ಬಾಲಿವುಡ್‌

Fact check: ಬಾಲಿವುಡ್‌ ಸಿನೆಮಾ ನಿರ್ದೇಶಕ ಅನುಭವ್‌ ಸಿನ್ಹಾ ಭಯೋತ್ಪಾದನೆ ಕುರಿತು ಹೇಳಿಕೆ ನೀಡಿಲ್ಲ

ಬಾಲಿವುಡ್‌ ಸಿನೆಮಾ ನಿರ್ದೇಶಕ   ಅನುಭವ್‌ ಸಿನ್ಹಾರವರು , ನಟಿ ತಾಪ್ಸೀ ಪನ್ನು ಮತ್ತು ನಟ ರಜತ್ ಕಪೂರ್ ರೊಂದಿಗೆ  ನಡೆಸಿದ ಪತ್ರಿಕಾಗೋಷ್ಠಿಯಲ್ಲಿ “ಹಿಂದೂಗಳು ಭಯೋತ್ಪಾದನೆಯನ್ನು ಪ್ರಾಂಭಿಸಿದ್ದಾರೆ” ಎಂದು ಹೇಳಿದ್ದಾರೆ ಎಂಬ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌: ಈ ವೀಡಿಯೊದ ಕೆಲವು ಪೋಟೊಗಳನ್ನು ಕೀಫ್ರೇಮ್‌ಗಳಲ್ಲಿ ರಿವರ್ಸ್‌ ಇಮೇಜ್‌ ಬಳಸಿಕೊಂಡು ಹುಡುಕಿದಾಗ ಈ ವೀಡಿಯೊ 9 ಜುಲೈ 2018 ರಂದು YouTube ನಲ್ಲಿ ಹಂಚಿಕೊಳ್ಳಲಾಗಿರುವುದು ಕಂಡುಬಂದಿದೆ. ಈ ವೀಡಿಯೊದಲ್ಲಿ ಅನುಭವ್‌ ಸಿನ್ಹಾ, ” ಭಯೋತ್ಪಾದನೆ ಪ್ರಾರಂಭವಾಗಲು…

Read More

Fact Check| ಉತ್ತರಾಖಂಡದಲ್ಲಿ ಮುಸ್ಲಿಮರ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂಬ ಸುದ್ದಿ ಸುಳ್ಳು

ಉತ್ತರಾಖಂಡದಲ್ಲಿ 2000 ಇಸವಿಯಲ್ಲಿ ಶೇಕಡಾ 1.5ರಷ್ಟಿದ್ದ ಮುಸ್ಲಿಮರ ಜನಸಂಖ್ಯೆಯು 2024ರ ಹೊತ್ತಿಗೆ ಶೇಕಡಾ 16ರಷ್ಟು ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು  ಹಂಚಿಕೊಳ್ಳಲಾಗುತ್ತಿದೆ. “ಎಚ್ಚರಿಕೆಯ ಕರೆಗಂಟೆ” ಎಂದು ಮುಸ್ಲಿಮರನ್ನು ಗುರಿಯಾಗಿಸಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಹಂಚಿಕೊಳ್ಳಲಾಗುತ್ತಿದೆ. Muslim Population in Uttarakhand Year 2000 : 1.5% Year 2024 : 16% You are not only blind but a traitor too if you are unable to…

Read More
ಬಾಂಗ್ಲಾದೇಶ

Fact Check: ಮುಸ್ಲಿಮರು ನೀರಿನಲ್ಲಿ ಪ್ರಾರ್ಥಿಸುತ್ತಿರುವ ಹಳೆಯ ಫೋಟೋವನ್ನು 2024ರ ಬಾಂಗ್ಲಾದೇಶ ಪ್ರವಾಹಕ್ಕೆ ಸಂಬಂದಿಸಿದ್ದು ಎಂದು ವೈರಲ್

ಮುಸ್ಲಿಂ ಪುರುಷರ ಗುಂಪು ಎದೆಯ ಆಳದ ನೀರಿನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ತೋರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಇದು ಬಾಂಗ್ಲಾದೇಶದಲ್ಲಿ ಪ್ರಸ್ತುತ 2024 ರ ಪ್ರವಾಹಕ್ಕೆ ಸಂಬಂಧಿಸಿದೆ ಎಂದು ಪೋಸ್ಟ್ ಹೇಳಿಕೊಂಡಿದೆ. ವೀಡಿಯೊದ ಆರ್ಕೈವ್ ಆವೃತ್ತಿಯನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ವೈರಲ್ ಚಿತ್ರದ ಬಗ್ಗೆ ಗೂಗಲ್ ಲೆನ್ಸ್ ಹುಡುಕಾಟವು ನಮ್ಮನ್ನು ‘ಮಿಲಾನೊ ಫೋಟೋ ಫೆಸ್ಟಿವಲ್‘ ವೆಬ್ಸೈಟ್‌ಗೆ ನಿರ್ದೇಶಿಸಿತು. ಇಲ್ಲಿ, ವಿಶ್ವ ಜಲ ದಿನದ ಫೋಟೋ ಸ್ಪರ್ಧೆ 2022 ರ ಬಗ್ಗೆ ಲೇಖನದಲ್ಲಿ ಕಾಣಿಸಿಕೊಂಡ ಅದೇ…

