Fact Check : ಚೀನಾದ ರೈಲ್ವೆ ಮಾರ್ಗದ ವಿಡಿಯೋವನ್ನು, ದೇವಪ್ರಯಾಗ ಮತ್ತು ಶ್ರೀನಗರದ ರೈಲು ಮಾರ್ಗ ಎಂದು ತಪ್ಪಾಗಿ ಹಂಚಿಕೆ
ಉತ್ತರಾಖಂಡದ ದೇವಪ್ರಯಾಗ ಮತ್ತು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ನಡುವೆ ನದಿಯೊಂದರ ಪಕ್ಕದಲ್ಲಿ ಪರ್ವತವಿದೆ. ಆ ಪ್ರದೇಶದ ರೈಲು ಮಾರ್ಗದ ಮೂಲಕ ರೈಲೊಂದು ವೇಗವಾಗಿ ಚಲಿಸುತ್ತಿದೆ. ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳೋಣ. ಫ್ಯಾಕ್ಟ್ ಚೆಕ್ : ಈ ವೈರಲ್ ವಿಡಿಯೋದ ಕೆಲವು ದೃಶ್ಯಗಳನ್ನು ಸ್ಕ್ರೀನ್ಶಾಟ್ ತೆಗೆದುಕೊಂಡು ರಿವರ್ಸ್ ಇಮೇಜ್ ಬಳಸಿ ಹುಡುಕಿದಾಗ, ಇದು ಚೀನಾದ ಟಿಕ್ಟಾಕ್ ವಿಡಿಯೋ ಎಂದು ತಿಳಿದುಬಂದಿದೆ. ಡೌಯಿನ್ನಲ್ಲಿ ಒಂದೇ ರೀತಿಯ ವಿಡಿಯೋವನ್ನು…