ಅಯೋಧ್ಯ

Fact Check: ಅಯೋಧ್ಯೆಯ ರಾಮಪಥ ರಸ್ತೆಯ ಗುಂಡಿಯೊಂದಕ್ಕೆ ಮಹಿಳೆ ಬಿದ್ದಿದ್ದಾರೆ ಎಂದು 2022ರ ಬ್ರೆಜಿಲ್‌ನ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ರಸ್ತೆಯಲ್ಲಿ ನಡೆಯುತ್ತಿರುವ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ರಸ್ತೆಯ ಗುಂಡಿಯೊಳಗೆ ಬೀಳುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದು ಗುಂಡಿಗೆ ಬಿದ್ದ ಮಹಿಳೆಯನ್ನು ಉತ್ತರ ಪ್ರದೇಶದ ಅಯೋಧ್ಯೆ ಮೂಲದವರು ಎಂದು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. “ಮೊದಲ ಮಳೆಯ ನಂತರ ಅಯೋಧ್ಯೆಯಲ್ಲಿ ನಿರ್ಮಿಸಲಾದ ರಾಮ್ ಪಥ್ ರಸ್ತೆಯ ಸ್ಥಿತಿ ಇದು. ಇದರ ಉದ್ದ 13 ಕಿಲೋಮೀಟರ್. ರಸ್ತೆ ನಿರ್ಮಿಸಿದ ಕಂಪನಿ ಗುಜರಾತ್ ನಿಂದ ಬಂದಿದೆ. ಅದರ ಹೆಸರು ಭುವನ್ ಇನ್ಫ್ರಾಕಾಮ್ ಪ್ರೈವೇಟ್ ಲಿಮಿಟೆಡ್. (sic.) ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ….

Read More
ರಾಹುಲ್ ಗಾಂಧಿ

Fact Check: ರಾಯ್ ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ರಾಹುಲ್ ಗಾಂಧಿ ಅವರು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿಲ್ಲ

ಈ ಬಾರಿ ರಾಹುಲ್ ಗಾಂಧಿಯವರು ಅಮೇಥಿ ಕ್ಷೇತ್ರವನ್ನು ತೊರೆದು ಕಾಂಗ್ರೆಸ್‌ನ ಭದ್ರಕೋಟೆಯಾದ ರಾಯ್ ಬರೇಲಿಯಿಂದ ಸ್ಪರ್ಥಿಸುತ್ತಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಾಕಷ್ಟು ಮಾಧ್ಯಮಗಳು ವರದಿ ಮಾಡಿವೆ. ಈಗ,”ರಾಯ್ ಬರೇಲಿಯಿಂದ ನಾಮಪತ್ರ ಸಲ್ಲಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದು, ಅಲ್ಲಿ ನೆರೆದಿದ್ದ ಜನರು ಮೋದಿ, ಮೋದಿ ಎಂದು ಘೋಷಣೆ ಕೂಗಿದರು.”…

Read More

Fact Check | ಅಯೋಧ್ಯೆಯಲ್ಲಿ ಪ್ಲಾಸ್ಟಿಕ್‌ ಕೊಟ್ರೆ ಉಚಿತವಾಗಿ 5 ರೂ. ಸಿಗುತ್ತದೆ ಎಂಬುದು ಸುಳ್ಳು..!

“ಅಯೋಧ್ಯೆಯಲ್ಲಿ ಜನರು ತಾವು ಬಳಸಿ ಖಾಲಿಯಾದ ನೀರಿನ ಬಾಟಲಿಯನ್ನು ಹಿಂದಿರುಗಿಸಿದ್ರೆ ಉಚಿತವಾಗಿ 5 ರೂಪಾಯಿ ಪಡೆಯುತ್ತಾರೆ” ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಅದರಲ್ಲೂ ಅಯೋಧ್ಯೆಯಿಂದ ಕ್ರಾಂತಿಕಾರಿ ನಡೆ ಎಂದು ಕೂಡ ಸಾಕಷ್ಟು ಮಂದಿ ಪೋಸ್ಟ್‌ ಮಾಡುತ್ತಿದ್ದು, ಪ್ಲಾಸ್ಟಿಕ್‌ ಮಾಲಿನ್ಯ ತಡೆಯಲು ಹಾಗೂ ಪ್ಲಾಸ್ಟಿಕ್‌ ಪುನರ್‌ ಬಳಕೆಗೆ ಈ ಕ್ರಮ ಎಂದು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವೈರಲ್‌ ಆಗುತ್ತಿರುವ ಪೋಸ್ಟ್‌ ಪ್ರಕಾರ ಅಯೋಧ್ಯೆಯಲ್ಲಿ ಪ್ಲಾಸ್ಟಿಕ್‌ ಬಳಕೆಗೆ ನಿಯಂತ್ರಣ ಹೇರಲಾಗಿದೆ ಮತ್ತು ಪ್ಲಾಸ್ಟಿಕ್‌ ಮರುಬಳಕೆಗೆ ಉತ್ತೇಜನ…

