Fact Check: ಬೆಳಗಾವಿಯ ಕಾಂಗ್ರೆಸ್ ರ್ಯಾಲಿಯಲ್ಲಿ ಮುಸ್ಲಿಂ ಸಂಘಟನೆಯ ಬಾವುಟ ಹಾರಿಸಲಾಗಿದೆಯೇ ಹೊರತು ಪಾಕಿಸ್ತಾನದ್ದಲ್ಲ
ಹಲವಾರು ದಿನಗಳಿಂದ ಎಲ್ಲಿ ಮುಸ್ಲಿಂ ಬಾವುಟಗಳು ಹಾರಿಸಿದರೂ ಸಹ ಅದನ್ನು ಪಾಕಿಸ್ತಾನ ಬಾವುಟವನ್ನು ಹಾರಿಸಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಕಾರಣ ಬಾವುಟದಲ್ಲಿ ಇರುವಂತಹ ಅರ್ಧ ಚಂದ್ರ ಮತ್ತು ನಕ್ಷತ್ರದ ಗುರುತಿನಿಂದಾಗಿ ಅನೇಕರು ತಪ್ಪಾಗಿ ತಿಳಿಯುತ್ತಾರೆ. ಇಂತಹ ಅನೇಕ ಸುದ್ದಿಯನ್ನು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಸತ್ಯಶೋದನೆ ನಡೆಸಿರುವುದನ್ನು ನೀವಿಲ್ಲಿ ನೋಡಬಹುದು. ಆದರೆ ಇನ್ನೂ ಕೆಲವರು ಬೇಕಂತಲೇ ರಾಜಕೀಯವಾಗಿ ಎತ್ತಿಕಟ್ಟಲು, ಮುಸ್ಲಿಂ ಸಮುದಾಯದ ಮೇಲೆ ದ್ವೇಷ ಬಿತ್ತುವ ಸಂದೇಶಗಳೋಂದಿಗೆ ಸುದ್ದಿ ಹಂಚಿಕೊಳ್ಳುತ್ತಾರೆ. ಈಗ, ತುಮಕೂರಿನ ಗುಬ್ಬಿ ಗೇಟ್ ಬಳಿ ಕಾಂಗ್ರೆಸ್ಸಿನ…