ವಾರಣಾಸಿ

Fact Check: ಜರ್ಮನಿಯ ರೈಲು ಮಾರ್ಗದ ಚಿತ್ರವನ್ನು ಪ್ರಧಾನಿ ಮೋದಿಯವರ ವಾರಣಾಸಿ ಕ್ಷೇತ್ರದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

“ಈ ಮೆಟ್ರೋ ಚಿತ್ರ ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರವಾದ ವಾರಣಾಸಿಯದು” ಎಂಬ ಹೇಳಿಕೆಯೊಂದಿಗೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚಿತ್ರವೊಂದು ವೈರಲ್ ಆಗುತ್ತಿದೆ. ವಾರಣಾಸಿಯ ಅಭಿವೃದ್ಧಿಯನ್ನು ಪ್ರತಿನಿಧಿಸುತ್ತದೆ ಎಂಬ ಹೇಳಿಕೆಗಳೊಂದಿಗೆ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗಷ್ಟೇ “ಯುಪಿಎ ಸರ್ಕಾರದಲ್ಲಿ ಕೇವಲ ಮೂರ್ನಾಲ್ಕು ನಗರಗಳಲ್ಲಿ ಮೆಟ್ರೋ ವ್ಯವಸ್ಥೆ ಇತ್ತು ಮೋದಿ ಪ್ರಧಾನಿಯಾದ ನಂತರ ಈಗ 20 ನಗರಗಳಲ್ಲಿ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ” ಎಂದು ಬಿಜೆಪಿ ಹಂಚಿಕೊಂಡಿರುವ ಪೋಸ್ಟರ್ ಒಂದರಲ್ಲಿ ಸಿಂಗಾಪುರ್‌ನ ಮೆಟ್ರೋ ಚಿತ್ರವನ್ನು ಬಳಸಿಕೊಂಡು ಸಿಕ್ಕಿಬಿದ್ದಿತ್ತು.  ಈಗ, ‘ಸಲೀಂ…

Read More
ಮೋದಿ

Fact Check: ಪ್ರಧಾನಿ ಮೋದಿಯವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಪ್ಪು ಚರ್ಮದವರು ಎಂದು ಕರೆದಿದ್ದಾರೆ ಎಂಬುದು ಸುಳ್ಳು

ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರನ್ನು ಜನಾಂಗೀಯ ಹೇಳಿಕೆಗಳ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ಟೀಕಿಸುವ ವೀಡಿಯೊವನ್ನು ಬದಲಾಯಿಸಿ, ಮೋದಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಪ್ಪು ಚರ್ಮದವರು ಎಂದು ಕರೆದಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಮೇ 2, 2024 ರಂದು, ದಿ ಸ್ಟೇಟ್ಸ್‌ಮನ್‌ಗೆ ನೀಡಿದ ಸಂದರ್ಶನದಲ್ಲಿ, ಭಾರತದ ವೈವಿಧ್ಯತೆಗೆ ಉದಾಹಣೆಯನ್ನು ನೀಡಲು ಪ್ರಯತ್ನಿಸುತ್ತಿರುವಾಗ ಪಿತ್ರೋಡಾ ಅವರು ಭಾರತದ ವಿವಿಧ ಪ್ರದೇಶಗಳ ಜನರು ಚೈನೀಸ್, ಅರಬ್, ಬಿಳಿ ಮತ್ತು ಆಫ್ರಿಕನ್ ಜನಾಂಗಗಳನ್ನು…

Read More
ತೇಜಸ್ವಿ ಯಾದವ್

Fact Check: ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜನತೆಗೆ ಕೇಳಿಸಿರುವ ಮೋದಿಯವರ ಭಾಷಣದ ಆಡಿಯೋವನ್ನು ಬದಲಾಯಿಸಿ ಹಂಚಿಕೊಳ್ಳಲಾಗುತ್ತಿದೆ

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರು ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಪೋರ್ಟಬಲ್ ಸ್ಪೀಕರ್‌ನಲ್ಲಿ ಜನರಿಗೆ ಕೇಳಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಭಾಷಣದಲ್ಲಿ ಆರ್‌ಜೆಡಿಯ ಹಗರಣಗಳ ಬಗ್ಗೆ ಪ್ರಧಾನಿ ಮೋದಿಯವರು ಟೀಕಿಸಿದ್ದಾರೆ. ಇದನ್ನು ಸ್ವತಃ ಯಾದವ್ ಅವರೇ ಜನರಿಗೆ ಕೇಳಿಸುವ ಮೂಲಕ ತಮ್ಮದೇ ಪಕ್ಷದ ಹಗರಣವನ್ನು ಬಹಿರಂಗಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅನೇಕರು ತಮ್ಮ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೀವಿಲ್ಲಿ ನೋಡಬಹುದು. तेजस्वी यादव…

