ಮಹಾತ್ಮ ಗಾಂಧಿ

Fact Check: ಮಹಾತ್ಮ ಗಾಂಧಿಯವರು ಮಹಿಳಾ ಶಿಕ್ಷಣ ಮತ್ತು ಮತದಾನದ ಹಕ್ಕನ್ನು ನಿರಾಕರಿಸಿದ್ದರು ಎಂಬುದು ಸುಳ್ಳು

ಇತ್ತೀಚೆಗೆ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಕಾಲೇಜು ಯುವಕನೊಬ್ಬ ಗಾಂಧೀಜಿಯವರ “ನನ್ನ ಸತ್ಯನ್ವೇಷಣೆ” ಆತ್ಮ ಚರಿತ್ರೆಯನ್ನು ಉಲ್ಲೇಖಿಸಿ, “1897ರಲ್ಲಿ ಜಾತಿ ವ್ಯವಸ್ಥೆಯನ್ನು ಒಪ್ಪಿಕೊಂಡು, ಈ ವ್ಯವಸ್ಥೆ ಇದ್ದ ಹಾಗೆಯೇ ಇರಬೇಕು ಎಂದು ಪ್ರತಿಪಾದಿಸಿದ್ದರು, ಅದಕ್ಕೆ ದಾಖಲೆಗಳು ಬಾಲಗಂಗಾಧರ್ ತಿಲಕ್ ಅವರ ಕೇಸರಿ ಪತ್ರಿಕೆಯಲ್ಲಿ ಸಿಗುತ್ತದೆ. ಗಾಂಧೀಜಿಯವರ ವಾದ ಯಥಾವತ್ತಾಗಿ ಜಾರಿಯಾಗಿದ್ದರೆ ಇಲ್ಲಿ ಯಾವ ಹೆಣ್ಣು ಮಕ್ಕಳು ಕೂರುವಂತಿರಲಿಲ್ಲ, ಶಿಕ್ಷಣ ಪಡೆಯುವಂತಿರಲಿಲ್ಲ. 1930, 31, 32ರಲ್ಲಿ ದುಂಡು ಮೇಜಿನ ಸಭೆಯಲ್ಲಿ ಗಾಂಧೀಜಿಯವರು ವಾದ ಮಾಡುತ್ತಾರೆ, ಮಹಿಳೆಯರಿಗೆ ಮತದಾನದ ಹಕ್ಕು ಬೇಡ…

Read More
ಡಾ. ಬಿ.ಆರ್ ಅಂಬೇಡ್ಕರ್

Fact Check: ಡಾ. ಬಿ.ಆರ್ ಅಂಬೇಡ್ಕರ್ ಅವರ “ಪಾಕಿಸ್ತಾನ ಅಥವಾ ಭಾರತದ ವಿಭಜನೆ” ಕೃತಿಯ ಕುರಿತು ಸುಳ್ಳು ಹಂಚಿಕೊಳ್ಳಲಾಗುತ್ತಿದೆ

ಡಾ. ಬಿ. ಆರ್ ಅಂಬೇಡ್ಕರ್ ಅವರು ನಮ್ಮ ದೇಶ ಕಂಡ ಮಹಾನ್ ಜ್ಞಾನಿಗಳಲ್ಲಿ ಒಬ್ಬರು. ಹಾಗೆಯೇ ಮಹಾಮಾನವತಾವಾದಿ ಎಂದೇ ಹೆಸರಾದವರು. ಭಾರತ ದೇಶದ ಸಂವಿಧಾನವನ್ನು ರೂಪಿಸುವಾಗ ಎಲ್ಲಾ ಜಾತಿ, ಧರ್ಮ, ಭಾಷೆಗಳಿಗೂ ಸಮಾನ ಅವಕಾಶ, ಗೌರವಗಳು ಕಲ್ಪಿಸಿಕೊಡುವ ಸಲುವಾಗಿ ನಮ್ಮ ದೇಶವನ್ನು ಧರ್ಮ ನಿರಪೇಕ್ಷತೆಯ ರಾಷ್ಟ್ರವನ್ನಾಗಿ ಮಾಡಿ ಭಾರತದ ವೈವಿದ್ಯತೆಗೆ, ಬಹುತ್ವಕ್ಕೆ ಮತ್ತು ಜಾತ್ಯಾತೀತತೆ ತತ್ವಕ್ಕೆ ಕಾನೂನಾತ್ಮಕವಾಗಿ ಮನ್ನಣೆ ನೀಡಿದವರು. ಆದರೆ, ಡಾ. ಬಿ.ಆರ್ ಅಂಬೇಡ್ಕರ್ ಅವರ ಬದುಕು ಮತ್ತು ಬರಹಗಳಿಗೆ ಸಂಬಂಧಿಸಿದಂತೆ ಅವರ ಬದುಕಿದ್ದ ಕಾಲದಿಂದ…

