Fact Check : ಹಿಂದೂಗಳ ನಂಬಿಕೆಯುಳ್ಳ 8,000 ವರ್ಷಗಳ ಹಳೆಯ ದೇವಾಲಯವು ಸೌದಿಯಲ್ಲಿ ಪತ್ತೆಯಾಗಿದೆ ಎಂಬುದು ಸುಳ್ಳು

ಸೌದಿ ಅರೇಬಿಯಾದಲ್ಲಿ 8,000 ವರ್ಷಗಳಷ್ಟು ಹಳೆಯದಾದ ಸನಾತನ ಧರ್ಮದ ದೇವಾಲಯ ಮತ್ತು ನಾಗರಿಕತೆಯ ಅವಶೇಷಗಳನ್ನು ಕಂಡುಹಿಡಿಯಲಾಗಿದೆ ಎಂಬ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ ಈ ವೈರಲ್‌ ವೀಡಿಯೋದ ಹೆಸರುಗಳನ್ನು Google ಕೀವರ್ಡ್ ಬಳಸಿಕೊಂಡು ಹುಡುಕಿದಾಗ, ಈ ಉತ್ಖನನ ಮತ್ತು ಅನ್ವೇಷಣೆಯ ಕುರಿತು ಹಲವಾರು ವರದಿಗಳು ಲಭಿಸಿವೆ. 2022ರ ಜುಲೈನಲ್ಲಿ ಸೌದಿ ಹೆರಿಟೇಜ್ ಕಮಿಷನ್, ಉತ್ಖನನದಲ್ಲಿ ನೈಋತ್ಯ ಸೌದಿ ಅರೇಬಿಯಾದ ಮೌಂಟ್ ತುವೈಕ್‌ನಲ್ಲಿರುವ ಅಲ್-ಫಾವ್‌ನಲ್ಲಿ  8,000 ವರ್ಷಗಳಷ್ಟು ಹಳೆಯದಾದ ಕಲ್ಲಿನ ದೇವಾಲಯದ ತುಣುಕುಗಳು ದೊರೆತಿವೆ….

Read More