ಮುಸ್ಲಿಮರ ಜನಸಂಖ್ಯೆ

Fact Check: ಯುಕೆಯಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ

ಇತ್ತೀಚೆಗೆ ಭಾರತ ಮಾತ್ರವಲ್ಲದೇ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಇಸ್ಲಾಮೋಫೋಬಿಯಾ ಹೆಚ್ಚಾಗುತ್ತಿದೆ. ಯರೋಪ್‌ ರಾಷ್ಟ್ರಗಳಲ್ಲಿ ವಲಸೆ ವಿರೋಧಿ ಹೋರಾಟಗಳ ಕೂಗು ಹೆಚ್ಚಾಗುತ್ತಿದ್ದಂತೆ ಈಗ, ಮುಸ್ಲಿಂ ಸಮುದಾಯ ಮತ್ತು ಅವರ ಧರ್ಮದ ಕುರಿತು ಕೆಲವು ಮತಾಂಧ(ಫ್ಯಾಸಿಸ್ಟ್)ರು ಸುಳ್ಳು ಸುದ್ದಿಗಳನ್ನು ನಿರಂತರವಾಗಿ ಹರಿಬಿಡುವ ಮೂಲಕ ಸಮಾಜದ ಎಲ್ಲಾ ಸಮಸ್ಯೆಗಳ ಕೇಂದ್ರ ಬಿಂದು ಮುಸ್ಲಿಮರು ಎಂದು ಬಿಂಬಿಸಿ ಅವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಭಹಿಷ್ಕರಿಸುವ ಹುನ್ನಾರ ನಡೆಯುತ್ತಿದೆ. ಇದರ ಭಾಗವಾಗಿ, ಯುಕೆ ಅಥವಾ ಇಂಗ್ಲೆಂಡಿನಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಹೇಳಿಕೆಗಳ ಸಂದೇಶವೊಂದು…

Read More

Fact Check: ರಾಹುಲ್ ಗಾಂಧಿಯವರು ಲಂಡನ್ ಪ್ರವಾಸದಲ್ಲಿ ಬಾಂಗ್ಲಾದೇಶದ ತಾರಿಕ್ ರೆಹಮಾನ್ ಅವರನ್ನು ಭೇಟಿಯಾಗಿದ್ದಾರೆ ಎಂಬುದಕ್ಕೆ ಆಧಾರವಿಲ್ಲ

ಬಾಂಗ್ಲಾದೇಶದಲ್ಲಿ ಹಿಂಸಾಚಾರಗಳು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಆದರೆ ಈ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಅನೇಕರು ಪೋಟೋ ಮತ್ತು ವೀಡಿಯೋಗಳನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು, ಸುಳ್ಳು ಪ್ರತಿಪಾದನೆಗಳನ್ನು ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿ ಹಿಂದು ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಯನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದ್ದಾರೆ ಎಂದು ಸುಳ್ಳು ಹಬ್ಬಿಸಲಾಗಿತ್ತು. ನಂತರ ಹೋಟೆಲ್‌ ಒಂದಕ್ಕೆ ಬೆಂಕಿ ಬಿದ್ದ ಹಳೆಯ ವೀಡಿಯೋವನ್ನು ದೇವಾಲಯಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಹಂಚಿಕೊಂಡಿದ್ದರು. ಜಿಹಾದಿಗಳು ಕುಟುಂಬದವರನ್ನೆಲ್ಲಾ ಹತ್ಯೆ ಮಾಡಿದ್ದಾರೆ ಎಂದು ಸಂಬಂಧವಿಲ್ಲದ ಘಟನೆಯನ್ನು…

Read More
ಲೆಬನಾನ್

Fact Check: ಲೆಬನಾನ್‌ನ ಹಳೆಯ ವೀಡಿಯೊವನ್ನು ಲಂಡನ್ ನಲ್ಲಿ ನಡೆದ ಮೊಹರಂ ರ್ಯಾಲಿಯ ದೃಶ್ಯಗಳು ಎಂದು ಹಂಚಿಕೊಳ್ಳಲಾಗಿದೆ

