Fact Check: 2016 ರಲ್ಲಿ ರಾಹುಲ್ ಗಾಂಧಿ ಉತ್ತರ ಪ್ರದೇಶದ ದರ್ಗಾಕ್ಕೆ ಭೇಟಿ ನೀಡಿದ ಹಳೆಯ ವಿಡಿಯೋ ಮತ್ತೆ ವೈರಲ್

ರಾಹುಲ್ ಗಾಂಧಿ ಸೂಫಿ ದರ್ಗಾಕ್ಕೆ ಭೇಟಿ ನೀಡುವಾಗ ತಲೆಗೆ ಟೋಪಿ ಧರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ನೀವು ರಾಷ್ಟ್ರೀಯ ಹಿತಾಸಕ್ತಿಯನ್ನು ಬಿಟ್ಟು ನಿಮ್ಮ ಸ್ವಾರ್ಥವನ್ನು ಈಡೇರಿಸಿಕೊಳ್ಳಲು *ನೋಟಾ*ವನ್ನು ಹತ್ತಿಕ್ಕುತ್ತಿದ್ದೀರಿ ಮತ್ತು ಈ ತೋಳವನ್ನು ಬಲಪಡಿಸುತ್ತಿದ್ದೀರಿ.”ಪೋಸ್ಟ್‌ನ ಹಿಂದಿ ಪಠ್ಯ – ” तुम लोग राष्ट्रहित को छोड़ कर अपने स्वार्थ की पूर्ति के लिए *नोटा* दबा रहे हो और इस भेड़िये को मजबूत कर रहे हो।…

Read More

Fact Check: ಪ್ರಧಾನಿ ಮೋದಿ ಇಸ್ಲಾಂ ವಿರೋಧಿ ಹೇಳಿಕೆ ನೀಡಿಲ್ಲ ಎಂಬುದು ಸುಳ್ಳು. ನೂರಕ್ಕೂ ಹೆಚ್ಚು ಬಾರಿ ಮುಸ್ಲಿಂ ಸಮುದಾಯದ ಕುರಿತು ದ್ವೇಷ ಭಾಷಣ ಮಾಡಿದ್ದಾರೆ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯವರಿಗೆ ಸಂಬಂಧಿಸಿದ ರೀಲ್ಸ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ” ಮೋದಿಯವರು ಒಂದೇ ಒಂದು ಬಾರಿಯೂ ಕೂಡ ಇಸ್ಲಾಂ ಧರ್ಮವನ್ನು ಮುಗಿಸಬೇಕು ಎಂದು ಹೇಳಲಿಲ್ಲ! ಆದರೂ ಕೂಡ, ಒಬ್ಬನೇ ಒಬ್ಬ ಮುಸಲ್ಮಾನನು ಮೋದಿಜಿಯವರಿಗೆ ಓಟು ನೀಡುವುದಿಲ್ಲ. ಆದರೆ ರಾಹುಲ್ ಗಾಂಧಿಯವರು ಅನೇಕ ಸಲ ಹೇಳಿದ್ದಾರೆ! ಹಿಂದೂ ಧರ್ಮವನ್ನು ನಾಶ ಪಡಿಸಬೇಕು ಎಂದು. ಆದರೂ ಸಹ ಹಿಂದುಗಳು ರಾಹುಲ್ ಗಾಂಧಿಯವರಿಗೆ ಓಟು ಹಾಕುತ್ತಾರೆ. ಇದರಿಂದಲೇ ಹಿಂದೂಗಳು…

Read More
ಮುಸ್ಲಿಂ ಯೂತ್ ಲೀಗ್‌

Fact Check: ಮುಸ್ಲಿಂ ಯೂತ್ ಲೀಗ್‌ನ ಹಿಂದೂ ವಿರೋಧಿ ಘೋಷಣೆಗಳ ಹಳೆಯ ವೀಡಿಯೊವನ್ನು ಇತ್ತೀಚಿನದು ಎಂದು ಹಂಚಿಕೊಳ್ಳಲಾಗುತ್ತಿದೆ

