ರಾಹುಲ್ ಗಾಂಧಿ

Fact Check: ರಾಹುಲ್ ಗಾಂಧಿ ಹೇಳಿಕೆಗಳನ್ನು ತಿರುಚಿ ಅವರ ಹಿಂದು ವಿರೋಧಿ ಹೇಳಿಕೆಗಳ ಪಟ್ಟಿ ಎಂದು ಹಂಚಿಕೊಳ್ಳಲಾಗುತ್ತಿದೆ

ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ತಿರುಚಿ ಅವರನ್ನು ಹಿಂದು ಧರ್ಮ ವಿರೋಧಿ ಎಂದು ಬಿಂಬಿಸುತ್ತಿರುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ರಾಹುಲ್ ಗಾಂಧಿಯವರು ಎಲ್ಲಿಯೇ ಭಾಷಣ ಮಾಡಿದರೂ ಮತ್ತು ಹೇಳಿಕೆಗಳನ್ನು ನೀಡಿದರೂ ಅವುಗಳನ್ನು ತಿರುಚಿ ಅಥವಾ ಎಡಿಟ್‌ ಮಾಡಿ ವೀಡಿಯೋ ಮತ್ತು ಪೋಸ್ಟರ್ ಹಂಚಿಕೊಳ್ಳಲಾಗುತ್ತಿದೆ. ಈಗ ಅದೇ ರೀತಿಯ ಪೋಸ್ಟರ್ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಅದರಲ್ಲಿ, “ರಾಹುಲ್ ಗಾಂಧಿಯ ಹಿಂದೂ ವಿರೋಧಿ ಹೇಳಿಕೆಗಳು: ಹಿಂದೂಗಳು ದೇವಸ್ಥಾನಕ್ಕೆ ಹೋಗಿ ಬಂದ ಮೇಲೆ ಬಸ್‌ನಲ್ಲಿ ಮಹಿಳೆಯರನ್ನು ಚುಡಾಯಿಸ್ತಾರೆ. ಹಿಂದೂಗಳು, ಹಿಂದುತ್ವ…

Read More

Fact Check: ಪ್ರಧಾನಿ ಮೋದಿಯವರು ಸಂಸತ್ತಿನಲ್ಲಿ “ಕಳೆದ ಹತ್ತು ವರ್ಷಗಳಲ್ಲಿ ನಾವು ಸಾಧಿಸಿದ ವೇಗ ನಮಗೆ ಅವಮಾನ ತಂದಿದೆ” ಎಂದು ಹೇಳಿಲ್ಲ

ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಅಡಿಯಲ್ಲಿ ಭಾರತದ ಅಭಿವೃದ್ಧಿಯ ವೇಗದ ಬಗ್ಗೆ ಚರ್ಚಿಸುವಾಗ ಪ್ರಧಾನಿ ನರೇಂದ್ರ ಮೋದಿ ಅವರು ‘ನಮಗೆ ಅವಮಾನ ತಂದಿದೆ’ ಎಂದು ಹೇಳಿದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನಾಟೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ “ಕಳೆದ ಹತ್ತು ವರ್ಷಗಳಲ್ಲಿ ನಾವು ಸಾಧಿಸಿದ ವೇಗ ನಮಗೆ ಅವಮಾನ ತಂದಿದೆ!!!????(हमने पिछले दस साल में जो स्पीड पकड़ी है, हमारा ‘मुँह काला’!!!???? नरेंद्र मोदी”)…

Read More
ರಾಹುಲ್ ಗಾಂಧಿ

Fact Check: ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರ ಕುರಿತು ರಾಹುಲ್ ಗಾಂಧಿ ಅವಹೇಳನಕಾರಿ ಬೈಗುಳವನ್ನು ಪ್ರಯೋಗಿಸಿಲ್ಲ

ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಮಾಡಿದ ಭಾಷಣದ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಮೋದಿಯವರಿಗೆ ಅವಹೇಳನಕಾರಿ ಬೈಗುಳವನ್ನು ಪ್ರಯೋಗಿಸಿದ್ದಾರೆ ಎನ್ನಲಾದ ವೀಡಿಯೋ ತುಣುಕೊಂದನ್ನು ಬಿಜೆಪಿ ಬೆಂಬಲಿಗರು ಹಂಚಿಕೊಳ್ಳುತ್ತಿದ್ದಾರೆ. 5 ಸೆಕೆಂಡುಗಳ ಈ ವಿಡಿಯೋದಲ್ಲಿ ಮೋದಿ ಸಂಸತ್ತಿನಲ್ಲಿ ಭಾಷಣ ಮಾಡುತ್ತಿದ್ದಾರೆ. ನಂತರ ರಾಹುಲ್ ಗಾಂಧಿ ಬೈಗುಳದ ಪದಗಳನ್ನು ಉಚ್ಚರಿಸುವುದನ್ನು ಅದು ತೋರಿಸುತ್ತದೆ, ಆದರೆ ಘೋಷಣೆಗಳು ಹಿನ್ನೆಲೆಯಲ್ಲಿ ಮುಂದುವರಿಯುತ್ತವೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರ ಚೊಚ್ಚಲ ಭಾಷಣದ ಭಾಗಗಳನ್ನು ಸ್ಪೀಕರ್ ಓಂ…