Read More
ಸೌದಿ

ಸೌದಿ ರಾಜ ಅಯೋಧ್ಯೆಯ ರಾಮ ಮಂದಿರಕ್ಕೆ 50 ಕೆ.ಜಿ ಚಿನ್ನವನ್ನು ದೇಣಿಗೆ ನೀಡಿದ್ದಾರೆ ಎಂಬುದು ಸುಳ್ಳು

ಅಯೋಧ್ಯೆಯ ರಾಮ ಮಂದಿರದ ಪ್ರಾಣಪ್ರತಿಷ್ಟಾಪನೆಯ ನಂತರವು ದೇಣಿಗೆಗೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ, ಸೌದಿಯ ರಾಜ ಅಯೋಧ್ಯೆಯ ರಾಮ ಮಂದಿರಕ್ಕೆ 50 ಕೆ.ಜಿ ಚಿನ್ನವನ್ನು ದೇಣಿಗೆ ನೀಡಿದ್ದಾರೆ, ಇದು ಬರೋಬರಿ 34 ಕೋಟಿ ಮೊತ್ತವಾಗುತ್ತದೆ ಎಂದು ಪ್ರತಿಪಾದಿಸಿ “ಕನ್ನಡ ಯೂ ಟೂಬ್” ಎಂಬ ಯೂಟೂಬ್ ಚಾನೆಲ್ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಇದೇ ರೀತಿ ಇನ್ನೊಂದು ಸುದ್ದಿ ಹರಿದಾಡುತ್ತಿದ್ದು “ಅಮೆರಿಕದ ಆರ್ಯವೈಶ್ಯ ವಾಸವಿ ಅಸೋಸಿಯೇಷನ್ ಅಯೋಧ್ಯೆ ರಾಮ ಮಂದಿರದಲ್ಲಿ ಭಗವಾನ್ ರಾಮನಿಗೆ ದಾನ…

Read More

Fact Check: ಅಯೋಧ್ಯೆಯ ರಾಮ ಮಂದಿರವೆಂದು ಜಾರ್ಖಂಡ್‌ನ ಜೈನ ಮಂದಿರದ ವಿಡಿಯೋ ಹಂಚಿಕೆ

ಅಯೋಧ್ಯೆಯ ಬಾಲ ರಾಮನ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮ ಜರುಗಿದರೂ ಇನ್ನೂ ರಾಮ ಮಂದಿರದ ಕಟ್ಟುವ ಕಾರ್ಯ ಮುಂದುವರೆಯುತ್ತಲೇ ಇದೆ. ಹೀಗಾಗಲೇ ರಾಮ ಮಂದಿರದ ದೇವಾಲಯಕ್ಕೆ ಸಂಬಂದಿಸಿದಂತೆ ಹಲವಾರು ವಿಡೀಯೋಗಳು, ಪೋಟೋಗಳು ಸಾಮಾಜಿಕ  ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವುಗಳಲ್ಲಿ ಕೆಲವು ಇತರ ದೇವಾಲಯದ ವಿಡಿಯೋಗಳು ಸೇರಿವೆ. ಇದಕ್ಕೆ ನಿದರ್ಶನವೆಂಬಂತೆ. ಈಗ “ಹೊಸದಾಗಿ ನಿರ್ಮಿಸಲಾದ ಅಯೋಧ್ಯೆಯ ರಾಮ ಮಂದಿರದ ದೃಶ್ಯಗಳು” ಎಂಬ ವಿಡಿಯೋ ಒಂದು ಇನ್ಟಾಗ್ರಾಮ್ ನಲ್ಲಿ ಹರಿದಾಡುತ್ತಿದೆ. ಇದನ್ನು ಏಳುವರೆ ಸಾವಿರದಷ್ಟು ಜನ ವೀಕ್ಷಿಸಿದ್ದಾರೆ. ಫ್ಯಾಕ್ಟ್‌ಚೆಕ್: ವೈರಲ್ ವೀಡಿಯೊವನ್ನು ರೋಹನ್…

