ಚಂದ್ರಬಾಬು ನಾಯ್ಡು

Fact Check: ಬಿಜೆಪಿ ಜೊತೆ ಸರ್ಕಾರ ರಚಿಸಿದ್ದಕ್ಕಾಗಿ ಆಂಧ್ರಪ್ರದೇಶದ ಜನರು ಚಂದ್ರಬಾಬು ನಾಯ್ಡು ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದು ಸುಳ್ಳು

ತೆಲುಗು ದೇಶಂ ಪಕ್ಷದ (ಟಿಡಿಪಿ) ಬೆಂಬಲಿಗರು ಪಕ್ಷದ ನಾಯಕ ಎನ್ ಚಂದ್ರಬಾಬು ನಾಯ್ಡು ಅವರ ಫೋಟೋಗೆ ಬೆಂಕಿ ಹಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ, ಇದು ಲೋಕಸಭೆ ಚುನಾವಣೆಯ ನಂತರ ಭಾರತೀಯ ಜನತಾ ಪಕ್ಷದ(ಬಿಜೆಪಿ) ಜೊತೆ ಸರ್ಕಾರ ರಚಿಸಿದ್ದಕ್ಕಾಗಿ ಆಂಧ್ರಪ್ರದೇಶದ ಜನರು ಚಂದ್ರಬಾಬು ನಾಯ್ಡು ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋ ವೈರಲ್ ಆಗಿದೆ.   ಲೋಕಸಭೆ ಚುನಾವಣಾ ಫಲಿತಾಂಶ ಜೂನ್ 4, 2024 ರಂದು ಮುಕ್ತಾಯಗೊಂಡಿದೆ ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ…

Read More
ಹೈಕೋರ್ಟ್

Fact Check: ಕಾಂಗ್ರೆಸ್‌ ಸರ್ಕಾರವನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ ಎಂದು ನಕಲಿ ವರದಿ ಹಂಚಿಕೊಳ್ಳಲಾಗುತ್ತಿದೆ

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಕಲಿ ಪತ್ರಿಕಾ ವರದಿಗಳನ್ನೇ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಸುಳ್ಳು ಹೇಳಿಕೆಗಳನ್ನು ಪತ್ರಿಕಾ ವರದಿಯಂತೆ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮಗೆ ಹಿಂದು ಮತ ಬೇಡ ಎಂದಿದ್ದಾರೆ ಎಂದು ಸಹ ನಕಲಿ ವರದಿ ಸೃಷ್ಟಿಸಲಾಗಿತ್ತು. ನಂತರ ಈ ಕುರಿತು ಪ್ರಕರಣ ದಾಖಲಾದರೂ ಯಾರನ್ನೂ ಬಂಧಿಸಿದ ವರದಿಯಾಗಿಲ್ಲ. ಈಗ, “ಇಂಥ ಕೆಟ್ಟ ಆಡಳಿತ ನಾವು ನೋಡೇ ಇಲ್ಲ: ಹೈಕೋರ್ಟ್‌, ಹೈಕೋರ್ಟ್ ಸರ್ಕಾರವನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡಿದೆ. ಸಿಎಂ ಅವರೇ ಇದು…

Read More
ರಾಹುಲ್ ಗಾಂಧಿ

Fact Check: ಕಾಂಗ್ರೆಸ್ ಸಂವಿಧಾನವನ್ನು ನಾಶಮಾಡಲು ಬಯಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿಲ್ಲ

ಕಾಂಗ್ರೆಸ್ ಪಕ್ಷವು ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನಾಶಮಾಡಲು ಬಯಸುತ್ತದೆ ಮತ್ತು ಭಾರತೀಯ ಜನತಾ ಪಕ್ಷವು (ಬಿಜೆಪಿ) ಅದನ್ನು ರಕ್ಷಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿರುವ ವಿಡಿಯೋ ಒಂದು ಈಗ ಸಾಕಷ್ಟಯ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, “ನಮಸ್ಕಾರ, ನಾನು ರಾಹುಲ್ ಗಾಂಧಿ, ಒಂದು ಕಡೆ ಈ ಚುನಾವಣೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಚುನಾವಣೆಯಾದರೆ, ಇನ್ನೋಂದು ಕಡೆ, ಕಾಂಗ್ರೆಸ್ ಪಕ್ಷ ಮತ್ತು ಐಎನ್‌ಡಿಐಎ ಮೈತ್ರಿಕೂಟ ಅದನ್ನು ನಾಶಪಡಿಸುತ್ತಿದೆ, ಮತ್ತೊಂದು ಕಡೆ ಆರ್‌ಎಸ್‌ಎಸ್ ಮತ್ತು ಬಿಜೆಪಿಯು 20-25…

