Fact Check | ಸಿಎಂ ಸ್ಥಾನ ಕೈ ತಪ್ಪಿದ್ದಕ್ಕೆ ಶಿವರಾಜ್ ಸಿಂಗ್ ಚೌಹಾಣ್ ಕಣ್ಣೀರು ಹಾಕಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ

“ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನೇಮಕಗೊಳ್ಳದ ನಂತರ ಕಣ್ಣೀರು ಹಾಕಿ ಬೇಸರ ವ್ಯಕ್ತ ಪಡಿಸಿದ್ದಾರೆ..” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಕಣ್ಣೀರು ಹಾಕಿ ಬೇಸರ ವ್ಯಕ್ತ ಪಡಿಸುವುದನ್ನು ಕಾಣ ಬಹುದಾಗಿದೆ. “ಮೋದಿ ಅಮಿತ್ ಶಾ ಅವರಿಂದ ಆದ ವಿಶ್ವಾಸ ದ್ರೋಹದಿಂದ ನೊಂದು ಕಣ್ಣೀರು ಹಾಕಿದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು…

Read More

Fact Check | ರಾಷ್ಟ್ರಪತಿ ಸೇರಿದಂತೆ ಗಣ್ಯರನ್ನು ಪ್ರಧಾನಿ ಮೋದಿ ಕಡೆಗಣಿಸಿದ್ದಾರೆ ಎಂಬುದು ಸುಳ್ಳು

“ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪಾಧ್ಯಕ್ಷ ಜಗದೀಪ್ ಧನಕರ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಶುಭಾಶಯಗಳನ್ನು ಪ್ರಧಾನಿ ನರೇಂದ್ರ ಮೋದಿ ಕಡೆಗಣಿಸಿದರು.” ಎಂದು ಸಾಮಜಿಕ ಜಾಲತಾಣದಲ್ಲಿ ವಿಡಿಯೋವೊಂದು ಮತ್ತು ಕೆಲವೊಂದು ಫೋಟೋಗಳು ವೈರಲ್‌ ಆಗುತ್ತಿದೆ. ಈ ಕುರಿತು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದು, ಪ್ರಧಾನಿ ಮೋದಿ ಅವರ ನಡೆಗೆ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ನಿಜಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರು ಈ ರೀತಿಯಾಗಿ ನಡೆದುಕೊಂಡರೆ ಎಂದು ಸತ್ಯ ಶೋಧನೆ…

Read More

ಕ್ಯಾ. ಪ್ರಾಂಜಲ್ ಕುರಿತು ಸಿಎಂ ಸಿದ್ದರಾಮಯ್ಯನವರ ಅರ್ಧ ಹೇಳಿಕೆ ಹಂಚಿ ತಪ್ಪಾಗಿ ಅರ್ಥೈಸಿದ ಸಂಸದ ತೇಜಸ್ವಿ ಸೂರ್ಯ

ಕಳೆದ ನವೆಂಬರ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಉಗ್ರರ ದಾಳಿಯಿಂದ ಮೃತಪಟ್ಟ ಕರ್ನಾಟಕದ ಯೋಧ ಕ್ಯಾ. ಪ್ರಾಂಜಲ್ ರವರ ಸಾವಿಗೆ ಇಡೀ ರಾಜ್ಯದ ಜನರು ಸಂತಾಪ ಸೂಚಿಸಿದ್ದರು. ಮಾನ್ಯ ಮುಖ್ಯಮಂತ್ರಿಗಳು ಸಹ ಪ್ರಾಂಜಲ್‌ರವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿ, ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿ 50 ಲಕ್ಷದಷ್ಟು ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಅದು ತಡವಾಗುತ್ತಿದ್ದಂತೆ ಬಿಜಿಪಿ ಕಾರ್ಯಕರ್ತರು ಸೇರಿದಂತೆ ಹಲವು ಮಾಧ್ಯಮಗಳು ಸಹ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರನ್ನು ಟೀಕಿಸುತ್ತಿದ್ದಾರೆ.ಈಗ, ಕ್ಯಾ. ಪ್ರಾಂಜಲ್ ಯಾರು? ಯಾವಾಗ…

Read More

Fact Check | ಕತಾರ್‌ನಲ್ಲಿ ಬಂಧಿತರಾಗಿರುವ ಭಾರತದ ನೌಕಾಪಡೆಯ ಮಾಜಿ ಸಿಬ್ಬಂಧಿಗಳ ಮರಣದಂಡನೆ ಶಿಕ್ಷೆ ರದ್ದಾಗಿಲ್ಲ

