Fact Check | ರಾಹುಲ್‌ ಗಾಂಧಿ ತಪ್ಪು ಲೆಕ್ಕ ಹೇಳಿದ್ದಾರೆ ಎಂದು ಸುಳ್ಳು ಹರಡಿದ ಬಿಜೆಪಿ

“ರಾಹುಲ್‌ ಗಾಂಧಿ ಎಷ್ಟು ದಡ್ಡರಿದ್ದಾರೆ ನೋಡಿ, ಮಕ್ಕಳು ಹೇಳುವ ಲೆಕ್ಕವನ್ನು ಕೂಡ ಅವರಿಂದ ಹೇಳಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕ ಕಾರ್ಯಕ್ರಮದಲ್ಲಿ 50 ಮತ್ತು 15 ನ್ನು ಕೂಡಿಸಿದರೆ 73 ಆಗುತ್ತದೆ ಎಂದು ಹೇಳುವ ಮೂಲಕ ತಾವು ಎಂತಹ ದಡ್ಡರೆಂದು ಸಾಭೀತು ಪಡಿಸಿದ್ದಾರೆ.” ಎಂದು ವಿಡಿಯೋದೊಂದಿಗೆ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ವಿಡಿಯೋ ಮೂಲಕ ರಾಹುಲ್‌ ಗಾಂಧಿ ಅವರು ದಡ್ಡ , ಅವರಿಗೆ ರಾಜಕೀಯ ಅಂದರೆ ಏನೂ ಎಂಬುದೇ ಗೊತ್ತಿಲ್ಲ ಎಂಬ ರೀತಿಯಲ್ಲಿ…

Read More

“ನಾನು ಮೀಸಲಾತಿ ವಿರೋಧಿಸುತ್ತೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಲ್ಲ..!

“ಈ ವಿಡಿಯೋ ನೋಡಿ ಸಂಸತ್ತಿನ ಒಳಗೆಯೇ ಪ್ರಧಾನಿ ನರೇಂದ್ರ ಮೋದಿ ಅವರು ತಮ‌ಗೆ ಮೀಸಲಾತಿ ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದಾರೆ. ಆ ಮೂಲಕ ಮೀಸಲಾತಿ ರದ್ದು ಮಾಡುವ ಸೂಚನೆ ನೀಡಿದ್ದಾರೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಪ್ರಧಾನಿ ಮೋದಿ ಅವರನ್ನು ಮೀಸಲಾತಿ ವಿರೋಧಿ ಮೀಸಲಾತಿಯನ್ನು ಶೀಘ್ರದಲ್ಲೇ ರದ್ದು ಪಡಿಸಲಾಗುತ್ತದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಇದನ್ನೇ ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಕೂಡ ಪ್ರಧಾನಿ ನರೇಂದ್ರ ಮೋದಿ ಅವರು…

Read More

Fact Check : ಪಕ್ಷದ ಕಾರ್ಯಕರ್ತನಿಗೆ ರಾಹುಲ್‌ ಗಾಂಧಿ ನಾಯಿ ಬಿಸ್ಕೆಟ್‌ ನೀಡಿದರೆಂದು ಅಪಪ್ರಚಾರ..!

“ನಾಯಿಯೂ ತಿನ್ನದ ಬಿಸ್ಕೆಟ್‌ ಅನ್ನೂ ಪಕ್ಷದ ಕಾರ್ಯಕರ್ತನಿಗೆ ನೀಡಿದ ರಾಹುಲ್‌ ಗಾಂಧಿ, ಇದು ಕಾಂಗ್ರೆಸ್‌ ತನ್ನ ಕಾರ್ಯಕರ್ತರಿಗ ನೀಡುವ ಮರ್ಯಾದೆ.” ಎಂದು ವಿಪಕ್ಷಗಳು ಸೇರಿದಂತೆ ಸಾಮಾಜಿಕ ಜಾಲತಾಣದ ಸಾಕಷ್ಟು ಮಂದಿ ಬಳಕೆದಾರರು ವಿಡಿಯೊವೊಂದನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ನ್ಯಾಯ ಯಾತ್ರೆಯಲ್ಲಿ ವಿವಾದ ತಲೆದೂರಿದೆ. How shameless First, Rahul Gandhi made @himantabiswa ji eat biscuits 🍪 from same plate as his pet dog 🐕…

