Fact Check: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಸ್ಟ್ರೀಮಿಂಗ್ ಹಕ್ಕನ್ನು Hotstar ಗೆದ್ದಿದೆ ಎಂಬುದು ಸುಳ್ಳು
ದೇಶದ ಅತ್ಯಂತ ಶ್ರೀಮಂತ ಉಧ್ಯಮಿ ಮುಕೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ಉತ್ಸವಗಳು ಪ್ರಾರಂಭವಾಗುತ್ತಿದ್ದಂತೆ, ಮೆಗಾ ಅಂಬಾನಿ ವಿವಾಹವು ಒಟಿಟಿ ಪ್ಲಾಟ್ಫಾರ್ಮ್ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹೇಳಲಾಗುತ್ತಿದೆ. “ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಹಾಟ್ಸ್ಟಾರ್ ಅನಂತ್ ಅಂಬಾನಿ ಅವರ ಮದುವೆಯ ಸ್ಟ್ರೀಮಿಂಗ್ ಹಕ್ಕುಗಳನ್ನು ಗೆದ್ದಿದೆ, ಅಂಬಾನಿ ಸ್ವತಃ ಆಯೋಜಿಸಿದ್ದ ಹರಾಜಿನಲ್ಲಿ ಮುಖೇಶ್ ಅಂಬಾನಿಯನ್ನು ಸೋಲಿಸಿದೆ” ಎಂದು ಹೇಳಲಾಗುತ್ತಿದೆ. ಮೇಲಿನ ಪೋಸ್ಟ್ ಅನ್ನು ಇಲ್ಲಿ ನೋಡಬಹುದು (ಆರ್ಕೈವ್). ಅಂತಹ ಹೆಚ್ಚಿನ ಪೋಸ್ಟ್…