ಸಾಮಾಜಿಕ ಜಾಲತಾಣದಲ್ಲಿ “ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಎಂಟು ಜನ ಮಾಜಿ ಸಿಬ್ಬಂದಿಗಳ ಶಿಕ್ಷೆಯನ್ನು ಕತಾರ್‌ ರದ್ದು ಮಾಡಿದೆ. ಮೋದಿ ಮತ್ತು ತನ್ನ ಅಧಿಕೃತ ಹೇಳಿಕೆಯಲ್ಲಿ ನಮಗೆ ಭಾರತದ ಸ್ನೇಹವೇ ಮುಖ್ಯವೆಂದು ಹೇಳಿದೆ. ಇದು ಮೋದಿ ಸರ್ಕಾರದ ಶಕ್ತಿ” ಎಂದು ಪ್ರಧಾಣಿ ಮೋದಿ ಅವರ ಫೋಟೋದೊಂದಿಗೆ ಬರಹವನ್ನು ಹಂಚಿಕೊಳ್ಳಲಾಗುತ್ತಿದೆ. ಅಸಲಿಗೆ ಕಳೆದ ತಿಂಗಳು ಕತಾರ್‌ನ ನ್ಯಾಯಾಲಯವು ಕತಾರ್ ರಕ್ಷಣಾ ಸಿಬ್ಬಂದಿಗೆ ತರಬೇತಿ ನೀಡುವ ಒಮಾನಿ ಕಂಪನಿಯಿಂದ ನೇಮಕಗೊಂಡ ಎಂಟು ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ…

Read More

ರಾಮನವಮಿ, ಶಿವರಾತ್ರಿ, ಮತ್ತು ಗಾಂಧಿ ಜಯಂತಿಯ ಸರ್ಕಾರಿ ರಜೆಯನ್ನು ಬಿಹಾರದ ಸರ್ಕಾರ ಕೈಬಿಟ್ಟಿದೆ ಎಂಬುದು ಸುಳ್ಳು

ಲೋಕಸಭಾ ಚುನಾವಣೆಗಳು ಹತ್ತಿರಾಗುತ್ತಿದ್ದಂತೆ ಆಡಳಿತಾರೂಢ ಸರ್ಕಾರವನ್ನು ವಿರೋಧ ಪಕ್ಷಗಳು ಟೀಕಿಸುವ, ಅಪಪ್ರಚಾರ ಮಾಡುವ ಸಲುವಾಗಿ  ಅನೇಕ ಸುಳ್ಳು ಸುದ್ದಿಗಳನ್ನು ಮುನ್ನಲೆಗೆ ತರುತ್ತಿವೆ. ಇತ್ತೀಚೆಗೆ ಬಿಹಾರ ಸರ್ಕಾರ ಘೋಷಿಸಿರುವ ಶಾಲಾ ರಜೆಯ ಪಟ್ಟಿಯೊಂದು ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ. ರಾಮನವಮಿ, ಶಿವರಾತ್ರಿ, ಕೃಷ್ಣಾಷ್ಟಮಿ, ರಕ್ಷಾಬಂಧನ ಮತ್ತು ಗಾಂಧಿ ಜಯಂತಿಯ ರಜೆ ರದ್ದು: ಬಕ್ರೀದ್, ಈದ್‌ಗೆ ತಲಾ 3 ದಿನ ಸರ್ಕಾರಿ ರಜೆ ಎಂದು ನಿತೀನ್ ಕುಮಾರ್ ನೇತೃತ್ವದ ಬಿಹಾರದ ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂಬ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ.ಫ್ಯಾಕ್ಟ್‌ಚೆಕ್: ಬಿಹಾರದ…

