Fact Check: 2011ರ ಜಾಹೀರಾತಿನ ಚಿತ್ರವನ್ನು ಕೇರಳದ ಕಾಲೇಜು ಭಾರತೀಯ ಸಂಸ್ಕೃತಿಯನ್ನು ಅಣಕಿಸುತ್ತಿದೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ

ಕೇರಳದ ಕಾಲೇಜೊಂದರಲ್ಲಿ ಭಾರತೀಯ ಮತ್ತು ಹಿಂದೂ ಸಂಸ್ಕೃತಿಯನ್ನು ಅಪಹಾಸ್ಯ ಮಾಡಲಾಗಿದೆ ಎಂದು ಆರೋಪಿಸಿ ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಘಾಗ್ರಾ ಚೋಲಿ ಎಂಬುದು ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಮಹಿಳೆಯರು ಸಾಂಪ್ರದಾಯಿಕವಾಗಿ ಧರಿಸುವ ಉದ್ದನೆಯ ಸ್ಕರ್ಟ್ ಮತ್ತು ರವಿಕೆಯಾಗಿದೆ. ಫೋಟೋವು ಘಾಗ್ರಾ ಚೋಲಿಯ ರಾಜಸ್ಥಾನಿ ಶೈಲಿಯನ್ನು ಚಿತ್ರಿಸುತ್ತದೆ ಆದರೆ ಅದನ್ನು ಕತ್ತರಿಸಿ ಮಿನಿ ಸ್ಕರ್ಟ್ ಆಗಿ ತಯಾರಿಸಲಾಗಿದೆ ಎಂದು ತೋರಿಸುತ್ತದೆ. ಕೇರಳದಲ್ಲಿ ನಡೆದ ಕಾಲೇಜು ಸ್ಪರ್ಧೆಯಲ್ಲಿ ಈ ತಂಡವು ಮೂರನೇ ಸ್ಥಾನವನ್ನು ಗೆದ್ದಿದೆ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಫೋಟೋವನ್ನು ಎಕ್ಸ್ ಮತ್ತು…

Read More
ಭೋಲೆ ಬಾಬಾ

Fact Check: ಹತ್ರಾಸ್‌ ಕಾಲ್ತುಳಿತಕ್ಕೆ ಕಾರಣವಾದ ಭೋಲೆ ಬಾಬಾ ಎಂದು ಗುಜರಾತ್‌ನ ನಕಲಿ ಬಾಬಾನ ಪೋಟೋ ಹಂಚಿಕೆ

ವ್ಯಕ್ತಿಯೊಬ್ಬ ತನ್ನ ನಾಲಿಗೆಯನ್ನು ಹೊರ ಚಾಚುತ್ತಾ, ಮೈ ಮೇಲೆ ದೇವರು ಬಂದವರಂತೆ ವರ್ತಿಸುತ್ತಾ, ಗುಲಾಬಿ ದಳಗಳ ರಾಶಿಯ ನಡುವೆ ಕುಳಿತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಹಂಚಿಕೊಂಡಿರುವ ಬಳಕೆದಾರರು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಾಲ್ತುಳಿತದಲ್ಲಿ 121 ಜನರ ಸಾವಿಗೆ ಕಾರಣವಾದ ಕಾರ್ಯಕ್ರಮವನ್ನು ಆಯೋಜಿಸಿದ್ದ ‘ಭೋಲೆ ಬಾಬಾ’ ಎಂದು ಕರೆಯಲ್ಪಡುವ ಸ್ವಯಂ ಘೋಷಿತ ದೇವಮಾನವ ಈತ ಎಂದು ಹೇಳುತ್ತಿದ್ದಾರೆ. ಆರ್ಕೈವ್ ಅನ್ನು ಇಲ್ಲಿ ನೋಡಬಹುದು. ಇದೇ ರೀತಿಯ ಪ್ರತಿಪಾದನೆಗಳ ಆರ್ಕೈವ್ ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌…

Read More
ನೀಟ್ (ಯುಜಿ)

Fact Check: ನೀಟ್ (ಯುಜಿ) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಮುಸ್ಲಿಮರನ್ನು ಮಾತ್ರ ಬಂಧಿಸಲಾಗಿದೆ ಎಂಬುದು ಸುಳ್ಳು

