಬೇಕರಿ ತಿನಿಸುಗಳನ್ನು ಖರೀದಿಸುವಾಗ ಜಾಗರೂಕರಾಗಿರುವಂತೆ ನೋಡಿಕೊಳ್ಳಿ, ಇಲ್ಲದಿದ್ದರೆ ನಿಮ್ಮ ಮಕ್ಕಳನ್ನು ಮಾದಕ ವ್ಯಸನಕ್ಕೆ ದೂಡಲು ನೀವೆ ಸಹಕರಿಸಿದಂತಾಗುತ್ತದೆ” ಎಂಬ ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Scary stuff pic.twitter.com/RCSmDtNmHx — Sandra Gold (@SandraSandygold) May 26, 2024…

Read More
ದುಬೈ

Fact Check: ದುಬೈ ಶೇಖ್‌ನ ಹೆಂಡತಿ ತಮಿಳುನಾಡಿನ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದಾರೆ ಎಂದು 2019ರ UAE ರಾಜಕುಮಾರಿಯ ವಿಡಿಯೋ ಹಂಚಿಕೆ

‘ದುಬೈ ರಾಜನ ಪತ್ನಿ’ ಚೆನ್ನೈನಲ್ಲಿ ವ್ಯಾಪಾರ ಪ್ರವಾಸದಲ್ಲಿದ್ದಾಗ ತಮಿಳುನಾಡಿನ ಶ್ರೀಪುರಂನಲ್ಲಿರುವ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದಾರೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. “ದುಬೈ ಶೇಖ್ ಅವರ ಹೆಂಡತಿ.. ಕೆಲಸದ ನಿಮಿತ್ತ ಭಾರತಕ್ಕೆ ಬಂದಿದ್ದರು.. ಆಗ ತಮಿಳುನಾಡಿನ ಗೋಲ್ಡನ್ ಟೆಂಪಲ್ ದರ್ಶನ ಮಾಡಿದ್ದಾರೆ.. ಹಿಜಾಬ್ ಇಲ್ಲ ,ಬುರ್ಖಾ ಇಲ್ಲ.. ಸನಾತನ ಧರ್ಮಕ್ಕನುಗುಣವಾಗಿ ಶಿಸ್ತಿನ ವಸ್ತ್ರ ಧರಿಸಿ ಪ್ರಸಾದವನ್ನು ಸ್ವೀಕರಿಸಿಕೊಂಡಿದ್ದಾರೆ.. ಇಲ್ಲಿ ನೂರಾರು ಕಟ್ಟುಪಾಡುಗಳು, ಎಂತಹ ವಿಚಿತ್ರ ವಿಪರ್ಯಾಸ.” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಸಾಕಷ್ಟು ಹಂಚಿಕೊಳ್ಳಲಾಗುತ್ತಿದೆ. ದುಬೈ…

Read More
ನೋಯ್ಡಾ

Fact Check: ಕಳೆದೊಂದು ದಶಕದಲ್ಲಿ ನೋಯ್ಡಾ ನಗರ ಎಷ್ಟು ಅಭಿವೃದ್ಧಿಯಾಗಿದೆ ನೋಡಿ ಎಂದು ದುಬೈನ ಚಿತ್ರ ಹಂಚಿಕೊಳ್ಳಲಾಗುತ್ತಿದೆ

ಕಳೆದೊಂದು ದಶಕದಲ್ಲಿ ಉತ್ತರ ಪ್ರದೇಶದ ನೋಯ್ಡಾ ಹೇಗೆ ಅಭಿವೃದ್ಧಿ ಹೊಂದಿದೆ ನೋಡಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಒಂದು 2015 ರಿಂದ ಇನ್ನೊಂದು 2024 ರಲ್ಲಿ ಎಂದು ನಗರವೊಂದರ ಎರಡು ವೈಮಾನಿಕ ಚಿತ್ರಗಳನ್ನು ತೋರಿಸುತ್ತದೆ. ಹಾಗಾದರೆ ನಿಜಕ್ಕೂ ನೋಯ್ಡಾ ಕೆಳಗಿನ ಚಿತ್ರದಲ್ಲಿ ತೋರಿಸಲಾಗಿರುವಷ್ಟು ಅಭಿವೃದ್ದಿಯಾಗಿದೆಯೇ ನೋಡೋಣ ಬನ್ನಿ.  ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೊದಲ್ಲಿ ಬರುವ ಮೊದಲ ಕ್ಲಿಪ್, 2015 ರಲ್ಲಿ ಚಿತ್ರೀಕರಿಸಲಾಗಿದೆ, ಇದು ಹೆದ್ದಾರಿ ಜಂಕ್ಷನ್ ಅನ್ನು ತೋರಿಸುತ್ತದೆ. ನಮ್ಮ ತಂಡ ಇದನ್ನು…

