ನಟ ಅಶುತೋಷ್ ರಾಣ ಬಿಜೆಪಿಗೆ ಮತ ನೀಡುವಂತೆ ಜನರನ್ನು ಉತ್ತೇಜಿಸಿಲ್ಲ

ಪಂಚರಾಜ್ಯಗಳ ಚುನಾವಣೆಗೆ ಸಂಬಂಧಿಸಿದಂತೆ ಹೀಗಾಗಲೇ ಮತ ಚಲಾವಣೆ ಪ್ರಕ್ರಿಯೆಗಳು ಮುಗಿದಿವೆ. ಎಲ್ಲರೂ ಚುನಾವಣಾ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ಮಧ್ಯ ಪ್ರದೇಶದ ಚುನಾವಣೆಯಲ್ಲಿ ಹಂಚಿಕೊಳ್ಳಲಾದ ಸುಳ್ಳು ಸುದ್ದಿಗಳು ನಿಧಾನವಾಗಿ ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ಬಾಲಿವುಡ್ ನಟ ಅಶುತೋಷ್ ರಾಣ ಬಿಜೆಪಿಗೆ ಮತ ನೀಡುವಂತೆ ಜನರನ್ನು ಉತ್ತೇಜಿಸಿದ್ದಾರೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಅಶುತೋಷ್ ರಾಣ ಅವರು ಚುನಾವಣಾ ಮಹತ್ವ ಸಾರುವಂತಹ ಸಂದೇಶದೊಂದಿಗೆ ಜನರಿಗೆ ಮತದಾನ ಮಾಡುವಂತೆ ಮನವಿ ಮಾಡಲು ನಿರ್ಮಿಸಿದ ವಿಡಿಯೋ ಇದಾಗಿದೆ. ಆದರೆ ಅವರು…

Read More

Fact Check : “ಭಾರತ ಮಾತೆ ಯಾರು?” ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆಂದು ಎಡಿಟ್ ವಿಡಿಯೋ ಹಂಚಿಕೊಂಡ ಬಿಜೆಪಿ

“ಭಾಷಣವೊಂದರಲ್ಲಿ ರಾಹುಲ್‌ ಗಾಂಧಿ “ಭಾರತ ಮಾತೆ ಯಾರು?” ಎಂದು ಕೇಳಿದ್ದಾರೆ ಜಾರ್ಜ್‌ ಸರೋಸ್‌ನ ಕೈಗೊಂಬೆ ಹೀಗೆ ಕೇಳುತ್ತಿದೆ. ಇದು ನಾಚಿಗೆ ಗೇಡಿನ ಸಂಗತಿ” ಎಂಬ ತಲೆಬರಹದೊಂದಿಗೆ ರಾಹುಲ್‌ ಗಾಂಧಿ ಅವರ ಭಾಷಣದ ತುಣುಕೊಂದನ್ನು ಬಳಸಿಕೊಂಡು ಬಿಜೆಪಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ. ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಇದೊಂದು ದಾರಿ ತಪ್ಪಿಸುವ ವಿಡಿಯೋ ಎಂಬುದು ತಿಳಿದು ಬಂದಿದೆ. ಬಿಜೆಪಿಯ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಕಟ್‌ ಮಾಡಿ ಹಂಚಿಕೊಳ್ಳಲಾಗಿದೆ ಎಂದು ಹಲವಾರು ಸಾಮಾಜಿಕ…

Read More

Fact Check : ಅಸಾದುದ್ದೀನ್ ಓವೈಸಿ ಜೊತೆ ಪ್ರಧಾನಿ ಮೋದಿ ಅವರು ಕುಳಿತಿರುವ ಫೋಟೋ ನಕಲಿ..!

“ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂಬರುವ ಚುನಾವಣೆಗೆ ತಯಾರಿ ನಡೆಸಲು ಅಸಾದುದ್ದೀನ್ ಓವೈಸಿಗೆ ತರಬೇತಿ ನೀಡುತ್ತಿರುವಾಗ ದೇಶದ ಯುವಜನತೆ ಜಾಗರೂಕರಾಗಿರಿ, ಅಧಿಕಾರಕ್ಕಾಗಿ ಏನು ಬೇಕಾದರು ಆಗ ಬಹುದು” ಎಂಬ ಬರಹವೊಂದು ಪ್ರಧಾನಿ ಮೋದಿ ಅವರು ಓವೈಸಿ ಅವರೊಂದಿಗೆ ಇರುವ ರೀತಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಕುರುತು ಫ್ಯಾಕ್ಟ್‌ ಚೆಕ್‌ ಮಾಡಿದಾಗ ಈ ಫೋಟೋದ ನಿಜ ರಹಸ್ಯ ಬಯಲಾಗಿದೆ. ಅಸಲಿಗೆ ಈ ವೈರಲ್‌ ಪೋಟೋಗಳು ಬೇರೆ ಬೇರೆಯದ್ದಾಗಿದ್ದು ಎರಡನ್ನೂ ಡಿಜಿಟಲ್‌ ಮಾದರಿಯಲ್ಲಿ ಒಂದೇ…

Read More

ಪಶ್ಚಿಮ ಬಂಗಾಳದ ಚುನಾವಣೆಯ ಹಳೆಯ ವಿಡಿಯೋವನ್ನು ಮಧ್ಯಪ್ರದೇಶಕ್ಕೆ ಸೇರಿದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪಂಚರಾಜ್ಯಗಳಾದ ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನ, ತೆಲಂಗಾಣ ಹಾಗೂ ಮಿಝೋರಾಂ ನಲ್ಲಿ ಈಗಾಗಲೇ ಚುನಾವಣೆಗಳು ಜರುಗುತ್ತಿವೆ. ಈ ಸುದ್ದಿ ಬರೆಯುವ ಹೊತ್ತಿಗೆ ಮಧ್ಯ ಪ್ರದೇಶದ ಚುನಾವಣೆಯು ಮುಗಿದಿದೆ. ಆದರೆ ಮಿಕ್ಕ ರಾಜ್ಯಗಳಿಗೆ ಹೋಲಿಸಿದರೆ ಮಧ್ಯ ಪ್ರದೇಶದಲ್ಲಿ ಹರಿದಾಡಿದಷ್ಟು ಸುಳ್ಳು ಸುದ್ದಿಗಳು, ಅಪಪ್ರಚಾರಗಳು ಬೇರೆಲ್ಲೂ ನಡೆದಿಲ್ಲ. ಮಧ್ಯಪ್ರದೇಶದ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಹರಿದಾಡುತ್ತಿದ್ದ ಹಲವಾರು ಸುಳ್ಳು ಸುದ್ದಿಗಳನ್ನು ಕನ್ನಡ ಫ್ಯಾಕ್ಟ್‌ಚೆಕ್ ಬಯಲುಗೊಳಿಸಿದೆ. ಅವುಗಳನ್ನು ನೀವು ಇಲ್ಲಿ ನೋಡಬಹುದು. ಇತ್ತೀಚೆಗೆ ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ನಾಯಕ ಹಳ್ಳಿಗೆ ಪ್ರಚಾರಕ್ಕೆಂದು ಹೋದ…

Read More

Fact Check : ವಿಶ್ವದ ಭ್ರಷ್ಟ ಪ್ರಧಾನಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿ ಅವರಿಗೆ ಎರಡನೇ ಸ್ಥಾನ ಎಂಬುದು ಸುಳ್ಳು

“ಫಾಕ್ಸ್ ನ್ಯೂಸ್ ಬಿಡುಗಡೆ ಮಾಡಿದ ಟಾಪ್ 10 ಭ್ರಷ್ಟ ಪ್ರಧಾನ ಮಂತ್ರಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡನೇ ಸ್ಥಾನದಲ್ಲಿದ್ದಾರೆ. ಅಂದಭಕ್ತರ ವಿಶ್ವಗುರು ಈಗ ಭ್ರಷ್ಟಗುರು ಸತ್ಯ ತಡವಾಗುತ್ತೆ ಆದರೆ ಸತ್ಯ ಸಾಯಲ್ಲ” ಎಂಬ ಪೋಸ್ಟ್‌ವೊಂದು ಪೇಪರ್‌ ಕಟಿಂಗ್‌ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ವಿಶ್ವದ ಅತ್ಯಂತ ಭ್ರಷ್ಟ ಪ್ರಧಾನ ಮಂತ್ರಿಗಳ ಬಗ್ಗೆ ಫಾಕ್ಸ್ ನ್ಯೂಸ್ ಇಂತಹ ಯಾವುದೇ ವರದಿಯನ್ನು ಪ್ರಕಟಿಸಲಿಲ್ಲ. ಫಾಕ್ಸ್ ನ್ಯೂಸ್ ಪಾಯಿಂಟ್‌ಗೂ ಮತ್ತು ಯುಎಸ್ ಮೂಲದ…

Read More

Fact Check : ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಹೆಸರಿನಲ್ಲಿ ವೈರಲ್‌ ಆಗುತ್ತಿದೆ ನಕಲಿ ಟ್ವೀಟ್‌..!