Read More

Fact Check | ರಾಜಸ್ಥಾನದ ಕಾಂಗ್ರೆಸ್‌ ರ್ಯಾಲಿಯಲ್ಲಿ ಪಾಕಿಸ್ತಾನದ ದ್ವಜ ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ರಾಜಸ್ಥಾನದಲ್ಲಿ ಕಾಂಗ್ರೆಸ್‌ ಬೃಹತ್‌ ರ್ಯಾಲಿ ನಡೆಸಿದೆ. ಆದರೆ ಅಲ್ಲಿ ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸಲಾಗಿದೆ. ದೇಶದ್ರೋಹಿಗಳಿಗೆ ಶಿಕ್ಷೆ ಆಗಲೇಬೇಕು” ಎಂಬ ಪೋಸ್ಟ್‌ವೊಂದು ಹಲವು ವರ್ಷಗಳಿಂದ ಹರಿದಾಡುತ್ತಿದೆ. ಈ ಪೋಸ್ಟ್‌ಗಳನ್ನು ಸಾಕಷ್ಟು ಮಂದಿ ವ್ಯಾಪಕವಾಗಿ ಹಂಚಿಕೊಂಡು ಇದು ಇತ್ತೀಚೆಗೆ ನಡೆದ ಘಟನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ಅಲ್ಪಸಂಖ್ಯಾತರು ಹೆಚ್ಚು ನೆಲೆಸಿರುವ ಪ್ರದೇಶಗಳಲ್ಲಿ ಯಾವುದಾದರು ರ್ಯಾಲಿ ನಡೆಸಿದಾಗ ಆಗಾಗ ಕಾಂಗ್ರೆಸ್‌ ರ್ಯಾಲಿಯಲ್ಲಿ ಪಾಕಿಸ್ತಾನದ ಧ್ವಜ ಪ್ರದರ್ಶನವಾಗಿದೆ ಎಂಬ ಸುಳ್ಳು ಸುದ್ದಿಗಳು ಆಗಾಗ ಕಂಡು ಬರುತ್ತಲೇ ಇರುತ್ತವೆ….

Read More

Fact Check | ಬ್ರಿಟೀಷರ ಗುಲಾಮನಾಗಿರುತ್ತೇನೆ ಎಂದು ಎಂ.ಎಸ್ ಗೋಳ್ವಾಲ್ಕರ್ ಹೇಳಿರುವುದಕ್ಕೆ ಆಧಾರಗಳಿಲ್ಲ..!

“ನಾನು ಇಂಗ್ಲೀಷರ ಗುಲಾಮಗಿರಿ ಮಾಡಲು ಜೀವನಪರ್ಯಂತ ಸಿದ್ದನಿದ್ದೇನೆ ಆದರೆ ದಲಿತ, ಹಿಂದುಳಿದ, ಮುಸ್ಲಿಮರಿಗೆ ಸರಿ ಸಮಾನವಾದ ಅಧಿಕಾರ ಕೊಡುವುದಾದರೆ ನನಗೆ ಅಂತಹ ಸ್ವಾತಂತ್ರ್ಯವೇ ಬೇಡ ಎಂದು ಗೋಳವಳ್ಕರ್‌ ಗುರೂಜಿ ಅವರು ಹೇಳಿಕೆ ನೀಡಿದ್ದರು” ಎಂಬ ಪೋಸ್ಟ್‌ ಹಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗಿದೆ. ಹಲವು ತಿಂಗಳುಗಳಿಂದ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಈ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಈ ಪೋಸ್ಟರ್‌  ಅನ್ನು ಕನ್ನಡದ ಸಾಮಾಜಿಕ ಜಾಲತಾಣದ ಹಲವು…

Read More

Fact Check | ಅದಾನಿ ಪತ್ನಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಲೆಬಾಗಿ ನಮಸ್ಕರಿಸಿದ್ದಾರೆ ಎಂಬುದು ಸುಳ್ಳು..!

ಸಾಮಾಜಿಕ ಜಾಲತಾಣದಲ್ಲಿ “ಪ್ರಧಾನಿ ನರೇಂದ್ರ ಮೋದಿ ಮಹಿಳೆಯೊಬ್ಬರ ಮುಂದೆ ತಲೆಬಾಗಿ ನಮಸ್ಕರಿಸಿದ್ದಾರೆ. ಪ್ರಧಾನಿ ಅವರು ಹೀಗೆ ನಮಸ್ಕರಿಸುತ್ತಿರುವುದು ರೈತ ಮಹಿಳೆಗೊ, ಯೋಧ ಮಹಿಳೆಗೊ ಅಲ್ಲ, ಬದಲಿಗೆ ಮೋದಿ ನಮಸ್ಕರಿಸುತ್ತಿರುವ ಮಹಿಳೆ ಖ್ಯಾತ ಉದ್ಯಮಿ ಅದಾನಿ ಅವರ ಪತ್ನಿ ಪ್ರೀತಿ” ಎಂದು ಮಹಿಳೆಯೊಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಮಸ್ಕರಿಸಿರುವ ಫೋಟೋ ವೈರಲ್‌ ಆಗಿದೆ. ಇದನ್ನು ಸಾಕಷ್ಟು ಮಂದ ಹಂಚಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕೆಯನ್ನು ಮಾಡುತ್ತಿದ್ದಾರೆ. ಆದರೆ ಈ ಕುರಿತು ಫ್ಯಾಕ್ಟ್‌ ಚೆಕ್‌  ನಡೆಸಿದಾಗ…

