ರಾಹುಲ್ ಗಾಂಧಿ

Fact Check: ರಾಹುಲ್ ಗಾಂಧಿ ಹೇಳಿಕೆಗಳನ್ನು ತಿರುಚಿ ಅವರ ಹಿಂದು ವಿರೋಧಿ ಹೇಳಿಕೆಗಳ ಪಟ್ಟಿ ಎಂದು ಹಂಚಿಕೊಳ್ಳಲಾಗುತ್ತಿದೆ

ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ತಿರುಚಿ ಅವರನ್ನು ಹಿಂದು ಧರ್ಮ ವಿರೋಧಿ ಎಂದು ಬಿಂಬಿಸುತ್ತಿರುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ರಾಹುಲ್ ಗಾಂಧಿಯವರು ಎಲ್ಲಿಯೇ ಭಾಷಣ ಮಾಡಿದರೂ ಮತ್ತು ಹೇಳಿಕೆಗಳನ್ನು ನೀಡಿದರೂ ಅವುಗಳನ್ನು ತಿರುಚಿ ಅಥವಾ ಎಡಿಟ್‌ ಮಾಡಿ ವೀಡಿಯೋ ಮತ್ತು ಪೋಸ್ಟರ್ ಹಂಚಿಕೊಳ್ಳಲಾಗುತ್ತಿದೆ. ಈಗ ಅದೇ ರೀತಿಯ ಪೋಸ್ಟರ್ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಅದರಲ್ಲಿ, “ರಾಹುಲ್ ಗಾಂಧಿಯ ಹಿಂದೂ ವಿರೋಧಿ ಹೇಳಿಕೆಗಳು: ಹಿಂದೂಗಳು ದೇವಸ್ಥಾನಕ್ಕೆ ಹೋಗಿ ಬಂದ ಮೇಲೆ ಬಸ್‌ನಲ್ಲಿ ಮಹಿಳೆಯರನ್ನು ಚುಡಾಯಿಸ್ತಾರೆ. ಹಿಂದೂಗಳು, ಹಿಂದುತ್ವ…

Read More

Fact Check: ಏಕರೂಪ ನಾಗರಿಕ ಸಂಹಿತೆ ಜಾರಿಗೊಳ್ಳದೇ ಇದ್ದರೆ ಭಾರತದಲ್ಲಿ ಹಿಂದುಗಳು ಹಿಂದುಳಿದವರಾಗುತ್ತಾರೆ ಎಂಬುದು ಸುಳ್ಳು

ಕಳೆದೊಂದು ದಶಕಗಳಿಂದ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿ ಹಿಂದುಗಳೇ ಹಿಂದುಳಿದವರಾಗುವ ಸಾಧ್ಯತೆ ಇದೆ ಮತ್ತು ಭಾರತ ಮುಸ್ಲಿಂ ರಾಷ್ಟ್ರವಾಗುತ್ತದೆ ಎಂದು ಬಿಂಬಿಸಲು ಅನೇಕ ವಾದಗಳನ್ನು, ಪ್ರತಿಪಾದನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ, ವೀಡಿಯೋ, ವರದಿಗಳನ್ನು ಹಂಚಿಕೊಳ್ಳುವ ಮೂಲಕ ಮುಸ್ಲಿಮರಿಂದ ಜನಸಂಖ್ಯಾ ಜಿಹಾದಿ ನಡೆಯುತ್ತಿದೆ ಎಂದು ನಿರೂಪಿಸಲು ಬಿಜೆಪಿ ಮತ್ತು ಬಲಪಂಥೀಯ ಬೆಂಬಲಿಗರು ಮತ್ತು ಅವರ ನೇತೃತ್ವದ ಮಾಧ್ಯಮಗಳು ಇನ್ನಿಲ್ಲದಂತೆ ಪ್ರಯತ್ನ ನಡೆಸುತ್ತಿದ್ದಾರೆ. ಈ ಮೂಲಕ ಹಿಂದುಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿ ನಾವು ಅವರಿಗೆ ಗುಲಾಮರಂತೆ ಬದುಕಬೇಕಾಗುತ್ತದೆ ಎಂಬ ಆತಂಕವನ್ನು…

Read More

Fact Check: ರಾಹುಲ್ ಗಾಂಧಿ ಸದನದಲ್ಲಿ ಹಿಂದು ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಎಡಿಟ್ ವೀಡಿಯೋ ಹಂಚಿಕೊಂಡ ನಿರ್ಮಲ ಸೀತಾರಾಮನ್