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಹಿಂದೆ ‘ಎಕ್ಸಾಮ್ ಜಿಹಾದ್’ ಪಿತೂರಿ ಇದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಸಂಬಂಧ ಸಿಬಿಐ ಬಂಧಿಸಿರುವ ಮೂವರು ಮುಸ್ಲಿಂ ವ್ಯಕ್ತಿಗಳ ಫೋಟೋಗಳನ್ನು ಹೊಂದಿರುವ ಪೋಸ್ಟ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಫ್ಯಾಕ್ಟ್‌ಚೆಕ್: ಈ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್‌ನಲ್ಲಿ ಹುಡುಕಾಟವನ್ನು ನಡೆಸಿದಾಗ, ಈ ಮೂವರು ಮುಸ್ಲಿಂ ವ್ಯಕ್ತಿಗಳನ್ನು ಸಿಬಿಐ ಬಂಧಿಸಿರುವ ಬಗ್ಗೆ ಹಲವಾರು ಸುದ್ದಿ ವರದಿಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಮಗೆ ಲಭ್ಯವಾಗಿವೆ. ಪೋಟೋದಲ್ಲಿರುವ ವ್ಯಕ್ತಿಗಳಲ್ಲಿ ಒಬ್ಬರು,…

Read More

Fact Check: ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ

ಇತ್ತೀಚೆಗೆ ರಾಜಕೀಯ ಮುಖಂಡರ ಭಾಷಣಗಳನ್ನು ತಪ್ಪಾಗಿ ಅರ್ಥ ಬರುವಂತೆ ತಿರುಚಿ ಹಂಚಿಕೊಳ್ಳುವುದು ಸರ್ವೇ ಸಾಮಾನ್ಯವಾಗುತ್ತಿದೆ. ಚುನಾವಣಾ ಸಂದರ್ಭಗಳಲ್ಲಿ ಇಂತಹ ವಿಡಿಯೋಗಳನ್ನು ಹೆಚ್ಚು ಹರಿಬಿಡಲಾಗುತ್ತಿದೆ. ಅನೇಕ ಬಾರಿ ಇಂತಹ ತಿರುಚಿದ ವಿಡಿಯೋಗಳಿಂದ ಜನರಿಗೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾವುದೇ ಅಥವಾ ಯಾರದೇ ಭಾ‍ಷಣದ ತುಣುಕನ್ನು ನೋಡಿದಾಗ ಅವರ ಮಾತನ್ನು ಸಂಪೂರ್ಣವಾಗಿ ನಂಬಿ ಅಭಿಪ್ರಾಯ ರೂಪಿಸಿಕೊಳ್ಳುವ ಮೊದಲು ಅವರ ಪೂರ್ತಿ ಭಾಷಣ ನೋಡಿ ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ. ಈಗ,…

Read More
Hindu

Fact Check: ಗುಜರಾತ್‌ನಲ್ಲಿ ಹಿಂದೂ ದೇವಾಲಯವನ್ನು ಜಿಹಾದಿಗಳಿಂದ ತೆರವುಗೊಳಿಸಲಾಗಿದೆ ಎಂಬುದು ಸುಳ್ಳು

ಗುಜರಾತ್‌ನ ಅಹಮದಾಬಾದ್‌ನಲ್ಲಿ ರಾಣಿ ಕಾ ಹಜಿರಾ ಎಂಬ ಹೆಸರಿನ 1600 ವರ್ಷಗಳಷ್ಟು ಹಳೆಯದಾದ ಭವ್ಯವಾದ ಹಿಂದೂ ಪ್ರದೇಶವನ್ನು ಮುಸ್ಲೀಮರು ವಶಪಡಿಸಿಕೊಂಡಿದ್ದರು. ನಿನ್ನೆ ಬಿಜೆಪಿ ಸರ್ಕಾರದ ಬುಲ್ಡೋಜರ್ ಅಲ್ಲಿ ತಿರುಗಾಡಿತು ಮತ್ತು ಜಿಹಾದಿಗಳನ್ನು ತೆರವುಗೊಳಿಸಿತು. ಈಗ ಮುಸಲ್ಮಾನರ ಕಪಿಮುಷ್ಠಿಯಿಂದ ಮುಕ್ತಿ ಪಡೆದಿದೆ. ಇದು ನಿಮ್ಮ ಒಂದು ಮತದ ಬೆಲೆ! ಎಂಬ ಸಂದೇಶದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ದಿನಗಳಿಂದ ಹರಿದಾಡುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಭವ್ಯವಾದ ಐತಿಹಾಸಿಕ ಕಟ್ಟವೊಂದರಿಂದ ಪೋಲೀಸರು ಅಂಗಡಿಗಳನ್ನು ತೆರವುಗೊಳಿಸುತ್ತಿರುವುದನ್ನು ಕಾಣಬಹುದು. ಆಗಾಗಿ ನಿಜವಾಗಿಯೂ…