Read More

Fact Check | ಮಧ್ಯಪ್ರದೇಶದಲ್ಲಿ ಬುರ್ಖಾ ಧರಿಸಿದ ಮಹಿಳೆಯರಿಂದ ನಕಲಿ ಮತದಾನ ಎಂಬ ವಿಡಿಯೋ ಉತ್ತರ ಪ್ರದೇಶದ್ದು..!

ಮಧ್ಯಪ್ರದೇಶದಲ್ಲಿ ಬುರ್ಖಾ ಧರಿಸಿದ ಮಹಿಳೆಯರಿಂದ ನಕಲಿ ಮತದಾನ ನಡೆಯುತ್ತಿತ್ತು. ಇದನ್ನು ಪತ್ತೆ ಹಚ್ಚಿದ ಪೊಲೀಸರು ಮಹಿಳೆಯರನ್ನು ಬಂಧಿಸಿದ್ದಾರೆ.. ಈ ವಿಡಿಯೋವನ್ನು ಶೇರ್‌ ಮಾಡಿ ಎಂಬ ತಲೆ ಬರಹದೊಂದಿದೆ ವೈರಲ್‌ ಆಗಿರುವ ವಿಡಿಯೋವನ್ನು ವ್ಯಾಪಕವಾಗಿ ಶೇರ್‌ ಮಾಡಲಾಗುತ್ತಿದೆ. ಹೀಗೆ ತಲೆ ಬರಹದೊಂದಿಗೆ ವೈರಲ್‌ ಆಗಿರುವ ವಿಡಿಯೋ 14 ಫೆಬ್ರುವರಿ 2022ರದ್ದಾಗಿದೆ. ಉತ್ತರ ಪ್ರದೇಶದ ರಾಂಪುರದಲ್ಲಿರುವ ಸರ್ಕಾರಿ ರಾಝಾ ಪಿಜಿ ಕಾಲೇಜಿನಲ್ಲಿರುವ ಬೂತ್‌ನಲ್ಲಿ ಈ ಇಬ್ಬರು ಮಹಿಳೆಯರು ನಕಲಿ ಮತ ಚಲಾಯಿಸಲು ಪ್ರಯತ್ನಿಸಿದಾಗ ಬಂಧಿಸಲಾಗಿದೆ. ಇಬ್ಬರು ಮಹಿಳೆಯರಲ್ಲಿ ಒಬ್ಬರು ನಕಲಿ…

Read More

Fact Check | ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸೋಲಿಸಲು ಬಿಜೆಪಿ ಬೆಂಬಲಿಸುತ್ತೇನೆಂದು ಮಾಯಾವತಿ ಹೇಳಿಲ್ಲ

“ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಅನ್ನು ಸೋಲಿಸಲು ಬಿಜೆಪಿ ಸೇರಿದಂತೆ ನಾನು ಯಾವ ಪಕ್ಷಕ್ಕೆ ಬೇಕಾದರೂ ಬೆಂಬಲವನ್ನು ನೀಡುತ್ತೇನೆ ಎಂದು ಬಹುಜನ ಸಮಾಜ ಪಾರ್ಟಿಯ ಮುಖ್ಯಸ್ಥೆ ಮಾಯಾವತಿ ಅವರು ಹೇಳಿಕೆ ನೀಡಿದ್ದಾರೆ” ಎಂಬ ಮಾಯಾವತಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ ಸಾಕಷ್ಟು ಮಂದಿ ಇದನ್ನೇ ನಿಜವೆಂದು ನಂಬಿ ಬಿಎಸ್‌ಪಿ ಮಾಯಾವತಿಯವರು ಬಿಜೆಪಿಯ ಪರವಾಗಿ ಈ ಚುನಾವಣೆಯಲ್ಲಿ ಪರೋಕ್ಷವಾಗಿ ವಾಲಿಕೊಂಡಿದ್ದಾರೆ ಎಂಬ ತಲೆ ಬರಹದೊಂದಿಗೆ ವಿವಿಧ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ವಿಡಿಯೋ ಕುರಿತು ಸತ್ಯ ಶೋಧನೆಯನ್ನ ನಡೆಸಿದಾಗ…

Read More