ಜವಹರಲಾಲ್ ನೆಹರು

Fact Check: ಜವಹರಲಾಲ್ ನೆಹರು ಮೂಲತಃ ಮುಸ್ಲಿಂ ಕುಟುಂಬದವರು ಎಂದು ಸುಳ್ಳು ಹಂಚಿಕೊಳ್ಳುತ್ತಿರುವ ಬಿಜೆಪಿ ಬೆಂಬಲಿಗರು

ಭಾರತದಲ್ಲಿ ಕಳೆದೊಂದು ದಶಕಗಳಿಂದ ಸ್ವಾತಂತ್ರ ಹೋರಾಟಗಾರ ಮತ್ತು ಭಾರತದ ಮೊದಲ ಪ್ರಧಾನಿಯಾದ ಜವಹರಲಾಲ್‌ ನೆಹರು ಅವರ ಕುರಿತಂತೆ ಸಾಕಷ್ಟು ಸುಳ್ಳು ಮಾಹಿತಿಗಳನ್ನು ಮತ್ತು ಅವರ ಕುರಿತು ದ್ವೇಷವನ್ನು ಬಿತ್ತಲಾಗುತ್ತಿದೆ. ಇಂದಿನ ಹಾಲಿ ಪ್ರಧಾನಿಯಾದ ನರೇಂದ್ರ ಮೋದಿಯವರು ಸಹ ತಮ್ಮ  ಅನೇಕ ಭಾಷಣಗಳಲ್ಲಿ ನೆಹರೂ ಅವರನ್ನು ಎಳೆದು ತಂದು ಇಂದಿನ ಭಾರತದ ಎಲ್ಲಾ ಸಮಸ್ಯೆಗೆ ನೆಹರು ಅವರೇ ಕಾರಣ ಎಂದು ಬಿಂಬಿಸಲು ನೋಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಈಗ, “ಪ್ರತಿಯೊಬ್ಬರಿಗೂ ಸತ್ಯ ತಿಳಿದಿರಲಿ. ಪ್ರ 1: ತುಸು ರೆಹಮಾನ್…

Read More
ನೆಹರು

Fact Check: ನೆಹರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ ತಾನು ಭಾಗವಹಿಸಿರಲಿಲ್ಲ ಮತ್ತು ವಿಭಜನೆಗೆ ಒಪ್ಪಿಕೊಂಡೆ ಎಂದು ಹೇಳಿಲ್ಲ

ಭಾರತದ ಮೊದಲ ಪ್ರಧಾನ ಮಂತ್ರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಜವಹರಲಾಲ್ ನೆಹರು ಅವರ ಕುರಿತಂತೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ಪ್ರತೀ ದಿನದಂತೆ ಹರಿಬಿಡಲಾಗುತ್ತಿದೆ. ಈಗ ” ಸ್ವಾತಂತ್ರ ಹೋರಾಟದಲ್ಲಿ ನನ್ನ ಯಾವುದೇ ರೀತಿಯ ಪಾತ್ರವಿಲ್ಲ… ದೊಡ್ಡ ದಾರಿಯಲ್ಲಿ ಪ್ರಧಾನಿಯಾಗುವ ಅವಕಾಶ ದಕ್ಕಿರುವುದರಿಂದ, ವಿಭಜನೆಗೆ ಒಪ್ಪಿಕೊಂಡೆ…” ಎಂದು ನೆಹರು ಅವರು ಸ್ವತಃ  ಒಪ್ಪಿಕೊಂಡಿದ್ದಾರೆ ಎಂದು ಹೇಳಲಾದ ವಿಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ನಿಜವಾಗಿಯೂ ನೆಹರೂ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ ಪಾತ್ರವೇನು ಇಲ್ಲ ಎಂದು ಹೇಳಿದ್ದಾರೆಯೇ…

Read More
Gwadar Port

Fact Check: ಪ್ರಾದೇಶಿಕ ಸ್ಥಿರತೆಯ ಕಾರಣಕ್ಕಾಗಿ 1950ರಲ್ಲೇ ಗ್ವಾದರ್ ಬಂದರನ್ನು ಕೊಳ್ಳಲು ಭಾರತ ನಿರಾಕರಿಸಿತು

ಇತ್ತೀಚೆಗೆ 1974ರಲ್ಲಿ ಮುಗಿದ ಕಚ್ಚತೀವು ದ್ವೀಪದ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಗಮನ ಸೆಳೆದು ಅದು ಚರ್ಚೆಗೆ ಕಾರಣವಾಗಿತ್ತು. ಇಂದಿರಾ ಗಾಂಧಿಯವರು ಅದನ್ನು ಶ್ರೀಲಂಕಾ ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದನ್ನು ಬಿಜೆಪಿಗರು ವಿರೋದಿಸಿದ್ದರು. ಇಂದು ಇಂಡಿಯಾ ಟುಟೆ “ಪಾಕಿಸ್ತಾನದ ಗ್ವಾದರ್ ಅನ್ನು 1950 ರ ದಶಕದಲ್ಲಿ  ಭಾರತಕ್ಕೆ ನೀಡಲಾಗಿತ್ತು” ಎಂಬ ಲೇಖನವನ್ನು ಪ್ರಕಟಿಸಿ ಮತ್ತೊಂದು ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಇದನ್ನು ಕನ್ನಡ ದುನಿಯಾ ಎಂಬ ಮಾಧ್ಯಮವು ಇಂಡಿಯಾ ಟುಟೆ ವರದಿಯನ್ನೇ ಕನ್ನಡಕ್ಕೆ ಅನುವಾದಿಸಿ “ಈಗಿನ ಪಾಕಿಸ್ತಾನದ ಗ್ವಾದರ್ ಬಂದರು ಸ್ವೀಕರಿಸಲು…

