Fact Check: ಕೆನರಾ ಬ್ಯಾಂಕ್ ಮುಂದೆ ಸೇರಿ ಕೆನಡಾ ವಿರುದ್ಧ ಬಿಜೆಪಿ ಪ್ರತಿಭಟಿಸಿದೆ ಎಂದು ಎಡಿಟೆಡ್‌ ಪೋಟೊ ಹಂಚಿಕೆ

ಉತ್ತರ ಅಮೆರಿಕಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ಭೀಕರ ರಾಜತಾಂತ್ರಿಕ ಕಲಹ ಉಂಟಾಗಿದೆ. ಈ ನಡುವೆ ಕೆನರಾ ಬ್ಯಾಂಕ್ ಶಾಖೆಯ ಹೊರಗೆ ಕೆನಡಾ ವಿರುದ್ದ ಬಿಜೆಪಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ ಎಂಬ ಟ್ರೋಲ್ ಪೋಸ್ಟರ್‌ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್‌ನ ಕೆಲವು ಬಳಕೆದಾರರು “ಕೆನರಾ ಬ್ಯಾಂಕ್ ಮುಂದೆ ಸೇರಿ ಕೆನಡಾ ವಿರುದ್ಧವೇ ಪ್ರತಿಭಟನೆ ನಡೆಸಿದ್ದಾರೆ” ಎಂದು ಬಿಜೆಪಿ ಕಾರ್ಯಕರ್ತರನ್ನು ಅಪಹಾಸ್ಯ ಮಾಡಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌…

Read More

Fact Check : ದುರ್ಗಾ ಮಾತಾ ಆರತಿಯ ವೇಳೆ ಇಸ್ಲಾಮೀ ಘೋಷಣೆ ಕೂಗಲಾಗಿದೆ ಎಂದು ಟಿಎಂಸಿ ರ್ಯಾಲಿಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಕಾರ್ಯಕ್ರಮದ ಸಂದರ್ಭದಲ್ಲಿ ದುರ್ಗಾ ಮಾತೆಯ ಆರತಿಯ ವೇಳೇ, ಗಾಯಕನೊಬ್ಬ ಇಸ್ಲಾಮೀ ಘೋಷಣೆ ಕೂಗಿದ್ದಾನೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. “ಇದು ಪಶ್ಚಿಮ ಬಂಗಾಳ, ನವರಾತ್ರಿಯಲ್ಲಿ ನಿಮ್ಮದೇ ಸ್ಥಳದಲ್ಲಿ ಮಾತಾ ರಾಣಿಯ ಆರತಿಯನ್ನು ಈ ರೀತಿಯಲ್ಲಿ (ಇಸ್ಲಾಮಿ ಘೋಷಣೆಯೊಂದಿಗೆ) ಮಾಡಬೇಕೆಂದು ನೀವು ಬಯಸಿದರೆ, ನೀವು ಬಿಜೆಪಿಯನ್ನು ಹೊರತುಪಡಿಸಿ ಯಾರಿಗಾದರೂ ಮತ ಹಾಕಬಹುದು. ತೀರ್ಮಾನ ನಿಮ್ಮದು” ಎಂಬ ಹಿಂದಿಯಲ್ಲಿ ಸಂದೇಶ ದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. (*ये पश्चिम बंगाल है, यदि आप भी…

Read More

Fact Check | ಮಣಿಪುರದಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿಯಿಂದ ಕ್ರಿಶ್ಚಿಯನ್ ಮಹಿಳೆಯ ಮೇಲೆ ಹಲ್ಲೆ ನಡೆದಿಲ್ಲ

ಸಾಮಾಜಿಕ ಜಾಲತಾಣದಲ್ಲಿ “ಮಣಿಪುರದಲ್ಲಿನ ಗಲಭೆಯಲ್ಲಿ ಕ್ರೈಸ್ತರ ಮಾರಣಹೋಮ ನಡೆಯುತ್ತಿದೆ. ಅವರ ರಕ್ಷಣೆಗೆ ಯಾರು ಧಾವಿಸುತ್ತಿಲ್ಲ. ಈಗಾಗಲೇ ಸಾವಿರಾರು ಕ್ರೈಸ್ತರು ಮಣಿಪುರದಲ್ಲಿನ ಸಶಸ್ತ್ರ ಪಡೆಗಳ ದಾಳಿಯಿಂದ ಸಾವನ್ನಪ್ಪಿದ್ದಾರೆ. ಈಗ ಅಮಾಯಕ ಕ್ರಿಶ್ಚಿಯನ್ ಮಹಿಳೆಯೊಬ್ಬರನ್ನು, ಇದೇ ಸಶಸ್ತ್ರ ಪಡೆ ಅಮಾನುಷವಾಗಿ ಹಲ್ಲೆ ನಡೆಸಿ ಕೊಂದಿದ್ದಾರೆ. ಈ‌ ಮೂಲಕ ಈಗ ಅಲ್ಲಿ ಉಳಿದಿರುವ ಕೆಲವೇ ಕೆಲವು ಕ್ರೈಸ್ತರಲ್ಲೂ ಭಯದ ವಾತಾವರಣವನ್ನು ನಿರ್ಮಿಸಲು ಮುಂದಾಗುತ್ತಿದ್ದಾರೆ. ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರನ್ನು ಥಳಿಸುತ್ತಿರುವುದು ಮತ್ತು ತನ್ನನ್ನು ಹೊಡೆಯದಂತೆ ಮಹಿಳೆ ಅಂಗಲಾಚುತ್ತಿರುವುದನ್ನು…