Read More

Fact Check | ಸಿಖ್ಖರು ರಾಮನ ಸ್ಮರಣೆ ಮಾಡಿದ್ದಾರೆ ಎಂಬುದು ಸುಳ್ಳು ಪ್ರತಿಪಾದನೆಯಾಗಿದೆ

“ಈ ವಿಡಿಯೋ ನೋಡಿ ರಾಮ ಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಸಿಖ್ಖರು ಮತ್ತು ಹಿಂದೂಗಳು ಒಟ್ಟಾಗಿ ಪ್ರಭು ರಾಮ್ ಮತ್ತು ಗುರುನಾನಕ್ ದೇವ್ ಜಿ ಅವರನ್ನು ರಾಮ್ ಕಿ ಪೇಧಿಯಲ್ಲಿ ನೆನಪಿಸಿಕೊಂಡು ಹಾಡಿದ್ದಾರೆ, ಗುರು ಗೋವಿಂದ್ ಸಿಂಗ್ ಜಿ ಅವರಿಗೆ ಗೌರವ ಸಲ್ಲಿಸಿದರು” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಈ ಕುರಿತು ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಹೀಗೆ ಶೇರ್‌ ಮಾಡಲಾಗುತ್ತಿರುವ  ವಿಡಿಯೋಗಳಿಗೆ ಸಾಕಷ್ಟು ಮಂದಿ ನಕಾರಾತ್ಮಕ ಕಮೆಂಟ್‌ಗಳನ್ನು ಕೂಡ ಮಾಡುತ್ತಿದ್ದಾರೆ….

Read More

Fact Check | ಖಾಸಗಿ ಶಾಲೆಗಳಲ್ಲಿ ಮಕ್ಕಳು ಸಾಂಟಾ ಕ್ಲಾಸ್‌ ವೇಷ ಧರಿಸುವುದನ್ನು ಮಧ್ಯಪ್ರದೇಶ ಸರ್ಕಾರ ನಿಷೇಧಿಸಿಲ್ಲ

ಸಾಮಾಜಿಕ ಜಾಲತಾಣದಲ್ಲಿ “ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರು ಕ್ರಿಸ್‌ಮಸ್ ದಿನದಂದು ಖಾಸಗಿ ಶಾಲೆಗಳು ವಿದ್ಯಾರ್ಥಿಗಳನ್ನು ಸಾಂಟಾ ಕ್ಲಾಸ್‌ನ ವೇಷ ಧರಿಸುವುದಕ್ಕೆ ಅನುವು ಮಾಡಿಕೊಡುವುದನ್ನು ನಿಷೇಧಿಸಿ ಹೊಸ ಆದೇಶವನ್ನು ಹೊರಡಿಸಿದ್ದಾರೆ.” ಎಂಬ ಪೋಸ್ಟ್‌ ಅನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಧ್ಯಪ್ರದೇಶದ ಸರ್ಕಾರ ಹಾಗು ಇತರೆ ರಾಜ್ಯಗಳ ರಾಜ್ಯ ಸರ್ಕಾರಗಳನ್ನು ಹೋಲಿಕೆ ಮಾಡಿ ಮಧ್ಯಪ್ರದೇಶದ  ಸಿಎಂ ಮೋಹನ್‌ ಯಾದವ್‌ ಅವರ ನೇತೃತ್ವದ ಬಿಜೆಪಿ ಸರ್ಕಾರವನ್ನು ಹೊಗಳಲು ಆರಂಭಿಸಿದ್ದಾರೆ. ಇಷ್ಟೊಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಸುದ್ದಿಯ…

Read More

Fact Check | ಪ್ರಧಾನಿ ಮೋದಿ ಖಾಲಿ ಇರುವ ಜಾಗದತ್ತ ಕೈ ಬೀಸಿದ್ದಾರೆ ಎಂಬುದು ಎಡಿಟ್ ಮಾಡಿದ ವಿಡಿಯೋ..!