Read More

Fact Check: ಮನಮೋಹನ್ ಸಿಂಗ್ ಅವರ 18 ವರ್ಷಗಳ ಹಳೆಯ ಭಾಷಣದ ಕುರಿತು ಸುಳ್ಳು ಹೇಳಿದ ಪ್ರಧಾನಿ ಮೋದಿ

ದೇಶದಲ್ಲಿ ಲೋಕಸಭಾ ಚುನಾವಣಾ ಮೊದಲ ಹಂತದ ಚುನಾವಣೆ ಅನೇಕ ರಾಜ್ಯಗಳಲ್ಲಿ ನಡೆದಿದೆ. ಒಟ್ಟು ಏಳು ಹಂತದಲ್ಲಿ ಚುನಾವಣೆಯನ್ನು ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ನೆನ್ನೆಯಷ್ಟೇ ರಾಜಸ್ತಾನದ ಬನ್ಸವಾಡದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವ ಕೋಮುವಾದಿ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಭಾರತ ದೇಶದ ಪ್ರಧಾನ ಮಂತ್ರಿಗಳು ಧರ್ಮದ ಆಧಾರದ ಮೇಲೆ ಇಲ್ಲಿನ ಜನರನ್ನು ವಿಭಜಿಸಿ ಮಾತನಾಡುವುದು ಅಸಂವಿಧಾನಿಕ ನಡೆಯಾಗುತ್ತದೆ . ನಮ್ಮ ಸಂವಿಧಾನ ಭಾರತದ ಎಲ್ಲಾ ಧರ್ಮ, ಜಾತಿ, ಭಾಷಿಗರನ್ನು ಸಹ…

Read More
ರಣವೀರ್ ಸಿಂಗ್

Fact Check: ನಟ ರಣವೀರ್ ಸಿಂಗ್ ಮೋದಿಯವರನ್ನು ಟೀಕಿಸಿದ್ದಾರೆ ಎಂಬುದು ಡೀಪ್ ಫೇಕ್ ವಿಡಿಯೋ

ನೆನ್ನೆ ಲೋಕಸಭಾ 2024ರ ಮೊದಲ ಹಂತದ ಚುನಾವಣೆಗೆ ಇನ್ನು ಒಂದೇ ದಿನ ಬಾಕಿ ಇದೆ ಎನ್ನುವಾಗ ಕೆಲವು ಬಾಲಿವುಡ್‌ ನಟರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಇದರಲ್ಲಿ ನಟರು ಕಳೆದ ಹತ್ತುವರ್ಷಗಳಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವು ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ ಹಾಗಾಗಿ ಯಾರು ಅಭಿವೃದ್ದಿ ಮಾಡುತ್ತಾರೆ ಅವರಿಗೆ ಮತ ನೀಡಿ ಎಂದು ಜನರನ್ನು ಕೇಳಿಕೊಂಡಿರುವ ವಿಡಿಯೋಗಳು ಹರಿದಾಡುತ್ತಿದ್ದವು. ಇತ್ತೀಚೆಗೆ “ಅಮಿರ್ ಖಾನ್ ಅವರು ನಿಮ್ಮ 25 ಲಕ್ಷ ಹಣ ಎಲ್ಲಿ ಹೋಯ್ತು?” ಎಂದು ಸಾರ್ವಜನಿಕರನ್ನು ಕೇಳಿದ್ದಾರೆ….

Read More
ಬಿಜೆಪಿ

Fact Check: ನಿರುದ್ಯೋಗ ತಪ್ಪಿಸಲು ಮಕ್ಕಳು ಮಾಡಿಕೊಳ್ಳಬೇಡಿ ಎಂದು ಬಿಜೆಪಿ ಸಂಸದ ದಿನೇಶ್ ಲಾಲ್ ಯಾದವ್ ಹೇಳಿರುವುದು ನಿಜ