Read More
ದುಬೈ

ದುಬೈನ ಸುನ್ನಿ ಮುಸ್ಲಿಮರ ಸಂಘ ಕರ್ನಾಟಕಕ್ಕೆ ಬರಲು ಮುಸ್ಲಿಮರಿಗೆ ಸಂಪೂರ್ಣ ಆರ್ಥಿಕ ನೆರವು ನೀಡುತ್ತಿದೆ ಎಂಬುದು ಸಂಪೂರ್ಣ ಸುಳ್ಳು

ಇತ್ತೀಚೆಗೆ “ನರೇಂದ್ರ ಮೋದಿ ಮತ್ತು ಬಿಜೆಪಿ ಸೋಲಿಸಲು ದುಬೈನಿಂದ ಮುಸ್ಲಿಮರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅವರಿಗೆ ವಿಮಾನ ವ್ಯವಸ್ಥೆ ಮಾಡಲಾಗಿದೆ” ಎಂದು ಸುಳ್ಳು ಹರಿಬಿಡಲಾಗಿತ್ತು. ಆದರೆ ದುಬೈನಲ್ಲಿ ಪ್ರವಾಹದ ಪರಿಸ್ಥಿತಿ ಇದ್ದ ಕಾರಣ ಎಲ್ಲಾ ವಿಮಾನ ಹಾರಾಟಗಳು ಸ್ಥಗಿತವಾಗಿದ್ದವು. ಮತದಾನಕ್ಕೆ ಆಗಮಿಸಲು ಸಹ ಕಷ್ಟಪಡುವಂತಿತ್ತು. ಈ ಕಾರಣಕ್ಕಾಗಿ ಕೇರಳದ ಕೆಲವು ಮುಸ್ಲಿಂ ಸಂಘಟನೆಗಳು ಸರ್ಕಾರದೊಟ್ಟಿಗೆ ಮಾತನಾಡಿ ಎರಡು ವಿಶೇಷ ವಿಮಾನಗಳನ್ನು ವ್ಯವಸ್ಥೆ ಮಾಡಿದ್ದರು. ಈಗ, “ದುಬೈನಲ್ಲಿರುವ ಸುನ್ನಿ ಮುಸ್ಲಿಮರ ಸಂಘ, ಚುನಾವಣೆಯಲ್ಲಿ ‘ಫ್ಯಾಸಿಸ್ಟ್ ಶಕ್ತಿ’ಗಳನ್ನು ಸೋಲಿಸಲು ಮತ್ತು ಕಾಂಗ್ರೆಸ್…

Read More

Fact Check: ದುಬೈನ ಮಸೀದಿಯೊಂದರಲ್ಲಿ ಮುಸ್ಲಿಂ ಮಹಿಳೆಯರು ರಾಮ ಭಜನೆ ಹಾಡಿದ್ದಾರೆ ಎಂಬುದು ಸುಳ್ಳು

ರಾಮ ಮಂದಿರದ ಉದ್ಘಾಟನೆಯ ಬಳಿಕ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ರಾಮ ಭಜನೆ ಮಾಡಲಾಗುತ್ತಿದೆ. ಮುಸ್ಲಿಂ ರಾಷ್ಟ್ರಗಳಲ್ಲಿಯೂ ಸಹ ಶ್ರೀ ರಾಮನ ಭಜನೆಯನ್ನು ಮಾಡಲಾಗುತ್ತಿದೆ ಎಂದು ಪ್ರತಿಪಾದಿಸಿದ ಹಲಾವರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇತ್ತೇಚೆಗೆ, ದುಬೈನ ಮಸೀದಿಯೊಂದರಲ್ಲಿ ಮುಸ್ಲಿಂ ಮಹಿಳೆಯರು ರಾಮ ಭಜನೆ ಹಾಡುತ್ತಿರುವ ವಿಡಿಯೋ. ಇದು ಭಾರತದಲ್ಲಿ ನಡೆದಿದ್ದರೆ ಇಸ್ಲಾಂ ಅಪಾಯದಲ್ಲಿದೆ ಎನ್ನುತ್ತಿದ್ದರು. ಎಂದು ಪ್ರತಿಪಾದಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಈ ವಿಡಿಯೋವನ್ನು ದುಬೈನ ಮಸೀದಿಯಲ್ಲಿ ತೆಗೆಯಲಾಗಿಲ್ಲ, ಇದು ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿರುವ ಪ್ರಶಾಂತಿ…