Read More

Fact Check: ರಾಹುಲ್ ಗಾಂಧಿ ಸದನದಲ್ಲಿ ಹಿಂದು ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಎಡಿಟ್ ವೀಡಿಯೋ ಹಂಚಿಕೊಂಡ ನಿರ್ಮಲ ಸೀತಾರಾಮನ್

ಲೋಕಸಭೆಯಲ್ಲಿ ಇಂದು(ಸೋಮವಾರ) ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರ ನಡುವೆ ಹಿಂದೂ ಧರ್ಮದ ಕುರಿತು ತೀವ್ರ ಮಾತಿನ ಚಕಮಕಿ ನಡೆಯಿತು. ಸಧ್ಯ ರಾಹುಲ್ ಗಾಂಧಿಯವರು ಹಿಂದು ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಹಿಂದುಗಳನ್ನು ಹಿಂಸಾತ್ಮಕ ಎಂದು ಕರೆದಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಆರೋಪಿಸಿದ್ದಾರೆ. ಸಚಿವೆ ನಿರ್ಮಲ ಸೀತಾರಾಮನ್…

Read More

Fact Check: ರಾಷ್ಟ್ರಗೀತೆ ವೇಳೆ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹಾಜರಿದ್ದರು, ತಡವಾಗಿ ಆಗಮಿಸಿದರು ಎಂಬ ಹೇಳಿಕೆ ಸುಳ್ಳು

ದೆಹಲಿಯಲ್ಲಿ ಹೊಸದಾಗಿ ನಿರ್ಮಿಸಲಾದ ಸಂಸತ್ ಭವನದಲ್ಲಿ ಜೂನ್ 24 ರಿಂದ ಜೂನ್ 26 ರವರೆಗೆ ಹೊಸದಾಗಿ ಆಯ್ಕೆಯಾದ ಸಂಸತ್ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಈ ಅಧಿವೇಶನದ ವೀಡಿಯೋ (ಇದರಲ್ಲಿ ಸಂಸದರು ಪ್ರಮಾಣವಚನ ಸ್ವೀಕರಿಸುವ ಮೊದಲು ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಾಷ್ಟ್ರಗೀತೆ ಮುಗಿದ ನಂತರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಡವಾಗಿ ಸಂಸತ್ತಿಗೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆಂಧ್ರಪ್ರದೇಶದ ಬಿಜೆಪಿ ಉಪಾಧ್ಯಕ್ಷ ವಿಷ್ಣು ವರ್ಧನ್ ರೆಡ್ಡಿ (@SVishnuReddy) ಜೂನ್ 24 ರಂದು ವೀಡಿಯೊ…

Read More
ಮಲ್ಲಿಕಾರ್ಜುನ್ ಖರ್ಗೆ

Fact Check: ಮಲ್ಲಿಕಾರ್ಜುನ್ ಖರ್ಗೆಯವರು 50 ಸಾವಿರ ಕೋಟಿ ಆಕ್ರಮ ಆಸ್ತಿ ಹೊಂದಿದ್ದಾರೆ ಎಂಬುದಕ್ಕೆ ದಾಖಲೆಗಳಿಲ್ಲ

ನೆನ್ನೆ ಮತ್ತು ಮೊನ್ನೆಯಷ್ಟೇ ಸಂಸತ್ತಿನಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಸಂಸದರು ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮ ಜರುಗಿದೆ. ಆದರೆ ಸಂಸತ್ತಿನಲ್ಲಿ ಮೋದಿಜಿಯವರು ಖರ್ಗೆಯವರ ಆಸ್ತಿ ವಿವರಗಳನ್ನು ಬಯಲು ಮಾಡಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಹಿಂದೆಯೂ ಈ ಸಂದೇಶ ವೈರಲ್ ಆಗಿತ್ತು. ಈಗ ಮತ್ತೆ ಈ ಚರ್ಚೆ ಮುನ್ನಲೆಗೆ ಬಂದಿದೆ. ವೈರಲ್ ಸಂದೇಶದಲ್ಲಿ ” ಖರ್ಗೆಯವರು ಸಂಸತ್ತಿನಲ್ಲಿ ದಲಿತರಿಗೆ ಕನಿಷ್ಠ ಒಂದು ಪ್ರತಿಶತ ಭೂಮಿಯನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದ್ದರು. ಆಗ ಪ್ರತಿಯಾಗಿ ಮೋದಿಯವರು…

Read More