Fact Check | ಉತ್ತರ ಪ್ರದೇಶದಲ್ಲಿ ಕೋಮು ದ್ವೇಷಕ್ಕೆ ಮುಸ್ಲಿಂ ಮುಖಂಡರ ಹತ್ಯೆಯಾಗುತ್ತಿದೆ ಎಂಬುದು ಸುಳ್ಳು

ನೆಲದ ಮೇಲೆ ಬಿದ್ದಿರುವ ಮೃತದೇಹವೊಂದನ್ನು ತೋರಿಸುವ ವೀಡಿಯೊ ಕ್ಲಿಪ್ ವಿವಿಧ ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. “ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ, ಫಜ್ಲುರ್ ರೆಹಮಾನ್ ಎಂಬ ಮುಸ್ಲಿಂ ಮುಖಂಡನನ್ನು ಹಿಂದೂಗಳು ಹತ್ಯೆಗೈದರು ಮತ್ತು ಶಿರಚ್ಛೇದನ ಮಾಡಿದರು, ಈ ವಿಡಿಯೋದಲ್ಲಿರುವಂತೆ ಇನ್ನೂ ಇಬ್ಬರು ಮುಸ್ಲಿಂ ಮುಖಂಡರನ್ನು ಉತ್ತರ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ವಿಡಿಯೋವನ್ನು ಎಲ್ಲರಿಗೂ ಶೇರ್‌ ಮಾಡಿ” ಎಂಬಂತಹ ಬರಹಗಳು ಕೂಡ ವೈರಲ್‌ ಆಗುತ್ತಿದೆ.  ಈ ವಿಡಿಯೋ ಮತ್ತು ಬರಹಗಳನ್ನು ನೋಡಿದ ಹಲವರು ಇದರ…

Read More

ರಾಜಸ್ಥಾನದ ಆಳ್ವರ್ ನಲ್ಲಿ ಮುಸ್ಲೀಮರು ಹಿಂದುಗಳ ಮೇಲೆ ದಾಳಿ ನಡೆಸಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ ಭಾರತದಲ್ಲಿ ಎಲ್ಲಿಯೇ ಜಗಳಗಳು, ಗುಂಪು ಸಂಘರ್ಷಗಳು ನಡೆದರೆ ಅವುಗಳಿಗೆ ಕೋಮುಬಣ್ಣವನ್ನು ನೀಡಲಾಗುತ್ತಿದೆ. ಹಿಂದು-ಮುಸ್ಲಿಂ ಕಲಹ ಎನ್ನುವಂತೆ ಬಿಂಬಿಸಲಾಗುತ್ತಿದೆ. ಈ ಮೂಲಕ ಹಿಂದು-ಮುಸ್ಲಿಂ ಸಾಮರಸ್ಯವನ್ನು ಕದಡುವ ಅನೇಕ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ, “ರಾಜಸ್ಥಾನದ ಆಳ್ವರ್ ಜಿಲ್ಲೆಯಲ್ಲಿ ಜಮೀನು ವ್ಯಾಜ್ಯಕ್ಕಾಗಿ ನಡೆದ ಜಗಳದಲ್ಲಿ ಮುಸ್ಲೀಮರು ಹಿಂದುಗಳ ಮನೆಗಳಿಗೆ ನುಗ್ಗಿ ಥಳಿಸಿದ್ದಾರೆ.” ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್: ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಥಾನಾಗಾಜಿ ಪಟ್ಟಣದ ಬಳಿಯ ಖಕಾಸ್ಯ ಕಿ ಧಾನಿ ಗ್ರಾಮದಲ್ಲಿ ಈ…

Read More

ಕಾಂಗ್ರೆಸ್ ತರಲೊರಟ್ಟಿದ್ದ ದಂಗೆ ತಡೆ ಮಸೂದೆ ಮುಸ್ಲಿಂ ಪರವಾಗಿದ್ದು, ಹಿಂದೂ ವಿರುದ್ಧವಿತ್ತು ಎಂಬುದು ಸಂಪೂರ್ಣ ಸುಳ್ಳು