Read More
ಬಾಲರಾಮ

Fact Check | ಬಾಲರಾಮ ಮೂರ್ತಿಗೆ ಶಿಲೆ ಕೊಟ್ಟ ರೈತನಿಗೆ ದಂಡ? – ಅಸಲಿ ವಿಷಯ ಇಲ್ಲಿದೆ

ಜನವರಿ 22 ರಂದು ಅಯೋಧ್ಯೆಯ ರಾಮಮಂಂದಿರ ಉದ್ಘಾಟಿಸಿ, ಬಾಲರಾಮ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಮೂರ್ತಿಯನ್ನು ಕೆತ್ತಿದವರು ಕರ್ನಾಟಕದ ಮೈಸೂರಿನ ಅರುಣ್ ಯೋಗಿರಾಜ್. ರಾಮನ ವಿಗ್ರಹ ತಯಾರಾಗಲು ಬಳಸಿದ ಕಪ್ಪು ಶಿಲೆ ಕೂಡ ಮೈಸೂರಿನದ್ದು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ಬಾಲರಾಮ ಮೂರ್ತಿಗೆ ಶಿಲೆ ಕೊಟ್ಟ ರೈತನಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬರೋಬ್ಬರಿ 80 ಸಾವಿರ ರೂ ದಂಡವನ್ನು ಹಾಕುವ ಮೂಲಕ ರಾಮ ವಿರೋಧಿ ಎಂದು ಸಾಭೀತು ಪಡಿಸಿದೆ….

Read More

ವಿರಾಟ್ ಕೊಹ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು AI ಚಿತ್ರ ಹಂಚಿಕೆ

ಇತ್ತೀಚೆಗೆ ನಡೆದ ಅಯೋಧ್ಯೆಯ ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾದ  ಬಾಲಿವುಡ್‌ ನಟ-ನಟಿಯರ ಸೇಲ್ಫಿ, ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದ್ದಂತೆ, ಈಗ ಈ ಕಾರ್ಯಕ್ರಮಕ್ಕೆ ಭಾಗವಹಿಸಿಲ್ಲ ಎಂಬ ಕಾರಣಕ್ಕಾಗಿ ಮಹೇಂದ್ರ ಸಿಂಗ್ ದೋನಿ, ರೋಹಿತ್ ಶರ್ಮ ಸೇರಿದಂತೆ ಹಲವು ಕ್ರಿಕೆಟರ್‌ಗಳನ್ನು ಶ್ರೀ ರಾಮನ ಭಕ್ತರು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಕೆಲವು ವಿರಾಟ್‌  ಕೊಹ್ಲಿಯ ಅಭಿಮಾನಿಗಳು “ವಿರಾಟ್ ಕೊಹ್ಲಿ ಅಯೋಧ್ಯೆಯ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೋಟೋ” ಎಂದು ಕೆಲವು ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸತ್ಯ: ಇದು…