Read More
ಬಾಂಗ್ಲಾದೇಶ

Fact Check: ಬಾಂಗ್ಲಾದೇಶದಲ್ಲಿ ದರ್ಗಾಕ್ಕೆ ಬೆಂಕಿ ಹಚ್ಚಿದ ವೀಡಿಯೊವನ್ನು ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಸುಳ್ಳು ಕೋಮು ಹೇಳಿಕೆಗಳೊಂದಿಗೆ ಹಂಚಿಕೆ

ಬಾಂಗ್ಲಾದೇಶದಲ್ಲಿ ರಾಜಕೀಯ ಅಶಾಂತಿ ಮುಂದುವರೆದಿರುವಂತೆಯೇ, ಮುಸ್ಲಿಮರು ಇತ್ತೀಚೆಗೆ ದೇಶದ ಠಾಕೂರ್ಗಾಂವ್ ಜಿಲ್ಲೆಯಲ್ಲಿ ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳುವ ವೀಡಿಯೊವನ್ನು ಈಗ ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗುತ್ತಿದೆ.  ‘ಹಿಂದುತ್ವ ನೈಟ್’ ಎಂಬ ಎಕ್ಸ್ (ಟ್ವಿಟರ್) ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು, “ಇಸ್ಲಾಮಿಸ್ಟ್‌ಗಳು ಬಾಂಗ್ಲಾದೇಶದ ಠಾಕೂರ್ಗಾಂವ್ ಜಿಲ್ಲೆಯ ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾರೆ” ಎಂದು ಬರೆದಿದ್ದಾರೆ. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸುಮಾರು ಮೂರು ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಇದೇ ರೀತಿಯ ಪ್ರತಿಪಾದನೆಯ ಹೆಚ್ಚಿನ ಆರ್ಕೈವ್…

Read More
ಮುಸ್ಲಿಮರು

Fact Check: ಬಾಂಗ್ಲಾದೇಶದ ಮುಸ್ಲಿಮರು ಕಿಕ್ಕಿರಿದ ರೈಲಿನಲ್ಲಿ ಅಸ್ಸಾಂ ಮತ್ತು ಕೋಲ್ಕತ್ತಾಗೆ ಬಂದಿಳಿದಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ ರೈಲಿನ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ರೈಲು ಬಾಂಗ್ಲಾದೇಶದಿಂದ ಭಾರತದ ಕಡೆಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ರೈಲಿನ ತುಂಬಾ ಮುಸ್ಲಿಂ ಸಮುದಾಯದ ಜನ ಕಿಕ್ಕಿರಿದು ಕುಳಿತಿರುವುದನ್ನು ಈ ವೀಡಿಯೋ ತೋರಿಸುತ್ತದೆ. ಈ ವೀಡಿಯೋವಿಗೆ “ಇದು ಮುಂದಿನ ದಿನಗಳಲ್ಲಿ ನಿಮ್ಮ ಆಸ್ತಿಯನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ, ಈ ಗುಂಪಿನ ಮುಂದೆ ನಿಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ರಕ್ಷಿಸಲು ಸಾಧ್ಯವಿಲ್ಲ ಅಸ್ಸಾಂ ಮತ್ತು ಕೋಲ್ಕತ್ತಾ ಮೂಲಕ ಬಾಂಗ್ಲಾದೇಶ ಈ ಮುಸ್ಲಿಮರನ್ನು ವಿರೋಧಿಸಲು ಇನ್ನೂ ಸಮಯವಿದೆ. ಇಲ್ಲದಿದ್ದರೆ…

Read More

Fact Check: ಕರ್ನಾಟಕದಲ್ಲಿ ಜೈನ ಮುನಿಗೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂದು ಮಹೇಶ್ ವಿಕ್ರಂ ಹೆಗ್ಡೆ ಹಂಚಿಕೊಂಡಿದ್ದ ಸುಳ್ಳು ಮತ್ತೆ ವೈರಲ್ 