Read More

Fact Check | ಓವೈಸಿ ಡಾ.ಬಿ.ಆರ್‌.ಅಂಬೇಡ್ಕರ್‌ ಫೋಟೋ ಹಿಡಿದಿದ್ದಾರೆಯೇ ಹೊರತು ಶ್ರೀರಾಮನ ಚಿತ್ರವಲ್ಲ

“ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಇತರ ಜನರೊಂದಿಗೆ ಹಿಂದೂ ದೇವರಾದ ಭಗವಾನ್ ಶ್ರೀರಾಮನ ಭಾವಚಿತ್ರವನ್ನು ಹಿಡಿದು ಪೋಸ್‌ ಕೊಟ್ಟಿದ್ದಾರೆ. 2024 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲನ್ನು ಗ್ರಹಿಸಿರುವ ಓವೈಸಿ ಹಿಂದೂ ಧರ್ಮದ ಜನರ ಬೆಂಬಲವನ್ನು ಕೋರುತ್ತಿದ್ದಾರೆ” ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. *जब लगता है कि फट जाएगी तो अच्छे अच्छे लाईन पर आ जाते हैं !!*😂😂 pic.twitter.com/Sy5EgzWhr6 — 🚩योगीआदित्यनाथफैन(डिजिटल…

Read More
ಡಾ. ಬಿ.ಆರ್ ಅಂಬೇಡ್ಕರ್

Fact Check: ಡಾ. ಬಿ. ಆರ್ ಅಂಬೇಡ್ಕರ್ ಮತದಾನ ಮನೆಯ ಹೆಣ್ಣಿದ್ದಂತೆ ಎಂದು ಎಲ್ಲಿಯೂ ಹೇಳಿಲ್ಲ

ಖ್ಯಾತ ಹೃದ್ರೋಗ ತಜ್ಞ ಮತ್ತು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕರು ಹಾಗೂ ಹಾಲಿ ಬೆಂಗಳೂರು ಗ್ರಾಮಂತರ ಲೋಕಸಭಾ ಚುನಾವಣೆಯ ಜೆಡಿಎಸ್-ಬಿಜೆಪಿ ಮೈತ್ರಿಯ ಅಭ್ಯರ್ಥಿಯೂ ಆದ ಡಾ. ಸಿ.ಎನ್ ಮಂಜುನಾಥ್ ಅವರು ನೆನ್ನೆ (ಏಪ್ರಿಲ್ 4) ನಡೆದ ಪ್ರಚಾರದ ಸಭೆಯ ಭಾಷಣದಲ್ಲಿ, “ಮತದಾನ ಮನೆಯ ಹೆಣ್ಣು ಮಗಳಿದಂತೆ ಅದು ಮಾರಾಟ ಆಗಬಾರದು ಎಂದು ಡಾ. ಅಂಬೇಡ್ಕರ್ ಹೇಳಿದ್ದಾರೆ” ಎಂದು ಮತದಾರರಿಗೆ ತಿಳಿಸಿದ್ದಾರೆ. ಹಾಗಾದರೆ ನಿಜಕ್ಕೂ ಡಾ. ಬಿ. ಆರ್ ಅಂಬೇಡ್ಕರ್ ಅವರು…

Read More
ಸರ್ಧಾರ್ ವಲ್ಲಭಬಾಯಿ ಪಟೇಲ್

Fact Check: ಕರ್ನಾಟಕದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರ್ತಿಯನ್ನು ಹೊಡೆದು ಹಾಕಿಲ್ಲ

