ಜಮ್ಮು ಮತ್ತು ಕಾಶ್ಮೀರ

Fact Check: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಪಾಕಿಸ್ತಾನದ ಧ್ವಜವನ್ನು ಅಪರಿಚಿತ ವ್ಯಕ್ತಿಗಳು ಹಾರಿಸಿದ್ದಾರೆ ಎಂದು ಹಳೆಯ ಪೋಟೋ ಹಂಚಿಕೆ

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ವ್ಯಕ್ತಿಯೊಬ್ಬ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಹಾರಿಸಿದ್ದಾನೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಟೋವೊಂದು ಹರಿದಾಡುತ್ತಿದೆ. ಇದನ್ನು ಅನೇಕರು “ಬ್ರೇಕಿಂಗ್:” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಮತ್ತು ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೋಸ್ಟ್ ನ ಆರ್ಕೈವ್ ಅನ್ನು ನೀವು ಇಲ್ಲಿ ವೀಕ್ಷಿಸಬಹುದು. ಈ ಚಿತ್ರವನ್ನು ಎಕ್ಸ್ ಮತ್ತು ಫೇಸ್ ಬುಕ್ ನಂತಹ ಪ್ಲಾಟ್ ಫಾರ್ಮ್ ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದೇ ರೀತಿಯ ಪೋಸ್ಟ್ ಗಳ ಹೆಚ್ಚಿನ ಆರ್ಕೈವ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು. ಫ್ಯಾಕ್ಟ್‌ ಚೆಕ್: ಈ ಚಿತ್ರವನ್ನು ಜೂನ್ 2019 ರ  ಹಳೆಯ…

Read More

ಕಾಶ್ಮೀರದ ಲಾಲ್‌ ಚೌಕ್‌ನಲ್ಲಿ ಶ್ರೀರಾಮನ ಲೇಸರ್ ಲೈಟಿಂಗ್ ಎಂದು ಡೆಹ್ರಾಡೂನ್‌ ಫೋಟೊ ಹಂಚಿಕೆ

ಅಯೋಧ್ಯೆಯ ರಾಮಮಂದಿರಕ್ಕೆ ಸಂಬಂಧಿಸಿದಂತೆ ಕಳೆದ ಹಲವಾರು ದಿನಗಳಿಂದ ಅನೇಕ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜನರು ಸಹ ಇವುಗಳನ್ನೇ ಸತ್ಯವೆಂದು ನಂಬಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಲೇ ಕನ್ನಡ ಫ್ಯಾಕ್ಟ್‌ಚೆಕ್‌ ತಂಡವು ಇಂತಹ ಹಲವಾರು ಸುಳ್ಳು ಸುದ್ದಿಗಳನ್ನು ಬಯಲುಗೊಳಿಸುವ ಪ್ರಯತ್ನ ಮಾಡಿದ್ದು ಅವುಗಳನ್ನು ನೀವು ಇಲ್ಲಿ ನೋಡಬಹುದು. ಇದರಂತೆ ಇತ್ತೀಚೆಗೆ “ಅವರ(ಕಾಂಗ್ರೆಸ್) ಆಳ್ವಿಕೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಹೆದರುತ್ತಿದ್ದರು. ಅದೆ ಲಾಲ್ ಚೌಕ್ ನಲ್ಲಿ ಇಂದು ಪ್ರಭು ಶ್ರೀರಾಮ ಅಜರಾಮರವಾಗಿ ನಿಂತಿದ್ದಾನೆ ಇದು ಮೋದಿಯವರ ತಾಕತ್ತು..! ಎಂಬ ವಿಡಿಯೋ…

Read More