“ಪ್ರಧಾನಿ ಮೋದಿ ಇತ್ತೀಚೆಗೆ ಹೆಚ್ಚು ಹೆಚ್ಚು ಖಾಲಿ ಜಾಗಗಳತ್ತ ಕೈ ಬೀಸುತ್ತಿದ್ದಾರೆ. ಈ ವಿಡಿಯೋ ನೋಡಿ ಮತ್ತೆ ಪ್ರಧಾನಿ ಅವರು ಜನರೇ ಇರದ ಜಾಗದತ್ತ ಕೈ ಬೀಸುತ್ತಿದ್ದಾರೆ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಳ್ಳುವುದರ ಜೊತೆಗೆ ಪ್ರಧಾನಿ ಮೋದಿ ವಿರುದ್ಧ ವ್ಯಾಪಕವಾದ ಟೀಕೆಯನ್ನು ಕೂಡ ಮಾಡಲಾಗುತ್ತಿದೆ. विश्वफेकू अपनी शक्तियों का ईस्तेमाल करते हुए 🤣🤪😆😛😁😜😝😝#Panauti #BJparty #BJPFailedIndia pic.twitter.com/cC8vyK0c91 — Bhushan (@Bhushan__89) December 7, 2023 ಆದರೆ…

Read More

Fact Check : “ಭಾರತ ಮಾತೆ ಯಾರು?” ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆಂದು ಎಡಿಟ್ ವಿಡಿಯೋ ಹಂಚಿಕೊಂಡ ಬಿಜೆಪಿ

“ಭಾಷಣವೊಂದರಲ್ಲಿ ರಾಹುಲ್‌ ಗಾಂಧಿ “ಭಾರತ ಮಾತೆ ಯಾರು?” ಎಂದು ಕೇಳಿದ್ದಾರೆ ಜಾರ್ಜ್‌ ಸರೋಸ್‌ನ ಕೈಗೊಂಬೆ ಹೀಗೆ ಕೇಳುತ್ತಿದೆ. ಇದು ನಾಚಿಗೆ ಗೇಡಿನ ಸಂಗತಿ” ಎಂಬ ತಲೆಬರಹದೊಂದಿಗೆ ರಾಹುಲ್‌ ಗಾಂಧಿ ಅವರ ಭಾಷಣದ ತುಣುಕೊಂದನ್ನು ಬಳಸಿಕೊಂಡು ಬಿಜೆಪಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ. ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಇದೊಂದು ದಾರಿ ತಪ್ಪಿಸುವ ವಿಡಿಯೋ ಎಂಬುದು ತಿಳಿದು ಬಂದಿದೆ. ಬಿಜೆಪಿಯ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಕಟ್‌ ಮಾಡಿ ಹಂಚಿಕೊಳ್ಳಲಾಗಿದೆ ಎಂದು ಹಲವಾರು ಸಾಮಾಜಿಕ…

Read More

Fact Check : ಕಾಂಗ್ರೆಸ್‌ ಸರ್ಕಾರವಿರುವ ರಾಜಸ್ಥಾನದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿದೆ ಎಂಬುದು ಸುಳ್ಳು

ರಾಜಸ್ಥಾನದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರದಿಂದ ಪೊಲೀಸರಿಗೆ ರಕ್ಷಣೆಯೇ ಇಲ್ಲ ಎಂಬ ಪೋಸ್ಟ್‌ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣ ಎಕ್ಸ್‌ ಬಳಕೆದಾರ ಗಜೇಂದ್ರ ಸಿಂಗ್‌ ಎಂಬಾತ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ “ಇದು ರಾಜಸ್ಥಾನದ ಕೋಟಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಜಿಹಾದಿಗಳಿಂದ ನಡೆದ ಘಟನೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ನೋಡಿ ಪೊಲೀಸರೇ ಜಿಹಾದಿಗಳಿಂದ ಪ್ರಾಣಭಿಕ್ಷೆ ಬೇಡುತ್ತಿದ್ದಾರೆ. ಇನ್ನು ಸಾಮಾನ್ಯ ಹಿಂದುಗಳ ಪರಿಸ್ಥಿತಿ ಏನಾಗಬಹುದು. ಈ ದೃಶ್ಯಗಳು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕಂಡು ಬಂದರೆ ಆಶ್ಚರ್ಯವಿಲ್ಲ” ಎಂದು ಉಲ್ಲೇಖಿಸಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾನೆ….