Read More

Fact Check | ಬಾಂಗ್ಲಾದಲ್ಲಿ ದುರ್ಗಾ ಪೂಜೆ ವಿರೋಧಿಸಿ ಮುಸ್ಲಿಮರಿಂದ ದೇವಸ್ಥಾನದ ಒಳಗೆ ನಮಾಜ್ ಎಂಬುದು ಎಡಿಟೆಡ್‌ ಫೋಟೋ

“ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಭೀಕರ ದಾಳಿಯನ್ನು ಅಲ್ಲಿನ ಮೂಲಭೂತವಾದಿ ಮುಸಲ್ಮಾನರು ನಡೆಸುತ್ತಿದ್ದಾರೆ. ಈಗ ದಸರಾ ಹಬ್ಬದ ಸಂದರ್ಭದಲ್ಲಿ ಯಾವುದೇ ಹಿಂದೂಗಳು ದುರ್ಗ ಪೂಜೆ ನಡೆಸದಂತೆ ನೋಡಿಕೊಳ್ಳುತ್ತಿದ್ದಾರೆ. ಇದೀಗ ಅಲ್ಲಿನ ಕೆಲ ಮುಸಲ್ಮಾನರು ದುರ್ಗಾ ಮಾತೆಯ ದೇವಸ್ಥಾನಕ್ಕೆ ನುಗ್ಗಿ ವಿಗ್ರಹದ ಮುಂದೆ ನಮಾಜ್‌ ಮಾಡಿ ಪ್ರಾರ್ಥನೆ ಮಾಡಿದ್ದಾರೆ. ಹೀಗೆ ಅಲ್ಲಿನ ಹಿಂದೂಗಳು ಈ ರೀತಿಯ ಕಿರುಕುಳವನ್ನು ಪ್ರತಿನಿತ್ಯ ಅನುಭವಿಸುತ್ತಿದ್ದಾರೆ” ಎಂದು ಪೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋದಲ್ಲಿ ಕೂಡ ಮುಸಲ್ಮಾನರು ದುರ್ಗಾ ದೇವಿಯ ವಿಗ್ರಹದ ಮುಂದೆ…

Read More
ದುರ್ಗಾ ಮಾತೆ

Fact Check: ಹೈದರಾಬಾದ್‌ನಲ್ಲಿ ದುರ್ಗಾ ಮಾತೆಯ ವಿಗ್ರಹ ಧ್ವಂಸಗೊಳಿಸಿರುವವನು ಮಾನಸಿಕ ಅಸ್ವಸ್ತ. ಇದಕ್ಕೆ ಯಾವುದೇ ಕೋಮು ಆಯಾಮವಿಲ್ಲ

ಕೆಲವು ದಿನಗಳ ಹಿಂದೆಯಷ್ಟೇ ದಸರ ಹಬ್ಬ ಮತ್ತು ದುರ್ಗಾ ಪೂಜೆ ಮುಗಿಸಿದೆ. ಆದರೆ ಈಗ ದುರ್ಗಾ ದೇವಿಯ ಮುರಿದ ವಿಗ್ರಹ ಮತ್ತು ಪೂಜೆಯ ಸಾಮಾನುಗಳು ದೇವಾಲಯದ ತುಂಬಾ ಹರಡಿಕೊಂಡಿರುವುದನ್ನು ತೋರಿಸುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋವನ್ನು ತೆಲಂಗಾಣದ ಕಾಂಗ್ರೆಸ್‌ ಸರ್ಕಾರವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಲಾಗುತ್ತಿದೆ. ಈ ವಿಡಿಯೋವನ್ನು”ಅತಿರೇಕ: ಹೈದರಾಬಾದ್‌ನಲ್ಲಿ ದುರ್ಗಾ ಮಾತೆಯ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ. ಪಾಕಿಸ್ತಾನಿ ಹೈದರಾಬಾದ್ ಅಲ್ಲ, ಕಾಂಗ್ರೆಸ್ ಆಡಳಿತದ ಭಾರತೀಯ ಹೈದರಾಬಾದ್” ಎಂದು ಕೆಲವು ಬಿಜೆಪಿ ಬೆಂಬಲಿಗರು ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟ್ ಅನ್ನು…

