ಉತ್ತರ ಪ್ರದೇಶ

Fact Check: ಉತ್ತರ ಪ್ರದೇಶದಲ್ಲಿ LLB ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿದೆಯೇ ಹೊರತು UPSC ಪರೀಕ್ಷೆಯಲ್ಲಿ ಅಲ್ಲ

ಉತ್ತರ ಪ್ರದೇಶದಲ್ಲಿ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಿದ್ದಾರೆ ಎಂದು ಪರೀಕ್ಷೆ ಸಮಯದಲ್ಲಿ ಹಲವಾರು ವಿದ್ಯಾರ್ಥಿಗಳು ನಕಲು ಮಾಡುವ ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಾಮೂಹಿಕವಾಗಿ ನಕಲು ಮಾಡುವ ಸಂಪೂರ್ಣ ಘಟನೆಯನ್ನು ವ್ಯಕ್ತಿಯು ರೆಕಾರ್ಡ್ ಮಾಡುವುದನ್ನು ವೀಡಿಯೊ ತೋರಿಸುತ್ತದೆ, ಅಲ್ಲಿ ವಿದ್ಯಾರ್ಥಿಗಳು ಮಾರ್ಗದರ್ಶಿಗಳು ಮತ್ತು ಚೀಟ್ ಶೀಟ್‌ಗಳೊಂದಿಗೆ ಪರೀಕ್ಷೆಯ ಸಮಯದಲ್ಲಿ ಅವರ ಮೇಜಿನ ಮೇಲೆ ಉತ್ತರಗಳನ್ನು ಬರೆಯುವುದನ್ನು ಕಾಣಬಹುದು. ಉತ್ತರ ಪ್ರದೇಶದ ಬಾರಾಬಂಕಿಯಲ್ಲಿರುವ ಸಿಟಿ ಲಾ ಕಾಲೇಜಿನಲ್ಲಿ ಈ ಘಟನೆ ನಡೆಯುತ್ತಿದೆ…

Read More
ಅಖಿಲೇಶ್ ಯಾದವ್

Fact Check: ಇತ್ತೀಚೆಗೆ ಅಖಿಲೇಶ್ ಯಾದವ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ ಎಂಬುದು ಸುಳ್ಳು

ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾದ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ (ಇಲ್ಲಿ, ಮತ್ತು ಇಲ್ಲಿ). 2024 ರ ಲೋಕಸಭೆಯ ಫಲಿತಾಂಶಗಳನ್ನು ಗ್ರಹಿಸಿದ ನಂತರ ಅಖಿಲೇಶ್ ಯಾದವ್ ಇತ್ತೀಚೆಗೆ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದಾರೆ ಎಂದು ಇಬ್ಬರು ಭೇಟಿಯಾದ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ಚೆಕ್: ನಿಜಕ್ಕೂ ಅಖಿಲೇಶ್ ಯಾದವ್ ಅವರು ಮೋದಿಯವರನ್ನು ಭೇಟಿಯಾಗಿದ್ದಾರೆಯೇ ಎಂದು ಸಂಬಂಧಿತ ಕೀವರ್ಡ್ ಹುಡುಕಾಟ ನಡೆಸಿದಾಗ, ಇತ್ತೀಚಿನ ದಿನಗಳಲ್ಲಿ ಅಖಿಲೇಶ್ ಯಾದವ್…

Read More
ನೋಯ್ಡಾ

Fact Check: ಕಳೆದೊಂದು ದಶಕದಲ್ಲಿ ನೋಯ್ಡಾ ನಗರ ಎಷ್ಟು ಅಭಿವೃದ್ಧಿಯಾಗಿದೆ ನೋಡಿ ಎಂದು ದುಬೈನ ಚಿತ್ರ ಹಂಚಿಕೊಳ್ಳಲಾಗುತ್ತಿದೆ