ಲೋಕಸಭಾ ಚುನಾವಣೆಗಳು ಹತ್ತಿರಾಗುತ್ತಿದ್ದಂತೆ ಬಿಜೆಪಿಯೇತರ ರಾಜ್ಯಗಳ ಮೇಲೆ ಅದರಲ್ಲೂ ದಕ್ಷಿಣ ರಾಜ್ಯಗಳ ಮೇಲೆ ಸಾಕಷ್ಟು ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ. ಇತ್ತೀಚೆಗೆ ವಿಡಿಯೋ ಒಂದು ವೈರಲ್ ಆಗಿದ್ದು ಅದರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರ್ತಿಯನ್ನು ಗುಂಪೊಂದು ಟ್ಯಾಕ್ಟ್‌ರ್ ಬಳಸಿ ತೆರವುಗೊಳಿಸುತ್ತಿರುವುದನ್ನು ಕಾಣಬಹುದಾಗಿದೆ. ಆದರೆ, “ಕರ್ನಾಟಕದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರ್ತಿಯನ್ನು ಹೊಡೆದು ಹಾಕಲಾಗಿದೆ.” ಎಂದು ಪ್ರತಿಪಾದಿಸಲಾಗುತ್ತಿದೆ.  ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ, ಈ ಘಟನೆ 26 ಜನವರಿ 2024ರಲ್ಲಿ ಮಧ್ಯ ಪ್ರದೇಶದ ಉಜ್ಜಯಿನಿ ಜಿಲ್ಲೆಯ ಮಕಾಡೋನ್…

Read More
nehru

Fact Check: ಜವಾಹರ್‌ಲಾಲ್ ನೆಹರು ತಮಗೆ ತಾವೇ “ಭಾರತ ರತ್ನ” ಘೋಷಿಸಿಕೊಂಡರು ಎಂಬುದು ಸುಳ್ಳು

ಭಾರತದ ಮೊದಲ ಮತ್ತು ದೀರ್ಘಾವಧಿಯ ಪ್ರಧಾನ ಮಂತ್ರಿಗಳಾದ ಜವಾಹರಲಾಲ್ ನೆಹರು ಅವರ ಪರಂಪರೆಯು ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ವ್ಯವಸ್ಥಿತ ಆಕ್ರಮಣಕ್ಕೆ ಒಳಗಾಗುತ್ತಿದೆ. ಈ ದಾಳಿಯು ಬಹುಮುಖಿಯಾಗಿದ್ದು, ಇತಿಹಾಸದ ಆಧಾರರಹಿತ ಆರೋಪಗಳಿಂದ ಹಿಡಿದು ಅವಹೇಳನಕಾರಿ ಪ್ರತಿಪಾದನೆಗಳು ಮತ್ತು ಸುಳ್ಳುಗಳನ್ನು ಹರಡುವವರೆಗೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಭಾರತದ ಪ್ರಗತಿಯಲ್ಲಿ ನೆಹರೂ ಅವರ ಕೊಡುಗೆಯೇ ಅಲ್ಪ ಎನ್ನುವಂತೆ ಬಿಂಬಿಸಲಾಗುತ್ತಿದೆ. ಇದರ ಭಾಗವಾಗಿ, ಜವಹರಲಾಲ್ ನೆಹರು ಅವರು ತಮಗೆ ತಾವೇ “ಭಾರತ ರತ್ನ” ಘೋಷಿಸಿಕೊಂಡರು ಎಂಬ ಪ್ರತಿಪಾದನೆಯು ಹಲವಾರು ವರ್ಷಗಳಿಂದ…

Read More

Fact Check: ಸ್ವತಃ ಡಾ. ಅಂಬೇಡ್ಕರ್ ಅವರು ಮಾತನಾಡಿರುವ ವಿಡಿಯೋ ಎಂದು ಚಲನಚಿತ್ರದ ವಿಡಿಯೋ ಹಂಚಿಕೆ

ಜಗತ್ತು ಕಂಡ ಇಪ್ಪತ್ತನೇ ಶತಮಾನದ ಮೇರು ಪ್ರತಿಭೆಗಳಲ್ಲಿ ಪ್ರಮುಖರಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾಷಣ ಮತ್ತು ಬರಹಗಳನ್ನು ತಿರುಚುವ ಮತ್ತು ತಪ್ಪಾಗಿ ಅರ್ಥೈಸುವ ಕೆಲಸಗಳನ್ನು ಅನೇಕ ವರ್ಷಗಳಿಂದ ಕೆಲವು ಕೋಮುವಾದಿ ಶಕ್ತಿಗಳು ಮಾಡುತ್ತಲೇ ಬರುತ್ತಿದ್ದಾರೆ. ಈಗ “ಇದು ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾತನಾಡಿರುವ ವಿಡಿಯೋ. ಅಂಬೇಡ್ಕರ್ ಹೆಸರು ಹೇಳಿ ಜಾತ್ಯಾತೀತತೆ ಪಾಠ ಹೇಳುವ ಲದ್ದಿ ಜೀವಿಗಳೇ ಇಲ್ಲಿ ಕೇಳಿ, ಜೈ ಶ್ರೀ ರಾಮ್, ಜೈ ಭೀಮ್, ಜೈ ಹಿಂದು ರಾಷ್ಟ್ರ” ಎಂಬ…

Read More

ಸೈಮನ್ ಆಯೋಗದಲ್ಲಿ‌ ಭಾರತೀಯರು ಇಲ್ಲದ ಕಾರಣ ಕಾಂಗ್ರೆಸ್‌ ವಿರೋಧಿಸಿತ್ತೇ ವಿನಃ ದಲಿತರಿಗೆ ಮತದಾನದ ಹಕ್ಕು ಬೇಡ ಎಂದಿರಲಿಲ್ಲ

ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಸೈಮನ್ ಆಯೋಗವನ್ನು ವಿರೋಧಿಸಿ ನಡೆದ “ಸೈಮನ್ ಗೋ ಬ್ಯಾಕ್” ಚಳುವಳಿಯು ಇತಿಹಾಸದಲ್ಲಿ ಮಹತ್ವದ ಘಟನೆಯಾಗಿ ಉಳಿದಿದೆ. ಆದರೆ ಸೈಮನ್ ಆಯೋಗಕ್ಕೆ ಸಂಬಂಧಿಸಿದಂತೆ ಈಗ ಹಲವಾರು ಸುಳ್ಳು ಪ್ರತಿಪಾದನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ ಹೊಸದಿಗಂತ  ದಿನ ಪತ್ರಿಕೆಯಲ್ಲಿ ಸುರೇಶ್ ಅವಧಾನಿಯವರು ಬರೆದ “ದಲಿತರಿಗೆ ಮತದಾನದ ಹಕ್ಕು ಬೇಡ ಎಂದಿತ್ತು ಕಾಂಗ್ರೆಸ್!” ಎಂಬ ಲೇಖನವನ್ನು ಹಲವಾರು ಬಲಪಂಥೀಯ ಕಾರ್ಯಕರ್ತರು ತಮ್ಮ ಪುಟಗಳಲ್ಲಿ “ಕಾಂಗ್ರೆಸ್ಸಿಗರಿಗೆ ಇಷ್ಟವಿಲ್ಲದಿದ್ದರೂ ದಲಿತರಿಗೆ ಮತದಾನದ ಹಕ್ಕು ಸಿಗುವಂತೆ ಮಾಡಿದ ಅಂಬೇಡ್ಕರ್ ಅವರನ್ನೇ…

