Fact Check I ಫೇಲಸ್ತೀನ್ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿಯವರನ್ನು “ಯಹೂದಿಯರ ಗುಲಾಮ” ಎಂದು ಕರೆದಿಲ್ಲ

ಫೇಲಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್‌ರವರು ಪ್ರಧಾನಿ ನರೇಂದ್ರ ಮೋದಿಯವರನ್ನು “ಯಹೂದಿಯರ ಗುಲಾಮ” ಎಂದು ಬೈದಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನಿ ಮೂಲದ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಮೋದಿಯವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ಸಂಭಾಷಣೆಯ ಕುರಿತು ಟ್ವೀಟ್ ಪೋಸ್ಟ್ ಮಾಡಿದ ಬಳಿಕ,  ಮೋದಿಯವರ ಬಗ್ಗೆ ಫೇಲಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್‌ರವರು ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಆರೋಪಿಸಲಾಗುತ್ತಿದೆ. ಫ್ಯಾಕ್ಟ್‌ಚೆಕ್ ಈ ಹೇಳಿಕೆ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಯಾಕೆಂದರೆ, ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ….

Read More
ನೆಹರು

Fact Check: ಜವಾಹರಲಾಲ್ ನೆಹರು ಅವರು ಪತ್ನಿ ಕಮಲಾ ಅವರನ್ನು ನಿರ್ಲಕ್ಷಿಸಿದ್ದರು ಎಂಬ ಸುದ್ದಿ ಸುಳ್ಳು!

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಅವರ ಪತ್ನಿ ಕಮಲಾ ನೆಹರು ಅವರ ಕಥೆಯನ್ನು ಹೇಳುವ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪತ್ನಿ ಜಶೋದಾಬೆನ್ ಮೋದಿಯನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂದು ಜನರು ಟೀಕಿಸುತ್ತಾರೆ, ಆದರೆ “ಜವಾಹರಲಾಲ್ ನೆಹರು ತಮ್ಮ ಪತ್ನಿ ಕಮಲಾ ನೆಹರೂ ಅವರಿಗೆ ಏನು ಮಾಡಿದರು ಎಂಬ ಕಥೆ ತಿಳಿದಿಲ್ಲ” ಎಂದು ಹೇಳಲು ಈ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಕಮಲಾ ನೆಹರು ಕ್ಷಯರೋಗದಿಂದ (ಟಿಬಿ) ಬಳಲುತ್ತಿದ್ದರು ಎಂದು ಪೋಸ್ಟ್‌ನ ಸಂದೇಶದಲ್ಲಿ ಹೇಳಲಾಗಿದೆ ಈ ಕಾರಣದಿಂದಾಗಿ ಮಾಜಿ…

Read More
ತಮಿಳು

Fact Check: ಕಳೆದ 10 ವರ್ಷಗಳಲ್ಲಿ ಶ್ರೀಲಂಕಾ ಸೇನೆಯು ತಮಿಳು ಮೀನುಗಾರರ ಮೇಲೆ ಗುಂಡಿನ ದಾಳಿ ನಡೆಸಿಲ್ಲ ಎಂಬುದು ಸುಳ್ಳು

ಕಳೆದ 10 ವರ್ಷಗಳಲ್ಲಿ ಶ್ರೀಲಂಕಾ ಸೇನೆಯು ತಮಿಳು ಮೀನುಗಾರರ ಮೇಲೆ ಗುಂಡು ಹಾರಿಸಿದ ಯಾವುದೇ ಘಟನೆಗಳು ನಡೆದಿಲ್ಲ ಎಂದು ಪ್ರತಿಪಾದಿಸಿದ ಪೋಸ್ಟ್ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಅನೇಕರು ಹಂಚಿಕೊಂಡಿದ್ದಾರೆ. ಎಐ ಬಳಸಿ ಚಿತ್ರವೊಂದನ್ನು ಸೃಷ್ಟಿಸಿ ಹಂಚಿಕೊಳ್ಳುತ್ತಿರುವ ಬಿಜೆಪಿ ಮತ್ತು ಮೋದಿ ಬೆಂಬಲಿಗರು “ದೊಡ್ಡ ಸಾಧನೆ 🫡 PM @ನರೇಂದ್ರ ಮೋದಿ ಜಿ ತಮಿಳು ಮೀನುಗಾರರ ಸುರಕ್ಷತೆಯನ್ನು ಖಾತ್ರಿಪಡಿಸಿದ್ದಾರೆ! ಕಳೆದ 10 ವರ್ಷಗಳಿಂದ ಶ್ರೀಲಂಕಾ ಸೇನೆಯಿಂದ ಯಾವುದೇ ಗುಂಡಿನ ದಾಳಿ ನಡೆದಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದನ್ನು …

Read More

Fact Check: ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತದೆ ಎಂಬುದು ನಿಜವೇ? ಇಲ್ಲಿದೆ ಸಂಪೂರ್ಣ ಮಾಹಿತಿ