Read More

Fact Check : ಛತ್ತೀಸ್‌ಗಢ ಬಿಜೆಪಿ 2 ಲಕ್ಷ ರೂ ರೈತರ ಸಾಲ ಮನ್ನಾ ಮಾಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಲ್ಲ

ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಆ ರಾಜ್ಯದಲ್ಲಿ ರಾಜಕೀಯವಾಗಿ ಹಲವು ರೀತಿಯಾದ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬೋದಕ್ಕೆ ಪ್ರಾರಂಭವಾಗಿವೆ. ಅದೇ ರೀತಿಯಲ್ಲಿ ಇದೀಗ ಛತ್ತೀಸ್‌ಗಢದ ಬಿಜೆಪಿ ಪ್ರಣಾಳಿಕೆಯ ವಿಚಾರ ಸದ್ದು ಮಾಡುತ್ತಿದೆ ಅದರಲ್ಲಿ  “ಛತ್ತೀಸ್‌ಗಢದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರು ಮತ್ತು ಸ್ವಸಹಾಯ ಸಂಘಗಳ ಸುಮಾರು 2 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಛತ್ತೀಸ್‌ಗಢ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ” ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬೋದಕ್ಕೆ ಪ್ರಾರಂಭವಾಗಿದೆ. ಇದು ಅಲ್ಲಿನ ಚುನಾವಣೆಯ…

Read More

ಛತ್ತಿಸ್ಗಡದ ಮುಖ್ಯಮಂತ್ರಿ ಅದಾನಿಗಾಗಿ ಕೆಲಸ ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿಲ್ಲ

ರಾಹುಲ್ ಗಾಂಧಿ ಅವರು ಟಿ.ಎಸ್.ಸಿಂಗ್ ದೇವ್ ಅವರನ್ನು ಛತ್ತೀಸ್ ಗಢದ ಮುಖ್ಯಮಂತ್ರಿ ಎಂದು ಉಲ್ಲೇಖಿಸಿದ್ದಾರೆ. ಮತ್ತು ಚತ್ತಿಸ್ಗಡದ ಮುಖ್ಯಮಂತ್ರಿಗಳು(ಕಾಂಗ್ರೆಸ್‌) ಸಹ ಅದಾನಿಯಂತವರಿಗೆ ಕೆಲಸ ಮಾಡುತ್ತಾರೆ.  ಎಂದು ಪ್ರತಿಪಾದಿಸಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ, ಬಲಪಂಥೀಯ ಮಾಧ್ಯಮಗಳಾದ ಪೋಲಿಟಿಕಲ್ ಕಿಡ, ಮೇಘ ಅಪ್ಡೆಟ್ಸ್ ಬಲಪಂಥೀಯ ಪತ್ರಕರ್ತ ಮಿ. ಸಿನ್ಹ  ಸೇರಿದಂತೆ ಅನೇಕರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ಚೆಕ್: ಈ ವಿಡಿಯೋ 2023ರ ಅಕ್ಟೋಬರ್ 29ರಂದು ಛತ್ತಿಸ್ಗಡದ ರಾಜನಂದಗಾಂವ್‌ನಲ್ಲಿ ನಡೆದ ಸಾರ್ವಜನಿಕ ಭಾಷಣದ್ದಾಗಿದೆ. ತಮ್ಮ ಭಾಷಣದಲ್ಲಿ ರಾಹುಲ್…

Read More