ಕೇರಳದ ವಯನಾಡ್‌ನಲ್ಲಿ ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬೆಂಬಲ ಸೂಚಿಸುವ ರ್ಯಾಲಿಯಲ್ಲಿ ಮುಸ್ಲಿಂ ಲೀಗ್ ಹಿಂದೂ ವಿರೋಧಿ ಘೋಷಣೆಗಳನ್ನು ಕೂಗಿದೆ ಎಂದು ಪ್ರತಿಪಾದಿಸಲು ನ್ಯೂಸ್ 18 ಇಂಡಿಯಾ ವರದಿಯ ವೀಡಿಯೊವನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗುತ್ತಿದೆ. “ವಯನಾಡ್‌ನಲ್ಲಿ ನಡೆದ ಮುಸ್ಲಿಂ ಲೀಗ್ ರ್ಯಾಲಿ ರಾಹುಲ್ ಗಾಂಧಿಯನ್ನು ಬೆಂಬಲಿಸುತ್ತದೆ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿರುವ ಅನೇಕರು “ಹಿಂದೂಗಳನ್ನು ಜೀವಂತವಾಗಿ ಸುಟ್ಟುಹಾಕಿ. ಹಿಂದೂಗಳನ್ನು ದೇವಾಲಯಗಳಲ್ಲಿ ಗಲ್ಲಿಗೇರಿಸಿ. “ನಿಮಗೆ ರಾಮಾಯಣವನ್ನು ಓದಲು ಸಾಧ್ಯವಾಗುವುದಿಲ್ಲ.” ಈ ಘೋಷಣೆಗಳು ಪಾಕಿಸ್ತಾನದ್ದಲ್ಲ. ಅವರು ಭಾರತದ ಕೇರಳದವರು! ಈ ಘೋಷಣೆಗಳನ್ನು…

Read More
ರಾಹುಲ್ ಗಾಂಧಿ

Fact Check: ರಾಹುಲ್ ಗಾಂಧಿಯವರು ಕೋಲ್ಕತ್ತಾ ಪ್ರಕರಣವನ್ನು “ಮುಖ್ಯವಲ್ಲ” ಎಂದು ಕರೆದಿದ್ದಾರೆ ಎಂದು ಎಡಿಟ್‌ ಮಾಡಿದ ವೀಡಿಯೋ ಹಂಚಿಕೆ

 ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೋಲ್ಕತಾದ ಆರ್‌.ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಪ್ರತಿಭಟಿಸುತ್ತಿರುವ ವೈದ್ಯರಿಗೆ ಮುಷ್ಕರವನ್ನು ಕೊನೆಗೊಳಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ವೀಡಿಯೊದಲ್ಲಿ ಪ್ರತಿಕ್ರಿಯಿಸಿದ್ದಾರೆ. 13 ಸೆಕೆಂಡುಗಳ ಈ ಕ್ಲಿಪ್ ಅನ್ನು ಹಂಚಿಕೊಳ್ಳುತ್ತಿರುವವರು ರಾಹುಲ್ ಗಾಂಧಿ ವರದಿಗಾರನಿಗೆ ತಮ್ಮ ಗಮನವನ್ನು ಬೇರೆಡೆಗೆ ಸೆಳೆಯಬೇಡಿ,…

Read More
ರಾಹುಲ್ ಗಾಂಧಿ

Fact Check: ರಾಹುಲ್‌ ಗಾಂಧಿ ಅನೇಕ ಮಹಿಳೆಯರ ಜೊತೆಗೆ ಸಂಬಂಧ ಹೊಂದಿದ್ದಾರೆ ಮತ್ತು ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎಂಬುದು ಸುಳ್ಳು

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರ ಕುರಿತು ವಿರೋಧ ಪಕ್ಷದ ಬಿಜೆಪಿ ನಾಯಕರು ಮತ್ತು ಬಲಪಂಥೀಯ ಬೆಂಬಲಿಗರು ಪ್ರತಿದಿನವೂ ಒಂದಿಲ್ಲೊಂದು ಆರೋಪಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಹಾಗೆಯೇ ಜವಹರಲಾಲ್‌ ನೆಹರೂ ಅವರ ಕುಟುಂಬದ ಎಲ್ಲಾ ಸದಸ್ಯರ ಮೇಲೂ ಸಹ ನಿರಂತರವಾದ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಅವರ ತೇಜೋವದೆಯನ್ನು ಮಾಡಲಾಗುತ್ತಿದೆ. ಈ ಹಿಂದೆ ನೆಹರೂ ಅವರ ಕುಟುಂಬ ಮೂಲತಃ ಮುಸ್ಲಿಂ ಕುಟುಂಬ. ಅವರ ತಂದೆಯ ಹೆಸರು ಮುಬಾರಕ್ ಅಲಿ ಎಂದು ತಾಯಿಯ ಹೆಸರು ತುಸು ರೆಹಮಾನ್ ಬಾಯಿ ಎಂದು ಎಂಬ…