Read More
RSS

Fact Check: ಡಾ. ಬಿ.ಆರ್ ಅಂಬೇಡ್ಕರ್ RSS ಶಾಖೆಗೆ ಭೇಟಿ ನೀಡಿದ್ದರು ಎಂಬುದು ಸುಳ್ಳು

ಇತ್ತೀಚೆಗೆ, ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ಪ್ರತಿ ರಾಜಕೀಯ ಪಕ್ಷಗಳು ತಮ್ಮವರೇ ಎಂದು ಹೇಳಿಕೊಳ್ಳುತ್ತಿದ್ದಾರೆ.  ಆ ಮೂಲಕ ಅಂಬೇಡ್ಕರ್‌ರವರು ಪ್ರಭಾವಿಸಿದ ದೊಡ್ಡ ಜನಸಂಖ್ಯೆಯ ಒಲವು ಗಳಿಸಲು ಬಯಸುತ್ತಿದ್ದಾರೆ. ಹಾಗಾಗಿ ಅಂದು ಅಂಬೇಡ್ಕರ್ ನಮ್ಮನ್ನು ಹೊಗಳಿದ್ದರು ಎಂಬ ಸುದ್ದಿಗಳನ್ನು ಹರಿಯಬಿಡುತ್ತಿದ್ದಾರೆ. ಅದರಂತೆ ಡಾ. ಅಂಬೇಡ್ಕರ್ ಅವರು 1939 ರಲ್ಲಿ ಪುಣೆಯ RSS ಶಿಬಿರಕ್ಕೆ ಭೇಟಿ ನೀಡಿ “ಸ್ವಯಂಸೇವಕರು ಇತರ ಜಾತಿಯವರನ್ನು ಸಹ ಸಂಪೂರ್ಣ ಸಮಾನತೆ ಮತ್ತು ಸಹೋದರತ್ವದಿಂದ ನಡೆಸಿಕೊಳ್ಳುತ್ತಿರುವುದನ್ನು ಕಂಡು ನನಗೆ ಆಶ್ಚರ್ಯವಾಗಿದೆ” ಎಂದು ಭಾಷಣ ಮಾಡಿದ್ದರು ಎಂಬ ಸುದ್ದಿಗಳು ಮತ್ತು…

Read More

ಸಾವರ್ಕರ್ ದಲಿತರಿಗಾಗಿ ಹೋಟೆಲ್, ದೇವಾಸ್ಥಾನ ತೆರೆದಿದ್ದರು ಎಂಬ ರೋಹಿತ್ ಚಕ್ರತೀರ್ಥ ಭಾಷಣ ಸುಳ್ಳಾಗಿದೆ

‘ಕರಿ ನೀರ ಶಿಕ್ಷೆಯ ವೀರ, ದಲಿತರ ಪಾಲಿಗೆ ನಾಯಕರಾದ ಸಾವರ್ಕರ್’ ಎಂಬ ಹೆಸರಿನಲ್ಲಿ ವಿಡಿಯೋವೊಂದನ್ನು ಸಂವಾದ ಯೂಟ್ಯೂಬ್ ಚಾನೆಲ್ ಪ್ರಸಾರ ಮಾಡಿದೆ. ಅದರಲ್ಲಿ ರೋಹಿತ್ ಚಕ್ರತೀರ್ಥ ಎಂಬುವವರು ಸಾವರ್ಕರ್‌ ದಲಿತರನ್ನೂ ಒಳಗೊಂಡಂತೆ ಸಮಾಜದ ಎಲ್ಲ ವರ್ಗ, ಪಂಥ, ಜಾತಿಯವರಿಗೂ ಮುಕ್ತವಾಗಿರುವ ಪತಿತಪಾವನ ದೇವಸ್ಥಾನ ಕಟ್ಟಿದರು. ಅಸ್ಪೃಶ್ಯರೊಟ್ಟಿಗೆ ಸಹ ಭೋಜನ ಏರ್ಪಡಿಸಿದರು. ಸಂಪೂರ್ಣವಾಗಿ ದಲಿತರಿಂದಲೇ ನಡೆಯುವ ಹೊಟೇಲನ್ನು ಮೊಟ್ಟಮೊದಲ ಬಾರಿಗೆ ತೆರೆದರು ಎಂದು ಪ್ರತಿಪಾದಿಸಿ ಸಾವರ್ಕರ್ ದಲಿತರ ಪಾಲಿಗೆ ನಾಯಕ ಎಂದಿದ್ದಾರೆ. ಕನ್ನಡ ಫ್ಯಾಕ್ಟ್ ಚೆಕ್ ತಂಡ ಈ…

Read More