Fact Check | 2007ರ T-20 ವಿಶ್ವಕಪ್ ವಿಜೇತ ಭಾರತ ತಂಡವನ್ನು ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಭೇಟಿ ಮಾಡಿಲ್ಲವೆಂಬುದು ಸುಳ್ಳು

“ಭಾರತ ಕ್ರಿಕೆಟ್ ತಂಡ 2007ರಲ್ಲಿ ವಿಶ್ವಕಪ್ ಗೆದ್ದಿತ್ತು. ಮಹೇಂದ್ರ ಸಿಂಗ್ ಧೋನಿ ನಾಯಕರಾಗಿದ್ದರು ಮತ್ತು ರಾಜೀವ್ ಶುಕ್ಲಾ ಅವರು ಬಿಸಿಸಿಐನ ಹಂಗಾಮಿ ಅಧ್ಯಕ್ಷರಾಗಿದ್ದರು. ದೇಶದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಬದಲಿಗೆ ಸೂಪರ್ ಪಿಎಂ ಸೋನಿಯಾ ಗಾಂಧಿ ಅವರೊಂದಿಗೆ ಅಂದು ಫೋಟೋ ಶೂಟ್ ಮಾಡಿಸಲಾಗಿದೆ. ಆಗ ಯಾವ ಪತ್ರಕರ್ತರೂ ಭಾರತದ ಕ್ರಿಕೆಟ್ ತಂಡದ ಜೊತೆ ಫೋಟೋ ಶೂಟ್ ಮಾಡಿಕೊಳ್ಳುತ್ತಿರುವ ಸೋನಿಯಾ ಗಾಂಧಿ ಯಾರು ಎಂಬ ಪ್ರಶ್ನೆಯನ್ನು ಎತ್ತಲಿಲ್ಲ. ತುಚ್ಛವಾದ ಕಾಂಗ್ರೆಸ್ ಭಾರತದಲ್ಲಿ ಎಷ್ಟು ಸರ್ವಾಧಿಕಾರವನ್ನು ತೋರಿಸಿದೆ ಮತ್ತು ಅದು…

Read More

Fact Check | ಸಂಸತ್‌ನಲ್ಲಿ ಮಹುವಾ ಮೊಯಿತ್ರಾ, ಸಯೋನಿ ಘೋಷ್ ನಿದ್ದೆ ಮಾಡಿದರು ಎಂಬುದು ಎಡಿಟೆಡ್‌ ವಿಡಿಯೋ

ಕೃಷ್ಣಾನಗರ ಸಂಸದೆ ಮಹುವಾ ಮೊಯಿತ್ರಾ ಮತ್ತು ಜಾದವ್‌ಪುರ ಸಂಸದೆ ಸಯೋನಿ ಘೋಷ್ ಅವರು ಸಂಸತ್ತಿನ ಅಧಿವೇಶನದಲ್ಲಿ ನಿದ್ರಿಸುತ್ತಿರುವಂತೆ ತೋರಿಸುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ವ್ಯಂಗ್ಯವಾಗಿ ಹಂಚಿಕೊಳ್ಳುತ್ತಿದ್ದು, ಹಲವು ನೆಟ್ಟಿಗರು “ಈ ಇಬ್ಬರು ಸಂಸದೆಯರು ರಾತ್ರಿಯಿಡೀ ಅವರ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳ ಬಗ್ಗೆ ಆಳವಾದ ಚಿಂತನೆಯಲ್ಲಿದ್ದರು ಎಂದು ಕಾಣುತ್ತದೆ. ಹಾಗಾಗಿ ಸಂಸತ್ತಿನಲ್ಲೇ ಗಾಢವಾದ ನಿದ್ರೆಗೆ ಜಾರಿದ್ದಾರೆ” ಎಂದು ಬರೆದುಕೊಂಡು ವೈರಲ್‌ ವಿಡಿಯೋವನ್ನು ಶೇರ್‌ ಮಾಡುತ್ತಿದ್ದಾರೆ. TMC MP in Parliament…

