Fact Check : ಬಾಂಗ್ಲಾದೇಶದಲ್ಲಿ ಪ್ರವಾಹಕ್ಕೆ ಒಳಗಾದ ದೇವಾಲಯವೆಂದು ಭಾರತದ ದೇವಾಲಯದ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ
ಭಾರತದ ದೇವಾಲಯದ ಚಿತ್ರವನ್ನು, ಬಾಂಗ್ಲಾದೇಶದ ಪ್ರವಾಹದಲ್ಲಿ ಸಿಲುಕಿಕೊಂಡಿರುವ ದೇವಾಲಯ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ” ಭಾರತ ದೇಶವು ತನ್ನ ಎಲ್ಲಾ ಆಣೆಕಟ್ಟೆಗಳನ್ನು ತೆರೆದಾಗ ಪ್ರವಾಹ ಉಂಟಾಗಿ ಬಾಂಗ್ಲಾದೇಶದಲ್ಲಿನ ದೇವಾಲಯವು ನೀರಿನಲ್ಲಿ ಮುಳುಗುತ್ತಿದೆ” ಎಂದು ಹಂಚಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ಸಂಭವಿಸಿದ ಪ್ರವಾಹಕ್ಕೆ ಭಾರತವನ್ನು ಆರೋಪಿಸಿ ಅನೇಕ ಸುಳ್ಳುಗಳು ಇತ್ತೀಚೆಗೆ ಕಂಡುಬರುತ್ತಿವೆ. ಫ್ಯಾಕ್ಟ್ ಚೆಕ್ : ಗೂಗಲ್ ರಿವರ್ಸ್ ಇಮೇಜ್‌ನ್ನು ಬಳಸಿಕೊಂಡು ಈ ಚಿತ್ರವನ್ನು ಹುಡುಕಿದಾಗ ಇದು 2019ರದ್ದಾಗಿದೆ. ಭಾರತದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಕಂಡು ಬಂದ ಚಿತ್ರವಾಗಿದೆ. ಇದು…