ಕಳೆದೊಂದು ದಶಕದಲ್ಲಿ ಉತ್ತರ ಪ್ರದೇಶದ ನೋಯ್ಡಾ ಹೇಗೆ ಅಭಿವೃದ್ಧಿ ಹೊಂದಿದೆ ನೋಡಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಒಂದು 2015 ರಿಂದ ಇನ್ನೊಂದು 2024 ರಲ್ಲಿ ಎಂದು ನಗರವೊಂದರ ಎರಡು ವೈಮಾನಿಕ ಚಿತ್ರಗಳನ್ನು ತೋರಿಸುತ್ತದೆ. ಹಾಗಾದರೆ ನಿಜಕ್ಕೂ ನೋಯ್ಡಾ ಕೆಳಗಿನ ಚಿತ್ರದಲ್ಲಿ ತೋರಿಸಲಾಗಿರುವಷ್ಟು ಅಭಿವೃದ್ದಿಯಾಗಿದೆಯೇ ನೋಡೋಣ ಬನ್ನಿ.  ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೊದಲ್ಲಿ ಬರುವ ಮೊದಲ ಕ್ಲಿಪ್, 2015 ರಲ್ಲಿ ಚಿತ್ರೀಕರಿಸಲಾಗಿದೆ, ಇದು ಹೆದ್ದಾರಿ ಜಂಕ್ಷನ್ ಅನ್ನು ತೋರಿಸುತ್ತದೆ. ನಮ್ಮ ತಂಡ ಇದನ್ನು…

Read More

ಅಖಿಲೇಶ್ ಯಾದವ್ ಮೇಲೆ ಜನರು ಹೂ ಮತ್ತು ಹಾರಗಳನ್ನು ಎಸೆಯುವ ವೀಡಿಯೊವನ್ನು ಶೂಗಳನ್ನು ಎಸೆಯುತ್ತಿದ್ದಾರೆ ಎಂದು ಹಂಚಿಕೆ

ಕನೌಜ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೇಲೆ ಜನರು ಶೂ ಮತ್ತು ಚಪ್ಪಲಿಗಳನ್ನು ಎಸೆಯುತ್ತಿರುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. (ಇಲ್ಲಿ ಮತ್ತು ಇಲ್ಲಿ ) ಅಖಿಲೇಶ್ ಯಾದವ್ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಕನೌಜ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ತಮ್ಮ ಸ್ವಕ್ಷೇತ್ರದಲ್ಲಿಯೇ ಈ ರೀತಿಯ ಸ್ವಾಗತ ಎದುರಿಸಿದ್ದಾರೆ ಎಂದು ಅಖಿಲೇಶ್ ಯಾದವ್ ಅವರನ್ನು ಟೀಕಿಸಲಾಗುತ್ತಿದೆ. ಫ್ಯಾಕ್ಟ್‌ಚೆಕ್: ವೈರಲ್…

Read More
RSS

Fact Check: ಎರಡು ಬೇರೆ ಘಟನೆಗಳ ವಿಡಿಯೋ ಜೋಡಿಸಿ ಕೇರಳದಲ್ಲಿ RSS ಕಾರ್ಯಕರ್ತನ ತಲೆ ಕಡಿಯಲಾಗಿದೆ ಎಂದು ಸುಳ್ಳು ಹಂಚಿಕೆ

ಇತ್ತೀಚೆಗೆ ವ್ಯವಸ್ತಿತವಾಗಿ ಕೋಮವಾದವನ್ನು ಹುಟ್ಟುಹಾಕಲು ಭಾರತದಾದ್ಯಂತ ಸಂಚು ರೂಪಿಸಲಾಗುತ್ತಿದ್ದು ಇದರ ಭಾಗವಾಗಿ ಕೆಲವು ಬಲಪಂಥೀಯ ಸಂಘಟನೆಗಳು ದೇಶದಲ್ಲಿ ಬೇರೆ ಬೇರೆ ಕಡೆ ನಡೆದ ಜಗಳಗಳು ಮತ್ತು ಕೊಲೆಗಳಿಗೆ ಕೋಮು ಬಣ್ಣ ಬಳಿದು ಮುಸ್ಲಿಮರು ಹಿಂದುಗಳಲ್ಲು ಕೊಲ್ಲುತ್ತಿದ್ದಾರೆ ಎಚ್ಚೆತ್ತುಕೊಳ್ಳಿ ಎಂದು ಹಿಂದುಗಳಲ್ಲಿ ಮುಸ್ಲಿಮರ ಕುರಿತು ದ್ವೇಷ ಮತ್ತು ಭಯವನ್ನು ಹುಟ್ಟುಹಾಕುತ್ತಿದ್ದಾರೆ. ಮತ್ತು ಈ ಮೂಲಕ ನೀವು ಸಹ ಇದೇ ರೀತಿ ಮುಸ್ಲಿಮರನ್ನು ನಡೆಸಿಕೊಳ್ಳಿ ಎಂಬ ಸಂದೇಶವನ್ನು ಸಹ ರವಾನಿಸಲಾಗುತ್ತಿದೆ. ಈಗ, ಆರೆಸ್ಸೆಸ್ ಕಾರ್ಯಕರ್ತನನ್ನು ಮಸೀದಿಗೆ ಕರೆದೊಯ್ದು ತಲೆ ಕಡಿದ…