ಲೋಕಸಭೆಯಲ್ಲಿ ಇಂದು(ಸೋಮವಾರ) ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರ ನಡುವೆ ಹಿಂದೂ ಧರ್ಮದ ಕುರಿತು ತೀವ್ರ ಮಾತಿನ ಚಕಮಕಿ ನಡೆಯಿತು. ಸಧ್ಯ ರಾಹುಲ್ ಗಾಂಧಿಯವರು ಹಿಂದು ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಹಿಂದುಗಳನ್ನು ಹಿಂಸಾತ್ಮಕ ಎಂದು ಕರೆದಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಆರೋಪಿಸಿದ್ದಾರೆ. ಸಚಿವೆ ನಿರ್ಮಲ ಸೀತಾರಾಮನ್…

Read More
ರಿಷಿಕೇಶ

Fact Check: ರಿಷಿಕೇಶದಲ್ಲಿ ರಾಫ್ಟಿಂಗ್ ಸಮಯದಲ್ಲಿ ನಡೆದಿರುವ ಗಲಾಟೆಗೆ ಯಾವುದೇ ಕೋಮು ಆಯಾಮವಿಲ್ಲ

ರಿಷಿಕೇಶದ ಗಂಗಾನದಿಯ ದಡದಲ್ಲಿ ಪ್ರವಾಸಿಗರು ಮತ್ತು ರಾಫ್ಟಿಂಗ್ ಮಾರ್ಗದರ್ಶಕರ ನಡುವೆ ವಾಗ್ವಾದ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ, ಪ್ರವಾಸಿಗರು ಮತ್ತು ರಾಫ್ಟಿಂಗ್ ಗೈಡ್‌ಗಳ ನಡುವಿನ ಘರ್ಷಣೆಯನ್ನು ಚಿತ್ರಿಸುವ ವೀಡಿಯೊ ಕೋಮುವಾದದ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಮುಸ್ಲಿಂ ರಾಫ್ಟಿಂಗ್ ಮಾರ್ಗದರ್ಶಕರು ಹಿಂದೂಗಳ ಮೇಲೆ (ಇಲ್ಲಿ ಮತ್ತು ಇಲ್ಲಿ) ಹಲ್ಲೆ ನಡೆಸಿದ್ದಾರೆ ಎಂದು ವೀಡಿಯೋದಲ್ಲಿ ಹೇಳಲಾಗುತ್ತಿದೆ. ऋषिकेश:- जेहादी हिंदुओ के हर पवित्र पर्यटन स्थल पर पहुंच रहे हैं, और वहां का सारा…

Read More

Fact Check: ಉತ್ತರ ಪ್ರದೇಶದಲ್ಲಿ ಟೋಲ್‌ ಪ್ಲಾಜಾವನ್ನು ಬುಲ್ಡೋಜರ್‌ನಿಂದ ಒಡೆದು ಹಾಕಿರುವ ವ್ಯಕ್ತಿ ಹಿಂದುವೇ ಹೊರತು ಮುಸ್ಲಿಂ ಅಲ್ಲ

ಉತ್ತರ ಪ್ರದೇಶದ ದೆಹಲಿ-ಲಖನೌ ಹೆದ್ದಾರಿಯಲ್ಲಿ ಜೂನ್ 11, 2024 ರಂದು, ಸಿಬ್ಬಂದಿ ಟೋಲ್ ಶುಲ್ಕವನ್ನು ಪಾವತಿಸಲು ಕೇಳಿದ ಎಂದು, ಕುಡಿದು ಬುಲ್ಡೋಜರ್ ಆಪರೇಟರ್ ಒಬ್ಬ ಪಿಲ್ಖುವಾ ಪ್ರದೇಶದಲ್ಲಿನ ಛಜರ್ಸಿ ಟೋಲ್ ಪ್ಲಾಜಾದ ಭಾಗಗಳನ್ನು ಒಡೆದು ಹಾಕಿದ್ದಾನೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಘಟನೆಯ ವಿಡಿಯೋ ವೈರಲ್ ಆದ ನಂತರ ಪೊಲೀಸರು ಚಾಲಕನನ್ನು ಬಂಧಿಸಿ ಬುಲ್ಡೋಜರ್ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಈಗ, ಬುಲ್ಡೋಜರ್ ಚಾಲಕ ಮುಸ್ಲಿಂ ಎಂದು ಸುಳ್ಳು ಮತ್ತು ಕೋಮುವಾದಿ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ….