ಇತ್ತೀಚೆಗೆ, ಕರ್ನಾಟಕದಲ್ಲಿ ಜೈನ ಸನ್ಯಾಸಿಯೊಬ್ಬರ ಮೇಲೆ ಮುಸ್ಲಿಮರಿಂದ ಹಲ್ಲೆ ನಡೆದಿದೆ ಎಂಬ ಹೇಳಿಕೆಯೊಂದಿಗೆ ಕೈಗೆ ಗಾಯವಾಗಿರುವ ವ್ಯಕ್ತಿಯ ಫೋಟೋ ಒಂದು ಹರಿದಾಡುತ್ತಿದೆ. ಜೈನ ಮುನಿಯ ಮೇಲಿನ ದಾಳಿಕೋರರು ‘ಕಾಂಗ್ರೆಸ್ ಜಿಂದಾಬಾದ್’ ಎಂದು ಘೋಷಣೆ ಕೂಗಿದರು ಎಂದು ಪ್ರತಿಪಾದಿಸಲಾಗುತ್ತಿದೆ. “ಇದು ಕಾಂಗ್ರೆಸ್‌ಗೆ ಮತ ಹಾಕುವ ಹಿಂದೂಗಳ ಭವಿಷ್ಯ” ಎಂದು ಸಂದೇಶದೊಂದಿಗೆ ಈ ಪೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.  ಈ ಪೋಟೋವನ್ನು ಮೊದಲು ಹರಿಬಿಟ್ಟವರು ಸುಳ್ಳು ಸುದ್ಧಿ ಹರಡಲು ಮತ್ತು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಲು ಕುಖ್ಯಾತಿ ಪಡೆದಿರುವ ಪೋಸ್ಟ್‌ ಕಾರ್ಡ್‌…

Read More
ರೈಲ್ವೆ ಅಪಘಾತ

Fact Check: ಪ್ರಧಾನಿ ಮೋದಿಯವರ ಆಡಳಿತದಲ್ಲಿ ನಡೆದ ಎಲ್ಲಾ ರೈಲ್ವೆ ಅಪಘಾತಗಳು ರಾಜಕೀಯ ಪಿತೂರಿಯಿಂದ ನಡೆಯುತ್ತಿವೆ ಎಂಬುದಕ್ಕೆ ಆಧಾರವಿಲ್ಲ

ಕೋಲ್ಕತ್ತಾ ನಗರ ಮತ್ತು ಸಿಲ್ಚಾರ್ ನಡುವೆ ಸಂಚರಿಸುವ ಕಾಂಚನಜುಂಗಾ ಎಕ್ಸ್‌ಪ್ರೆಸ್ ಹೊಸ ಜಲ್ಪೈಗುರಿ ನಿಲ್ದಾಣದ ಬಳಿ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದು, ನಲವತ್ತಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಸಧ್ಯ ಈ ಘಟನೆಗೆ ಕಾರಣವಾಗಬಹುದಾದ ಎಲ್ಲಾ ಕಾರಣಗಳನ್ನು ರೈಲ್ವೇ ಸುರಕ್ಷತೆಯ ಮುಖ್ಯ ಆಯುಕ್ತರು (CCRS) ಪರಿಶೀಲಿಸುತ್ತಿದ್ದಾರೆ. 2023ರ ಜೂನ್ 2ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 296 ಮಂದಿ…

Read More

Fact Check: ಬಿಜೆಪಿಯ ಮಿಸ್ಡ್-ಕಾಲ್ ಅಭಿಯಾನವನ್ನು ಯುಸಿಸಿ ಪರವಾಗಿ ಮತ ಚಲಾಯಿಸುವ ಅಭಿಯಾನ ಎಂದು ವೈರಲ್ ಮಾಡಲಾಗಿದೆ

ಏಕರೂಪ ನಾಗರಿಕ ಸಂಹಿತೆಯ (UCC) ಅನುಷ್ಠಾನದ ಕುರಿತಂತೆ ಇತ್ತೀಚೆಗೆ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. “ಇಡೀ ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಏಕರೂಪ ನಾಗರಿಕ ಸಂಹಿತೆ ತರಲು ಬಯಸಿದ್ದಾರೆ. ಇದಕ್ಕಾಗಿ ದೇಶದ ನಾಗರಿಕರು ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ಕೋರಲಾಗಿದೆ. ಈಗಾಗಲೇ ಎರಡು ದಿನಗಳಲ್ಲಿ 04 ಕೋಟಿ ಮುಸ್ಲಿಮರು ಮತ್ತು 02 ಕೋಟಿ ಕ್ರಿಶ್ಚಿಯನ್ನರು ಯುಸಿಸಿ ವಿರುದ್ಧ ಮತ ಚಲಾಯಿಸಿದ್ದಾರೆ. ಆದ್ದರಿಂದ, ಗಡುವಿನ ಮೊದಲು, ಜುಲೈ 6, ದೇಶದ ಎಲ್ಲಾ ಹಿಂದೂಗಳು ಯುಸಿಸಿ ಪರವಾಗಿ ಮತ ಚಲಾಯಿಸಲು ವಿನಂತಿಸಲಾಗಿದೆ….