“ಭಾರತೀಯರಿಗೆ ಮಂದಿರಗಳು ಬೇಕಾಗಿವೆ. ಕಾಂಗ್ರೆಸ್‌ ಐಐಟಿ, ಐಐಎಂ, ಕಾಲೇಜುಗಳು, ಆಸ್ಪತ್ರೆಗಳು, ವಿಮಾನ ನಿಲ್ದಾಣಗಳು, ರೈಲ್ವೆ, ಅಣೆಕಟ್ಟುಗಳು, ಇಸ್ರೋದಂತಹ ಸಂಸ್ಥೆಗಳನ್ನು 70 ವರ್ಷಗಳಿಂದ ನಿರ್ಮಿಸುತ್ತಲೇ ಇತ್ತು. ಅದನ್ನು ಇಂದು ಮಾರಾಟ ಮಾಡಬೇಕಾಗಿದೆ” ಎಂದು ಮನಮೋಹನ್‌ ಸಿಂಗ್‌ ಟ್ವೀಟ್ ಮಾಡಿದ್ದಾರೆ ಎಂದು ಪೋಸ್ಟ್‌ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಕುರಿತು ಸಾಕಷ್ಟು ಮಂದಿ ಸತ್ಯ ಏನು ಎಂದು ಅವಲೋಕನ ಮಾಡದೆ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಪೋಸ್ಟ್‌ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವುದರ ಜೊತೆಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ….

Read More

Fact Check : ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಡಿ ಎಂದು ಮಧ್ಯಪ್ರದೇಶದ ಜನರಿಗೆ ಅಮಿತ್‌ ಶಾ ಹೇಳಿಲ್ಲ.!

ಮುಂಬರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ದೇಪಾಲ್ಪುರ್‌ ಬಿಜೆಪಿ ಅಭ್ಯರ್ಥಿ ಮನೋಜ್‌ ನಿರ್ಭಯ್‌ ಸಿಂಗ್‌ಗೆ ಮತ ಹಾಕಬೇಡಿ ಎಂದು ಅಮಿತ್‌ ಶಾ ಹೇಳಿಕೆ ನೀಡಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಪೋಸ್ಟ್‌ ಅನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ ಈ ವಿಡಿಯೋ ಕುರಿತು ಸತ್ಯ ಶೋಧನೆಯನ್ನ ನಡೆಸಿದಾಗ ಈ ವಿಡಿಯೋ ಎಡಿಟೆಡ್‌ ಎಂದು ತಿಳಿದು ಬಂದಿದೆ. ಇದೇ ನವಂಬರ್‌ 11 ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು…

Read More

Fact Check : “ಗೋವು ನಮ್ಮ ತಾಯಿಯಲ್ಲ” ಎಂದು ದಿಗ್ವಿಜಯ್ ಸಿಂಗ್‌ ಹೇಳಿಲ್ಲ

ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದರ ಮಧ್ಯೆ ಇದೀಗ ಅಲ್ಲಿನ ಆಡಳಿತರೂಢ  ಸರ್ಕಾರದ ವಿರುದ್ಧ ಮತ್ತು ಅಲ್ಲಿನ ವಿರೋಧ ಪಕ್ಷದ ಕುರಿತು ವ್ಯಾಪಕವಾಗಿ ಸುಳ್ಳು ಸುದ್ದಿಗಳು ಹಬ್ಬೋದಕ್ಕೆ ಪ್ರಾರಂಭವಾಗಿದೆ ಅದರಲ್ಲೂ ಪ್ರಮುಖವಾಗಿ ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್‌ ಸಿಂಗ್‌ ಅವರ ವಿರುದ್ಧ ಹಲವು ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿದೆ.  ಇದೇ ರೀತಿಯಾಗಿ “ಗೋವು ನಮ್ಮ ತಾಯಿಯಲ್ಲ. ಅದರ ಮಾಂಸವನ್ನು ತಿನ್ನುವುದರಲ್ಲಿ ತಪ್ಪೇನಿಲ್ಲ” ಎಂಬ ವಿಡಿಯೋ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್‌ ಹೇಳಿದ್ದಾರೆ ಎಂಬ ಸುದ್ದಿಯೊಂದಿಗೆ…