ಕಳೆದ ಒಂದು ದಶಕಗಳಿಂದಲೂ ಹಿಂದು-ಮುಸ್ಲಿಂ ಹೆಸರಿನಲ್ಲಿ ಕೋಮುವಾದ ಬಿತ್ತಲು ಮತ್ತು ಧರ್ಮ ಕಲಹ ನಡೆಯುವಂತೆ ಮಾಡಲು ಅನೇಕ ಬಲಪಂಥೀಯ ಸಂಘಟನೆಗಳು ಮತ್ತು ಅವುಗಳ ಬೆಂಬಲಿಗರು ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಬಿಜೆಪಿ ಬೆಂಬಲಿಗರು ಸಹ ಪ್ರಮುಖವಾಗಿ ಭಾಗಿಯಾಗಿದ್ದು, ಪ್ರತಿನಿತ್ಯ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಹರಿಬಿಡುವುದು, ಸಂಬಂಧವಿರದ ಘಟನೆಗೆ ಕೋಮು ಆಯಾಮವನ್ನು ನೀಡುವುದು, ಹಿಂದುಗಳ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂದು ಬಿಂಬಿಸಲು ಹಳೆಯ ಘಟನೆಗಳ ವೀಡಿಯೋಗಳನ್ನು ನಿರಂತರವಾಗಿ ಹರಿಬಿಡುತ್ತಿದ್ದಾರೆ. ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಇಂತಹ ನೂರಾರು…

Read More

Fact Check: ನರೇಂದ್ರ ಮೋದಿ ಅಮೆರಿಕ ಬಿಡುಗಡೆ ಮಾಡಿದ 50 ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯ ಮೊದಲನೇ ಸ್ಥಾನ ಪಡೆದಿದ್ದಾರೆ ಎಂಬುದು ಸುಳ್ಳು

ನರೇಂದ್ರ ಮೋದಿಯವರ ಸಾಧನೆಗಳ ಕುರಿತು ಪ್ರತೀ ದಿನವೂ ಒಂದಿಲ್ಲೊಂದು ಸುಳ್ಳುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುತ್ತವೆ. ಬಿಜೆಪಿ  ಐಟಿ ಸೆಲ್ ಕೂಡ ಇಂತಹ ಅನೇಕ ಉತ್ಪ್ರೇಕ್ಷೆಯ ಸುಳ್ಳು ಪೋಸ್ಟರ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ಅದನ್ನು ನರೇಂದ್ರ ಮೋದಿಯವರ ಅಭಿಮಾನಿಗಳ ನಡುವೆ ಹಂಚಿಕೊಳ್ಳಲಾಗುತ್ತದೆ. ಅದೇ ರೀತಿ ಈಗ “ಅಮೆರಿಕ” ಬಿಡುಗಡೆ ಮಾಡಿದ 50 ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯ ಮೊದಲನೇ ಸ್ಥಾನ ಪಡೆದ “ಭಾರತದ ಏಕೈಕ ವ್ಯಕ್ತಿ” “ಅಪ್ಪಟ ದೇಶಪ್ರೇಮಿ” ಶ್ರೀ ನರೇಂದ್ರ ಮೋದಿ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್‌ ಒಂದು ಸಾಮಾಜಿಕ…

Read More
ದೆಹಲಿ ವಿಮಾನ ನಿಲ್ದಾಣ

Fact Check: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರ ಉದ್ಘಾಟನೆ ಚಿತ್ರವನ್ನು ಎಡಿಟ್ ಮಾಡಿ ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ಮಾಜಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅವರು ನವದೆಹಲಿಯ ವಿಮಾನ ನಿಲ್ದಾಣದ ಟರ್ಮಿನಲ್ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಂಡಿರುವ ಚಿತ್ರವು ಆನ್ ಲೈನ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐಎ) ಟರ್ಮಿನಲ್ 1 ಅನ್ನು ಜಿಎಂಆರ್ ನಿರ್ಮಿಸಿದೆ ಮತ್ತು ಜುಲೈ 3, 2010 ರಂದು ಅವರು ಉದ್ಘಾಟಿಸಿದರು…

Read More
ರಾಹುಲ್ ಗಾಂಧಿ

Fact Check: ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರ ಕುರಿತು ರಾಹುಲ್ ಗಾಂಧಿ ಅವಹೇಳನಕಾರಿ ಬೈಗುಳವನ್ನು ಪ್ರಯೋಗಿಸಿಲ್ಲ

ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಮಾಡಿದ ಭಾಷಣದ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಮೋದಿಯವರಿಗೆ ಅವಹೇಳನಕಾರಿ ಬೈಗುಳವನ್ನು ಪ್ರಯೋಗಿಸಿದ್ದಾರೆ ಎನ್ನಲಾದ ವೀಡಿಯೋ ತುಣುಕೊಂದನ್ನು ಬಿಜೆಪಿ ಬೆಂಬಲಿಗರು ಹಂಚಿಕೊಳ್ಳುತ್ತಿದ್ದಾರೆ. 5 ಸೆಕೆಂಡುಗಳ ಈ ವಿಡಿಯೋದಲ್ಲಿ ಮೋದಿ ಸಂಸತ್ತಿನಲ್ಲಿ ಭಾಷಣ ಮಾಡುತ್ತಿದ್ದಾರೆ. ನಂತರ ರಾಹುಲ್ ಗಾಂಧಿ ಬೈಗುಳದ ಪದಗಳನ್ನು ಉಚ್ಚರಿಸುವುದನ್ನು ಅದು ತೋರಿಸುತ್ತದೆ, ಆದರೆ ಘೋಷಣೆಗಳು ಹಿನ್ನೆಲೆಯಲ್ಲಿ ಮುಂದುವರಿಯುತ್ತವೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರ ಚೊಚ್ಚಲ ಭಾಷಣದ ಭಾಗಗಳನ್ನು ಸ್ಪೀಕರ್ ಓಂ…

Read More

Fact Check: ರಾಹುಲ್ ಗಾಂಧಿ ಸದನದಲ್ಲಿ ಹಿಂದು ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಎಡಿಟ್ ವೀಡಿಯೋ ಹಂಚಿಕೊಂಡ ನಿರ್ಮಲ ಸೀತಾರಾಮನ್

ಲೋಕಸಭೆಯಲ್ಲಿ ಇಂದು(ಸೋಮವಾರ) ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರ ನಡುವೆ ಹಿಂದೂ ಧರ್ಮದ ಕುರಿತು ತೀವ್ರ ಮಾತಿನ ಚಕಮಕಿ ನಡೆಯಿತು. ಸಧ್ಯ ರಾಹುಲ್ ಗಾಂಧಿಯವರು ಹಿಂದು ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಹಿಂದುಗಳನ್ನು ಹಿಂಸಾತ್ಮಕ ಎಂದು ಕರೆದಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಆರೋಪಿಸಿದ್ದಾರೆ. ಸಚಿವೆ ನಿರ್ಮಲ ಸೀತಾರಾಮನ್…

Read More
ಮೋದಿ

Fact Check: ನೆಹರು, ಇಂದಿರಾ ಗೆಲುವಿನ ಅಂತರವನ್ನು ಮೋದಿಯವರ ಗೆಲುವಿನ ಅಂತರದೊಂದಿಗೆ ಹೋಲಿಸುವುದು ಸೂಕ್ತವಲ್ಲ

2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು 04 ಜೂನ್ 2024 ರಂದು ಪ್ರಕಟಿಸಲಾಯಿತು. ಬಿಜೆಪಿ 240 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ನೇತೃತ್ವದ NDA ಸಮ್ಮಿಶ್ರವು 293 ಸ್ಥಾನಗಳನ್ನು ಪಡೆದುಕೊಂಡು 09 ಜೂನ್ 2024 ರಂದು ಸರ್ಕಾರವನ್ನು ರಚಿಸಿದೆ. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ವಾರಣಾಸಿಯಿಂದ ಸ್ಪರ್ಧಿಸಿ 1.52 ಲಕ್ಷ ಮತಗಳ ಬಹುಮತದಿಂದ ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಪ್ರಧಾನಿಯಾಗಿ ವಿವಿಧ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಜವಾಹರಲಾಲ್ ನೆಹರು ಮತ್ತು ಇಂದಿರಾ…

Read More
ರೈಲ್ವೆ ಅಪಘಾತ

Fact Check: ಪ್ರಧಾನಿ ಮೋದಿಯವರ ಆಡಳಿತದಲ್ಲಿ ನಡೆದ ಎಲ್ಲಾ ರೈಲ್ವೆ ಅಪಘಾತಗಳು ರಾಜಕೀಯ ಪಿತೂರಿಯಿಂದ ನಡೆಯುತ್ತಿವೆ ಎಂಬುದಕ್ಕೆ ಆಧಾರವಿಲ್ಲ

ಕೋಲ್ಕತ್ತಾ ನಗರ ಮತ್ತು ಸಿಲ್ಚಾರ್ ನಡುವೆ ಸಂಚರಿಸುವ ಕಾಂಚನಜುಂಗಾ ಎಕ್ಸ್‌ಪ್ರೆಸ್ ಹೊಸ ಜಲ್ಪೈಗುರಿ ನಿಲ್ದಾಣದ ಬಳಿ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದು, ನಲವತ್ತಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಸಧ್ಯ ಈ ಘಟನೆಗೆ ಕಾರಣವಾಗಬಹುದಾದ ಎಲ್ಲಾ ಕಾರಣಗಳನ್ನು ರೈಲ್ವೇ ಸುರಕ್ಷತೆಯ ಮುಖ್ಯ ಆಯುಕ್ತರು (CCRS) ಪರಿಶೀಲಿಸುತ್ತಿದ್ದಾರೆ. 2023ರ ಜೂನ್ 2ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 296 ಮಂದಿ…

Read More