Fact Check: 2011ರ ಜಾಹೀರಾತಿನ ಚಿತ್ರವನ್ನು ಕೇರಳದ ಕಾಲೇಜು ಭಾರತೀಯ ಸಂಸ್ಕೃತಿಯನ್ನು ಅಣಕಿಸುತ್ತಿದೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ

ಕೇರಳದ ಕಾಲೇಜೊಂದರಲ್ಲಿ ಭಾರತೀಯ ಮತ್ತು ಹಿಂದೂ ಸಂಸ್ಕೃತಿಯನ್ನು ಅಪಹಾಸ್ಯ ಮಾಡಲಾಗಿದೆ ಎಂದು ಆರೋಪಿಸಿ ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಘಾಗ್ರಾ ಚೋಲಿ ಎಂಬುದು ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಮಹಿಳೆಯರು ಸಾಂಪ್ರದಾಯಿಕವಾಗಿ ಧರಿಸುವ ಉದ್ದನೆಯ ಸ್ಕರ್ಟ್ ಮತ್ತು ರವಿಕೆಯಾಗಿದೆ. ಫೋಟೋವು ಘಾಗ್ರಾ ಚೋಲಿಯ ರಾಜಸ್ಥಾನಿ ಶೈಲಿಯನ್ನು ಚಿತ್ರಿಸುತ್ತದೆ ಆದರೆ ಅದನ್ನು ಕತ್ತರಿಸಿ ಮಿನಿ ಸ್ಕರ್ಟ್ ಆಗಿ ತಯಾರಿಸಲಾಗಿದೆ ಎಂದು ತೋರಿಸುತ್ತದೆ. ಕೇರಳದಲ್ಲಿ ನಡೆದ ಕಾಲೇಜು ಸ್ಪರ್ಧೆಯಲ್ಲಿ ಈ ತಂಡವು ಮೂರನೇ ಸ್ಥಾನವನ್ನು ಗೆದ್ದಿದೆ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಫೋಟೋವನ್ನು ಎಕ್ಸ್ ಮತ್ತು…

Read More

Fact Check: ಬೆಂಗಳೂರಿಗೆ ಸರಬರಾಜು ಆಗುತ್ತಿರುವುದು ಕುರಿ ಮಾಂಸವೇ ಹೊರತು ನಾಯಿ ಮಾಂಸ ಅಲ್ಲ ಎಂದು ಆಹಾರ ಸುರಕ್ಷತಾ ಆಯುಕ್ತ ಸ್ಪಷ್ಟಪಡಿಸಿದ್ದಾರೆ

ಇತ್ತೀಚೆಗೆ ರಾಜಸ್ಥಾನದಿಂದ ಬೆಂಗಳೂರಿಗೆ ವಾರಕ್ಕೆ ಮೂರು ಬಾರಿ ರೈಲಿನಲ್ಲಿ ಸರಬರಾಜು ಆಗುತ್ತಿದ್ದ ಕುರಿ ಮಾಂಸದಲ್ಲಿ ನಾಯಿ ಮಾಂಸವನ್ನು ಬೆರೆಸಲಾಗಿದೆ ಎಂದು ಆರೋಪಿಸಿ ವಿವಾದಿತ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಿಂದುಪರ ಸಂಘಟನೆಗಳು ಕೆಎಸ್‌ಆರ್‌(ಯಶವಂತಪುರ) ರೈಲ್ವೆ ನಿಲ್ದಾಣಕ್ಕೆ ಜೈಪುರದಿಂದ ಬಂದ ರೈಲಿನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಉದ್ದನೆಯ ಬಾಲ ಇರುವ ಕುರಿ ಮಾಂಸ ಕಂಡು ಇದು ನಾಯಿ ಮಾಂಸ ಎಂದು ಆರೋಪಿಸಿದ್ದಾರೆ. ಆದರೆ ಯಾವುದೇ ದಾಖಲೆಯನ್ನು ಒದಗಿಸಿಲ್ಲ. ಇದರ ನಂತರ ಅಲ್ಲಿಗೆ ಆಗಮಿಸಿದ ಪೋಲಿಸರು ಮತ್ತು ಆಹಾರ…

