Fact Check | ಬಾಂಗ್ಲಾ ಬೌಲರ್‌ ಹಸನ್‌ ಮಹಮದ್‌ಗೆ ರೋಹಿತ್‌ ಶರ್ಮಾ ಕಾಲಿನಿಂದ ಒದ್ದಿದ್ದಾರೆ ಎಂಬುದು ಸುಳ್ಳು

“ಹಸನ್ ಮಹಮೂದ್ ಮೈದಾನದಲ್ಲಿ ಸಜ್ದಾ ಮಾಡಲು ಪ್ರಯತ್ನಿಸಿದ್ದ.. ಆದರೆ ದುರದೃಷ್ಟವಶಾತ್ ರೋಹಿತ್ ಶರ್ಮಾ ಅವನನ್ನು ಒದ್ದು ನಿಕಾಲ್,,, ಚಲ್ ಹಟ್ ಎಂದು ಹೇಳಿದ್ರು, ರೋಹಿತ್ ಅವರ ಈ ವರ್ತನೆ ವಿರುದ್ಧ ವಾರ್ತಾ ಭಾರತಿ, ಸಾಣೆಹಳ್ಳಿ ಮಠ ಸೇರಿದಂತೆ ಬಾಂಧವರ ಕೃಪಾಪೋಷಿತ ಜಾತ್ಯತೀತ ವಲಯದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.  ಈ ಫೋಟೋ ಹಲವರು ವ್ಯಂಗ್ಯಯುತವಾಗಿ ಮತ್ತುಅಶ್ಲೀಲವಾಗಿ ಕೂಡ ಕಮೆಂಟ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದನ್ನು ನಿಜವೆಂದು ನಂಬಿದರೆ, ಮತ್ತೆ ಕೆಲವರು ಇದೇ…

Read More

Fact Check | ‘ತೌಬಾ ಹಾಡಿಗೆ ನೃತ್ಯ ಮಾಡಿದ್ದು ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅಲ್ಲ

“ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಸ್ಟುಡಿಯೊದಲ್ಲಿ ವೈರಲ್ ಬಾಲಿವುಡ್ ಹಾಡಿನ ‘ತೌಬಾ ತೌಬಾ’ ಗೆ ನೃತ್ಯ ಮಾಡುತ್ತಿರುವ ವೀಡಿಯೊ ಇದು ನೋಡಿ ಶೇರ್‌ ಮಾಡಿ” ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ಕಂಡು ಬರುವ ವ್ಯಕ್ತಿ ಕೂಡ ಮುತ್ತಯ್ಯ ಮುರಳೀಧರನ್‌ ಅವರ ರೀತಿಯಲ್ಲೇ ಕಾಣಿಸುತ್ತಿರುವುದರಿಂದ ಹಲವರು ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.  Muralitharan's got some sick moves dayumnnn pic.twitter.com/HwLDUmAule — 🍺 (@anubhav__tweets) July 30, 2024 ಹೀಗೆ ವೈರಲ್‌ ಆಗುತ್ತಿರುವ ವಿಡಿಯೋವನ್ನು ಸಾಕಷ್ಟು…

Read More

Fact Check | ಸಚಿನ್‌ ತೆಂಡೂಲ್ಕರ್‌ ಅವರ ಬಂಧನವಾಗಿದೆ ಎಂದು AI ಫೋಟೋ ಹಂಚಿಕೆ

“ಈ ಫೋಟೋ ನೋಡಿ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಪ್ರಕರಣವೊಂದರ ಆರೋಪಿಯಾಗಿರುವ ಅವರನ್ನು ಬಂಧಿಸಲಾಗಿದ್ದು, ಈ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ.” ಎಂದು ಹಿಂದೂ ಪತ್ರಿಕೆಯಲ್ಲಿ ಸಚಿನ್‌ ತೆಂಡೂಲ್ಕರ್‌ ಅವರ ಬಂಧನವಾಗಿದೆ ಎಂಬಂತ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋ ನೋಡಿದ ಹಲವರು ಇದು ನಿಜವಾದ ಫೋಟೋ ಎಂದು ಭಾವಿಸಿದ್ದಾರೆ.  ಹಲವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದು, ಹಲವು ಕತೆಗಳನ್ನು ಕೂಡ ಈ ಫೋಟೋ…

Read More

Fact Check | ವಿಶ್ವಕಪ್‌ ಗೆದ್ದ ನಂತರ ರೋಹಿತ್‌ ಶರ್ಮಾ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು 2023ರ ಫೋಟೋ ಹಂಚಿಕೆ

“ಈ ಫೋಟೋ ನೋಡಿ ಇದು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರು ವಿಶ್ವಕಪ್‌ ಗೆದ್ದ ನಂತರ ಮೊದಲ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋ. ಈ ವೇಳೆ ರೋಹಿತ್‌ ಶರ್ಮಾ ಅವರ ಕುಟುಂಬವು ಕೂಡ ಅವರೊಂದಿಗೆ ಇತ್ತು. ದೇವರ ದರ್ಶನ ಪಡೆದು ದೇವಸ್ಥಾನದ ಮುಂದೆ ಅವರು ಕಂಡು ಬಂದಿದ್ದಾರೆ” ಎಂದು ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಈ ಫೋಟೋ ನೋಡಿದ ಹಲವು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಸಾಕಷ್ಟು ಜನ ರೋಹಿತ್‌ ಶರ್ಮಾ…