Read More

Fact Check: ಪ್ರಾಣ ಪ್ರತಿಷ್ಟೆಯ ದಿನ ಹನುಮಾನ್ ವೇಷ ಹಾಕಿದ್ದಕ್ಕೆ ಬಾಲಕ ಮೇಲೆ ಅತ್ಯಾಚಾರ ಎಂಬುದು ಸುಳ್ಳು

ಭಾರತದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ಆರೋಪ ಹೊರಿಸುವುದು ಸರ್ವೇ ಸಾಮಾನ್ಯವಾಗುತ್ತಿದೆ. ಯಾವುದೇ ಅಪರಾಧ ನಡೆದರೂ ಅದನ್ನು ಮುಸ್ಲೀಮರ ತಲೆಗೆ ಕಟ್ಟುವುದರ ಜೊತೆಗೆ, ಬೇಕೆಂದೇ ಅಪರಾಧಗಳನ್ನು ಎಸಗಿ ಅದನ್ನು ಮುಸ್ಲೀಮರ ಮೇಲೆ ಆರೋಪಿಸುವುದು ನಡೆಯುತ್ತಿದೆ. ಈಗ, “ಗುಜರಾತ್‌ನಲ್ಲಿ ರಾಮಮಂದಿರದ ಪ್ರಾಣಪ್ರತಿಷ್ಠೆಯ ದಿನದಂದು ಹನುಮಾನ್ ವೇಷಭೂಷಣ ತೊಟ್ಟಿದ್ದಕ್ಕೆ ಹಿಂದೂ ಹುಡುಗನೊಬ್ಬನನ್ನು ಮುಸ್ಲಿಂ ಯುವಕರ ಗುಂಪೊಂದು ಅಪಹರಿಸಿ ಒಂದು ವಾರದವರೆಗೆ ಸಾಮೂಹಿಕ ಅತ್ಯಾಚಾರವೆಸಗಿದೆ.” ಎಂಬ ಸಂದೇಶದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಬಜರಂಗದಳ ಗುಜರಾತ್ ಹಂಚಿಕೊಂಡಿಂದೆ….

Read More

ಬಸ್ ಮೇಲಿನ ದಾಳಿಯ ಈ ಹಳೆಯ ವಿಡಿಯೋ ಗುಜರಾತ್‌ನದು, ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ

ಕರ್ನಾಟಕ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸಿದೆ. ಬಸ್ ಡ್ರೈವರ್ ಮುಸ್ಲಿಂ ಮಹಿಳೆಗೆ ಬಸ್ ನಿಲ್ಲಿಸದ ಕಾರಣ ಸರ್ಕಾರಿ ಬಸ್ಸಿನ ಮೇಲೆ ದಾಳಿ ನಡೆಸಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್ ಚೆಕ್ ಈ ಕುರಿತು ಹುಡುಕಿದಾಗ ಅದೇ ವಿಡಿಯೋ 2019ರಲ್ಲಿಯೇ ಇಂಟರ್‌ನೆಟ್‌ಗೆ ಅಪ್ಲೋಡ್ ಆಗಿರುವುದು ಕಂಡುಬಂದಿದೆ. ಜುಲೈ 2019ರ ವಿಡಿಯೋ ಗುಜರಾತ್‌ನ ಸೂರತ್‌ಗೆ ಸಂಬಂಧಿಸಿದ್ದಾಗಿದೆ. ದಿವ್ಯ ನ್ಯೂಸ್ ಚಾನೆಲ್ ಎಂಬ ಯೂಟ್ಯೂಬ್ ಚಾನೆಲ್‌ನ ವಿಡಿಯೋ ವರದಿಯ ಪ್ರಕಾರ ಗುಜರಾತ್‌ ರಾಜ್ಯದ ಸೂರತ್ ನ…

Read More