Read More
ವಿವಿ ಪ್ಯಾಟ್

ಮತ ಎಣಿಕೆ ಬಳಿಕ ವಿವಿ ಪ್ಯಾಟ್ ಸ್ಲಿಪ್‌ಗಳನ್ನು ತೆಗೆದಿಡುತ್ತಿರುವ ಈ ವಿಡಿಯೋ ಹಳೆಯದು

ಮತ ಎಣಿಕೆ ಕೇಂದ್ರದಲ್ಲಿ ವಿವಿ ಪ್ಯಾಟ್‌ನಲ್ಲಿರುವ ಸ್ಲಿಪ್‌ಗಳನ್ನು ತೆಗೆದು ಕಪ್ಪು ಕವರ್‌ನಲ್ಲಿ ಇಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇವಿಎಂ ಹೈಜಾಕ್ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಅದು ನಿಜವೇ ಎಂಬುದನ್ನು ಪರಿಶೀಲಿಸೋಣ. ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿಯೂ ಇದೇ ವಿಡಿಯೋ ಬಿಜೆಪಿ ಇವಿಎಂ ಮೆಷಿನ್‌ಗಳನ್ನು ತಿರುಚುತ್ತಿದೆ ಎಂಬ ಆಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. *बहुत हम वीडियो है आप इसको जरूर देखिए 19 तारीख में जो चुनाव हुआ चुनाव के बाद एवं जहां…

Read More
ಅಖಿಲೇಶ್ ಯಾದವ್

Fact Check: ಇತ್ತೀಚೆಗೆ ಅಖಿಲೇಶ್ ಯಾದವ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ ಎಂಬುದು ಸುಳ್ಳು

ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾದ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ (ಇಲ್ಲಿ, ಮತ್ತು ಇಲ್ಲಿ). 2024 ರ ಲೋಕಸಭೆಯ ಫಲಿತಾಂಶಗಳನ್ನು ಗ್ರಹಿಸಿದ ನಂತರ ಅಖಿಲೇಶ್ ಯಾದವ್ ಇತ್ತೀಚೆಗೆ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದಾರೆ ಎಂದು ಇಬ್ಬರು ಭೇಟಿಯಾದ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ಚೆಕ್: ನಿಜಕ್ಕೂ ಅಖಿಲೇಶ್ ಯಾದವ್ ಅವರು ಮೋದಿಯವರನ್ನು ಭೇಟಿಯಾಗಿದ್ದಾರೆಯೇ ಎಂದು ಸಂಬಂಧಿತ ಕೀವರ್ಡ್ ಹುಡುಕಾಟ ನಡೆಸಿದಾಗ, ಇತ್ತೀಚಿನ ದಿನಗಳಲ್ಲಿ ಅಖಿಲೇಶ್ ಯಾದವ್…

Read More

Fact Check: 2017 ರ ವೀಡಿಯೊವನ್ನು ಪಶ್ಚಿಮ ಬಂಗಾಳದಲ್ಲಿ ರೋಹಿಂಗ್ಯಾಗಳು ಹಿಂದೂಗಳನ್ನು ಥಳಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಪರಿಸ್ಥಿತಿ ಹೇಗಿದೆ ನೊಡಿ ಎನ್ನಲಾದ ವೀಡಿಯೊ ಒಂದು (ಇಲ್ಲಿ ಮತ್ತು ಇಲ್ಲಿ) ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಗುಂಪೊಂದು ಕೆಲವು ಪುರುಷರನ್ನು ಹಿಂಬಾಲಿಸಿ ಥಳಿಸುವುದನ್ನು ನಾವು ನೋಡಬಹುದು. ಕೆಲವು ರೋಹಿಂಗ್ಯಾ ಪುರುಷರು ಹಿಂದೂಗಳಿಗೆ ಒದೆಯುವುದು ಮತ್ತು ಗುದ್ದುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ. ಈ ಲೇಖನದ ಮೂಲದ ಇದು ನಿಜವೇ, ನಿಜಕ್ಕೂ ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಪರಿಸ್ಥಿತಿ ಕಷ್ಟಕರವಾಗಿದೆಯೇ ತಿಳಿಯೋಣ ಬನ್ನಿ. ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೋವಿನ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು,…