Read More
ಓವೈಸಿ

Fact Check: ಓವೈಸಿ ಅವರ ಹಳೆಯ ವಿಡಿಯೋವನ್ನು ಎಡಿಟ್ ಮಾಡಿ ಕೋಮುದ್ವೇಷ ಹರಡಲು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಹೈದರಬಾದ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೊಂಪೆಲ್ಲಾ ಮಾಧವಿ ಲತಾ ಅವರು ರಾಮ ನವಮಿಯ ದಿನ ತಮ್ಮ ಪ್ರಚಾರದ ವೇಳೆ ಮಸೀದಿಯೊಂದಕ್ಕೆ ಬಾಣ ಹೊಡೆಯುವ ರೀತಿಯಲ್ಲಿ ನಟಿಸಿ ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತದಾದ್ಯಂತ ಟೀಕೆಗಳು ವ್ಯಕ್ತವಾದ ಬೆನ್ನಲ್ಲೆ ಈಗ ಅಸದುದ್ದೀನ್ ಓವೈಸಿಯವರು ಸಹ ಇದೇ ರೀತಿಯ ಕೋಮುದ್ವೇಷದ ಹೇಳಿಕೆ ನೀಡಿದ್ದರು ಎಂದು ಮಾಧವಿ ಲತಾ ಅವರನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ. ”ಯೋಗಿ ಯಾವಾಗಲೂ ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ. ಮೋದಿ ಯಾವಾಗಲೂ ಪ್ರಧಾನಿಯಾಗಿ ಉಳಿಯುವುದಿಲ್ಲ. ಸಮಯದ ಕಾರಣದಿಂದ…

Read More
ಅಮಿತ್ ಶಾ

Fact Check: ಮುಖ್ತಾರ್ ಅನ್ಸಾರಿ ಜೈಲಿನಲ್ಲಿ ವಿಷ ಸೇವಿಸಿದ್ದರು ಎಂದು ಅಮಿತ್ ಶಾ ಅವರು ಹೇಳಿಲ್ಲ

ಇತ್ತೀಚೆಗೆ ದರೋಡೆಕೋರ ನಂತರ ರಾಜಕಾರಣಿಯಾಗಿ ಬದಲಾದ  ಐದು ಬಾರಿ ಪೂರ್ವ ಯುಪಿಯ ಮೌ ಕ್ಷೇತ್ರದ ಐದು ಬಾರಿ ಶಾಸಕರಾಗಿದ್ದ ಮುಖ್ತಾರ್ ಅನ್ಸಾರಿ ಅವರು  ಮಾರ್ಚ್ 28 ರಂದು ಹೃದಯಾಘಾತದಿಂದ ನಿಧನರಾದರು. ಅವರ ಅಂತ್ಯಕ್ರಿಯೆಯ ದಿನದಂದು ಸಾವಿರಾರು ಜನ ಬೆಂಬಲಿಗರು ಭಾಗವಹಿಸಿರುವುದು ವರದಿಯಾಗಿದೆ. ಅನ್ಸಾರಿ (63) ಕಳೆದ ಎರಡು ವರ್ಷಗಳಲ್ಲಿ ಎಂಟು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಬಂದಾ ಜೈಲಿನಲ್ಲಿದ್ದರು. ಅನ್ಸಾರಿ ಅವರ ಪುತ್ರ ಉಮರ್ ಅನ್ಸಾರಿ ಮತ್ತು ಘಾಜಿಪುರ ಸಂಸದರೂ ಆಗಿರುವ ಸಹೋದರ ಅಫ್ಜಲ್ ಅನ್ಸಾರಿ ಅವರು ಮುಖ್ತಾರ್ ಅನ್ಸಾರಿ ಅವರಿಗೆ ಜೈಲಿನಲ್ಲಿ…