Read More
ಮುಂಬೈ

Fact Check: ಮುಂಬೈನ ಮೀರಾ ರಸ್ತೆಯ ಗಲಭೆ ಎಂದು ಪಶ್ಚಿಮ ಬಂಗಾಳದ ವಿಡಿಯೋ ಹಂಚಿಕೆ

ಅಯೋಧ್ಯೆಯ ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ದೇಶದ ಕೆಲವು ಭಾಗಗಳಲ್ಲಿ ಕೋಮು ಗಲಭೆಯ ಸಾಧ್ಯೆತೆ ಹೆಚ್ಚಿದ್ದರೂ ಪೋಲಿಸ್ ಇಲಾಖೆಯ ಕಟ್ಟೆಚ್ಚರದಿಂದ ಇಂತಹ ಯಾವುದೇ ಅಹಿತಕರ ಘಟನೆ ನಡೆಯದಂತೆ ದೇಶದಾದ್ಯಂತ ಮುಂಜಾಗ್ರತ ಕ್ರಮವನ್ನು ವಹಿಸಿಲಾಗಿತ್ತು. ಆದರೂ ಮುಂಬೈನ ಮುಂಸ್ಲಿಂ ಸಮುದಾಯದ ಹೆಚ್ಚಿರುವ ಮೀರಾ ರಸ್ತೆಯಲ್ಲಿ ಕೋಮುಗಲಭೆಯ ಪ್ರಕರಣಗಳು ದಾಖಲಾಗಿವೆ. ಕೆಲವು ಬಲಪಂಥೀಯ ಯುವಕರು ಕೇಸರಿ ಭಾವುಟ ಹಿಡಿದು, ಘೋಷಣೆಗಳ ಕೂಗುತ್ತಾ ಮುಸ್ಲಿಂ ಸಂಚಾರಿಗಳಿಗೆ ತಳಿಸುವ, ಅವರ ಅಂಗಡಿ ಮುಗ್ಗಟ್ಟುಗಳನ್ನು ಒಡೆದು ಹಾಕುವ ವಿಡಿಯೋಗಳು ಈಗ ಸಾಮಾಜಿಕ…

Read More

ಅಯೋಧ್ಯೆಯ ಪ್ರಾಣ ಪ್ರತಿಷ್ಟೆ ಸಂದರ್ಭದ ಚಿತ್ರಗಳು ಎಂದು ಬೇರೆ ಸ್ಥಳಗಳ ಪೋಟೋ ಹಂಚಿಕೆ

ಕೆಲವು ದಿನಗಳ ಹಿಂದೆಯಷ್ಟೇ ಅಯೋಧ್ಯೆಯ ರಾಮಲಲ್ಲಾ ಪ್ರಾಣಪ್ರತಿಷ್ಟೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ಈ ಕಾರ್ಯಕ್ರಮಕ್ಕೆ ಮೊದಲು ಸಹ ಅನೇಕ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಮತ್ತು ಕಾರ್ಯಕ್ರಮದ ನಂತರ ಸಹ ಈಗ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಶ್ರೀ ರಾಮನ ಭಕ್ತನೊಬ್ಬ ತನ್ನ ಕೈಗಳ(ತಲೆಕೆಳಗಾಗಿ) ಮೂಲಕ ನಡೆದುಕೊಂಡು ಅಯೋಧ್ಯೆಯನ್ನು ತಲುಪಿದ್ದಾನೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು TV9 ಭಾರತ್‌ವರ್ಷ್‌ ಮತ್ತು ಇಂಡಿಯನ್ ಟಿವಿ ಎಂಬ ಸುದ್ದಿ ಮಾಧ್ಯಮಗಳು ಈ ವಿಡಿಯೋವನ್ನು ಹಂಚಿಕೊಂಡಿವೆ….

Read More

ರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಇಸ್ರೇಲ್ ಸರ್ಕಾರ ರಾಷ್ಟ್ರೀಯ ರಜಾದಿನವನ್ನಾಗಿ ಘೋಷಣೆ ಮಾಡಿದೆ ಎಂಬುದು ಸುಳ್ಳು

ರಾಮ ಮಂದಿರದ ಪ್ರಾಣ ಪ್ರತಿಷ್ಟೆ ಕಾರ್ಯಕ್ರಮಕ್ಕೆ ಭಾರತದಾದ್ಯಂತ ರಾಮ ಭಕ್ತರು ಅಯೋಧ್ಯೆಗೆ ಹೋಗುವ ಸಾಧ್ಯತೆ ಇದ್ದು ಜನವರಿ 22ರಂದು ರಜೆ ಘೋಷಿಸಲಾಗುವುದು ಎಂದು ಜನ ನಂಬಿಕೊಳ್ಳುತ್ತಿದ್ದಾರೆ. ಆದರೆ ಈ ಕುರಿತು ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಯಾವುದೇ ಪ್ರಕಟಣೆಯನ್ನು ಹೊರಡಿಸಿಲ್ಲ. ಈಗಿರುವಾಗ, ಜನವರಿ 22,2024ರಂದು ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆ, ಇಸ್ರೇಲ್ ಸರ್ಕಾರ ಅಂದಿನ ದಿನವನ್ನು ರಾಷ್ಟ್ರೀಯ ರಜಾದಿನವನ್ನಾಗಿ ಘೋಷಣೆ ಮಾಡಿದೆ ಎಂಬ ಸಂದೇಶವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಸಿದ್ದು ಅದಿನ್,…

Read More