ಮೋದಿ

Fact Check: ನೆಹರು, ಇಂದಿರಾ ಗೆಲುವಿನ ಅಂತರವನ್ನು ಮೋದಿಯವರ ಗೆಲುವಿನ ಅಂತರದೊಂದಿಗೆ ಹೋಲಿಸುವುದು ಸೂಕ್ತವಲ್ಲ

2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು 04 ಜೂನ್ 2024 ರಂದು ಪ್ರಕಟಿಸಲಾಯಿತು. ಬಿಜೆಪಿ 240 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ನೇತೃತ್ವದ NDA ಸಮ್ಮಿಶ್ರವು 293 ಸ್ಥಾನಗಳನ್ನು ಪಡೆದುಕೊಂಡು 09 ಜೂನ್ 2024 ರಂದು ಸರ್ಕಾರವನ್ನು ರಚಿಸಿದೆ. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ವಾರಣಾಸಿಯಿಂದ ಸ್ಪರ್ಧಿಸಿ 1.52 ಲಕ್ಷ ಮತಗಳ ಬಹುಮತದಿಂದ ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಪ್ರಧಾನಿಯಾಗಿ ವಿವಿಧ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಜವಾಹರಲಾಲ್ ನೆಹರು ಮತ್ತು ಇಂದಿರಾ…

Read More
ವಾರಣಾಸಿ

Fact Check: ಜರ್ಮನಿಯ ರೈಲು ಮಾರ್ಗದ ಚಿತ್ರವನ್ನು ಪ್ರಧಾನಿ ಮೋದಿಯವರ ವಾರಣಾಸಿ ಕ್ಷೇತ್ರದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

“ಈ ಮೆಟ್ರೋ ಚಿತ್ರ ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರವಾದ ವಾರಣಾಸಿಯದು” ಎಂಬ ಹೇಳಿಕೆಯೊಂದಿಗೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚಿತ್ರವೊಂದು ವೈರಲ್ ಆಗುತ್ತಿದೆ. ವಾರಣಾಸಿಯ ಅಭಿವೃದ್ಧಿಯನ್ನು ಪ್ರತಿನಿಧಿಸುತ್ತದೆ ಎಂಬ ಹೇಳಿಕೆಗಳೊಂದಿಗೆ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗಷ್ಟೇ “ಯುಪಿಎ ಸರ್ಕಾರದಲ್ಲಿ ಕೇವಲ ಮೂರ್ನಾಲ್ಕು ನಗರಗಳಲ್ಲಿ ಮೆಟ್ರೋ ವ್ಯವಸ್ಥೆ ಇತ್ತು ಮೋದಿ ಪ್ರಧಾನಿಯಾದ ನಂತರ ಈಗ 20 ನಗರಗಳಲ್ಲಿ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ” ಎಂದು ಬಿಜೆಪಿ ಹಂಚಿಕೊಂಡಿರುವ ಪೋಸ್ಟರ್ ಒಂದರಲ್ಲಿ ಸಿಂಗಾಪುರ್‌ನ ಮೆಟ್ರೋ ಚಿತ್ರವನ್ನು ಬಳಸಿಕೊಂಡು ಸಿಕ್ಕಿಬಿದ್ದಿತ್ತು.  ಈಗ, ‘ಸಲೀಂ…

Read More
ರಣವೀರ್ ಸಿಂಗ್

Fact Check: ನಟ ರಣವೀರ್ ಸಿಂಗ್ ಮೋದಿಯವರನ್ನು ಟೀಕಿಸಿದ್ದಾರೆ ಎಂಬುದು ಡೀಪ್ ಫೇಕ್ ವಿಡಿಯೋ

ನೆನ್ನೆ ಲೋಕಸಭಾ 2024ರ ಮೊದಲ ಹಂತದ ಚುನಾವಣೆಗೆ ಇನ್ನು ಒಂದೇ ದಿನ ಬಾಕಿ ಇದೆ ಎನ್ನುವಾಗ ಕೆಲವು ಬಾಲಿವುಡ್‌ ನಟರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಇದರಲ್ಲಿ ನಟರು ಕಳೆದ ಹತ್ತುವರ್ಷಗಳಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವು ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ ಹಾಗಾಗಿ ಯಾರು ಅಭಿವೃದ್ದಿ ಮಾಡುತ್ತಾರೆ ಅವರಿಗೆ ಮತ ನೀಡಿ ಎಂದು ಜನರನ್ನು ಕೇಳಿಕೊಂಡಿರುವ ವಿಡಿಯೋಗಳು ಹರಿದಾಡುತ್ತಿದ್ದವು. ಇತ್ತೀಚೆಗೆ “ಅಮಿರ್ ಖಾನ್ ಅವರು ನಿಮ್ಮ 25 ಲಕ್ಷ ಹಣ ಎಲ್ಲಿ ಹೋಯ್ತು?” ಎಂದು ಸಾರ್ವಜನಿಕರನ್ನು ಕೇಳಿದ್ದಾರೆ….

Read More