ರೇವಂತ್ ರೆಡ್ಡಿ

Fact Check: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮುಸ್ಲಿಂ ಕಲ್ಯಾಣಕ್ಕಾಗಿ ದೇವಸ್ಥಾನದ ಜಮೀನು ಮಾರುತ್ತೇವೆ ಎಂದು ಹೇಳಿಲ್ಲ

ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ರಾಜ್ಯದಲ್ಲಿನ ಮುಸ್ಲಿಮರ ಕಲ್ಯಾಣಕ್ಕಾಗಿ ದೇವಸ್ಥಾನದ ಜಮೀನುಗಳನ್ನು ಮಾರಾಟ ಮಾಡುವ ಉದ್ದೇಶವನ್ನು ಪ್ರಕಟಿಸಿದ್ದಾರೆ ಎಂದು ಎನ್‌ಟಿವಿ ಪ್ರಸಾರ ಮಾಡಿದ ಸುದ್ದಿ ಬುಲೆಟಿನ್‌ನ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಮುಸ್ಲಿಂ ಘೋಷಣೆಗೆ ಹಣ ಸಂಗ್ರಹಿಸಲು ರೇವಂತ್ ರೆಡ್ಡಿ ದೇವಸ್ಥಾನದ ಭೂಮಿಯನ್ನು ಹರಾಜು ಹಾಕಲಿದ್ದಾರೆ ಎಂಬ ವೇ2ನ್ಯೂಸ್ ವರದಿಯ ಸ್ಕ್ರೀನ್‌ಶಾಟ್ ಅನ್ನು ಕೆಲವರು ಹಂಚಿಕೊಂಡಿದ್ದಾರೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು Revanth Reddy, CM of…

Read More

Fact Check: ಕರಾವಳಿಯಲ್ಲಿ ಮುಸ್ಲಿಮರು ಹಿಂದೂ ದೇವಾಲಯವನ್ನ ಮಸೀದಿಯನ್ನಾಗಿ ಮಾಡಿದ್ದಾರೆ ಎಂಬುದು ನಿಜವಲ್ಲ

ಇತ್ತೀಚೆಗೆ ಭಾರತದ ಅನೇಕ ಪ್ರಮುಖ ಮಸೀದಿಗಳನ್ನು, ಪ್ರವಾಸಿ ತಾಣಗಳನ್ನು ಈ ಹಿಂದೆ ಇವು ದೇವಸ್ಥಾನ ಆಗಿದ್ದವು ಎಂದು ಪ್ರತಿಪಾದಿಸಲಾಗುತ್ತಿದೆ. ಜಗತ್‌ ಪ್ರಸಿದ್ದ ತಾಜ್‌ ಮಹಲ್, ಕುತುಬ್ ಮಿನಾರ್ ಸಹ ಶಿವನ ದೇವಾಲಯಗಳಾಗಿದ್ದವು ಎಂದು ಪ್ರತಿಪಾದಿಸಲಾಗುತ್ತಿದೆ. ಅದೇ ರೀತಿ ಈಗ, “ಕರ್ನಾಟಕ ಕರಾವಳಿ ಪ್ರದೇಶದಲ್ಲಿ, ಮುಸ್ಲಿಮರು ಹಿಂದೂ ದೇವಾಲಯವನ್ನು ಆಕ್ರಮಿಸಿಕೊಂಡು ಮಸೀದಿಯನ್ನಾಗಿ ಮಾಡಿದ್ದಾರೆ. ಅಥವಾ ಯಾವುದೋ ಮಸೀದಿಯೊಳಗೆ ಒಂದು ಪುರಾತನ ದೇವಾಲಯ ಅಡಗಿಸಿಡಲಾಗಿದೆ. ಅಥವಾ ಸುಂದರ ಕೆತ್ತನೆಗಳನ್ನು ಹೊಂದಿರುವ ಈ ದೇವಾಲಯದ ಸುತ್ತ ಗೋಡೆಗಳನ್ನು ಕಟ್ಟಿ ದೇವಾಲಯ ಕಾಣದಂತೆ…

Read More

Fact Check: ಪಾಕಿಸ್ತಾನದಲ್ಲಿ ಕೇವಲ 20 ಹಿಂದೂ ದೇವಾಲಯಗಳು ಉಳಿದಿವೆ ಎಂಬುದು ಸುಳ್ಳು

ಭಾರತದಲ್ಲಿ ಹಿಂದು ಮುಸ್ಲಿಂ ಚರ್ಚೆ ಎದುರಾದಾಗಲೆಲ್ಲ ಪಾಕಿಸ್ತಾನವನ್ನು ಎಳೆದು ತರುವುದು ಸಾಮಾನ್ಯ ಸಂಗತಿಯಾಗಿದೆ. ದೇಶದಲ್ಲಿ ನಡೆಯುವ ಎಲ್ಲಾ ಘಟನೆಗಳಿಗೂ ಪಾಕಿಸ್ತಾನದ ಜೊತೆಗೆ ಹೋಲಿಕೆ ಮಾಡಿಕೊಂಡು ಹೆಮ್ಮೆ ಪಡುವುದು ಭಾರತೀಯರ ಅಭ್ಯಾಸಗಳಲ್ಲೊಂದು. ಅಭಿವೃದ್ಧಿಯ ವಿಷಯದಲ್ಲಿಯೂ ಅಷ್ಟೇ ಪಾಕಿಸ್ತಾನಕ್ಕಿಂತ ನಾವು ಮುಂದೆ ಇದ್ದೇವೆ ಎಂದು ಹೆಮ್ಮೆ ಪಡುವುದರ ಜೊತೆಗೆ ತಮಗೆ ಆಗದವರನ್ನು ಪಾಕಿಸ್ತಾನಿ ಎನ್ನುವುದು ಅಥವಾ ಪಾಕಿಸ್ತಾನಕ್ಕೆ ಕಳಿಸಬೇಕು ಎಂದು ಬಳಸುತ್ತಿರುತ್ತೇವೆ. ಇಷ್ಟಲ್ಲದೇ ಈಗ ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ದ ಸೇಡು ತಿರಿಸಿಕೊಳ್ಳಲು ಕೆಲವು ಬಲಪಂಥೀಯ ಮೂಲಭೂತವಾದಿಗಳು…

Read More