Fact Check: ಬಾಂಗ್ಲಾದೇಶದಲ್ಲಿ ದರ್ಗಾಕ್ಕೆ ಬೆಂಕಿ ಹಚ್ಚಿದ ವೀಡಿಯೊವನ್ನು ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಸುಳ್ಳು ಕೋಮು ಹೇಳಿಕೆಗಳೊಂದಿಗೆ ಹಂಚಿಕೆ
ಬಾಂಗ್ಲಾದೇಶದಲ್ಲಿ ರಾಜಕೀಯ ಅಶಾಂತಿ ಮುಂದುವರೆದಿರುವಂತೆಯೇ, ಮುಸ್ಲಿಮರು ಇತ್ತೀಚೆಗೆ ದೇಶದ ಠಾಕೂರ್ಗಾಂವ್ ಜಿಲ್ಲೆಯಲ್ಲಿ ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳುವ ವೀಡಿಯೊವನ್ನು ಈಗ ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗುತ್ತಿದೆ. ‘ಹಿಂದುತ್ವ ನೈಟ್’ ಎಂಬ ಎಕ್ಸ್ (ಟ್ವಿಟರ್) ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು, “ಇಸ್ಲಾಮಿಸ್ಟ್‌ಗಳು ಬಾಂಗ್ಲಾದೇಶದ ಠಾಕೂರ್ಗಾಂವ್ ಜಿಲ್ಲೆಯ ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾರೆ” ಎಂದು ಬರೆದಿದ್ದಾರೆ. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸುಮಾರು ಮೂರು ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಇದೇ ರೀತಿಯ ಪ್ರತಿಪಾದನೆಯ ಹೆಚ್ಚಿನ ಆರ್ಕೈವ್…