Fact Check: ದೀಪಾವಳಿ ಆಫರ್: ಕೇವಲ 99 ರೂಗೆ ಐಫೋನ್ 13 ಅಥವಾ ಸ್ಯಾಮ್ಸಂಗ್ ಎಸ್ 23 ಸಿಗುತ್ತದೆ ಎಂಬುದು ಸುಳ್ಳು
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅನೇಕ ಕಂಪನಿಗಳು ಹಬ್ಬದ ಕೊಡುಗೆಗಳನ್ನು ಪ್ರತಿವರ್ಷ ನೀಡುತ್ತಿರುತ್ತವೆ. ಆದರೆ ಅವುಗಳಲ್ಲಿ ಹಲವು ನಿಜವಿದ್ದರೆ ಇನ್ನೂ ಕೆಲವು ಸುಳ್ಳಿರುತ್ತವೆ. ಈಗ ಐಫೋನ್ 13 ಅಥವಾ ಸ್ಯಾಮ್ಸಂಗ್ ಎಸ್ 23 ಕೇವಲ 99 ರೂ.ಗೆ ಸಿಗುತ್ತದೆ ಅಥವಾ ಒಪ್ಪೋ ಸ್ಮಾರ್ಟ್ಫೋನ್ ಕೇವಲ 9 ರೂ.ಗೆ ಸಿಗುತ್ತದೆ, ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್ ಆಗುತ್ತಿರುವ ಈ ಪೋಸ್ಟ್ಗಳ ಪ್ರಕಾರ, ಈ ಕೊಡುಗೆಗಳನ್ನು ಪಡೆಯಲು ನೀವು ಮಾಡಬೇಕಾಗಿರುವುದು ಇನ್ಸ್ಟಾಗ್ರಾಮ್ ರೀಲ್ ಅನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು…