Fact Check | ಬಿಜೆಪಿ ನಾಯಕನ ಮೇಲೆ ಡಿಎಂಕೆ ಸದಸ್ಯರು ಹಲ್ಲೆ ಮಾಡಿದ್ದಾರೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಬಿಜೆಪಿ ಮುಖಂಡ ರಾಜೇಶ್ ಬಿಜು ಅವರನ್ನು ಡಿಎಂಕೆ ಪಕ್ಷದ ಕಾರ್ಯಕರ್ತರು ಥಳಿಸಿದ್ದಾರೆ. ಇದು ತಮಿಳುನಾಡು ಸರ್ಕಾರ ಬಿಜೆಪಿ ಕಾರ್ಯಕರ್ತರನ್ನು ನಡೆಸಿಕೊಳ್ಳುವ ರೀತಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಸಾಕಷ್ಟು ಮಂದಿ ತಮಿಳುನಾಡಿನ ಡಿಎಂಕೆ ಸರ್ಕಾರದ ವಿರುದ್ಧ ವ್ಯಾಪಕವಾಗಿ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಕೆಲವು ಮಂದಿ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದೇ ವೇಳೆಯಲ್ಲಿ ಈ ವಿಡಿಯೋ ಕೇವಲ…

Read More
BJP

Fact Check: ಗಿಳಿ ಕೂಡಿ ಹಾಕಿದಕ್ಕೆ ಶಾಸ್ತ್ರ ಹೇಳುವವರ ಬಂಧಿಸಲಾಗಿದೆಯೇ ಹೊರತು BJP ಗೆಲ್ಲುತ್ತದೆ ಎಂದಿದ್ದಕ್ಕೆ ಅಲ್ಲ

ಈ ಬಾರಿ ತಮಿಳುನಾಡಿನಲ್ಲಿ ತನ್ನ ಖಾತೆ ತೆರೆಯಲು ಶತಾಯಗತಾಯ ಪ್ರಯತ್ನಿಸುತ್ತಿರುವ ಬಿಜೆಪಿ ಯವರು ಅಲ್ಲಿನ ಆಡಳಿತಾರೂಢ ಡಿಎಂಕೆ ಪಕ್ಷದ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ವಿರುದ್ಧ ನಾನಾ ಆರೋಪಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಸುಳ್ಳು ಸುದ್ದಿಗಳನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ. ಈಗ, ತಮಿಳುನಾಡಿನಲ್ಲಿ ಗಿಣಿ ಶಾಸ್ತ್ರ ಹೇಳುವವನ ಗಿಳಿ ಚುನಾವಣೆಯಲ್ಲಿ BJP ಗೆಲ್ಲುತ್ತದೆ ಎಂದಿದ್ದಕ್ಕೆ ಶಾಸ್ತ್ರದವನನ್ನು ಎಳೆದೊಯ್ದ ಪೊಲೀಸರು! ಎಲ್ಲಿದೆ ಪ್ರಜಾಪ್ರಭುತ್ವ! ಎಂಬ ವಿಡಿಯೋ ಒಂದನ್ನು ಹರಿಬಿಡಿಟ್ಟಿದ್ದು, ಈ ವಿಡಿಯೋದಲ್ಲಿ ತಮಿಳುನಾಡಿನ ಪೋಲೀಸರು ಗಿಳಿ ಶಾಸ್ತ್ರ ಹೇಳುವ ವ್ಯಕ್ತಿಯೊಬ್ಬರನ್ನು ಎಳೆದುಕೊಂಡು ಹೋಗಿ…

Read More

Fact Check | ತಮಿಳುನಾಡು ಸಿಎಂ ಸ್ಟಾಲಿನ್‌ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು

“ನಮ್ಮ ಗೆಲುವು ಕೇವಲ ಹಿಂದೂ ಮತಗಳ ಮೇಲೆ ಅವಲಂಬಿತವಾಗಿದ್ದರೆ, ನಾವು ಸೋತರೂ ಪರವಾಗಿಲ್ಲ. ಡಿಎಂಕೆ ಹಿಂದೂಗಳ ಮತ ಭಿಕ್ಷೆ ಬೇಡುವ ಮಟ್ಟಕ್ಕೆ ಇಳಿಯುವುದಿಲ್ಲ.” ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಹಿಂದೂ ವಿರೋಧಿ ಪೋಸ್ಟ್‌ ಮಾಡಿದ್ದಾರೆ. ಈ ಬಗ್ಗೆ ನ್ಯೂಸ್‌ 7 ತಮಿಳ್ ಸುದ್ದಿ ಮಾಧ್ಯಮ ವರದಿ ಮಾಡಿದೆ. ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಾಕಷ್ಟು ಮಂದಿ ಇದನ್ನೇ ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಪೋಸ್ಟ್‌…

Read More

Fact Check: ಕಾಂಚೀಪುರದ ಪುರಾತದ ದೇವಾಲಯವನ್ನು ಸ್ಟಾಲಿನ್ ಸರ್ಕಾರ ಹೊಡೆಸಿದೆ ಎಂಬುದು ಸಂಪೂರ್ಣ ಸುಳ್ಳು

ಇತ್ತೀಚೆಗೆ ತಮಿಳುನಾಡಿನ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ಮೇಲೆ ದೇವಸ್ಥಾನಗಳನ್ನು ಹೊಡೆಸಲಾಗುತ್ತಿದೆ ಎಂಬ ಸುಳ್ಳು ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿವೆ. ಇದನ್ನು ಮುನ್ನಲೆಯಾಗಿಟ್ಟುಕೊಂಡು ಸ್ಟಾಲಿನ್‌ರವರನ್ನು ಟೀಕಿಸಲಾಗುತ್ತಿದೆ. ಈ ಹಿಂದೆಯೂ ಚೋಳರ ಕಾಲದ ಶಿವಲಿಂಗವನ್ನು ಸ್ಟಾಲಿನ್ ರವರ ಡಿಎಂಕೆ ಸರ್ಕಾರ ತೆರವುಗೊಳಿಸಿದೆ ಎಂದು ಆರೋಪಿಸಿ ಹಂಚಿಕೊಳ್ಳಲಾಗುತ್ತಿತ್ತು. ಈಗ, “ತಮಿಳುನಾಡಿನ ಕಾಂಚೀಪುರದ ನಿಮಂತಕರರ್ ರಸ್ತೆಯಲ್ಲಿರುವ ಸಾವಿರ ವರ್ಷಗಳಿಗೂ ಹಳೆಯದಾದ ಪುರಾತನ ಶ್ರೀ ನಲ್ಲ ಕಂಬ ವಿನಾಯಗರ್ ದೇವಸ್ಥಾನವನ್ನು ಸ್ಟಾಲಿನ್ ಸರ್ಕಾರ ಹೊಡೆದುರುಳಿಸಿದೆ” ಎಂದು ಪ್ರತಿಪಾದಿಸಿ ದೇವಸ್ಥಾನವನ್ನು ಹೊಡೆಯುವ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ….

Read More
DMK

Fact Check: ತಮಿಳುನಾಡಿನ DMK ಸರ್ಕಾರವು ಪ್ರಾಚೀನ ಶಿವಲಿಂಗವನ್ನು ದೇವಾಲಯದಿಂದ ತೆರವುಗೊಳಿಸಿದೆ ಎಂಬುದು ಸುಳ್ಳು

ತಮಿಳುನಾಡಿನ ಡಿಎಂಕೆ ಪಕ್ಷ ಮತ್ತು ಕೇರಳಾದ ಕಮುನಿಸ್ಟ್‌ ಪಕ್ಷದ ಕುರಿತು ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಈ ಎರಡೂ ಪಕ್ಷಗಳೂ ಹಿಂದು ವಿರೋಧಿ ಪಕ್ಷಗಳು ಎಂಬಂತೆ ಬಿಂಬಿಸಲಾಗುತ್ತಿದೆ. ತಮಿಳುನಾಡಿನ ಸಚಿವ ಮತ್ತು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ರವರ ಮಗನಾದ ಉದಯನಿಧಿ ಸ್ಟಾಲಿನ್ “ಸನಾತನ” ಧರ್ಮದ ಬಗ್ಗೆ ಮಾಡಿದ ಟೀಕೆಯ ನಂತರ ಇಂತಹ ಅಪಪ್ರಚಾರಗಳು ಇನ್ನೂ ಹೆಚ್ಚಾಗಿವೆ. ಇತ್ತೀಚೆಗೆ, ತಮಿಳುನಾಡಿನ ಕ್ರಿಶ್ಚಿಯನ್ ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ಪ್ರಾಚೀನ ಶಿವಲಿಂಗವನ್ನು ತೆರವುಗೊಳಿಸಿ, ಹಿಂದೂ ವಿರೋಧಿ ನಡೆ ಅನುಸರಿಸಿದೆ ಎಂಬ…

Read More
ತ್ರಿವರ್ಣ ಧ್ವಜ

ಡಿಎಂಕೆ ಸರ್ಕಾರ ಭಾರತೀಯ ತ್ರಿವರ್ಣ ಧ್ವಜವನ್ನು ಸ್ಟೇಡಿಯಂಗೆ ಕೊಂಡೊಯ್ಯದಂತೆ ತಡೆದಿದೆ ಎಂಬುದು ಸುಳ್ಳು

ಭಾರತದಲ್ಲಿಯೇ ಭಾರತದ ಧ್ವಜವನ್ನು ಅವಮಾನಿಸಲಾಗಿದೆ. ತಮಿಳುನಾಡು ಪೋಲಿಸರು ನಮ್ಮ ದೇಶದ ತ್ರಿವರ್ಣ ಧ್ವಜಕ್ಕೆ ಅವಮಾನ ಸಲ್ಲಿಸಿದ್ದಾರೆ. ಚಿದಂಬರಂ ಸ್ಟೇಡಿಯಂನಲ್ಲಿ (Chepauk ಸಚಿವ ಉದಯನಿಧಿ ಸ್ಟಾಲಿನ್ ಕ್ಷೇತ್ರ) ನಡೆದ ಪಾಕಿಸ್ತಾನದ ವಿರುದ್ದ ಆಫ್ಘಾನಿಸ್ತಾನ ವಿಶ್ವಕಪ್‌ ಪಂದ್ಯದ ವೇಳೆ ಭಾರತದ ತ್ರಿವರ್ಣ ಧ್ವಜವನ್ನು ಸ್ಟೇಡಿಯಂ ಒಳಗೆ ಕೊಂಡೋಯ್ಯದಂತೆ ತಮಿಳುನಾಡಿನ ಪೋಲಿಸರು ತಡೆದಿದ್ದಾರೆ.  ಭಾರತದ ಧ್ವಜವನ್ನು ಇಂಡಿಯಾ ಒಕ್ಕುಟದ ಡಿಎಂಕೆ ಪಕ್ಷ ನಿಷೇದಿಸಿದೆ. ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಮತ್ತು ಡಿಎಂಕೆ ಪಕ್ಷವನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ. ತಮಿಳುನಾಡಿನ ಬಿಜೆಪಿ ಮುಖ್ಯಸ್ಥ…

Read More