Read More

Fact Check | ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್‌ಗೆ ಗೌರವ ಸಲ್ಲಿಸಿದ ಫೋಟೋ ಎಡಿಟೆಡ್‌ ಆಗಿದೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ನಾಯಕರು ಟಿಪ್ಪು ಸುಲ್ತಾನ್‌ಗೆ ಗೌರವ ಸಲ್ಲಿಸುತ್ತಿರುವ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ಈ ಫೋಟೋಗಳಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್‌ ಫೋಟೋಗೆ ತಲೆಬಾಗಿ ನಮಸ್ಕರಿಸುವುದು ಮತ್ತು ಹಲವು ಗಣ್ಯರನ್ನು ಟಿಪ್ಪು ಸುಲ್ತಾನ್‌ ಭಾವಚಿತ್ರ ಇರುವ ಜಾಗದಲ್ಲಿ ಭೆಟಿಯಾಗುವುದನ್ನು ನೋಡಬಹುದಾಗಿದೆ. ಹಾಗಾಗಿ ಈ ಫೋಟೋ ವೈರಲ್‌ ಕೂಡ ಆಗುತ್ತಿದೆ.  ಇನ್ನು ಹೀಗೆ ಹಂಚಿಕೊಳ್ಳಲಾಗುತ್ತಿರುವ ಬಹುತೇ ಫೊಟೋಗಳು ನೋಡಲು ನಿಜವಾದ ಫೋಟೋದಂತೆ ಕಂಡು ಬಂದಿರುವುದರಿಂದ…

Read More

Fact Check | ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿಯಲ್ಲಿ ನಡೆದ ಕೊಲೆಗೆ ಮುಸ್ಲಿಂ ಯುವಕ ಕಾರಣ ಎಂಬುದು ಸುಳ್ಳು

ಸಾಮಾಜಿಕಿ ಜಾಲತಾಣದಲ್ಲಿ ” ಸಲೀಂ ಎಂಬ ಮುಸ್ಲಿಂ ವ್ಯಕ್ತಿ ಆರತಿ ಎಂಬ ಹಿಂದೂ ಯುವತಿಯನ್ನು ಹಾಡಹಗಲೇ ಸಾರ್ವಜನಿಕರ ಎದುರಿನಲ್ಲೇ ಕೊಂದಿದ್ದಾನೆ. ಅವನ ಪ್ರೀತಿಯ ಪ್ರಸ್ತಾಪವನ್ನು ಆಕೆ ಈ ಹಿಂದೆ ತಿರಸ್ಕರಿಸಿದ್ದಳು. ಇದರ ಜೊತೆಗೆ ಆಕೆಗೆ ಬೇರೋಬ್ಬರೊಂದಿಗೆ ಅಕ್ರಮ ಸಂಬಂಧವಿದೆ ಎಂದು ಭಾವಿಸಿ, ಈತ ಈ ಕೃತ್ಯವನ್ನು ಎಸಗಿದ್ದಾನೆ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಈ ಕೊಲೆಯ ವಿಡಿಯೋ ಅಂತರ್ಜಾಲದಲ್ಲಿ ಬಹುದೊಡ್ಡ ಚರ್ಚೆಯನ್ನು ಕೂಡ ಹುಟ್ಟು ಹಾಕಿದೆ. ಇದಕ್ಕೆ ಕೋಮು ಆಯಾಮವನ್ನು ಕೊಡಲು ಹಲವರು ಪ್ರಯತ್ನಿಸುತ್ತಿದ್ದು,…

Read More

Fact Check | IRCTC ಯ ಹೊಸ ನಿಯಮದ ಪ್ರಕಾರ ಉಪನಾಮ ಹೊಂದಿರದ ಕುಟುಂಬ ಸದಸ್ಯರಿಗೆ ಟಿಕೆಟ್‌ ಬುಕ್‌ ಮಾಡಲಾಗುವುದಿಲ್ಲ ಎಂಬುದು ಸುಳ್ಳು

IRCTC ಯಿಂದ ಹೊಸ ಬುಕಿಂಗ್ ನಿಯಮದ ಕುರಿತು ಸಾಮಾಜಿಕ ಜಾಲತಾಣದಲ್ಲಿನ ಸುದ್ದಿಯೊಂದು ಹರಿದಾಡುತ್ತಿದೆ. ಅದರ ಪ್ರಕಾರ “ಸಾರ್ವಜನಿಕರು ವೈಯಕ್ತಿಕ IRCTC ಖಾತೆಯನ್ನು ಬಳಸಿಕೊಂಡು, ರಕ್ತ ಸಂಬಂಧಿಗಳಿಗೆ ಅಥವಾ ಅದೇ ಉಪನಾಮ ಹೊಂದಿರುವವರಿಗೆ ಮಾತ್ರ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಸ್ನೇಹಿತರು ಅಥವಾ ಇತರರಿಗಾಗಿ ಟಿಕೆಟ್‌ಗಳನ್ನು ಕಾಯ್ದಿರಿಸುವುದರಿಂದ 10,000 ರೂ.ಗಳ ಭಾರಿ ದಂಡ, 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಎರಡಕ್ಕೂ ಕಾರಣವಾಗಬಹುದು.” ಎಂದು ಹಂಚಿಕೊಳ್ಳಲಾಗುತ್ತಿದೆ. New IRCTC Rule: Booking Train Tickets for Friends Could Cost…