Read More

Fact Check | ಬುರ್ಜ್‌ ಖಲೀಫಾ ಮೇಲೆ ಶ್ರೀ ರಾಮನ ಫೋಟೋ ಪ್ರದರ್ಶಿಸಲಾಗಿದೆ ಎಂದು ಸುಳ್ಳು ಸುದ್ದಿ ಪ್ರಕಟಿಸಿದ ಉದಯವಾಣಿ

ಸಾಮಾಜಿಕ ಜಾಲತಾಣದಲ್ಲಿ “ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಯ ಬೆಳಕಿನಲ್ಲಿ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಭಗವಾನ್ ರಾಮನ ಚಿತ್ರ ಮೂಡಿ ಬಂದಿದೆ.” ಎಂದು ಸಾಕಷ್ಟು ಮಂದಿ ಪೋಟೋವೊಂದನ್ನು ಶೇರ್‌ ಮಾಡುತ್ತಿದ್ದಾರೆ. ಅದರಲ್ಲೂ  “22 ಜನವರಿ 2024 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಗೆ” ಮುಸ್ಲಿಂ ರಾಷ್ಟ್ರವೂ ಸಂತಸವನ್ನು ವ್ಯಕ್ತ ಪಡಿಸಿದೆ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಸುಳ್ಳು ಸುದ್ದಿ ಹಬ್ಬುತ್ತಿದ್ದರೆ ಕನ್ನಡದ ಖ್ಯಾತ ದಿನ ಪತ್ರಿಕೆಯಾದ ಉದಯವಾಣಿ ಕೂಡ ತನ್ನ ಪತ್ರಿಕೆಯ 5ನೇ ಪುಟದಲ್ಲಿ…

Read More

ಶಾರುಕ್‌ ಖಾನ್‌ ಪ್ಯಾಲೆಸ್ಟೈನ್‌ ಧ್ವಜದ ಜಾಕೆಟ್‌ ಹಾಕಿದ್ದರು ಎಂಬುದು ಸುಳ್ಳು

ಕಳೆದ ಕೆಲವು ದಿನಗಳಿಂದ ಇಸ್ರೇಲ್‌ ಮತ್ತು ಹಮಾಸ್‌ ಬಂಡುಕೋರರ ನಡುವಿನ ಯುದ್ಧ ತೀವ್ರವಾಗುತ್ತಿದ್ದು ಈ ಯುದ್ಧಕ್ಕೆ ಸಂಬಂಧಿಸಿದಂತೆ ಪ್ಯಾಲೆಸ್ಟೈನ್‌ ಹಾಗು ಇಸ್ರೇಲ್‌ಗೆ ಹಲವಾರು ಮಂದಿ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಅದೇ ರೀತಿ ಬಾಲಿವುಡ್‌ನ ಖ್ಯಾತ ನಟ ಶಾರುಕ್‌ ಖಾನ್‌ ಪ್ಯಾಲೆಸ್ಟೈನ್‌ಗೆ ಬೆಂಬಲಿಸುವ ಉದ್ದೇಶದಿಂದ ಪ್ಯಾಲೆಸ್ಟೈನ್‌ ಧ್ವಜಕ್ಕೆ ಹೋಲಿಕೆಯಾಗುವ ಜಾಕೆಟ್‌ ಧರಿಸಿ ಫೋಟೋ ತೆಗೆಸಿಕೊಂಡಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿತ್ತು. Fact Check : ಈ ಸುದ್ದಿಯ ಕುರಿತು ಸತ್ಯಾಸತ್ಯತೆಯಯನ್ನು ಪರಿಶೀಲಿಸಿದಾಗ ಶಾರುಕ್‌ ಖಾನ್‌ ಅವರ ಈ ಚಿತ್ರವನ್ನು Dubaibliss.com…

Read More