Read More
Narendra Modi

Fact Check: ನರೇಂದ್ರ ಮೋದಿಯವರ ಅಧಿಕಾರವಾದಿಯಲ್ಲಿ ಒಂದೇ ಒಂದು ರಾಜ್ಯ ಸರ್ಕಾರವನ್ನು ಅಮಾನತ್ತು ಮಾಡಿಲ್ಲ ಎಂಬುದು ಸುಳ್ಳು

“ನೆಹರು 7 ಬಾರಿ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿದ್ದರು, ಇಂದಿರಾ ಗಾಂಧಿಯವರ ಕಾಲದಲ್ಲಿ 49 ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿದ್ದರು, ರಾಜೀವ್ ಗಾಂಧಿ ಕಾಲದಲ್ಲಿ 6 ಬಾರಿ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿದ್ದರು, ನರಸಿಂಹ ರಾವ್ ಕಾಲದಲ್ಲಿ 11 ಬಾರಿ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿದ್ದರು, ಮನಮೋಹನ್ ಸಿಂಗ್ ಕಾಲದಲ್ಲಿ 11 ಬಾರಿ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿದ್ದರು. ಆದರೆ 2014ರ ನಂತರ ಒಂದೇ ಒಂದು ರಾಜ್ಯ ಸರ್ಕಾರವನ್ನು ಅಮಾನತ್ತು ಮಾಡಿಲ್ಲ. ಆದರೂ ಮೋದಿ ಸರ್ವಾಧಿಕಾರಿಯೇ?” ಎಂದು ಪ್ರತಿಪಾದಿಸಿದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ….

Read More
nehru

Fact Check: ಜವಾಹರ್‌ಲಾಲ್ ನೆಹರು ತಮಗೆ ತಾವೇ “ಭಾರತ ರತ್ನ” ಘೋಷಿಸಿಕೊಂಡರು ಎಂಬುದು ಸುಳ್ಳು

ಭಾರತದ ಮೊದಲ ಮತ್ತು ದೀರ್ಘಾವಧಿಯ ಪ್ರಧಾನ ಮಂತ್ರಿಗಳಾದ ಜವಾಹರಲಾಲ್ ನೆಹರು ಅವರ ಪರಂಪರೆಯು ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ವ್ಯವಸ್ಥಿತ ಆಕ್ರಮಣಕ್ಕೆ ಒಳಗಾಗುತ್ತಿದೆ. ಈ ದಾಳಿಯು ಬಹುಮುಖಿಯಾಗಿದ್ದು, ಇತಿಹಾಸದ ಆಧಾರರಹಿತ ಆರೋಪಗಳಿಂದ ಹಿಡಿದು ಅವಹೇಳನಕಾರಿ ಪ್ರತಿಪಾದನೆಗಳು ಮತ್ತು ಸುಳ್ಳುಗಳನ್ನು ಹರಡುವವರೆಗೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಭಾರತದ ಪ್ರಗತಿಯಲ್ಲಿ ನೆಹರೂ ಅವರ ಕೊಡುಗೆಯೇ ಅಲ್ಪ ಎನ್ನುವಂತೆ ಬಿಂಬಿಸಲಾಗುತ್ತಿದೆ. ಇದರ ಭಾಗವಾಗಿ, ಜವಹರಲಾಲ್ ನೆಹರು ಅವರು ತಮಗೆ ತಾವೇ “ಭಾರತ ರತ್ನ” ಘೋಷಿಸಿಕೊಂಡರು ಎಂಬ ಪ್ರತಿಪಾದನೆಯು ಹಲವಾರು ವರ್ಷಗಳಿಂದ…

Read More
ನೆಹರೂ

Fact Check: ನೆಹರೂರವರು ಬ್ರಿಟೀಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದರು ಎಂದು ಸುಳ್ಳು ಹೇಳಿದ ಅಜಿತ್ ಹನುಮಕ್ಕನವರ್

ಜವಹರಲಾಲ್ ನೆಹರೂ ಅವರ ಕುರಿತು ಪ್ರತಿ ದಿನ ಒಂದಿಲ್ಲೊಂದು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿರುತ್ತದೆ. ಕೆಲವು ಕಿಡಿಗೇಡಿಗಳು ಇತಿಹಾಸವನ್ನು ತಿರುಚುವ ಸಲುವಾಗಿ ಅನೇಕ ಅರೋಪಗಳನ್ನು ಮಾಡುತ್ತಿರುತ್ತಾರೆ. ನೆಹರು ಅವರ ಕುರಿತ ಇಂತಹ ಅನೇಕ ಆರೋಪಗಳನ್ನು ಹೀಗಾಗಲೇ ಬಯಲು ಮಾಡಲಾಗಿವೆ. ಅವುಗಳನ್ನು ನೀವು ಇಲ್ಲಿ ಓದಬಹುದು. ಈಗ, ಅಸಲಿಗೆ ನೆಹರು ಅವರು ಕೇವಲ 14 ದಿನ ಮಾತ್ರ ಜೈಲು ವಾಸ ಅನುಭವಿಸಿದ್ದು ಮತ್ತು ಅವರು ಸಹ ನಭಾ ಜೈಲಿನಿಂದ ಹೊರಬರಲು ಬ್ರಿಟೀಷರಿಗೆ ಕ್ಷಮಾಪಣಾ ಪತ್ರವನ್ನು ಬರೆದಿದ್ದರು. ಎಂದು ಪ್ರತಿಪಾದಿಸಲಾಗುತ್ತಿದೆ. ಕನ್ನಡದ…

Read More