Read More

Fact Check: ರಾಹುಲ್ ಗಾಂಧಿಯವರು ಲಂಡನ್ ಪ್ರವಾಸದಲ್ಲಿ ಬಾಂಗ್ಲಾದೇಶದ ತಾರಿಕ್ ರೆಹಮಾನ್ ಅವರನ್ನು ಭೇಟಿಯಾಗಿದ್ದಾರೆ ಎಂಬುದಕ್ಕೆ ಆಧಾರವಿಲ್ಲ

ಬಾಂಗ್ಲಾದೇಶದಲ್ಲಿ ಹಿಂಸಾಚಾರಗಳು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಆದರೆ ಈ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಅನೇಕರು ಪೋಟೋ ಮತ್ತು ವೀಡಿಯೋಗಳನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು, ಸುಳ್ಳು ಪ್ರತಿಪಾದನೆಗಳನ್ನು ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿ ಹಿಂದು ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಯನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದ್ದಾರೆ ಎಂದು ಸುಳ್ಳು ಹಬ್ಬಿಸಲಾಗಿತ್ತು. ನಂತರ ಹೋಟೆಲ್‌ ಒಂದಕ್ಕೆ ಬೆಂಕಿ ಬಿದ್ದ ಹಳೆಯ ವೀಡಿಯೋವನ್ನು ದೇವಾಲಯಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಹಂಚಿಕೊಂಡಿದ್ದರು. ಜಿಹಾದಿಗಳು ಕುಟುಂಬದವರನ್ನೆಲ್ಲಾ ಹತ್ಯೆ ಮಾಡಿದ್ದಾರೆ ಎಂದು ಸಂಬಂಧವಿಲ್ಲದ ಘಟನೆಯನ್ನು…

Read More

Fact Check: ವಯನಾಡಿನ ಸಂತ್ರಸ್ತರಿಗೆ RSS ಸಹಾಯ ಮಾಡುತ್ತಿದೆ ಎಂದು ಹಳೆಯ ಮತ್ತು ಸಂಬಂಧವಿರದ ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ

ವಯನಾಡ್ ಭೂಕುಸಿತದ ಸಾವಿನ ಸಂಖ್ಯೆ ಸುಮಾರು 250 ಕ್ಕೆ ಏರಿದೆ, ನೂರಾರು ಜನರು ಇನ್ನೂ ಕಾಣೆಯಾಗಿದ್ದಾರೆ. ಅತ್ತಮಾಲಾ, ಮುಂಡಕ್ಕೈ ಮತ್ತು ಚುರಲ್ಮಾಲಾದಲ್ಲಿ ಭಾರತೀಯ ಸೇನೆ, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಶೋಧ ನಡೆಸುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಈ ದುರಂತಕ್ಕೆ ದೇಶದಾದ್ಯಂತ ಜನರು ಮಿಡಿಯುತ್ತಿದ್ದು, “ವಯನಾಡಿಗಾಗಿ ಪ್ರಾರ್ಥಿಸಿ” ಎಂದು ಜನರಲ್ಲಿ ಸಾಧ್ಯವಾದಷ್ಟು ಸಹಾಯ ಮಾಡಲು ಕೇಳಿಕೊಳ್ಳಲಾಗುತ್ತಿದೆ. ಅನೇಕ ಸ್ಥಳಿಯರು ಮತ್ತು ಸಂಘ ಸಂಸ್ಥೆಗಳು ದುರಂತ ನಡೆದ ಸ್ಥಳಕ್ಕೆ ಮತ್ತು ಪುನರ್ವಸತಿ ಶಿಬಿರಕ್ಕೆ ಭೇಟಿ ನೀಡಿ ಅಲ್ಲಿನ…

Read More
ರಾಹುಲ್ ಗಾಂಧಿ

Fact Check: ರಾಹುಲ್ ಗಾಂಧಿ ವೀಡಿಯೋವನ್ನು ಎಡಿಟ್‌ ಮಾಡಿ ಹಿಂದುಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 23 ಸೆಕೆಂಡುಗಳ ವೀಡಿಯೋ  ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ರಾಹುಲ್ ಗಾಂಧಿ ಹಿಂದಿಯಲ್ಲಿ ಹೀಗೆ ಹೇಳುತ್ತಾರೆ, “तो उनको यह भी सोचना चाहिए, जो भी वह कर रहे हैं कि किसी न किसी दिन बीजेपी की सरकार बदलेगी। और फिर कार्रवाई होगी। और ऐसी कार्रवाई होगी कि मैं गारंटी करता हूं यह फिर से…

