ರೈಲು ಅಪಘಾತ

Fact Check: ಇತ್ತೀಚಿನ ರೈಲು ಅಪಘಾತಗಳು ತಾಂತ್ರಿಕ ದೋಷದಿಂದ ಸಂಭವಿಸಿವೆಯೇ ಹೊರತು ಗುಲ್ಜಾರ್ ಶೇಖ್ ಎಂಬ ಯೂಟೂಬರ್ ಕಾರಣನಲ್ಲ

ಕಳೆದ 42 ದಿನಗಳಲ್ಲಿ ಭಾರತದಲ್ಲಿ ರೈಲು ಅಪಘಾತಗಳಲ್ಲಿ ಕನಿಷ್ಠ 17 ಜನರು ಪ್ರಾಣ ಕಳೆದುಕೊಂಡಿದ್ದಾರೆ, ಪೂರ್ವ ರೈಲ್ವೆಯ ಚಕ್ರಧರ್ಪುರ ವಿಭಾಗದ ಜಾರ್ಖಂಡ್‌ನ ಬಾರಾಬಂಬೂ ಬಳಿ ಜುಲೈ 30 ರ ಮಂಗಳವಾರ ಬೆಳಿಗ್ಗೆ ಇತ್ತೀಚಿನ ಅಪಘಾತ ವರದಿಯಾಗಿದೆ. ಹೌರಾ-ಮುಂಬೈ ಮೇಲ್ ರೈಲಿನ 18 ಬೋಗಿಗಳು ಹಳಿ ತಪ್ಪಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ. ಇದಕ್ಕೂ ಮುನ್ನ ಜೂನ್ 18 ರಂದು ಚಂಡೀಗಢ-ದಿಬ್ರುಘರ್ ಎಕ್ಸ್‌ಪ್ರೆಸ್ ಉತ್ತರ ಪ್ರದೇಶದ ಗೊಂಡಾ ಬಳಿ ಹಳಿ ತಪ್ಪಿ ನಾಲ್ವರು ಸಾವನ್ನಪ್ಪಿದ್ದರು ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು….

Read More

Fact Check: ಯುಟ್ಯೂಬರ್ ಧ್ರುವ್ ರಾಠೀ ಪಾಕಿಸ್ತಾನ ಮೂಲದವರೆಂದು ಸುಳ್ಳು ಹರಡಲಾಗುತ್ತಿದೆ

ಭಾರತದಲ್ಲಿ ಪ್ರಸಿದ್ದಿ ಪಡೆದ ಅನೇಕ ಯೂಟೂಬರ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಶಾಲಿಗಳು(ಸೋಷಿಯಲ್ ಮಿಡಿಯಾ ಇನ್ಫ್ಲುಯೆನ್ಸರ್‌ಗಳು) ಅನೇಕರಿದ್ದಾರೆ. ಅವರುಗಳು ಆಹಾರ, ಪ್ರವಾಸ, ಶಿಕ್ಷಣಕ್ಕೆ ಸಂಬಂದಿಸಿದಂತೆ ಅನೇಕ ವಿಷಯಗಳ ಮೇಲೆ ವಿಡಿಯೋಗಳನ್ನು ಮಾಡುತ್ತಿದ್ದಾರೆ ಆದರೆ ಸಾಮಾಜಿಕ, ರಾಜಕೀಯ ಮತ್ತು ಪರಿಸರಕ್ಕೆ ಸಂಬಂದಿಸಿದಂತೆ ವಿಡಿಯೋಗಳನ್ನು ಮಾಡಿ ಪ್ರಖ್ಯಾತಿ ಪಡೆದ ಯೂಟೂಬರ್‌ಗಳಲ್ಲಿ ಧೃವ್ ರಾಠೀ ಪ್ರಮುಖರು. ಕಾರಣ ಅವರ ಅಧ್ಯಯನಶೀಲತೆ ಮತ್ತು ವಿಷಯದ ನಿಖರತೆಗಾಗಿ ಹೆಚ್ಚೆಚ್ಚು ಜನರನ್ನು ತಲುಪುತ್ತಿದ್ದಾರೆ. ಸಧ್ಯ ಮಾರ್ಚ್ 2024 ರ ಹೊತ್ತಿಗೆ, ಅವರು ಎಲ್ಲಾ ಚಾನೆಲ್ಗಳಲ್ಲಿ ಸುಮಾರು 21.56…

Read More