ಸ್ವಿಸ್ ಬ್ಯಾಂಕ್

Fact Check: ಸ್ವಿಸ್ ಬ್ಯಾಂಕುಗಳಲ್ಲಿ ಕಪ್ಪು ಹಣವನ್ನು ಹೊಂದಿರುವ ಭಾರತೀಯರ ಯಾವುದೇ ಪಟ್ಟಿಯನ್ನು ವಿಕಿಲೀಕ್ಸ್ ಪ್ರಕಟಿಸಿಲ್ಲ

ವಿಕಿಲೀಕ್ಸ್ ‘ಯುಕೆಯ ರಹಸ್ಯ ಬ್ಯಾಂಕುಗಳಲ್ಲಿ ಭಾರತೀಯ ಕಪ್ಪು ಹಣ ಹೊಂದಿರುವವರ ಮೊದಲ ಪಟ್ಟಿಯನ್ನು’ ಪ್ರಕಟಿಸಿದೆ ಎಂಬ ಸಂದೇಶವು ಸಾಮಾಜಿಕ ಮಾಧ್ಯಮಗಳಲ್ಲಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ 24 ಬಿಜೆಪಿ ನಾಯಕರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಇದೇ ಸಂದೇಶವು ಹಲವಾರು ಐ.ಎನ್.ಡಿ.ಐ.ಎ(ಇಂಡಿಯಾ ಒಕ್ಕೂಟ) ಬಣದ ನಾಯಕರ ಹೆಸರುಗಳೊಂದಿಗೆ ವೈರಲ್ ಆಗುತ್ತಿದೆ. ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರ ಕಪ್ಪು ಹಣ 1.3 ಟ್ರಿಲಿಯನ್ ಡಾಲರ್ ಎಂದು ಈ ಪೋಸ್ಟ್‌ಗಳು ಆರೋಪಿಸಿವೆ. ಈ ಪೋಸ್ಟ್ ನ…

Read More

ಇತ್ತೀಚೆಗೆ ರಾಹುಲ್ ಗಾಂಧಿ ಅಂಬಾನಿ-ಅದಾನಿ ಬಗ್ಗೆ ಮಾತನಾಡುತ್ತಿಲ್ಲ ಎಂಬ ಮೋದಿಯವರ ಹೇಳಿಕೆ ಸುಳ್ಳು

ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯವರು ಮೋದಿಯವರು ತಮ್ಮ ಸ್ನೇಹಿತರಾದ ಅಂಬಾನಿ-ಅದಾನಿಗಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ಹಿಂದೆ ಹಲವು ಬಾರಿ ಟೀಕಿಸಿದ್ದರು. ಆದರೆ ಈಗ ಅವರೊಡನೆ ಒಪ್ಪಂದ ಮಾಡಿಕೊಂಡು ಟೀಕಿಸುವುದನ್ನು ನಿಲ್ಲಿಸಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ತೆಲಂಗಾಣದಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ‘ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷವು ಏಕಾಏಕಿ ಅಂಬಾನಿ-ಅದಾನಿಯ ವಿಷಯದ ಬಗ್ಗೆ ಟೀಕಿಸುವುದನ್ನು ನಿಲ್ಲಿಸಿದೆ. ಕಾಂಗ್ರೆಸ್‌ಗೆ ಎಷ್ಟು ಹಣ ತಲುಪಿದೆ? ಟೆಂಪೊದಲ್ಲಿ ಎಷ್ಟು ಕಪ್ಪು ಹಣ ಕಾಂಗ್ರೆಸ್‌ಗೆ ತಲುಪಿದೆ?…

Read More

Fact Check: ಉದ್ಯಾನವನಗಳಲ್ಲಿ ಯೋಗ ಮಾಡುವುದನ್ನು ನಾವು ತಡೆಯುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿಲ್ಲ

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವುದರಿಂದ ರಾಷ್ಟ್ರೀಯ ಪಕ್ಷಗಳು ತಮ್ಮ ಎದುರಾಳಿಗಳನ್ನು ಮಣಿಸುವ ಸಲುವಾಗಿ ಸುಳ್ಳು ಸುದ್ದಿಗಳ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ಸುಳ್ಳು ಪೋಸ್ಟರ್‌ಗಳನ್ನು ಹಂಚಿಕೊಂಡು ಕೆಲವು ರಾಜಕೀಯ ನಾಯಕರ ತೇಜೋವದೆಗೆ ಇಳಿದಿದ್ದಾರೆ. ಈಗ, ರಸ್ತೆಯಲ್ಲಿ ನಮಾಜ್ ಮಾಡದಂತೆ ನೀವು ತಡೆಯುವುದಾದರೆ, ಉದ್ಯಾನವನಗಳಲ್ಲಿ ಯೋಗ ಕೂಡ ಮಾಡುವುದನ್ನು ನಾವು ತಡೆಯುತ್ತೇವೆ. – ಪ್ರಿಯಾಂಕಾ ವಾದ್ರಾ” ಎಂಬ ಪೋಸ್ಟರ್‌ ಒಂದನ್ನು ಸುಳ್ಳುಸುದ್ದಿಗಳನ್ನು ಹರಡಲು ಕುಖ್ಯಾತಿ ಪಡೆದಿರುವ ಮಹೇಶ್ ವಿಕ್ರಂ ಹೆಗ್ಡೆ ನೇತೃತ್ವದ ಪೋಸ್ಟ್‌ಕಾರ್ಡ್‌ ಹರಿಬಿಟ್ಟಿದ್ದೆ….

Read More