Read More

Fact Check : ಕಾಂಗ್ರೆಸ್‌ ಸರ್ಕಾರವಿರುವ ರಾಜಸ್ಥಾನದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿದೆ ಎಂಬುದು ಸುಳ್ಳು

ರಾಜಸ್ಥಾನದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರದಿಂದ ಪೊಲೀಸರಿಗೆ ರಕ್ಷಣೆಯೇ ಇಲ್ಲ ಎಂಬ ಪೋಸ್ಟ್‌ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣ ಎಕ್ಸ್‌ ಬಳಕೆದಾರ ಗಜೇಂದ್ರ ಸಿಂಗ್‌ ಎಂಬಾತ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ “ಇದು ರಾಜಸ್ಥಾನದ ಕೋಟಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಜಿಹಾದಿಗಳಿಂದ ನಡೆದ ಘಟನೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ನೋಡಿ ಪೊಲೀಸರೇ ಜಿಹಾದಿಗಳಿಂದ ಪ್ರಾಣಭಿಕ್ಷೆ ಬೇಡುತ್ತಿದ್ದಾರೆ. ಇನ್ನು ಸಾಮಾನ್ಯ ಹಿಂದುಗಳ ಪರಿಸ್ಥಿತಿ ಏನಾಗಬಹುದು. ಈ ದೃಶ್ಯಗಳು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕಂಡು ಬಂದರೆ ಆಶ್ಚರ್ಯವಿಲ್ಲ” ಎಂದು ಉಲ್ಲೇಖಿಸಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾನೆ….

Read More

Fact Check : ದಸರಾ ಕಲಾವಿದರಿಗೆ ಸಹಿ ವ್ಯತ್ಯಾಸದಿಂದ ಚೆಕ್‌ಬೌನ್ಸ್‌ ಆಗಿದೆಯೇ ಹೊರತು ನಾಡಹಬ್ಬದಲ್ಲಿ ಹಗರಣವಾಗಿಲ್ಲ

ರಾಜ್ಯ ಸರ್ಕಾರವನ್ನು ಟೀಕಿಸುವ ಬರದಲ್ಲಿ ಸುಳ್ಳು ಸುಳ್ಳು ಪ್ರತಿಪಾದನೆಯೊಂದಿಗೆ ವಿಡಿಯೋವೊಂದು ವೈರಲ್‌ ಆಗಿದೆ. ಅದರಲ್ಲಿ “ಥೂ ನಿಮ್ಮ ಸರ್ಕಾರಕ್ಕೆ !! ದಸರಾ ಕಲಾವಿದರಿಗೆ ಕೊಟ್ಟ ಚೆಕ್‌ ಬೌನ್ಸ್‌ ಆಗಿದ್ದಲ್ಲದೆ ಅವರಿಗೆ ದಂಡ ಹಾಕಲಾಗಿದೆ!! ನಾಡಹಬ್ಬದಲ್ಲೂ ಹಗರಣ ಮಾಡಿದ ಕಾಂಗ್ರೆಸ್ಸನ್ನು ಖಂಡಿಸಲು ಶೇರ್‌ ಮಾಡಿ” ಎಂದು ಬರೆದುಕೊಳ್ಳಲಾಗಿದೆ. ಇದರ ಕುರಿತು ಪರಿಶೀಲನೆ ನಡೆಸಿದಾಗ ದಸರಾ ಅಂಗವಾಗಿ ಖರ್ಚು ವೆಚ್ಚದ ಲೆಕ್ಕಕ್ಕಾಗಿ ಆಯಾ ಉಪಸಮಿತಿಗಳ ಹೆಸರಿನಲ್ಲಿಯೇ ಬ್ಯಾಂಕ್‌ ಖಾತೆ ತೆರೆದು ಆ ಮೂಲಕವೇ ಕಲಾವಿದರಿಗೆ ಗೌರವ ಸಂಭಾವನೆಯ ಚೆಕ್‌ ನೀಡಲಾಗುತ್ತಿದೆ….

Read More