Read More
ಅಶ್ವಿನಿ ವೈಷ್ಣವ್

Fact Check: ಭಾರತದ್ದು ಎಂದು ಪೆರು ರೈಲಿನ ವಿಡಿಯೋ ಹಂಚಿಕೊಂಡ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಸೆಪ್ಟೆಂಬರ್ 27, ವಿಶ್ವ ಪ್ರವಾಸೋದ್ಯಮ ದಿನದಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. “ವಂದೇ ಭಾರತ್, ಅಮೃತ್ ಭಾರತ್ ಮತ್ತು ನಮೋ ಭಾರತ್ ರೈಲುಗಳ ತ್ರಿವೇಣಿ” ಎಂದು ವಿಡಿಯೋ ಜೊತೆಗೆ ಶೀರ್ಷಿಕೆ ಬರೆದುಕೊಂಡಿದ್ದರು. ವಿಡಿಯೋದಲ್ಲಿ ವಿಸ್ಟಾ ಡೋಮ್ ರೈಲೊಂದನ್ನು ತೋರಿಸಲಾಗಿತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈಲ್ವೆ ಇಲಾಖೆಯನ್ನು ಅಭಿವೃದ್ದಿ ಮಾಡುತ್ತಿದೆ ಎಂಬ ಸಂದೇಶವನ್ನು ವಿಡಿಯೋ ಹೊಂದಿತ್ತು. ಸಚಿವರು ವಿಡಿಯೋ ಪೋಸ್ಟ್ ಮಾಡಿದ್ದ ಸ್ವಲ್ಪ ಹೊತ್ತಿನಲ್ಲೇ ಅದನ್ನು…

Read More

Fact Check | ಡಿಸ್ಕೌಂಟ್ ಜಿಹಾದ್ ಎಂಬುದು ಸುಳ್ಳು, ಇದು ತೆಲಂಗಾಣದ ಹಳೆಯ ಬ್ಯಾನರ್

“ಹಿಂದೂ ಮಹಿಳೆಯರೊಂದಿಗೆ ಶಾಪಿಂಗ್‌ಗೆ ಬರುವ ಮುಸ್ಲಿಂ ಪುರುಷರಿಗೆ ಶೇಕಡಾ 10 ರಿಂದ 50 ರಷ್ಟು ರಿಯಾಯಿತಿ ನೀಡಲಾಗುವುದು. ಇದು ಕರ್ನಾಟಕದ ಮಾಲ್‌ವೊಂದರಲ್ಲಿ ಅಳವಡಿಸಿದ್ದ ಬ್ಯಾನರ್‌ನಲ್ಲಿ ನೀಡಲಾದ ವಿಶೇಷ ಆಫರ್‌ನ ಮಾಹಿತಿ. ಹೀಗೆ ಅವರು ಬಹಿರಂಗವಾಗಿಯೇ ಲವ್‌ ಜಿಹಾದ್‌ಗೆ ಕರ್ನಾಟಕದಲ್ಲಿ ಕರೆ ನೀಡಿದ್ದಾರೆ. ಇದು ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಅವರಿಗೆ ನೀಡಿದ ಬೆಂಬಲದ ಪರಿಣಾಮ. ಇಂದು ಹಿಂದೂಗಳು ಅವರ ಹೆಣ್ಣು ಮಕ್ಕಳನ್ನು ಅವರೇ ರಕ್ಷಿಸಿಕೊಳ್ಳಬೇಕಾಗಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ध्यान से देखो और आँखें…