ಇತ್ತೀಚೆಗೆ, ಅಜಂಗಢದ ಬಿಜೆಪಿ ಸಂಸದ ದಿನೇಶ್ ಲಾಲ್ ಯಾದವ್ ನಿರಾಹುವಾ ಅವರು ‘ದೇಶದಲ್ಲಿ ನಿರುದ್ಯೋಗ ಹೆಚ್ಚಾಗದಿರಲು ಮೋದಿಜಿ-ಯೋಗಿ ಒಂದೇ ಒಂದು ಮಗುವಿಗೆ ಜನ್ಮ ನೀಡಲಿಲ್ಲ’ ಎಂದಿದ್ದಾರೆ ಎಂಬ ಹೇಳಿಕೆಯ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಹರಿದಾಡುತ್ತಿದ್ದು ತೀವ್ರ ಟೀಕೆಗೆ ಗುರಿಯಾಗುತ್ತಿದ್ದಾರೆ. ಆದರೆ ಈಗ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ” ಈ ವಿಡಿಯೋ ನಕಲಿ(ಡೀಪ್ ಫೇಕ್). ಕಾಂಗ್ರೆಸ್, ಸಂಸದರಂತೆ, ಜನರನ್ನು ದಾರಿತಪ್ಪಿಸಲು, ಅಶಾಂತಿಯನ್ನು ಸೃಷ್ಟಿಸಲು ಮತ್ತು ಸಮಾಜದಲ್ಲಿ ಒಡಕುಗಳನ್ನು ಬಿತ್ತಲು ಡೀಪ್‌ಫೇಕ್‌ಗಳನ್ನು ಬಳಸುತ್ತಿದೆ….

Read More
BJP

Fact Check: ಗಿಳಿ ಕೂಡಿ ಹಾಕಿದಕ್ಕೆ ಶಾಸ್ತ್ರ ಹೇಳುವವರ ಬಂಧಿಸಲಾಗಿದೆಯೇ ಹೊರತು BJP ಗೆಲ್ಲುತ್ತದೆ ಎಂದಿದ್ದಕ್ಕೆ ಅಲ್ಲ

ಈ ಬಾರಿ ತಮಿಳುನಾಡಿನಲ್ಲಿ ತನ್ನ ಖಾತೆ ತೆರೆಯಲು ಶತಾಯಗತಾಯ ಪ್ರಯತ್ನಿಸುತ್ತಿರುವ ಬಿಜೆಪಿ ಯವರು ಅಲ್ಲಿನ ಆಡಳಿತಾರೂಢ ಡಿಎಂಕೆ ಪಕ್ಷದ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ವಿರುದ್ಧ ನಾನಾ ಆರೋಪಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಸುಳ್ಳು ಸುದ್ದಿಗಳನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ. ಈಗ, ತಮಿಳುನಾಡಿನಲ್ಲಿ ಗಿಣಿ ಶಾಸ್ತ್ರ ಹೇಳುವವನ ಗಿಳಿ ಚುನಾವಣೆಯಲ್ಲಿ BJP ಗೆಲ್ಲುತ್ತದೆ ಎಂದಿದ್ದಕ್ಕೆ ಶಾಸ್ತ್ರದವನನ್ನು ಎಳೆದೊಯ್ದ ಪೊಲೀಸರು! ಎಲ್ಲಿದೆ ಪ್ರಜಾಪ್ರಭುತ್ವ! ಎಂಬ ವಿಡಿಯೋ ಒಂದನ್ನು ಹರಿಬಿಡಿಟ್ಟಿದ್ದು, ಈ ವಿಡಿಯೋದಲ್ಲಿ ತಮಿಳುನಾಡಿನ ಪೋಲೀಸರು ಗಿಳಿ ಶಾಸ್ತ್ರ ಹೇಳುವ ವ್ಯಕ್ತಿಯೊಬ್ಬರನ್ನು ಎಳೆದುಕೊಂಡು ಹೋಗಿ…

Read More

Fact Check: ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮುಸ್ಲಿಮರ ಟೋಪಿ ಧರಿಸಿರಲಿಲ್ಲ, ಇದು ಎಡಿಟೆಡ್ ಫೋಟೊ