ಮೊಹರಂ ಆಚರಣೆಯ ಭಾಗವಾಗಿ ಹಲವಾರು ವ್ಯಕ್ತಿಗಳು ಹರಿತವಾದ ವಸ್ತುಗಳಿಂದ ತಮ್ಮನ್ನು ಹಾನಿಗೊಳಿಸಿಕೊಳ್ಳುವ, ರಕ್ತಸ್ರಾವ ಮಾಡಿಕೊಳ್ಳುವ ಮತ್ತು ಆಶುರಾ ಮೆರವಣಿಗೆಯಲ್ಲಿ ಭಾಗವಹಿಸುವುದನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಇದು ಲಂಡನ್‌ನಲ್ಲಿ ಇತ್ತೀಚೆಗೆ ನಡೆದ ಮೊಹರಂ ರ್ಯಾಲಿಯನ್ನು ಚಿತ್ರಿಸುತ್ತದೆ ಎಂದು ಹೇಳಲಾಗಿದೆ. ವೀಡಿಯೊದಲ್ಲಿ, ಕೈಯಲ್ಲಿ ಉದ್ದವಾದ, ಚೂಪಾದ ವಸ್ತುಗಳನ್ನು (ಮಚ್ಚುಗಳು) ಹೊಂದಿರುವ ಜನರು, ರಕ್ತಸಿಕ್ತ ಬಿಳಿ ಬಟ್ಟೆಗಳನ್ನು ಧರಿಸಿ, ಮೆರವಣಿಗೆ ಮತ್ತು ಮಚ್ಚಿನಿಂದ ತಲೆಗೆ ಹೊಡೆಯುವುದನ್ನು ನಾವು ನೋಡಬಹುದು. ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್‌…

Read More

ಲಂಡನ್ ಮೇಯರ್ ಚುನಾವಣೆಯಲ್ಲಿ ಸಾದಿಕ್ ಖಾನ್ ಅವರ ವಿಜಯವನ್ನು ಆಚರಿಸುತ್ತಿರುವ ದೃಶ್ಯಗಳು ಎಂದು 2021 ರ ಹಳೆಯ ವೀಡಿಯೊ ಹಂಚಿಕೆ

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಲಂಡನ್‌ನ ಮೇಯರ್ ಆಗಿ ಸಾದಿಕ್ ಖಾನ್ (ಇಲ್ಲಿ ಮತ್ತು ಇಲ್ಲಿ) ಜಯಗಳಿಸುತ್ತಿದ್ದಂತೆ, ವಿಜಯಯಾತ್ರೆ ನಡೆಸಿದ್ದಾರೆ ಎಂದು ಹೇಳಿಕೊಳ್ಳುವ ವೀಡಿಯೊವನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದ ಮೂಲಕ ನಾವು ಈ ಪ್ರತಿಪಾದನೆ ವಾಸ್ತವವಾಗಿ ನಿಜವೇ ಎಂದು ಪರಿಶೀಲಿಸೋಣ. 🚨 London Has Fallen ⚠️ pic.twitter.com/Y8dt3swFzc — 𝑰𝒔𝒉𝒂𝒂𝒏 𝑪𝒉𝒂𝒖𝒅𝒉𝒂𝒓𝒚 𝕏 (@im_ishaan_) May 7, 2024 ಫ್ಯಾಕ್ಟ್‌ಚೆಕ್: ವೈರಲ್ ಪ್ರತಿಪಾದನೆಯ ನಿಖರತೆಯನ್ನು ಪರಿಶೀಲಿಸಲು ನಾವು ವೈರಲ್…

Read More
ಕ್ರೈಸ್ತರು

ಅಮೆರಿಕದಲ್ಲಿ 7 ಲಕ್ಷ ಕ್ರೈಸ್ತರು ಹಿಂದೂ ಧರ್ಮಕ್ಕೆ ಮತಾಂತರವಾದರು ಎಂಬುದು ಸುಳ್ಳು

ಅಮೆರಿಕದಲ್ಲಿ 7 ಲಕ್ಷ ಕ್ರೈಸ್ತರು ಕ್ರಿಶ್ಚಿಯನ್ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಸೇರಿ ವಿಶ್ವದಾಖಲೆ ಮಾಡಿದ್ದಾರೆ ಎಂಬ ಹೆಸರಿನಲ್ಲಿ ವಿಡಿಯೋವೊಂದು ಕಳೆದ 15 ದಿನಗಳಿಂದ ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಸಾವಿರಾರು ಜನರು ಹರೇ ರಾಮ, ಹರೇ ಕೃಷ್ಣ ಎಂದು ಭಜನೆ ಮಾಡುವುದು ಕಾಣುತ್ತದೆ. ವಿಡಿಯೋದಲ್ಲಿ ಇಂಗ್ಲೆಂಡ್ ದೇಶದ ಭಾವುಟ ಮತ್ತು ರಥವೊಂದು ಇರುವುದು ಕಂಡುಬರುತ್ತದೆ. ಅದರ ಆಧಾರದಲ್ಲಿ ಹುಡುಕಿದಾಗ 2022ರ ಸೆಪ್ಟಂಬರ್‌ನಲ್ಲಿ ಇದೇ ರೀತಿಯ ಹಲವು ವಿಡಿಯೋಗಳು ಅಪ್‌ಲೋಡ್ ಆಗಿವೆ. ಕೊಂಕಣಿ ಟಿವಿ…

Read More