Fact Check : ಹಿಂದೂಗಳ ನಂಬಿಕೆಯುಳ್ಳ 8,000 ವರ್ಷಗಳ ಹಳೆಯ ದೇವಾಲಯವು ಸೌದಿಯಲ್ಲಿ ಪತ್ತೆಯಾಗಿದೆ ಎಂಬುದು ಸುಳ್ಳು

ಸೌದಿ ಅರೇಬಿಯಾದಲ್ಲಿ 8,000 ವರ್ಷಗಳಷ್ಟು ಹಳೆಯದಾದ ಸನಾತನ ಧರ್ಮದ ದೇವಾಲಯ ಮತ್ತು ನಾಗರಿಕತೆಯ ಅವಶೇಷಗಳನ್ನು ಕಂಡುಹಿಡಿಯಲಾಗಿದೆ ಎಂಬ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ ಈ ವೈರಲ್‌ ವೀಡಿಯೋದ ಹೆಸರುಗಳನ್ನು Google ಕೀವರ್ಡ್ ಬಳಸಿಕೊಂಡು ಹುಡುಕಿದಾಗ, ಈ ಉತ್ಖನನ ಮತ್ತು ಅನ್ವೇಷಣೆಯ ಕುರಿತು ಹಲವಾರು ವರದಿಗಳು ಲಭಿಸಿವೆ. 2022ರ ಜುಲೈನಲ್ಲಿ ಸೌದಿ ಹೆರಿಟೇಜ್ ಕಮಿಷನ್, ಉತ್ಖನನದಲ್ಲಿ ನೈಋತ್ಯ ಸೌದಿ ಅರೇಬಿಯಾದ ಮೌಂಟ್ ತುವೈಕ್‌ನಲ್ಲಿರುವ ಅಲ್-ಫಾವ್‌ನಲ್ಲಿ  8,000 ವರ್ಷಗಳಷ್ಟು ಹಳೆಯದಾದ ಕಲ್ಲಿನ ದೇವಾಲಯದ ತುಣುಕುಗಳು ದೊರೆತಿವೆ….

Read More
ಪಾರ್ಶ್ವವಾಯು

Fact Check: ತಾಮ್ರದ ಕಡಗ ಅಥವಾ ರಕ್ಷಾಸೂತ್ರ ಕಟ್ಟಿಕೊಳ್ಳುವ ಮೂಲಕ ಪಾರ್ಶ್ವವಾಯು ತಡೆಯಬಹುದು ಎಂಬುದಕ್ಕೆ ಸಾಕ್ಷಿಗಳಿಲ್ಲ

ಮುಂಗೈಗೆ ರಕ್ಷಾಸೂತ್ರದಂತಹ ದಾರ ಮತ್ತು ಲೋಹದ ಬ್ರಾಸೈಟ್‌ ಧರಿಸುವುದರಿಂದ ಪಾರ್ಶ್ವವಾಯುವನ್ನು ತಡೆಯಬಹುದು ಎಂದು ಯುಕೆ ಅಧ್ಯಯನವು ಕಂಡುಹಿಡಿದಿದೆ ಎಂದು ವ್ಯಕ್ತಿಯೊಬ್ಬರು ಹೇಳಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ ಯುನೈಟೆಡ್‌ ಕಿಂಗ್‌ಡಮ್‌ ನಡೆಸಿದ ಅಧ್ಯಯನದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳಲಾಗಿದೆ ಮತ್ತು ಈ ಸಂಶೋಧನೆಯನ್ನು ಹಿಂದೂ ಪುರಾಣಗಳಲ್ಲಿ ಮತ್ತು ನೂರಾರು ವರ್ಷಗಳ ಹಿಂದೆಯೇ ನಮ್ಮ ಋಷಿ ಮುನಿಗಳು, ಸಾಧು ಸಂತರು ಕಂಡುಕೊಂಡಿದ್ದರು, ಎಂದು ಅಂಗೈನ ಮಣಿಕಟ್ಟಿನ ಮೇಲೆ ಪವಿತ್ರ ದಾರವನ್ನು ಧರಿಸಲು ಶಿಫಾರಸು ಮಾಡಲಾಗುತ್ತಿದೆ. ಯುಕೆ ಅಧ್ಯಯನವು…

Read More