Read More
ರಾಜಸ್ಥಾನ

ರಾಜಸ್ಥಾನದ ಪಡಿತರ ಚೀಲಗಳ ಮೇಲೆ ಮೋದಿ ಫೋಟೋ ಮುದ್ರಿಸಲು 13 ಕೋಟಿ ರೂ ಖರ್ಚು ಮಾಡಿರುವುದು ನಿಜ

ಭಾರತ ಸರ್ಕಾರ ಈಗಾಗಲೇ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂ-ಜಿಕೆಎವೈ) ಅಡಿಯಲ್ಲಿ ಉಚಿತ ಪಡಿತರವನ್ನು ನೀಡುತ್ತಿದೆ. ಈ ಯೋಜನೆ ಅಡಿ ಬಡ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆ.ಜಿ ಆಹಾರ ಧಾನ್ಯ ವಿತರಿಸಲಾಗುತ್ತದೆ. ದೇಶದಲ್ಲಿ ಕೋವಿಡ್ ವ್ಯಾಪಕವಾಗಿ ಹರಡಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು 2020ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಕಳೆದ ವರ್ಷ ನರೇಂದ್ರ ಮೋದಿಯವರು ಉಚಿತ ಪಡಿತರ ಯೋಜನೆ 2028ರವರೆಗೆ ವಿಸ್ತರಣೆ ಮಾಡಲಾಗುವುದು ಎಂದಿದ್ದರು. ಆದರೆ ಈಗ ಈ ಯೋಜನೆಯ ಜಾಹಿರಾತಿಗೆ ಅತಿ…

Read More

ಯುವತಿಯ ಕೊಲೆ ಮಾಡಿದ UP ಮುಸ್ಲಿಂ ಯುವಕರಿಗೆ ಯೋಗಿಯ ಶಿಕ್ಷೆ ಎಂಬುದು ಸುಳ್ಳು

ಉತ್ತರ ಪ್ರದೇಶದಲ್ಲಿ ಹುಡುಗಿಯ ದುಪ್ಪಟ ಹಿಡಿದು ಬೈಕಿನಲ್ಲಿ ಎಳೆದುಕೊಂಡು ಹೋಗಿ ಹುಡುಗಿಯ ಸಾವಿಗೆ ಕಾರಣರಾದ ಮೂವರು ಇಸ್ಲಾಂ ಜಿಹಾದಿಗಳಿಗೆ ಯೋಗಿ ಸರ್ಕಾರ ನೀಡಿರುವ ಬಹುಮಾನ! ಎಂದು ಹಲ್ಲೆಗೊಳಗಾದ ಆರೋಪಿಗಳು ತೆವಳುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಫ್ಯಾಕ್ಟ್‌ಚೆಕ್: ಸತ್ಯವೇನೆಂದರೆ ಇದು ರಾಜಸ್ಥಾನದಲ್ಲಿ ನಡೆದ ಘಟನೆಯಾಗಿದ್ದು ಉತ್ತರ ಪ್ರದೇಶದ್ದಲ್ಲ. ಶಿಕ್ಷೆಗೊಳಗಾಗಿ ತೆವಳುತ್ತಿರುವವರು ಕೊಲೆ ಪ್ರಕರಣದ ಆರೋಪಿಗಳಾದ ತೇಜ್ವೀರ್, ಯುವರಾಜ್ ಮತ್ತು ಬಂಟಿ ಕುಶಾಲ್. ಇವರ ಹೆಸರುಗಳನ್ನು ಅರ್ಬಾಜ್, ಫೈಸಲ್ ಮತ್ತು ಶಹಬಾಜ್ ಎಂದು ತಪ್ಪಾಗಿ ತಿರುಚಲಾಗಿದೆ. ಇದನ್ನು ಬೂಮ್…

Read More