Read More
ಮೋದಿ

Fact Check: 20 ನಗರಗಳಲ್ಲಿ ಮೆಟ್ರೋ ಸೇವೆಗಳು ಎಂದು ಬಿಜೆಪಿ ಮೋದಿ ಪೋಸ್ಟರ್‌ನಲ್ಲಿ ಸಿಂಗಾಪುರದ ಮೆಟ್ರೋ ರೈಲಿನ ಫೋಟೋವನ್ನು ಬಳಸಿದೆ

ಬಿಜೆಪಿ ರಾಜ್ಯ ಅಥವಾ ಜಿಲ್ಲಾ ಘಟಕಗಳ ಹಲವಾರು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ಮತ್ತು ಹಿನ್ನೆಲೆಯಲ್ಲಿ ಮೇಲ್ಸೇತುವೆ ಮೆಟ್ರೋ-ರೈಲ್ವೆ ಮಾರ್ಗಗಳ ಚಿತ್ರವಿರುವ ಪೋಸ್ಟರ್ ಅನ್ನು ಹಂಚಿಕೊಂಡಿವೆ. ಈ ಪೋಸ್ಟರ್‌ಗಳಲ್ಲಿ ಉದ್ಯೋಗವು ಹೆಚ್ಚಾಗದಿದ್ದರೆ, ಮೆಟ್ರೋ-ರೈಲ್ವೆ ಸೇವೆಗಳು ವಿವಿಧ ಭಾರತೀಯ ನಗರಗಳಿಗೆ ಹೇಗೆ ತಲುಪಿದವು? ಕಾಂಗ್ರೆಸ್ ಮಾತುಕತೆ; ಬಿಜೆಪಿ ಕೆಲಸಗಳು.) ಬಿಜೆಪಿ ಆಡಳಿತದಲ್ಲಿ 20 ನಗರಗಳಲ್ಲಿ ಮೆಟ್ರೋ ಸೇವೆಗಳು ಪ್ರಾರಂಭವಾಗಿದ್ದು, 2014 ಕ್ಕಿಂತಲೂ ಹಿಂದೆ 5 ನಗರಗಳಲ್ಲಿ ಮಾತ್ರ ಮೆಟ್ರೋ ಸೇವೆಗಳು ಇದ್ದವು ಎಂದು ಪೋಸ್ಟರ್…

Read More
ರಾಜೀವ್ ಗಾಂಧಿ

Fact Check: ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ಕುರಿತು ಮಾಡಿದ ಭಾಷಣವನ್ನು ಸಂವಿಧಾನ ಬದಲಿಸುತ್ತೇವೆ ಎಂದಿದ್ದರು ಎಂದು ಹಂಚಿಕೆ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಚರ್ಚೆಯಾದ ವಿಷಯ ಬಿಜೆಪಿಗೆ 400 ಸೀಟುಗಳು ಬಂದರೆ ಸಂವಿಧಾನವನ್ನು ಬದಲಿಸುತ್ತಾರೆ ಎಂಬುದು. ಈ ಹೇಳಿಕೆಯನ್ನು ಕೆಲವು ಬಿಜೆಪಿ ಸಂಸದರು ನೀಡಿದ ಮೇಲೆ, ವಿರೋಧ ಪಕ್ಷಗಳು ರಾಜಕೀಯ ಆಸ್ತ್ರವಾಗಿ ಬಳಸಿಕೊಂಡು ಬಿಜೆಪಿ 400 ಸೀಟು ಕೇಳುತ್ತಿರುವುದು ಸಂವಿಧಾನ ಬದಲಿಸುವುದಕ್ಕೆ ಎಂದು ಸಾಕಷ್ಟು ಟೀಕಿಸಿದರು. ನಂತರ ರಾಜೀವ್ ಗಾಂಧಿಯವರು ಸಹ “ಅಗತ್ಯ ಬಿದ್ದರೆ ಕಾನೂನು ಬದಲಿಸುತ್ತೇವೆ ಮತ್ತು ಸಂವಿಧಾನದಲ್ಲಿ ಬದಲಾವಣೆ ತರುತ್ತೇವೆ” ಎಂದಿದ್ದರು. ಎನ್ನಲಾದ ವಿಡಿಯೋ ತುಣುಕೊಂದನ್ನು ಅನೇಕ ದಿನಗಳಿಂದ ಹಂಚಿಕೊಳ್ಳಲಾಗುತ್ತಿದೆ….