Read More

Fact Check | ಮಸೀದಿಯೊಂದು ಬಾಂಬ್‌ ತಯಾರಿಕೆಯ ತರಬೇತಿ ಸಂದರ್ಭದಲ್ಲಿ ಕುಸಿದಿದೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಬಾಂಬ್‌ ತಯಾರಿಕೆಗೆ ಮಸೀದಿಯೊಂದರಲ್ಲಿ ತರಬೇತಿಯನ್ನು ನೀಡಲಾಗುತ್ತಿತ್ತು. ಈ ವೇಳೆ ಅಲ್ಲಿ ಏನೋ ಲೋಪ ನಡೆದು ಆ ಮಸೀದಿ ಕುಸಿದು ಬಿದ್ದಿದೆ. ಇದು ಬಾಂಬ್‌ ತಯಾರಿಕೆಯ ತರಬೇತಿಯ ಪರಿಣಾಮ. ಇದೇ ರೀತಿ ದೇಶದ ಹಲವು ಮಸೀದಿಗಳಲ್ಲಿ ಬಾಂಬ್‌ ತಯಾರಿಕೆಗೆ ತರಬೇತಿಯನ್ನು ನೀಡಲಾಗುತ್ತಿದೆ. ಈ ಬಗ್ಗೆ ಎಲ್ಲರಿಗೂ ಶೇರ್‌ ಮಾಡಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದವರು ಇದು ನಿಜವಿರಬಹುದು ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಾಕಷ್ಟು…

Read More

Fact Check | ಮುಸ್ಲಿಂ ವ್ಯಕ್ತಿಯೊಬ್ಬ ಕೆಟ್ಟ ಪಾನಿಪುರಿ ಮಾಡುತ್ತಿದ್ದಾನೆ ಎಂಬುದು ನಾಟಕೀಯ ವಿಡಿಯೋ

“ಈ ವಿಡಿಯೋ ನೋಡಿ ಇಲ್ಲೋಬ್ಬ ವ್ಯಕ್ತಿ ಹಲಾಲ್‌ ಪಾನಿಪುರಿಯನ್ನು ಮಾರಾಟ ಮಾಡುತ್ತಿದ್ದಾನೆ. ಈತ ಮೊದಲು ಪಾನಿಪುರಿಗೆ ತಯಾರಿಸಲಾದ ಮಾಸಾಲೆ ನೀರನ್ನು ಸ್ಪೂನ್‌ನಲ್ಲಿ ಕುಡಿಯುತ್ತಾನೆ. ಬಳಿಕ ಅದು ಸ್ವಾದ ಆತನಿಗೆ ಹಿಡಿಸುವುದಿಲ್ಲ ಮತ್ತೆ ಆತ ಕುಡಿದ ಚಮಚವನ್ನು ಮಸಾಲೆ ನೀರಿಗೆ ಹಾಕುತ್ತಾನೆ. ಬಳಿಕ ಕೈಯಲ್ಲಿಯೇ ಆ ಮಸಾಲೆ ನೀರನ್ನು ತಿರುಗಿಸಿ, ಸ್ವಲ್ಪ ಸಮಯದ ಬಳಿಕ ತನ್ನ ಬೆವರನ್ನೂ ಆ ನೀರಿಗೆ ಬೆರಸುತ್ತಾನೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ವಿಡಿಯೋವನ್ನು ನೋಡಿದ ಹಲವರು ಇದನ್ನು ತಮ್ಮ…

Read More

Fact Check | ಪ್ರಧಾನಿ ಮೋದಿ 2023ರ ಆಸ್ಟ್ರೇಲಿಯಾ ಭೇಟಿಯ ವಿಡಿಯೋವನ್ನು ಇಟಲಿಯದ್ದು ಎಂದು ತಪ್ಪಾಗಿ ಹಂಚಿಕೆ

