Fact Check: ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊ ದೇಶದ ಮಾಜಿ ಸಾರಿಗೆ ಸಚಿವ ವಿನ್ಸೆಂಟ್ ಡೆಬಿಲ್ಗೊ ಅವರಿಗೆ ಜನರೇ ಶಿಕ್ಷೆ ನೀಡಿದ್ದಾರೆ ಎಂಬುದು ಸುಳ್ಳು

ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊ ದೇಶದ ಮಾಜಿ ಸಾರಿಗೆ ಸಚಿವ ವಿನ್ಸೆಂಟ್ ಡೆಬಿಲ್ಗೊ ಎಂಬ ವ್ಯಕ್ತಿಯೊಬ್ಬನನ್ನು ದೊಣ್ಣೆಗಳಿಂದ ಹೊಡೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿರುವ ವ್ಯಕ್ತಿಯನ್ನು ಡೆಬಿಲ್ಗೊ ಎಂದು ವಿವರಿಸಲಾಗಿದ್ದು, ಆಗಸ್ಟ್ 2023 ರಲ್ಲಿ ಆರ್ಥಿಕ ವಂಚನೆಗಾಗಿ 11 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಫೇಸ್‌ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಪೋಸ್ಟ್ ಮಾಡಿ, “ಇದು ಆಫ್ರಿಕಾದ ಹಣಕಾಸು ಸಚಿವ ಬುರ್ಕಿನಾ ಫಾಸೊ. ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅಧ್ಯಕ್ಷ ಇಬ್ರಾಹಿಂ ಇವರ ಶಿಕ್ಷೆಗಾಗಿ ಜನರಿಗೆ ಹಸ್ತಾಂತರಿಸಿದ್ದಾರೆ. ಭಾರತದಲ್ಲಿ ಇದೇ…

Read More

Fact Check | ನೈಲ್‌ ನದಿ ಬಳಿಯ ಸರೋವರದಲ್ಲಿ ಮಾನವ ಮುಖದ ಹೋಲಿಕೆಯ ಮೀನು ಪತ್ತೆಯಾಗಿಲ್ಲ

“ನೈಲ್ ನದಿಯ ಬಳಿ ಸರೋವರವೊಂದರಲ್ಲಿ ಮಾನವ ಮುಖದ ಮೀನು ಪತ್ತೆಯಾಗಿದೆ. ಇದನ್ನು ಎಲ್ಲರಿಗೂ ಶೇರ್‌ ಮಾಡಿ” ಎಂಬ ಪೋಸ್ಟ್‌ವೊಂದನ್ನ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ ನೋಡಿದ ಸಾಕಷ್ಟು ಮಂದಿ ಅಚ್ಚರಿಯನ್ನು ವ್ಯಕ್ತಪಡಿಸಿದ್ದು, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ವಿಚಿತ್ರ ಜೀವಿಯು ನೋಡಲು ದೇಹಾಕಾರದಲ್ಲಿ ಮಾನವನಂತೆ ಇದ್ದು, ಇದರ ಮುಖ ಮಾತ್ರ ಮೀನಿನಂತೆ ಇರುವುದರಿಂದ ಸಾಕಷ್ಟು ಮಂದಿ ಅಚ್ಚರಿಯನ್ನು ವ್ಯಕ್ತ ಪಡಿಸುವುದರ ಜೊತೆಗೆ ಇದು ನಿಜವಿರಬಹುದು ಎಂದು ನಂಬಿದ್ದಾರೆ.  ಇದಕ್ಕೆ ಪೂರಕ ಎಂಬಂತೆ ಹೆಡ್‌ಟ್ಯಾಪ್‌ ಎಂಬ…

Read More