ದೆಹಲಿ ವಿಮಾನ ನಿಲ್ದಾಣ

Fact Check: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರ ಉದ್ಘಾಟನೆ ಚಿತ್ರವನ್ನು ಎಡಿಟ್ ಮಾಡಿ ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ಮಾಜಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅವರು ನವದೆಹಲಿಯ ವಿಮಾನ ನಿಲ್ದಾಣದ ಟರ್ಮಿನಲ್ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಂಡಿರುವ ಚಿತ್ರವು ಆನ್ ಲೈನ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐಎ) ಟರ್ಮಿನಲ್ 1 ಅನ್ನು ಜಿಎಂಆರ್ ನಿರ್ಮಿಸಿದೆ ಮತ್ತು ಜುಲೈ 3, 2010 ರಂದು ಅವರು ಉದ್ಘಾಟಿಸಿದರು…

Read More

Fact Check: ಉದ್ಯಮಿ ಜಾರ್ಜ್ ಸೊರೊಸ್ ಜೊತೆ ಫೋಟೋದಲ್ಲಿರುವ ಮಹಿಳೆ ಅವರ ಪತ್ನಿಯೇ ಹೊರತು ಮನಮೋಹನ್ ಸಿಂಗ್ ಅವರ ಮಗಳಲ್ಲ

ಹಂಗೇರಿಯನ್ ಅಮೇರಿಕನ್ ಉದ್ಯಮಿ ಜಾರ್ಜ್ ಸೊರೊಸ್ ಮಹಿಳೆಯೊಂದಿಗೆ ಇರುವ ಆತ್ಮೀಯ ಘಳಿಗೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ, ಜೊತೆಗೆ ಚಿತ್ರದಲ್ಲಿರುವ ಮಹಿಳೆ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಗಳು ಎಂಬ ಹೇಳಿಕೆಯೊಂದಿಗೆ. ಈ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.  ಫ್ಯಾಕ್ಟ್‌ಚೆಕ್: ಈ ಕುರಿತು ನಾವು ಹೆಚ್ಚಿನ ಮಾಹಿತಿ ತಿಳಿಯಲು ಗೂಗಲ್ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಿದಾಗ, ಸೊರೊಸ್‌ನೊಂದಿಗೆ ಪೋಟೋದಲ್ಲಿ ನಿಂತಿರುವ ಮಹಿಳೆ, ಜಾರ್ಜ್ ಸೊರೊಸ್…

Read More
ತೇಜಸ್ವಿ ಯಾದವ್

Fact Check: ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜನತೆಗೆ ಕೇಳಿಸಿರುವ ಮೋದಿಯವರ ಭಾಷಣದ ಆಡಿಯೋವನ್ನು ಬದಲಾಯಿಸಿ ಹಂಚಿಕೊಳ್ಳಲಾಗುತ್ತಿದೆ

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರು ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಪೋರ್ಟಬಲ್ ಸ್ಪೀಕರ್‌ನಲ್ಲಿ ಜನರಿಗೆ ಕೇಳಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಭಾಷಣದಲ್ಲಿ ಆರ್‌ಜೆಡಿಯ ಹಗರಣಗಳ ಬಗ್ಗೆ ಪ್ರಧಾನಿ ಮೋದಿಯವರು ಟೀಕಿಸಿದ್ದಾರೆ. ಇದನ್ನು ಸ್ವತಃ ಯಾದವ್ ಅವರೇ ಜನರಿಗೆ ಕೇಳಿಸುವ ಮೂಲಕ ತಮ್ಮದೇ ಪಕ್ಷದ ಹಗರಣವನ್ನು ಬಹಿರಂಗಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅನೇಕರು ತಮ್ಮ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೀವಿಲ್ಲಿ ನೋಡಬಹುದು. तेजस्वी यादव…

Read More

ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಜಿಎಸ್‌ಟಿ ಇರಲಿಲ್ಲ ಬದಲಿಗೆ ವ್ಯಾಟ್‌ ಎಂಬ ತೆರಿಗೆ ವ್ಯವಸ್ಥೆಯಿತ್ತು

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಇದುವರೆಗೂ ಬಂದು ಹೋದ ದೇಶದ 14 ಪ್ರಧಾನ ಮಂತ್ರಿಗಳಲ್ಲೇ ಅತಿ ಶ್ರೇಷ್ಠ ಪ್ರಧಾನ ಮಂತ್ರಿಗಳು ಎಂದು ಬಿಂಬಿಸುವ ಸಲುವಾಗಿ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು(1947-1964) ಮತ್ತು ಆರ್ಥಿಕ ತಜ್ಞರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್(2004-2014) ಅವರ ಆಡಳಿತ ಕುರಿತು ಸಾಕಷ್ಟು ಸುಳ್ಳು ಪ್ರತಿಪಾದನೆಗಳನ್ನು ಹರಿಬಿಡಲಾಗುತ್ತಿದೆ. ಇದರ ಭಾಗವಾಗಿ, “ಜಿಎಸ್‌ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಕರೆಯುವವರು ಈ ವ್ಯತ್ಯಾಸವನ್ನು ಹೇಳುವುದಿಲ್ಲ.” ಎಂಬ ಹೇಳಿಕೆಯ ಪೋಸ್ಟರ್ ಒಂದು ಹಲವಾರು ದಿನಗಳಿಂದ ಸಾಮಾಜಿಕ…

Read More

ವಿದೇಶ ಪ್ರಯಾಣಕ್ಕೆ ಮೋದಿಗಿಂತಲೂ ಮನಮೋಹನ್ ಸಿಂಗ್ ಹೆಚ್ಚು ಹಣ ಖರ್ಚು ಮಾಡಿದ್ರು ಎಂಬುದು ಸುಳ್ಳು

ವಿದೇಶ ಪ್ರಯಾಣಕ್ಕೆ ಹಾಲಿ ಪ್ರಧಾನಿ ಮೋದಿಗಿಂತಲೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೆಚ್ಚು ಹಣ ಖರ್ಚು ಮಾಡಿದ್ರು ಎಂದು ವಿವಾದಾತ್ಮಕ ಬಲಪಂಥೀಯ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಭಾಷಣವೊಂದರಲ್ಲಿ ಹೇಳಿದ್ದಾರೆ. ಆ ವಿಡಿಯೋವನ್ನು ಇತಿಹಾಸ ಎನ್ನುವ ಫೇಸ್‌ಬುಕ್‌ ಪೇಜ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ಚಕ್ರವರ್ತಿ ಸೂಲಿಬೆಲೆಯವರು ತಮ್ಮ ಭಾಷಣದಲ್ಲಿ More Foreign Trips Than Manmohan Singh Yet Lesser Bill For PM Modi ಎಂಬ ಪತ್ರಿಕಾ ವರದಿಯನ್ನು ಉಲ್ಲೇಖಿಸಿದ್ದಾರೆ….

Read More