Read More

Fact Check | ಖ್ಯಾತ ಕ್ರಿಕೆಟಿಗ ಡೇವಿಡ್‌ ಮಿಲ್ಲರ್‌ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬುದು ಸುಳ್ಳು

” ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ-20 ಟ್ರೋಫಿಯಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಸೋತ ನಂತರ ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟಿಗ ಡೇವಿಡ್‌ ಮಿಲ್ಲರ್‌ ಅವರು ಸನಾತನ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ನಿಮಗೆ ನಂಬಿಕೆ ಇಲ್ಲದಿದ್ದರೆ ಈ ನ್ಯೂಸ್‌ ನೋಡಿ, ಇದು ಬಿಬಿಸಿಯ ಅಧಿಕೃತ ವರದಿಯಾಗಿದೆ. ಇದರಲ್ಲಿ ಡೇವಿಡ್‌ ಮಿಲ್ಲರ್‌ ಅವರು ಮತಾಂತರಗೊಂಡ ವರದಿಯನ್ನು ಪ್ರಕಟಗೊಳಿಸಲಾಗಿದೆ.” ಎಂದು ಬಿಬಿಸಿ ಬಂಗಾಳದ ವರದಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವರದಿಯನ್ನು ನೋಡಿದ ಹಲವು ಬಿಬಿಸಿಯೇ ಈ ವರದಿ ಮಾಡಿದ್ದಾಗ…

Read More

Fact Check | T20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿಗೆ ಬಾಂಗ್ಲಾದೇಶದ ಅಭಿಮಾನಿಗಳು ಬೇಸರಗೊಂಡರು ಎಂಬುದು ಹಳೆಯ ವಿಡಿಯೋ

“ಭಾರತ ವಿರುದ್ಧ ದಕ್ಷಿಣ ಆಫ್ರಿಕಾ T20 ವಿಶ್ವಕಪ್ ಫೈನಲ್ 2024 ರ ಅಂತಿಮ ಓವರ್‌ನಲ್ಲಿ ಸೂರ್ಯ ಕುಮಾರ್ ಯಾದವ್ ಅವರ ಕ್ಯಾಚ್‌ನಿಂದ ಬಾಂಗ್ಲಾದೇಶದ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಅದನ್ನು ನೀವು ಈ ವಿಡಿಯೋದಲ್ಲಿಯೇ ನೋಡಬಹುದು, ಬಾಂಗ್ಲದೇಶದ ಅಭಿಮಾನಿಗಳು ಭಾರತ ಕ್ರಿಕೆಟ್‌ ತಂಡ ಸೋಲನ್ನು ಹೇಗೆ ಸಂಭ್ರಮಿಸುತ್ತಾರೆ ಎಂಬುದನ್ನು ನೀವೇ ನೋಡಿ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದು, ಸಾಕಷ್ಟು ಮಂದಿ ನಿಂದನಾತ್ಮಕವಾಗಿ, ಮತ್ತು ಕೋಮು ವಿಚಾರಗಳನ್ನು…

Read More

Fact Check | 2007ರ T-20 ವಿಶ್ವಕಪ್ ವಿಜೇತ ಭಾರತ ತಂಡವನ್ನು ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಭೇಟಿ ಮಾಡಿಲ್ಲವೆಂಬುದು ಸುಳ್ಳು

“ಭಾರತ ಕ್ರಿಕೆಟ್ ತಂಡ 2007ರಲ್ಲಿ ವಿಶ್ವಕಪ್ ಗೆದ್ದಿತ್ತು. ಮಹೇಂದ್ರ ಸಿಂಗ್ ಧೋನಿ ನಾಯಕರಾಗಿದ್ದರು ಮತ್ತು ರಾಜೀವ್ ಶುಕ್ಲಾ ಅವರು ಬಿಸಿಸಿಐನ ಹಂಗಾಮಿ ಅಧ್ಯಕ್ಷರಾಗಿದ್ದರು. ದೇಶದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಬದಲಿಗೆ ಸೂಪರ್ ಪಿಎಂ ಸೋನಿಯಾ ಗಾಂಧಿ ಅವರೊಂದಿಗೆ ಅಂದು ಫೋಟೋ ಶೂಟ್ ಮಾಡಿಸಲಾಗಿದೆ. ಆಗ ಯಾವ ಪತ್ರಕರ್ತರೂ ಭಾರತದ ಕ್ರಿಕೆಟ್ ತಂಡದ ಜೊತೆ ಫೋಟೋ ಶೂಟ್ ಮಾಡಿಕೊಳ್ಳುತ್ತಿರುವ ಸೋನಿಯಾ ಗಾಂಧಿ ಯಾರು ಎಂಬ ಪ್ರಶ್ನೆಯನ್ನು ಎತ್ತಲಿಲ್ಲ. ತುಚ್ಛವಾದ ಕಾಂಗ್ರೆಸ್ ಭಾರತದಲ್ಲಿ ಎಷ್ಟು ಸರ್ವಾಧಿಕಾರವನ್ನು ತೋರಿಸಿದೆ ಮತ್ತು ಅದು…