Read More

ಲಂಡನ್ ಮೇಯರ್ ಚುನಾವಣೆಯಲ್ಲಿ ಸಾದಿಕ್ ಖಾನ್ ಅವರ ವಿಜಯವನ್ನು ಆಚರಿಸುತ್ತಿರುವ ದೃಶ್ಯಗಳು ಎಂದು 2021 ರ ಹಳೆಯ ವೀಡಿಯೊ ಹಂಚಿಕೆ

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಲಂಡನ್‌ನ ಮೇಯರ್ ಆಗಿ ಸಾದಿಕ್ ಖಾನ್ (ಇಲ್ಲಿ ಮತ್ತು ಇಲ್ಲಿ) ಜಯಗಳಿಸುತ್ತಿದ್ದಂತೆ, ವಿಜಯಯಾತ್ರೆ ನಡೆಸಿದ್ದಾರೆ ಎಂದು ಹೇಳಿಕೊಳ್ಳುವ ವೀಡಿಯೊವನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದ ಮೂಲಕ ನಾವು ಈ ಪ್ರತಿಪಾದನೆ ವಾಸ್ತವವಾಗಿ ನಿಜವೇ ಎಂದು ಪರಿಶೀಲಿಸೋಣ. 🚨 London Has Fallen ⚠️ pic.twitter.com/Y8dt3swFzc — 𝑰𝒔𝒉𝒂𝒂𝒏 𝑪𝒉𝒂𝒖𝒅𝒉𝒂𝒓𝒚 𝕏 (@im_ishaan_) May 7, 2024 ಫ್ಯಾಕ್ಟ್‌ಚೆಕ್: ವೈರಲ್ ಪ್ರತಿಪಾದನೆಯ ನಿಖರತೆಯನ್ನು ಪರಿಶೀಲಿಸಲು ನಾವು ವೈರಲ್…

Read More
RSS

Fact Check: ಎರಡು ಬೇರೆ ಘಟನೆಗಳ ವಿಡಿಯೋ ಜೋಡಿಸಿ ಕೇರಳದಲ್ಲಿ RSS ಕಾರ್ಯಕರ್ತನ ತಲೆ ಕಡಿಯಲಾಗಿದೆ ಎಂದು ಸುಳ್ಳು ಹಂಚಿಕೆ

ಇತ್ತೀಚೆಗೆ ವ್ಯವಸ್ತಿತವಾಗಿ ಕೋಮವಾದವನ್ನು ಹುಟ್ಟುಹಾಕಲು ಭಾರತದಾದ್ಯಂತ ಸಂಚು ರೂಪಿಸಲಾಗುತ್ತಿದ್ದು ಇದರ ಭಾಗವಾಗಿ ಕೆಲವು ಬಲಪಂಥೀಯ ಸಂಘಟನೆಗಳು ದೇಶದಲ್ಲಿ ಬೇರೆ ಬೇರೆ ಕಡೆ ನಡೆದ ಜಗಳಗಳು ಮತ್ತು ಕೊಲೆಗಳಿಗೆ ಕೋಮು ಬಣ್ಣ ಬಳಿದು ಮುಸ್ಲಿಮರು ಹಿಂದುಗಳಲ್ಲು ಕೊಲ್ಲುತ್ತಿದ್ದಾರೆ ಎಚ್ಚೆತ್ತುಕೊಳ್ಳಿ ಎಂದು ಹಿಂದುಗಳಲ್ಲಿ ಮುಸ್ಲಿಮರ ಕುರಿತು ದ್ವೇಷ ಮತ್ತು ಭಯವನ್ನು ಹುಟ್ಟುಹಾಕುತ್ತಿದ್ದಾರೆ. ಮತ್ತು ಈ ಮೂಲಕ ನೀವು ಸಹ ಇದೇ ರೀತಿ ಮುಸ್ಲಿಮರನ್ನು ನಡೆಸಿಕೊಳ್ಳಿ ಎಂಬ ಸಂದೇಶವನ್ನು ಸಹ ರವಾನಿಸಲಾಗುತ್ತಿದೆ. ಈಗ, ಆರೆಸ್ಸೆಸ್ ಕಾರ್ಯಕರ್ತನನ್ನು ಮಸೀದಿಗೆ ಕರೆದೊಯ್ದು ತಲೆ ಕಡಿದ…

Read More