ದೇಶದಲ್ಲಿ ಹೆಚ್ಚಾಗುತ್ತಿರುವ ಕೋಮು ಗಲಭೆಗಳು ಮತ್ತು ಹಿಂಸಾಚಾರಗಳನ್ನು ತಡೆಯುವ ನಿಟ್ಟಿನಲ್ಲಿ UPA ಸರ್ಕಾರವು ಜಾರಿಗೆ ತರಲು ನೋಡಿದ “ಕೋಮು ಮತ್ತು ಉದ್ದೇಶಿತ ಹಿಂಸಾಚಾರ ತಡೆ” (The Prevention of Communal Violence (Access to Justice and Repatriations) Bill, 2011) ಮಸೂದೆಗೆ ಸಂಬಂಧಿಸಿದಂತೆ ಈ ಮಸೂದೆಯೂ ಮುಸ್ಲಿಂ ಪರವಾಗಿದ್ದು, ಹಿಂದೂಗಳನ್ನು ಗುರಿಯಾಗಿಸಿದೆ ಎಂದು ಸಾಕಷ್ಟು ಸುಳ್ಳು ಸುದ್ದಿಗಳು, ಸುಳ್ಳು ಪ್ರತಿಪಾದನೆಗಳು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ಟಿವಿ ವಿಕ್ರಮ ಯೂಟ್ಯೂಬ್ ಚಾನೆಲ್‌ನಲ್ಲಿ ಜಾಹ್ನವಿ…

Read More
ಮುಸ್ಲಿಂ

Fact Check : ಬೆಂಗಳೂರಿನಲ್ಲಿ ಮುಸ್ಲಿಂ ಸಮುದಾಯದ ರಹಸ್ಯ ಸಭೆ ನಡೆದು ಹಿಂದೂಗಳ ಬಳಿ ವ್ಯಾಪಾರ ಬಹಿಷ್ಕರಿಸಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಸಾಮರಸ್ಯವನ್ನು ಕದಡುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಸುಳ್ಳು ಸುದ್ದಿಗಳು ಇತ್ತೀಚೆಗಿನ ದಿನಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಮುಸ್ಲಿಂ ಮತ್ತು ಹಿಂದೂ ಸಮಾಜದ ನಡುವೆ ದ್ವೇಷ ಬಿತ್ತುವ ಕೆಲಸಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇದಕ್ಕೆ ಪೂರಕ ಎಂಬಂತೆ ರಾಜ್ಯದಲ್ಲಿ ಕಳೆದ ಕೆಲ ವರ್ಷಗಳಿಂದ ಹಿಂದೂ ಮುಸ್ಲಿಂ ವ್ಯಾಪರ ವಿಚಾರಕ್ಕೆ ಸಂಬಂಧ ಪಟ್ಟಂತೆ ದ್ವೇಷ ಹರಡುವ ಕೆಲಸಗಳು ಕೂಡ ನಡೆಯುತ್ತಿವೆ. ಇದಕ್ಕೆ ಪೂರಕ ಎಂಬಂತೆ ಬೆಂಗಳೂರಿನಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಗಂಭೀರವಾದ ಆರೋಪವನ್ನು ಹರಿಬಿಡಲು ಯತ್ನಿಸಲಾಗಿದೆ. ಇದಕ್ಕೆ…

Read More
ಶಿವಮೊಗ್ಗ ಗಲಭೆಯ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು

ಶಿವಮೊಗ್ಗ ಗಲಭೆ ಕುರಿತು ಹರಡುತ್ತಿರುವ ಸುಳ್ಳು ಸುದ್ದಿಗಳು

ಅಕ್ಟೋಬರ್ 01ರ ಭಾನುವಾರ ಸಂಜೆ ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆಯ ವೇಳೆ ದುಷ್ಕರ್ಮಿಗಳು ಕಲ್ಲು ತೂರಿದ ಪರಿಣಾಮ ಗಲಭೆ ಉಂಟಾಗಿತ್ತು. ಗಾಯಗೊಂಡ 12 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಲಭೆಯಲ್ಲಿ ಪಾಲ್ಗೊಂಡ ಆರೋಪದ ಮೇಲೆ 60 ಮಂದಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನಲೆಯಲ್ಲಿ ಶಿವಮೊಗ್ಗದ ರಾಗಿಗುಡ್ಡದಲ್ಲಿ ಪೊಲೀಸ್ ಎನ್‌ಕೌಂಟರ್ ನಿಂದ ಮುಸ್ಲಿಂ ಯುವಕ ಮೃತ್ಯು ಎಂಬ ವಾಟ್ಸಾಪ್ ಸಂದೇಶವೊಂದು ಹರಿದಾಡುತ್ತಿದೆ. ಅದೇ ರೀತಿ ಶಿವಮೊಗ್ಗದಲ್ಲಿ ಕತ್ತಿಗಳನ್ನಿಡಿದು ಮುಸ್ಲಿಮರ ಮೆರವಣಿಗೆ ಎಂದು ವಿಡಿಯೋ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ…

Read More