Read More

Fact Check: 2017 ರ ವೀಡಿಯೊವನ್ನು ಪಶ್ಚಿಮ ಬಂಗಾಳದಲ್ಲಿ ರೋಹಿಂಗ್ಯಾಗಳು ಹಿಂದೂಗಳನ್ನು ಥಳಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಪರಿಸ್ಥಿತಿ ಹೇಗಿದೆ ನೊಡಿ ಎನ್ನಲಾದ ವೀಡಿಯೊ ಒಂದು (ಇಲ್ಲಿ ಮತ್ತು ಇಲ್ಲಿ) ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಗುಂಪೊಂದು ಕೆಲವು ಪುರುಷರನ್ನು ಹಿಂಬಾಲಿಸಿ ಥಳಿಸುವುದನ್ನು ನಾವು ನೋಡಬಹುದು. ಕೆಲವು ರೋಹಿಂಗ್ಯಾ ಪುರುಷರು ಹಿಂದೂಗಳಿಗೆ ಒದೆಯುವುದು ಮತ್ತು ಗುದ್ದುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ. ಈ ಲೇಖನದ ಮೂಲದ ಇದು ನಿಜವೇ, ನಿಜಕ್ಕೂ ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಪರಿಸ್ಥಿತಿ ಕಷ್ಟಕರವಾಗಿದೆಯೇ ತಿಳಿಯೋಣ ಬನ್ನಿ. ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೋವಿನ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು,…

Read More
ಹಿಂದು

Fact Check: ರಾಜಸ್ತಾನದಲ್ಲಿ ಜಮೀನು ವ್ಯಾಜ್ಯದ ಗಲಾಟೆಯನ್ನು ಹಿಂದು ಮನೆಗೆ ಕಲ್ಲು ತೂರಾಟ ಎಂದು ತಪ್ಪಾಗಿ ಹಂಚಿಕೆ

ಇತ್ತೀಚೆಗೆ ಜನರಲ್ಲಿ ಮುಸ್ಲಿಂ ಸಮುದಾಯದ ಕುರಿತು ದ್ವೇಷ ಬಿತ್ತುವ ಸಲುವಾಗಿ ಅನೇಕ ಪ್ರಯತ್ನಗಳನ್ನು ನಮ್ಮ ದೇಶದಲ್ಲಿ ನಡೆಸಲಾಗುತ್ತಿದೆ. ಎಲ್ಲಿಯೇ ಜಗಳಗಳು, ಕೊಲೆ, ಹಲ್ಲೆಗಳು ನಡೆದರೂ ಅದಕ್ಕೆ ಧರ್ಮದ ಬಣ್ಣ ಹಚ್ಚುವುದು, ಆರೋಪಿ ಮುಸ್ಲಿಂ ಆಗಿದ್ದರೆ ಅದನ್ನು ದೊಡ್ಡ ಸಂಗತಿ ಮಾಡಿ ರಾಜಕೀಯವಾಗಿ ಬದಲಾಯಿಸಲು ಹುನ್ನಾರಗಳು ನಡೆಯುತ್ತಿದೆ. ಈ ಮೂಲಕ ಮುಸ್ಲಿಂ ಸಮುದಾಯದ ಕುರಿತು ಇತರೆ ಜನರಲ್ಲಿ ಭಯ ಹುಟ್ಟಿಸಿ ನಾವು ನಿಮ್ಮ ರಕ್ಷಿಸುತ್ತೇವೆ ಎಂಬ ಸುಳ್ಳು ಭರವಸೆಗಳ ನೀಡಿ ಮತ ಪಡೆಯಲಷ್ಟೇ ಇಂತಹ ದ್ವೇಷದ ರಾಜಕಾರಣವನ್ನು ಹುಟ್ಟು…