Read More
ಪಾಕಿಸ್ತಾನ್

ಸಮಾಜವಾದಿ ಪಕ್ಷದ ಕಾರ್ಯಕರ್ತರು ‘ಸೈಕಲ್ ನಿಶಾನ್ ಜಿಂದಾಬಾದ್’ ಎಂದು ಕೂಗಿದ್ದಾರೆಯೇ ಹೊರತು ಪಾಕಿಸ್ತಾನ್ ಜಿಂದಾಬಾದ್ ಎಂದಲ್ಲ

ಇತ್ತೀಚೆಗೆ ಇಂಡಿಯಾ ಒಕ್ಕೂಟದ ಪಕ್ಷಗಳು ಪ್ರಚಾರ ನಡೆಸುವ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಕರ್ನಾಟಕದಲ್ಲಿ ವಿಧಾನ ಸೌಧದಲ್ಲಿ ಈ ಘೋಷಣೆ ಕೂಗಿದ ಕುರಿತ ವಿವಾದ ಹಿನ್ನಲೆಗೆ ಸರಿಯುತ್ತಿದ್ದಂತೆ, ರಾಮನಗರದಲ್ಲಿ ಡಿ.ಕೆ ಸುರೇಶ್ ಅವರ ಪ್ರಚಾರದ ವೇಳೆ ಪಾಕಿಸ್ತಾನ್ ಜಿಂದಾಬಾದ್ ಕೂಗಲಾಗಿದೆ ಎಂದು ಮತ್ತು ರಾಯಚೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುಮಾರ್ ನಾಯಕ್ ಅವರ ಪ್ರಚಾರದ ವೇಳೆ ಈ ರೀತಿಯ ದೇಶದ್ರೋಹಿ ಘೋಷಣೆ ಕೂಗಲಾಗಿದೆ ಎಂದು ಸುಳ್ಳು ಹಂಚಿಕೊಳ್ಳಲಾಗುತ್ತಿತ್ತು. ಈಗ, ಯುಪಿಯ ಅಜಂಗಢದಲ್ಲಿ ಸಮಾಜವಾದಿ ಪಕ್ಷದ…

Read More
ಕಾಂಗ್ರೆಸ್

Fact Check: ಕಾಂಗ್ರೆಸ್‌ ಪ್ರಣಾಳಿಕೆಯ ಕುರಿತು ಹರಡುತ್ತಿರುವ ಸುಳ್ಳುಗಳೇನು ಮತ್ತು ಸತ್ಯವೇನು?

ಈ ಬಾರಿಯ ಕಾಂಗ್ರೆಸ್‌ ನ ಲೋಕಸಭಾ ಚುನಾವಣೆಯ ಪ್ರಣಾಳಿಕೆಯ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಸೇರಿದಂತೆ ಅನೇಕರು ಸುಳ್ಳು ಹರಡುತ್ತಿದ್ದಾರೆ. ಈಗ ವ್ಯಕ್ತಿಯೊಬ್ಬರು ಕಾಂಗ್ರೆಸ್ ಪ್ರಣಾಳಿಕೆಯ ಕುರಿತು ವಿವರಿಸಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ 2024 ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸಿದರೆ, 370 ನೇ ವಿಧಿಯನ್ನು ಮರುಸ್ಥಾಪಿಸುತ್ತೇವೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಹೊಸ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ರದ್ದುಗೊಳಿಸುತ್ತೇವೆ, ಮತಾಂತರ ವಿರೋಧಿ…

Read More