ಮಹಾತ್ಮ ಗಾಂಧಿ

Fact Check: ಮಹಾತ್ಮ ಗಾಂಧಿಯವರು ಮಹಿಳಾ ಶಿಕ್ಷಣ ಮತ್ತು ಮತದಾನದ ಹಕ್ಕನ್ನು ನಿರಾಕರಿಸಿದ್ದರು ಎಂಬುದು ಸುಳ್ಳು

ಇತ್ತೀಚೆಗೆ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಕಾಲೇಜು ಯುವಕನೊಬ್ಬ ಗಾಂಧೀಜಿಯವರ “ನನ್ನ ಸತ್ಯನ್ವೇಷಣೆ” ಆತ್ಮ ಚರಿತ್ರೆಯನ್ನು ಉಲ್ಲೇಖಿಸಿ, “1897ರಲ್ಲಿ ಜಾತಿ ವ್ಯವಸ್ಥೆಯನ್ನು ಒಪ್ಪಿಕೊಂಡು, ಈ ವ್ಯವಸ್ಥೆ ಇದ್ದ ಹಾಗೆಯೇ ಇರಬೇಕು ಎಂದು ಪ್ರತಿಪಾದಿಸಿದ್ದರು, ಅದಕ್ಕೆ ದಾಖಲೆಗಳು ಬಾಲಗಂಗಾಧರ್ ತಿಲಕ್ ಅವರ ಕೇಸರಿ ಪತ್ರಿಕೆಯಲ್ಲಿ ಸಿಗುತ್ತದೆ. ಗಾಂಧೀಜಿಯವರ ವಾದ ಯಥಾವತ್ತಾಗಿ ಜಾರಿಯಾಗಿದ್ದರೆ ಇಲ್ಲಿ ಯಾವ ಹೆಣ್ಣು ಮಕ್ಕಳು ಕೂರುವಂತಿರಲಿಲ್ಲ, ಶಿಕ್ಷಣ ಪಡೆಯುವಂತಿರಲಿಲ್ಲ. 1930, 31, 32ರಲ್ಲಿ ದುಂಡು ಮೇಜಿನ ಸಭೆಯಲ್ಲಿ ಗಾಂಧೀಜಿಯವರು ವಾದ ಮಾಡುತ್ತಾರೆ, ಮಹಿಳೆಯರಿಗೆ ಮತದಾನದ ಹಕ್ಕು ಬೇಡ…

Read More
ಮಹಾತ್ಮ ಗಾಂಧೀಜಿ

Fact Check: ಮಹಾತ್ಮ ಗಾಂಧೀಜಿಯವರು ಬ್ರಿಟಿಷರ ಐಷಾರಾಮಿ ಕಾರುಗಳ ಬಳಸಿ ಬ್ರಿಟಿಷರ ವಿರುದ್ಧವೇ ಹೋರಾಡುತ್ತಿದ್ದರು ಎಂಬುದು ಸುಳ್ಳು

ಮಹಾತ್ಮಾ ಗಾಂಧೀಜಿಯವರ ಕುರಿತಂತೆ ಇತ್ತೀಚೆಗೆ ಸಾಕಷ್ಟು ಸುಳ್ಳು ಸುದ್ದಿಗಳು, ಎಡಿಟೆಡ್‌ ಪೋಟೋಗಳನ್ನು ಬಳಸಿಕೊಂಡು ಗಾಂಧೀಜಿಯವರಿಗೆ ಅವಮಾನ ಮಾಡುವ ಕೆಲಸಗಳು  ಎಗ್ಗಿಲ್ಲದೆ ನಡೆಯುತ್ತಿವೆ. ಗಾಂಧೀಜಿಯವರು ಅನೇಕ ಮಹಿಳೆಯರ ಜೊತೆಗೆ ಸಲುಗೆಯಿಂದ ಇರುವಂತೆ ಪೋಟೋಗಳನ್ನು ತಿರುಚಿ ನಿಜವೆಂದು ಹಂಚಿಕೊಳ್ಳಲಾಗುತ್ತಿದೆ. ಗಾಂಧೀಜಿಯವರ ಅಹಿಂಸಾ ಮಾರ್ಗದಿಂದ ದೇಶಕ್ಕೆ ಸ್ವಾತಂತ್ಯ ಬಂದಿಲ್ಲ, ಕೆಲವು ಕ್ರಾಂತಿಕಾರಿಗಳ ಬಲಿದಾನಗಳಿಂದ ಸ್ವಾತಂತ್ರ್ಯಗೊಂಡಿತು, ಭಾರತ ಮತ್ತು ಪಾಕಿಸ್ತಾನದ ವಿಭಜನೆಗೆ ಗಾಂಧೀಜಿಯವರು ಕಾರಣ ಹಾಗೂ ಗಾಂಧೀಜಿಯವರು ಮೂಲತಃ ಮುಸ್ಲಿಂ ಹೀಗೆ ನಾನಾ ಬಗೆಯ ವಾದಗಳು, ತಪ್ಪು ಮಾಹಿತಿಗಳನ್ನು ಹಲವರು ನಂಬಿಕೊಂಡು ಪ್ರಚಾರ…