Read More

Fact Check | ಪವನ್ ಕಲ್ಯಾಣ್ ವಿರುದ್ಧದ ಪ್ರತಿಭಟನೆಯ ಈ ವಿಡಿಯೋ ಹಳೆಯದು

ಸಾಮಾಜಿಕ ಜಾಲತಾಣದಲ್ಲಿ “ತಿರುಮಲ ತಿರುಪತಿ ದೇವಸ್ಥಾನದ ಲಡ್ಡುಗಳ ವಿವಾದಕ್ಕೆ ಸಂಬಂಧಿಸಿದಂತೆ  ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಅವರ ಬ್ಯಾನರ್ ಅನ್ನು ಹಿಡಿದು ಅದಕ್ಕೆ ಚಪ್ಪಲಿಯಲ್ಲಿ ಹೊಡೆದು ಜನ ಪ್ರತಿಭಟಿಸಿದ್ದಾರೆ. ಇದು ಡಿಸಿಎಂ ಪವನ್‌ ಕಲ್ಯಾಣ್‌ಗೆ ಒಂದು ಪಾಠವಾಗಬೇಕಿದೆ. ದೇವರ ವಿಚಾರದಲ್ಲಿ ರಾಜಕಾರಣ ಮಾಡುವ ಇಂತಹ ರಾಜಕಾರಣಿಗಳಿಗೆ ಮುಂದೆ ಜನ ಇದೇ ರೀತಿ ಮಾಡಲಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Vizag steel plant gurinchi 🤣🤣🤣 pic.twitter.com/d3l5Km7ooa — khairathabadhero (@kiarathabadhero) October…

Read More

Fact Check | ವೈರಲ್ ಆಗಿರುವ ಈ ಚಿತ್ರ ಎಪಿಜೆ ಅಬ್ದುಲ್ ಕಲಾಂ ಅವರ ಬಾಲ್ಯದಲ್ಲ

ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಮಹಿಳೆ ಮತ್ತು ಮಗುವೊಂದು ಕಾಣಿಸಿಕೊಂಡಿದ್ದು, ಇದನ್ನು ಬಳಸಿಕೊಂಡು ಸಾಕಷ್ಟು ಮಂದಿ ಈ ವೈರಲ್ ಫೋಟೋ ಎಪಿಜೆ ಅಬ್ದುಲ್ ಕಲಾಂ ಅವರ ಬಾಲ್ಯದ್ದು ಎಂದು ಹಂಚಿಕೊಳ್ಳುತ್ತಿದ್ದಾರೆ. ಬಹಳ ದಿನಗಳ ಪರಿಶ್ರಮದ ನಂತರ ಎಪಿಜೆ ಅಬ್ದುಲ್ ಕಲಾಂ ಅವರ ಈ ಫೋಟೋ ಲಭ್ಯವಾಗಿದೆ ಎಂದು ಹಲವರು ಬರೆದುಕೊಂಡಿದ್ದಾರೆ. ಹೀಗಾಗಿ ಈ ಫೋಟೋ ಸಾಕಷ್ಟು ವೈರಲ್‌ ಕೂಡ ಆಗಿದೆ ಸಂಚಲನ ಮೂಡಿಸಿರುವ ಈ ಫೋಟೋ 80-90 ರ ದಶಕದಲ್ಲಿ ತೆಗೆದ ಚಿತ್ರವಾಗಿದೆ…

Read More
ತಾಲಿಬಾನ್

Fact Check: RSS, BJP ಬಗ್ಗೆ ಪಾಕಿಸ್ತಾನದ ಇಸ್ಲಾಮಿಕ್ ಬೋಧಕ ಮಾತನಾಡಿದ್ದಾರೆಯೇ ಹೊರತು ತಾಲಿಬಾನ್ ಪ್ರಧಾನ ಕಾರ್ಯದರ್ಶಿ ಅಲ್ಲ

ಸಾಂಪ್ರದಾಯಿಕ ಇಸ್ಲಾಮಿಕ್ ಉಡುಪನ್ನು ಧರಿಸಿದ ವ್ಯಕ್ತಿಯೊಬ್ಬ ಆರ್‌ಎಸ್ಎಸ್, ಬಿಜೆಪಿ ಮತ್ತು ಮರಾಠರ ಬಗ್ಗೆ ಮಾತನಾಡುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ವೀಡಿಯೋದಲ್ಲಿರುವ ವ್ಯಕ್ತಿ ತಾಲಿಬಾನ್ ಪ್ರಧಾನ ಕಾರ್ಯದರ್ಶಿ ಎಂದು ಹೇಳಲಾಗುತ್ತಿದೆ. “ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ಯಾವುದೇ ದೇಶವು ಭಾರತದ ಮೇಲೆ ದಾಳಿ ಮಾಡುವುದಿಲ್ಲ ಮತ್ತು ಬಿಜೆಪಿ ಮತ್ತು ಆರ್‌ಎಸ್ಎಸ್ ಅತ್ಯಂತ ಶಕ್ತಿಶಾಲಿ” ಎಂದು ಅವರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಭಾರತದ ಮೇಲೆ ದಾಳಿ ಮಾಡಲು, ಬಿಜೆಪಿಯನ್ನು ನಿರ್ಮೂಲನೆ ಮಾಡಬೇಕು ಎಂದು ತಾಲಿಬಾನ್ ಮುಖ್ಯಸ್ಥರು ಹೇಳಿದ್ದಾರೆ ಎಂದು…

Read More