Fact Check : ಇಂದಿರಾ ಗಾಂಧಿಯವರು ಮೀನು ತಿನ್ನುತ್ತಿದ್ದರು ಎಂದು ಹುರಿದ ಜೋಳ ತಿನ್ನುವ ಫೋಟೋ ಹಂಚಿಕೆ
ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಬ್ರಾಹ್ಮಣ’ರಾಗಿದ್ದರೂ, ಇವರು ಮೀನು ತಿನ್ನುತ್ತಿದ್ದರು” ಎಂಬ ಹೇಳಿಕೆಯೊಂದಿಗೆ ಈ ಫೋಟೋವನ್ನು ವೈರಲ್ ಮಾಡಲಾಗುತ್ತಿದೆ. ವರದಿಗಳ ಪ್ರಕಾರ , ಪುಷ್ಕರ್ನ ದೇವಾಲಯದ ಅರ್ಚಕರೊಬ್ಬರು 2018 ರಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪೂಜಾ ಸಮಾರಂಭದಲ್ಲಿ ರಾಹುಲ್ ಗಾಂಧಿಯವರು ಗೋತ್ರ ‘ದತ್ತಾತ್ರೇಯ’ ಮತ್ತು ತಾನೊಬ್ಬ ‘ಕಾಶ್ಮೀರಿ ಬ್ರಾಹ್ಮಣ’ ಎಂದು ಹೇಳಿರುವುದಾಗಿ ಬಹಿರಂಗಪಡಿಸಿದ್ದರು. “ದತ್ತಾತ್ರೇಯ ಕಾಶ್ಮೀರಿ ಬ್ರಾಹ್ಮಣನ(ರಾಹುಲ್ ಗಾಂಧಿ) ಅಜ್ಜಿ ಮೀನು ತಿನ್ನುತ್ತಿದ್ದಾರೆ. ಇವರು ನಿಜಕ್ಕೂ ಅದ್ಭುತ ಮಹಿಳೆ….ನಮಗೆ ಬೇರೆ…