Fact Check : ಯುಪಿ CMO ಮೇಲೆ ದಾಳಿ ಎಂದು ನೋಯ್ಡಾದ ಬಿಜೆಪಿ ನಾಯಕನನ್ನು ಥಳಿಸಲಾದ ವೀಡಿಯೊ ಹಂಚಿಕೆ

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಜನರ ಗುಂಪೊಂದು ಚೀಫ್ ಮೆಡಿಕಲ್ ಆಫೀಸರ್‌ನನ್ನು ಹಿಂಬಾಲಿಸಿ ಥಳಿಸಿದ್ದಾರೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ಫ್ಯಾಕ್ಟ್‌ ಚೆಕ್‌ : ಈ ವೈರಲ್ ವೀಡಿಯೊದ ಸತ್ಯಾಂಶಗಳನ್ನು ತಿಳಿದುಕೊಳ್ಳಲು, ವೀಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, ಈ ಹಿಂದೆ ಟ್ವಿಟರ್‌ನಲ್ಲಿ  ಹಂಚಿಕೊಂಡ ವೀಡಿಯೊ ಲಭಿಸಿದೆ. ಈ ವೀಡಿಯೊ ಮಣಿಪುರದ ಸಮಸ್ಯೆಗೆ ಸಂಬಂಧಿಸಿದ ಘಟನೆಯಾಗಿದ್ದು, ವೈರಲ್‌ ವೀಡಿಯೊದ ತುಣುಕನ್ನು ಹೋಲುತ್ತದೆ. ಮಣಿಪುರದ ಸಮಸ್ಯೆಯ ಚರ್ಚೆಯ ವೇಳೆ ಗ್ರೇಟರ್ ನೋಯ್ಡಾದ ಬಿಜೆಪಿ ನಾಯಕನೊಬ್ಬನ ಮೇಲೆ ಹಲ್ಲೆ…

Read More