Read More
ಶ್ರೀಕೃಷ್ಣ ಕುಲಕರ್ಣಿ

Fact Check: ಗಾಂಧೀಜಿಯವರ ಮೊಮ್ಮಗರಾದ ಶ್ರೀಕೃಷ್ಣ ಕುಲಕರ್ಣಿಯವರು ರಾಹುಲ್ ಗಾಂಧಿಗೆ ಬರೆದ ಹಳೆಯ ಪತ್ರವನ್ನು ತಿರುಚಿ ಹಂಚಿಕೊಳ್ಳಲಾಗುತ್ತಿದೆ

ಮಹಾತ್ಮ ಗಾಂಧೀಜಿಯವರ ಮರಿ ಮೊಮ್ಮಗರಾದ ಶ್ರೀಕೃಷ್ಣ ಕುಲಕರ್ಣಿಯವರು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರಿಗೆ ಬರೆದ ಬಹಿರಂಗ ಪತ್ರ ಎಂಬ ಸಂದೇಶವೊಂದು ಹಲವಾರು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಪತ್ರದಲ್ಲಿ ಶ್ರೀಕೃಷ್ಣ ಕುಲಕರ್ಣಿಯವರು “ಮೋಹನ್ ದಾಸ್ ಕರಮಚಂದ್ ಗಾಂಧಿ ನನ್ನ ಮುತ್ತಜ್ಜ. ಅವರನ್ನು ಶ್ರೀ ನಾಥೂರಾಂ ಗೋಡ್ಸೆ ಕೊಂದರು. ಅನೇಕ ತನಿಖೆಗಳು ಮತ್ತು ಆಯೋಗಗಳು ಈ ಪ್ರಕರಣವನ್ನು ಸಂಶೋಧಿಸಿವೆ. ಗಾಂಧಿ ಹತ್ಯೆ ಪ್ರಕರಣದಲ್ಲಿ ಆರ್‌ಎಸ್‌ಎಸ್‌ನ ಯಾರೂ ಸಿಲುಕಿಸಿಲ್ಲ. ಆರ್‌ಎಸ್‌ಎಸ್‌ ಮೇಲೆ ಹೊಣೆಯನ್ನೂ ಹೊರಿಸಿಲ್ಲ. ಶ್ರೀ ನಾಥೂರಾಂ ಗೋಡ್ಸೆಯನ್ನು…

Read More
ಗೋಡ್ಸೆ

ಪಾಕಿಸ್ತಾನ – ಬಾಂಗ್ಲಾದೇಶ ಕಾರಿಡಾರ್‌ಗೆ ಒಪ್ಪಿದ್ದಕ್ಕಾಗಿ ಗಾಂಧಿಯನ್ನು ಗೋಡ್ಸೆ ಕೊಂದರು ಎಂಬುದು ಸುಳ್ಳು

ಇಸ್ರೇಲ್‌ನ ಗಾಜಾ ಪಟ್ಟಿಯ ದುಸ್ವಪ್ನವನ್ನು ನೀವು ವೀಕ್ಷಿಸುತ್ತಿದ್ದೀರಿ. ಅದೇ ಸ್ಟ್ರಿಪ್ ಅನ್ನು ಜಿನ್ನಾ ಪ್ರಸ್ತಾಪಿಸಿದರು. ಮೋಹನ ದಾಸ್ ಒಪ್ಪಿಕೊಂಡರು. ಗೋಡ್ಸೆ ನಿಮ್ಮನ್ನು ಯಾವುದರಿಂದ ರಕ್ಷಿಸಿದ್ದಾರೆ ಎಂಬುದನ್ನು ಈ ಚಿತ್ರವು ಸ್ಪಷ್ಟವಾಗಿ ತಿಳಿಸುತ್ತದೆ ಎಂಬ ಬರಹದೊಂದಿಗೆ ಪಶ್ಚಿಮ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನಕ್ಕೆ ಅಂದರೆ ಈಗಿನ ಬಾಂಗ್ಲಾದೇಶಕ್ಕೆ ಸಂಪರ್ಕ ಕಲ್ಪಿಸುವಂತಹ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆ ಮೂಲಕ ಜಿನ್ನಾ ಪ್ರಸ್ತಾಪಿಸಿದ ಪಾಕಿಸ್ತಾನ – ಬಾಂಗ್ಲಾದೇಶ ಕಾರಿಡಾರ್‌ಗೆ ಒಪ್ಪಿದ್ದಕ್ಕಾಗಿ ಗಾಂಧಿಯನ್ನು ಗೋಡ್ಸೆ ಕೊಂದರು ಎಂಬ ಕಥನವನ್ನು ತೇಲಿ ಬಿಡುವ ಮೂಲಕ…

Read More