ಯುಸಿಸಿ ಬೆಂಬಲಿಸಲು ಮಿಸ್‌ಕಾಲ್ ಕೊಡಿ ಎಂದು ಪ್ರಧಾನಿ ಮೋದಿಯವರು ದೇಶಕ್ಕೆ ಕರೆ ಕೊಟ್ಟಿಲ್ಲ

ಅನೇಕ ದಿನಗಳಿಂದ ಏಕರೂಪ ನಾಗರಿಕ ನೀತಿಸಂಹಿತೆಯ ಕುರಿತು ಪರವಿರೋಧ ಚರ್ಚೆಗಳು ನಡೆಯುತ್ತಿವೆ. ಏಕರೂಪ ನಾಗರಿಕ ನೀತಿಸಂಹಿತೆ (ಸಮಾನ ನಾಗರಿಕ ಸಂಹಿತೆ ಎಂದೂ ಕರೆಯಲಾಗುತ್ತದೆ)ಯು ಭಾರತದಲ್ಲಿ ಅಳವಡಿಸಬೇಕೆಂದಿರುವ ಪೌರ/ನಾಗರಿಕ ಕಾನೂನು ಸಂಹಿತೆಯ ಕಲ್ಪನೆಯಾಗಿದೆ. ಏಕರೂಪ ನಾಗರಿಕ ನೀತಿಸಂಹಿತೆ ಎಂಬುದು ಜನರು ಒಳಪಡುವ ಧರ್ಮ, ಜಾತಿ ಮತ್ತು ಜನಾಂಗ/ಬುಡಕಟ್ಟುಗಳ ಹೊರತಾಗಿ ಎಲ್ಲಾ ಜನರಿಗೆ ಅನ್ವಯಿಸುವ ಒಂದೇ ವರ್ಗದ ಜಾತ್ಯಾತೀತ ಪೌರ ಕಾನೂನುಗಳ ಮೂಲಕ ಆಡಳಿತ ನಡೆಸುವುದು. ಈ ಕಾನೂನು ತಮ್ಮ ಧರ್ಮ ಅಥವಾ ಜಾತಿ ಅಥವಾ ಜನಾಂಗ/ಬುಡಕಟ್ಟುಗಳ ಮೇಲೆ ಆಧಾರಿತವಾಗಿ ಪ್ರತ್ಯೇಕ…

Read More