Read More
Aravind Kejriwal

Fact Check: ಅರವಿಂದ್ ಕೇಜ್ರಿವಾಲ್ ಕ್ರಿಪ್ಟೋ ಕ್ರಿಶ್ಚಿಯನ್ ಎಂಬುದು ಸಂಪೂರ್ಣ ಸುಳ್ಳು

ಕಳೆದ ಅನೇಕ ದಿನಗಳಿಂದ ತಮ್ಮ ವಿರೋಧ ಪಕ್ಷದ ನಾಯಕರನ್ನು ದಾಳಿ ಮಾಡಲು ಬಿಜೆಪಿ ಪಕ್ಷವು ಧರ್ಮವನ್ನು ಅಸ್ತ್ರವನ್ನಾಗಿ ಬಳಸುತ್ತಿದೆ. ಹೀಗಾಗಲೇ ನೆಹರೂ ಮನೆತನವು ಮೂಲ ಮುಸ್ಲಿಂ ಧರ್ಮಕ್ಕೆ ಸೇರಿದ್ದು ಎನ್ನಲಾಗುತ್ತಿದೆ ಅದೇ ರೀತಿ ಮಹಾತ್ಮ ಗಾಂಧೀಜಿಯವರನ್ನು ಸಹ ಮುಸ್ಲಿಂ ಎಂದು ಆರೋಪಿಸಲಾಗುತ್ತಿತ್ತು. ಈಗ ಅರವಿಂದ್ ಕೇಜ್ರಿವಾಲ್ ಅವರನ್ನು ಕ್ರಿಶ್ಚಿಯನ್ ಎನ್ನಾಗುತ್ತಿದೆ. ಈ ಮೂಲಕ ಬಿಜೆಪಿ ವಿರೋದಿ ನಾಯಕರುಗಳೆಲ್ಲಾ ಮೂಲ ಹಿಂದುಗಳಲ್ಲ ಎಂದು ಪ್ರತಿಪಾದಿಸಲಾಗುತ್ತಿದೆ. ಇದರ ಸಲುವಾಗಿ, “ಅರವಿಂದ್ ಕೇಜ್ರಿವಾಲ್ ಹಿಂದೂ ವಿರೋಧಿ ಮತ್ತು ಕ್ರಿಪ್ಟೋ ಕ್ರಿಶ್ಚಿಯನ್. ಮದರ್…

Read More
Pakistan

ಪಾಕಿಸ್ತಾನದಲ್ಲಿ ಹಿಂದು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ

“ಪಾಕಿಸ್ತಾನದಲ್ಲಿ, ಹಿಂದೂ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಮುಸ್ಲಿಮರು ವಿವಸ್ತ್ರಗೊಳಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡಿದರು | ವೀಡಿಯೊವನ್ನು ತುಂಬಾ ಶೇರ್ ಮಾಡಿ, ಮೋದಿ ಸರ್ಕಾರವು ಸಿಎಎ-ಎನ್‌ಆರ್‌ಸಿಯನ್ನು ಆದಷ್ಟು ಬೇಗ ಜಾರಿಗೊಳಿಸುವ ಮೂಲಕ ಹಿಂದೂ ಸಿಖ್, ಜೈನ ಮತ್ತು ಬುದ್ಧನನ್ನು ಭಾರತಕ್ಕೆ ಕರೆತರಬೇಕು ಮತ್ತು 10 ಕೋಟಿ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾಗಳನ್ನು ಓಡಿಸಬೇಕು ಭಾರತದಲ್ಲಿ ಕುಳಿತಿರುವ ಒಳನುಗ್ಗುವವರಿಗೆ ಸಹಾಯ ಮಾಡುತ್ತಿರುವವರನ್ನು ಬಗ್ಗುಬಡಿಯಬೇಕು ಹಂಚಿಕೊಳ್ಳುವುದನ್ನು ನಿಲ್ಲಿಸಬಾರದು ಸ್ನೇಹಿತರೇ” ಎಂಬ ಸಂದೇಶದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಇಬ್ಬರು ಮಹಿಳೆಯರು(ಅದರಲ್ಲಿ…

Read More

Fact Check: ತುಮಕೂರಿನಲ್ಲಿ ರಥ ಸುಟ್ಟ ಆರೋಪಿ ಹಿಂದುವೇ ಹೊರತು ಮುಸ್ಲಿಂ ಅಲ್ಲ

ಇತ್ತೀಚೆಗೆ ಭಾರತದಲ್ಲಿ ಯಾವ ದುರ್ಘಟನೆ ಸಂಭವಿಸಿದರೂ ಪೂರ್ವಾಗ್ರಹಪೀಡಿತರಾಗಿ ಅದನ್ನು ಮುಸ್ಲಿಂ ಸಮುದಾಯವನ್ನು ಹೊಣೆ ಮಾಡುವ ಚಾಳಿ ಆರಂಭವಾಗಿದೆ. ರಾಜಕೀಯ ಪಕ್ಷಗಳು ಸಹ ಇದಕ್ಕೆ ಬೆಂಬಲವಿತ್ತು ಧರ್ಮ ಧರ್ಮಗಳ ನಡುವೆ ದ್ವೇಷ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ, “ತುಮಕೂರು ಜಿಲ್ಲೆಯ ನಿಟ್ಟೂರಿನ 800 ವರ್ಷಗಳ ಇತಿಹಾಸ ಇರುವ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ರಥಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಹಿಂದುಗಳು ಮೌನವಾದಷ್ಟು ಅವರ ಅಟ್ಟಹಾಸ ಜಾಸ್ತಿಯಾಗುತ್ತದೆ.” ಎಂದು ಪ್ರತಿಪಾದಿಸಿ ಪೋಸ್ಟರ್ ಒಂದನ್ನು ಹರಿಬಿಡಲಾಗಿದೆ….

Read More