Read More
ರಾಹುಲ್ ಗಾಂಧಿ

Fact Check: ರಾಹುಲ್ ಗಾಂಧಿಯವರು ನಕಲಿ ಲೋಕೋ-ಪೈಲಟ್ ಗಳ ಜೊತೆಗೆ ಸಂವಾದ ನಡೆಸಿದ್ದಾರೆ ಎಂಬುದು ಸುಳ್ಳು

ಪಶ್ಚಿಮ ಬಂಗಾಳದಲ್ಲಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತವು ಕನಿಷ್ಠ 10 ಜನರನ್ನು ಬಲಿ ತೆಗೆದುಕೊಂಡ ವಾರಗಳ ನಂತರ ರಾಹುಲ್ ಗಾಂಧಿಯವರು ಜುಲೈ 7 ರಂದು  ಲೋಕೋ-ಪೈಲಟ್‌ಗಳೊಂದಿಗೆ ಸಂವಾದ ನಡೆಸಿದರು. ಆದರೆ ಈಗ ರಾಹುಲ್ ಗಾಂಧಿಯವರು ಪ್ರಚಾರ ಪಡೆಯಲು ನಕಲಿ ಲೋಕೋ ಪೈಲೆಟ್‌ಗಳನ್ನು ಭೇಟಿಯಾಗಿ ಸಂವಾದ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲವು ಬಿಜೆಪಿ ಬೆಂಬಲಿಗರು “ಲೋಕೋ ಪೈಲಟ್ ಗಳು ಎಂದು ಹೇಳಿ ರಾಹುಲ್ ಗಾಂಧಿ ಎಕ್ಸ್ ನಲ್ಲಿ ಹಾಕಿರುವ ಫೋಟೋ ಪರಿಶೀಲಿಸಿದಾಗ ಅದರಲ್ಲಿ ರೈಲ್ವೆ ನೌಕರರು ಮತ್ತು ಲೋಕೋ…

Read More
ರಾಹುಲ್ ಗಾಂಧಿ

Fact Check: ರಾಹುಲ್ ಗಾಂಧಿ ಹೇಳಿಕೆಗಳನ್ನು ತಿರುಚಿ ಅವರ ಹಿಂದು ವಿರೋಧಿ ಹೇಳಿಕೆಗಳ ಪಟ್ಟಿ ಎಂದು ಹಂಚಿಕೊಳ್ಳಲಾಗುತ್ತಿದೆ

ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ತಿರುಚಿ ಅವರನ್ನು ಹಿಂದು ಧರ್ಮ ವಿರೋಧಿ ಎಂದು ಬಿಂಬಿಸುತ್ತಿರುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ರಾಹುಲ್ ಗಾಂಧಿಯವರು ಎಲ್ಲಿಯೇ ಭಾಷಣ ಮಾಡಿದರೂ ಮತ್ತು ಹೇಳಿಕೆಗಳನ್ನು ನೀಡಿದರೂ ಅವುಗಳನ್ನು ತಿರುಚಿ ಅಥವಾ ಎಡಿಟ್‌ ಮಾಡಿ ವೀಡಿಯೋ ಮತ್ತು ಪೋಸ್ಟರ್ ಹಂಚಿಕೊಳ್ಳಲಾಗುತ್ತಿದೆ. ಈಗ ಅದೇ ರೀತಿಯ ಪೋಸ್ಟರ್ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಅದರಲ್ಲಿ, “ರಾಹುಲ್ ಗಾಂಧಿಯ ಹಿಂದೂ ವಿರೋಧಿ ಹೇಳಿಕೆಗಳು: ಹಿಂದೂಗಳು ದೇವಸ್ಥಾನಕ್ಕೆ ಹೋಗಿ ಬಂದ ಮೇಲೆ ಬಸ್‌ನಲ್ಲಿ ಮಹಿಳೆಯರನ್ನು ಚುಡಾಯಿಸ್ತಾರೆ. ಹಿಂದೂಗಳು, ಹಿಂದುತ್ವ…

Read More