Read More

Fact Check: ಸಾಜಿದ್ ಅಂತ್ಯಕ್ರಿಯೆಯಲ್ಲಿ 30,000 ಕ್ಕೂ ಹೆಚ್ಚು ಮುಸ್ಲಿಮರು ಭಾಗವಹಿಸಿದ್ದರು ಎಂಬುದಕ್ಕೆ ಆಧಾರವಿಲ್ಲ

ಮಾರ್ಚ್‌ 20 ರಂದು ಉತ್ತರ ಪ್ರದೇಶದ ಬದೌನ್ ಬಳಿ ಇಬ್ಬರು ಮಕ್ಕಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕೊಲೆ ನಡೆದ ಕೇವಲ ಎರಡು ಗಂಟೆ ವ್ಯಾಪ್ತಿಯಲ್ಲಿ ಆರೋಪಿ ಸಾಜಿದ್ ಮತ್ತು ಜಾವಿದ್ ಎಂಬ ಸಹೋದರರನ್ನು ಉತ್ತರ ಪ್ರದೇಶದ ಪೋಲೀಸರು ಎನ್‌ಕೌಂಟರ್‌ನ ಮೂಲಕ ಇಬ್ಬರು ಆರೋಪಿಗಳನ್ನು ಕೊಂದಿದ್ದಾರೆ. ಬಾಲಕರ ಮರಣೋತ್ತರ ಪರೀಕ್ಷೆಯ ನಂತರ ಹತ್ತಾರು ಬಾರಿ ಚಾಕುವಿನಿಂದ ದೇಹಕ್ಕೆ ಇರಿದು ಕೊಲ್ಲಲಾಗಿದೆ ಎಂದು ವರದಿಗಳು ಹೇಳುತ್ತಿವೆ. ಹೀಗಾಗಲೇ ಅವರ ಅಂತ್ಯಕ್ರಿಯೆ ನಡೆದಿದ್ದು, “ನಿನ್ನೆ…

Read More

ಯುವತಿಯ ಕೊಲೆ ಮಾಡಿದ UP ಮುಸ್ಲಿಂ ಯುವಕರಿಗೆ ಯೋಗಿಯ ಶಿಕ್ಷೆ ಎಂಬುದು ಸುಳ್ಳು

ಉತ್ತರ ಪ್ರದೇಶದಲ್ಲಿ ಹುಡುಗಿಯ ದುಪ್ಪಟ ಹಿಡಿದು ಬೈಕಿನಲ್ಲಿ ಎಳೆದುಕೊಂಡು ಹೋಗಿ ಹುಡುಗಿಯ ಸಾವಿಗೆ ಕಾರಣರಾದ ಮೂವರು ಇಸ್ಲಾಂ ಜಿಹಾದಿಗಳಿಗೆ ಯೋಗಿ ಸರ್ಕಾರ ನೀಡಿರುವ ಬಹುಮಾನ! ಎಂದು ಹಲ್ಲೆಗೊಳಗಾದ ಆರೋಪಿಗಳು ತೆವಳುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಫ್ಯಾಕ್ಟ್‌ಚೆಕ್: ಸತ್ಯವೇನೆಂದರೆ ಇದು ರಾಜಸ್ಥಾನದಲ್ಲಿ ನಡೆದ ಘಟನೆಯಾಗಿದ್ದು ಉತ್ತರ ಪ್ರದೇಶದ್ದಲ್ಲ. ಶಿಕ್ಷೆಗೊಳಗಾಗಿ ತೆವಳುತ್ತಿರುವವರು ಕೊಲೆ ಪ್ರಕರಣದ ಆರೋಪಿಗಳಾದ ತೇಜ್ವೀರ್, ಯುವರಾಜ್ ಮತ್ತು ಬಂಟಿ ಕುಶಾಲ್. ಇವರ ಹೆಸರುಗಳನ್ನು ಅರ್ಬಾಜ್, ಫೈಸಲ್ ಮತ್ತು ಶಹಬಾಜ್ ಎಂದು ತಪ್ಪಾಗಿ ತಿರುಚಲಾಗಿದೆ. ಇದನ್ನು ಬೂಮ್…

Read More