ಚಿನ್ನ

Fact Check: 1991ರಲ್ಲಿ ಒತ್ತೆ ಇಟ್ಟಿದ್ದ 1 ಲಕ್ಷ ಕೆಜಿ ಚಿನ್ನವನ್ನು ಈಗ ಮೋದಿ ಭಾರತಕ್ಕೆ ತಂದಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ, ಹಲವಾರು ಸುದ್ದಿ ಸಂಸ್ಥೆಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇಂಗ್ಲೆಂಡ್‌(ಯುಕೆ)ನಲ್ಲಿ ಸಂಗ್ರಹವಾಗಿರುವ 100 ಮೆಟ್ರಿಕ್ ಟನ್ (ಎಂಟಿ) ಚಿನ್ನವನ್ನು 2023-24ರಲ್ಲಿ ದೇಶೀಯ ಬ್ಯಾಂಕ್‌ಗಳಿಗೆ(domestic vaults) ಸ್ಥಳಾಂತರಿಸಿದೆ ಎಂದು ವರದಿ ಮಾಡಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆರ್‌ಬಿಐ ತನ್ನ 2023-24ರ ವಾರ್ಷಿಕ ವರದಿಯಲ್ಲಿ ವಿದೇಶದಲ್ಲಿ ಸಂಗ್ರಹವಾಗಿರುವ 100 ಮೆಟ್ರಿಕ್ ಟನ್ ಚಿನ್ನವನ್ನು ದೇಶೀಯ ಬ್ಯಾಂಕ್‌ಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ 1991ರಲ್ಲಿ ಭಾರತ ದಿವಾಳಿತನ ಎದುರಿಸುತ್ತಿದ್ದಾಗ ಅಂದಿನ ಪ್ರಧಾನಿ ಚಂದ್ರಶೇಖರ್…

Read More
Gwadar Port

Fact Check: ಪ್ರಾದೇಶಿಕ ಸ್ಥಿರತೆಯ ಕಾರಣಕ್ಕಾಗಿ 1950ರಲ್ಲೇ ಗ್ವಾದರ್ ಬಂದರನ್ನು ಕೊಳ್ಳಲು ಭಾರತ ನಿರಾಕರಿಸಿತು

ಇತ್ತೀಚೆಗೆ 1974ರಲ್ಲಿ ಮುಗಿದ ಕಚ್ಚತೀವು ದ್ವೀಪದ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಗಮನ ಸೆಳೆದು ಅದು ಚರ್ಚೆಗೆ ಕಾರಣವಾಗಿತ್ತು. ಇಂದಿರಾ ಗಾಂಧಿಯವರು ಅದನ್ನು ಶ್ರೀಲಂಕಾ ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದನ್ನು ಬಿಜೆಪಿಗರು ವಿರೋದಿಸಿದ್ದರು. ಇಂದು ಇಂಡಿಯಾ ಟುಟೆ “ಪಾಕಿಸ್ತಾನದ ಗ್ವಾದರ್ ಅನ್ನು 1950 ರ ದಶಕದಲ್ಲಿ  ಭಾರತಕ್ಕೆ ನೀಡಲಾಗಿತ್ತು” ಎಂಬ ಲೇಖನವನ್ನು ಪ್ರಕಟಿಸಿ ಮತ್ತೊಂದು ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಇದನ್ನು ಕನ್ನಡ ದುನಿಯಾ ಎಂಬ ಮಾಧ್ಯಮವು ಇಂಡಿಯಾ ಟುಟೆ ವರದಿಯನ್ನೇ ಕನ್ನಡಕ್ಕೆ ಅನುವಾದಿಸಿ “ಈಗಿನ ಪಾಕಿಸ್ತಾನದ ಗ್ವಾದರ್ ಬಂದರು ಸ್ವೀಕರಿಸಲು…

Read More

Fact Check : ಇರಾಕ್‌ನಲ್ಲಿ ತೀವ್ರವಾದಿ ಇಸ್ಲಾಮಿಕ್ ಗುಂಪು ಕ್ರಿಶ್ಚಿಯನ್ನರನ್ನು ಗಲ್ಲಿಗೇರಿಸುತ್ತಿದೆ ಎಂಬುದು ಸುಳ್ಳು

ಇಸ್ಲಾಮಿಕ್‌ ಸ್ಟೇಟ್‌ ತೀವ್ರವಾದಿ  ಗುಂಪುಗಳ ಅಟ್ಟಹಾಸ ಹಲವು ದೇಶಗಳಲ್ಲಿ ಜನ ಸಾಮಾನ್ಯರನ್ನ ನಲುಗುವಂತೆ ಮಾಡಿವೆ. ಇದೀಗ ಇದೇ‌ ಐಸಿಸ್ ಗುಂಪುಗಳು ಕ್ರೈಸ್ತ ಸಮುದಾಯಕ್ಕೆ ಸೇರಿದ ಸಾಕಷ್ಟು ಮಂದಿಯನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆಂದು ಹಬ್ಬಿಸಲಾಗುತ್ತಿದೆ. ಇದಕ್ಕೆ ಸಂಬಂಧ ಪಟ್ಟ ಹಾಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು ಆ ವಿಡಿಯೋದ ತಲೆ ಬರಹದಲ್ಲಿ “ಇತ್ತೀಚೆಗೆ ಇರಾಕ್‌ನಲ್ಲಿ ತೀವ್ರವಾದಿ ಇಸ್ಲಾಮಿಕ್ ಗುಂಪುಗಳು ಕ್ರಿಶ್ಚಿಯನ್ನರನ್ನು ತಲೆಕಡಿದು ಕ್ರೂರವಾಗಿ ಗಲ್ಲಿಗೇರಿಸುತ್ತಿದೆ. ಆ ಮೂಲಕ ಕ್ರಿಶ್ಚಿಯನ್ನ ನರಮೇಧ ಮಾಡುತ್ತಿದೆ.” ಎಂದು ವೈರಲ್‌ ವಿಡಿಯೋದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ…

Read More