ಭಾರತೀಯ ಜನತಾ ಪಕ್ಷವು ಇಂಡಿಯಾ ಒಕ್ಕೂಟದ ನಾಯಕರು ಮುಸ್ಲಿಂ ತುಷ್ಟೀಕರಣ ನಡೆಸುತ್ತಿದ್ದಾರೆ ಎಂದು ಮೊದಲಿನಿಂದಲೂ ಆರೋಪಿಸುತ್ತಾ ಬರುತ್ತಿದ್ದಾರೆ ಮತ್ತು ಮುಸ್ಲಿಂ ದ್ವೇಷವನ್ನು ತನ್ನ ಪಕ್ಷದ ಸಿದ್ದಾಂತ ಎನ್ನುವ ರೀತಿಯಲ್ಲಿ ಅನುಸರಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರು ಯಾರೇ ಮುಸ್ಲಿಂ ಸಮುದಾಯದೊಟ್ಟಿಗೆ ಗುರುತಿಸಿಕೊಂಡಿದ್ದರು ಸಹ ಅವರ ಪೋಟೋಗಳನ್ನು ಬಳಸಿಕೊಂಡು ಅವರನ್ನು ಟೀಕಿಸಲಾಗುತ್ತದೆ ಮತ್ತು ಅವರ ಹೆಸರಿನ ಜೊತೆಗೆ ಮುಸ್ಲಿಂ ಹೆಸರನ್ನು ಸೇರಿಸಿ ವ್ಯಂಗ್ಯ ಮಾಡಲಾಗುತ್ತದೆ. ಆದಕ್ಕೆ ಪ್ರತಿಯಾಗಿ ವಿರೋಧ ಪಕ್ಷದ ನಾಯಕರು ಸಹ ಬಿಜೆಪಿ ನಾಯಕರು ಮುಸ್ಲಿಂ ಕಾರ್ಯಕ್ರಮದಲ್ಲಿ ಭಾಗಿಯಾದ…

Read More
Bharat Ratna

Fact Check: ಭಾರತ ರತ್ನ ಪ್ರಶಸ್ತಿ ಪ್ರಧಾನದ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕುಳಿತುಕೊಳ್ಳಲು ಕುರ್ಚಿ ನೀಡಲಾಗಿದೆ

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಇತ್ತೀಚೆಗೆ ಕೇಂದ್ರ ಸರ್ಕಾರವು ಘೋಷಿಸಿದ್ದು. ಬಿಹಾರದ ಮುಖ್ಯಮಂತ್ರಿಯಾಗಿ ಹಿಂದುಳಿದವರಿಗೆ ರಾಜಕೀಯ ಮೀಸಲಾತಿ ನೀಡಿದ ಹಾಗೂ ದಮನಿತರ ಪರವಾಗಿ ಹೋರಾಟ ಮಾಡಿದ ಕರ್ಪೂರಿ ಠಾಕೂರ್‌ ಅವರಿಗೆ, ಕೃಷಿ ಕ್ರಾಂತಿಯ ಮೂಲಕ ಭಾರತದಲ್ಲಿ ಗಮನ ಸೆಳೆದ ಚೌಧರಿ ಚರಣ್‌ ಸಿಂಗ್‌ ಅವರಿಗೆ, ಭಾರತದ ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿದ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರಿಗೆ ಮತ್ತು ಕೃಷಿ ಹಾಗೂ ಆಹಾರ ಕ್ಷೇತ್ರದಲ್ಲಿ ಗಣನೀಯ ಕೆಲಸ ಮಾಡಿ ಹಸಿರು ಕ್ರಾಂತಿಯ ಹರಿಕಾರ ಎಂದು…

Read More
Narendra Modi

Fact Check: ಪ್ರಧಾನಿ ಮೋದಿಯವರು ಗಣೇಶನ ವಿಗ್ರಹವನ್ನು ತೆಗೆದುಕೊಳ್ಳಲು ನಿರಾಕರಿಸಿಲ್ಲ

ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ವಾರಗಳು ಬಾಕಿ ಇರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ವಿರೋಧಿ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಹಿಂದು ವಿರೋಧಿ ಎಂದು ಬಿಂಬಿಸಲು ನಾಯಕರ ಹಳೆಯ ವಿಡಿಯೋಗಳನ್ನು ಬಳಸಿ ತಪ್ಪಾಗಿ ಪ್ರತಿಪಾದಿಸಲಾಗುತ್ತಿದೆ. ಅಂತೆಯೇ ಈಗ, “ನರೇಂದ್ರ ಮೋದಿಯವರು ಕಾರ್ಯಕ್ರಮವೊಂದರಲ್ಲಿ ಗಣೇಶನ ಮೂರ್ತಿಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಇದೇ ಕೆಲಸವನ್ನು ರಾಹುಲ್ ಗಾಂಧಿಯವರು ಮಾಡಿದ್ದರೆ ಬಿಜೆಪಿ ಮತ್ತು ಅವರ ಬೆಂಬಲಿತ ಮಾಧ್ಯಮಗಳು ಹೇಗೆ ವರ್ತಿಸುತ್ತಿದ್ದವು ಎಂದು ಊಹಿಸಿ.” ಎಂಬ ಸಂದೇಶದ…

Read More