Read More

Fact Check | ನ್ಯೂಯಾರ್ಕ್ ನಗರದ ಟೈಮ್ಸ್‌ ಸ್ಕ್ವೇರ್‌ನಲ್ಲಿ ವಿರಾಟ್‌ ಕೊಹ್ಲಿ ಪ್ರತಿಮೆ ನಿರ್ಮಿಸಲಾಗಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ಕ್ರಿಕೆಟಿಗ ವಿರಾಟ್‌ ಕೊಹ್ಲಿ ಕ್ರೀಡಾ ಸಾಧನೆಗೆ ಪ್ರತಿಯಾಗಿ ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿರುವ ಟೈಮ್ಸ್‌ ಸ್ಕ್ವೇರ್‌ನಲ್ಲಿ ಪ್ರತಿಮೆಯೊಂದನ್ನು ನಿರ್ಮಾಣ ಮಾಡಲಾಗಿದೆ. ಯಾವ ಕ್ರಿಕೆಟಿಗನಿಗೂ ಸಿಗದ ಗೌರವ ವಿರಾಟ್‌ ಕೊಹ್ಲಿ ಅವರಿಗೆ ಸಿಕ್ಕಿದೆ. ಇದು ಭಾರತದ ಕ್ರೀಡಾ ಪಟುವಿಗೆ ಸಿಕ್ಕ ಅತಿದೊಡ್ಡ ಗೌರವ. ಹೀಗಾಗಿ ಈ ಪೋಸ್ಟ್‌ ಅನ್ನು ಎಲ್ಲರಿಗೂ ಶೇರ್‌ ಮಾಡಿ” ಎಂದು ವಿರಾಟ್‌ ಕೊಹ್ಲಿ ಅವರ ಪ್ರತಿಮೆ ಇರುವ ಫೋಟೋದೊಂದಿಗೆ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋ ನೋಡಲು ನಿಜವಾದ ಫೋಟೋದಂತೆ ಇರುವುದರಿಂದ ಸಾಕಷ್ಟು ಮಂದಿ…

Read More

Fact Check | ಅಫ್ಘಾನಿಸ್ತಾನ ಆಟಗಾರರು ‘ವಂದೇ ಮಾತರಂ’ ಹಾಡಿದ್ದಾರೆ ಎಂಬ ವಿಡಿಯೋ ಸುಳ್ಳು.!

ಪ್ರಸ್ತುತ ಭಾರೀ ಸದ್ದು ಮಾಡುತ್ತಿರುವ T-20 ಕ್ರಿಕೆಟ್ ವಿಶ್ವಕಪ್ ಹಲವು ರೋಚಕ ಕ್ಷಣಗಳಿಗೆ ಕಾರಣವಾಗುತ್ತಿದೆ. ಈ ಪಂದ್ಯವಾಳಿಗಳಲ್ಲಿ ಅಫ್ಘಾನ್ ಆಟಗಾರರು ಬಾಂಗ್ಲಾದೇಶವನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಟಿ- 20 ವಿಶ್ವಕಪ್‌ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಈ ನಡುವೆ “ಅಫ್ಘಾನಿಸ್ತಾನದ ಆಟಗಾರರು T-20 ವಿಶ್ವಕಪ್‌ನ ಸೆಮಿಫೈನಲ್‌ಗೆ ಪ್ರವೇಶಿಸಿದ ನಂತರ ‘ವಂದೇ ಮಾತರಂ’ ಹಾಡಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದ ಹಲವರು ಇದು ನಿಜವಾದ ವಿಡಿಯೋ ಇರಬಹುದು ಎಂದು ಸಾಕಷ್ಟು…

Read More

Fact Check | CSK ಅಭಿಮಾನಿಗಳ ಮೇಲೆ RCB ಅಭಿಮಾನಿಗಳಿಂದ ಹಲ್ಲೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ” ಇತ್ತೀಚೆಗೆ ಚೆನೈ ಸೂಪರ್‌ ಕಿಂಗ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಡುವೆ ನಡೆದ ಐಪಿಎಲ್‌ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಆರ್‌ಸಿಬಿ ಸೋಲಿಸಿ ಪ್ಲೇ ಆಫ್‌ಗೆ ಅರ್ಹತೆಯನ್ನು ಪಡೆದುಕೊಂಡಿದೆ. ಆದರೆ ಈ ಪಂದ್ಯದ ಬಳಿಕ ಸಂಭ್ರಮದಲ್ಲಿ ಆರ್‌ಸಿಬಿ ಅಭಿಮಾನಿಗಳು ಸಿಎಸ್‌ಕೆ ಅಭಿಮಾನಿಗಳ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಕೆಲವರು ಹಲ್ಲೆ ನಡೆಸಿದ್ದಾರೆ.” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. See this behaviour of your rcb fans @Dheerajsingh_ bhai bina dekhe mt bola…

Read More