“ಈ ವಿಡಿಯೋ ನೋಡಿ ಇದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯ ಅಜ್ಜಿಯ ಊರಿನಲ್ಲಿ ಪ್ರಧಾನಿ ಮೋದಿಗೆ ಸಿಕ್ಕ ಭವ್ಯವಾದ ಸ್ವಾಗತ. ಇದನ್ನು ಕಾಂಗ್ರೆಸ್‌ನ ಗುಲಾಮರಿಗೆ ಶೇರ್ ಮಾಡಿ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿರುದ್ಧ ಹೀನ ಮತ್ತು ತುಚ್ಚವಾಗಿ ಪ್ರಧಾನಿ ಮೋದಿಗೆ ಸ್ವಾಗತ ಕೋರುತ್ತಿರುವಂತ ವಿಡಿಯೋದೊಂದಿಗೆ ಪೋಸ್ಟ್ ಮಾಡಲಾಗುತ್ತಿದೆ. ಈ ಪೋಸ್ಟ್ ನೋಡಿದ ಹಲವರು ಇತ್ತೀಚೆಗೆ ಪ್ರಧಾನಿ ಮೋದಿ ಇಟಲಿಯಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಿದ್ದ ವೇಳೆ, ಅವರಿಗೆ ಈ ಸ್ವಾಗತ ನೀಡಲಾಗಿದೆ ಎಂದು ನಂಬಿ,…

Read More

Fact Check | ಚುನಾವಣ ಪೂರ್ವ ಭರವಸೆ ಈಡೇರಿಸಲಾಗದಕ್ಕೆ ರಾಹುಲ್‌ ಗಾಂಧಿ ಕ್ಷಮೆ ಕೇಳಿದ್ದಾರೆಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಂಗಳಿಗೆ 8,500 ಹಣವನ್ನು ಮನೆಯ ಮಹಿಳಾ ಮುಖ್ಯಸ್ಥೆಗೆ ಕೊಡುವುದಾಗಿ ಭರವಸೆಯನ್ನು ನೀಡಿದ್ದರು. ಯುವಕರಿಗೆ ತಿಂಗಳಿಗೆ 1 ಲಕ್ಷದ ವೇತನ ಹಣವನ್ನು ನೀಡುವುದಾಗಿ ಚುನಾವಣಾ ಭರವಸೆಯನ್ನು ನೀಡಿದ್ದರು. ಇದಕ್ಕಾಗಿ ಈಗ ಅವರು ಕ್ಷಮೆಯನ್ನು ಕೇಳಿದ್ದಾರೆ. ಕಾಂಗ್ರೆಸ್ ನೀಡಿದ ಸುಳ್ಳು ಭರವಸೆಯಿಂದಾಗಿ 99 ಸ್ಥಾನಗಳನ್ನು ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೆ ಕಡಿಮೆ ಬಲದೊಂದಿಗೆ ಬಿಜೆಪಿ ಮೂರನೇ ಅವಧಿಗೆ ಮರಳುವಂತಾಯಿತು.” ಎಂಬ ಬರಹದೊಂದಿಗೆ ವ್ಯಾಪಕವಾಗಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತದೆ Rahul Gandhi has…

Read More

Fact Check | ಗ್ಯಾರಂಟಿ ಯೋಜನೆಯ ಹಣ ಕೇಳಿದ ಮಹಿಳೆಯನ್ನು ದಿಗ್ವಿಜಯ ಸಿಂಗ್‌ ಓಡಿಸಿದ್ದಾರೆ ಎಂಬುದು ಸುಳ್ಳು

“ಗ್ಯಾರಂಟಿ ಯೋಜನೆಯ ಹಣ ಕೇಳಲು ಬಂದ ಮಹಿಳೆಯೊಬ್ಬರನ್ನು ಕಾಂಗ್ರೆಸ್‌ ನಾಯಕ ಹಾಗೂ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್‌ ಅವರು ನಿಂದಿಸಿ ಕಳುಹಿಸಿದ್ದಾರೆ” ಎಂಬ ಬರಹದೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. जब एक महिला कांग्रेस MP के पूर्व मुख्यमंत्री दिग्विजय सिंह के पास राहुल गांधी के गारंटी कार्ड के खटाखट…

Read More